Udayavni Special

ಮಹಿಳಾ ವಿವಿ ಕುಲಪತಿ ನೇಮಕಕ್ಕೆ ನೀತಿ ಸಂಹಿತೆ ಅಡ್ಡಿ?


Team Udayavani, Oct 7, 2020, 4:52 PM IST

ಮಹಿಳಾ ವಿವಿ ಕುಲಪತಿ ನೇಮಕಕ್ಕೆ ನೀತಿ ಸಂಹಿತೆ ಅಡ್ಡಿ?

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತೆರವಾಗಿರುವ ಕುಲಪತಿ ಹುದ್ದೆಗೆ ಕುಲಪತಿ ಸಂಶೋಧನಾ ಸಮಿತಿ ಸರ್ಕಾರಕ್ಕೆ ಅಂತಿಮ ವರದಿ ನೀಡಿ ಎರಡು ವಾರ ಕಳೆದಿವೆ. ತೆರವಾಗಿರುವ ಕ್ಷೇತ್ರಗಳಿಗೆ ವಿಧಾನಸಭೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನೇಮಕಕ್ಕೆ ನೀತಿ ಸಂಹಿತೆ ತೊಡಕಾಗುತ್ತದೆ ಎಂದು ಸರ್ಕಾರ ಹಿಂದೇಟು ಹಾಕುತ್ತಿದೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರೊ| ಸಬಿಹಾ ಭೂಮಿಗೌಡ ಅವರ ನಿವೃತ್ತಿಯಿಂದಾಗಿ ಜೂ.19ರಿಂದ ಕುಲಪತಿಸ್ಥಾನ ತೆರವಾಗಿದೆ. ತೆರವಾಗಿರುವ ಕುಲಪತಿ ಸ್ಥಾನಕ್ಕೆ ಸಮಾಜ ವಿಜ್ಞಾನ ವಿಭಾಗದ ಡೀನ್‌ ಓಂಕಾರ ಕಾಕಡೆ ಅವರನ್ನು ಜೂ.20ರಂದು ಹಂಗಾಮಿ ಕುಲಪತಿಯಾಗಿ ರಾಜ್ಯಪಾಲರು ನೇಮಿಸಿದ್ದಾರೆ.

ಪೂರ್ಣಾವಧಿ ಕುಲಪತಿ ನೇಮಕಕ್ಕಾಗಿ ಸರ್ಕಾರ ತುಮಕೂರು ವಿವಿ ಕುಲಪತಿ ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಕುಲಪತಿ ಶೋಧನಾ ಸಮಿತಿ ರಚಿಸಿತ್ತು. ಶೋಧನಾ ಸಮಿತಿ ಸೆ.4ರಂದು ಚರ್ಚಿಸಿ ಅಂತಿವಾಗಿ ಸೆ.17ರಂದು ಸಭೆ ನಡೆಸಿ ಮೂವರಹೆಸರುಗಳನ್ನು ಉನ್ನತ ಶಿಕ್ಷಣ ಇಲಾಖೆ ಸಚಿವಾಲಯಕ್ಕೆ ಕಳಿಸಿದೆ. ಉನ್ನತ ಶಿಕ್ಷಣ ಖಾತೆ ಹೊಂದಿರುವ ಡಿಸಿಎಂ ಅಶ್ವತ್ಥನಾರಾಯಣ ಅವರು ಕ್ವಾರಂಟೈನ್‌ ಆಗಿದ್ದರು.ಕಾರಣ ವಿವಿ ಕುಲಪತಿ ಹುದ್ದೆಗೆ ಸಮಿತಿ ಮಾಡಿರುವ ಅಂತಿಮ ಮೂವರ ಹೆಸರಿನ ಶಿಫಾರಸು ಕಡತ ಮುಖ್ಯಮಂತ್ರಿ ಕಚೇರಿಗೆ ರವಾನಿಸುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.

ಇದೀಗ ಉನ್ನತ ಶಿಕ್ಷಣ ಇಲಾಖೆ ಕಚೇರಿಯಿಂದ ಸಿಎಂ ಕಚೇರಿಗೆ ಮಹಿಳಾ ವಿವಿ ಕುಲಪತಿ ನೇಮಕ ಶಿಫಾರಸು ಕಡತ ರವಾನೆ ಆಗಿದೆ. ಆದರೆ ಸರ್ಕಾರ ಈ ಕಡತವನ್ನು ರಾಜ್ಯಪಾಲರ ಸಹಿಗಾಗಿ ಕಳಿಸಲು ನೀತಿ ಸಂಹಿತೆ ಎದುರಾಗಿದೆ.

ಸರ್ಕಾರದ ಜಿಜ್ಞಾಸೆ ಏನು?: ರಾಜ್ಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆರ್‌. ಆರ್‌.ನಗರ, ಶಿರಾ ವಿಧಾನಸಭೆ ಕ್ಷೇತ್ರಗಳಲ್ಲಿಈಗಾಗಲೇ ಉಪ ಚುನಾವಣೆ ಘೋಷಣೆ ಆಗಿದೆ. ಅಲ್ಲದೇ ಪದವೀಧರರ ಕ್ಷೇತ್ರಕ್ಕೂ ಚುನಾವಣೆಘೋಷಣೆಯಾಗಿದೆ. ಅಕ್ಕಮಹಾದೇವಿ ಮಹಿಳಾ ವಿವಿ ರಾಜ್ಯ ವ್ಯಾಪ್ತಿ ಹೊಂದಿದೆ. ಒಂದೊಮ್ಮೆ ಕುಲಪತಿ ನೇಮಕ ಮಾಡಿದಲ್ಲಿ ಕುಲಪತಿಯಾಗಿ ನೇಮಕಗೊಂಡವರ ಜಾತಿಯವರ ಮೇಲೆಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀತಿ ಸಂಹಿತೆ ಅನ್ವಯ ಆಗಬಹುದೇ ಎಂದು ಸರ್ಕಾರ ಜಿಜ್ಞಾಸೆಯಲ್ಲಿ ತೊಡಗಿದೆ.

ಕುಲಪತಿ ಸ್ಥಾನ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು ರಾಜಕೀಯಕ್ಕೆ ಇದು ಅನ್ವಯ ಆಗದು. ಅಂತಿಮವಾಗಿ ರಾಜ್ಯಪಾಲರ ಕಚೇರಿಯಿಂದ ನೇಮಕಾತಿ ಆದೇಶ ಹೊರಡುವ ಕಾರಣ ನೀತಿ ಸಂಹಿತೆ ಅನ್ವಯಿಸದು ಎಂಬ ವಾದವೂ ಕೇಳ ಬಂದಿದೆ. ಒಂದೊಮ್ಮೆ ಚುನಾವಣಾ ಆಯೋಗಈ ಕುರಿತು ಸ್ಪಷ್ಟೀಕರಿಸಿದಲ್ಲಿ ಒಂದೆರಡು ದಿನಗಳಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆಕುಲಪತಿ ನೇಮಕವಾಗಲಿದೆ. ನೀತಿ ಸಂಹಿತೆ ಅನ್ವಯಿಸುತ್ತದೆ ಎಂದಾದರೆ ನವೆಂಬರ್‌ ತಿಂಗಳವರೆಗೆ ಕುಲಪತಿ ನೇಮಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ.

ಯಾರ್ಯಾರ ಹೆಸರು ಶಿಫಾರಸು? :  ಮೂಲಗಳ ಪ್ರಕಾರ ಬಳ್ಳಾರಿಯ ವಿಜಯನಗರ ವಿವಿ ರಿಜಿಸ್ಟ್ರಾರ್‌ ತುಳಸಿಮಾಲಾ (ಒಬಿಸಿ), ಬೆಂಗಳೂರು ವಿವಿ ಗೋಮತಿದೇವಿ (ಪಪಂ) ಹಾಗೂ ಮಂಗಳೂರು ವಿವಿ ವಿಶ್ರಾಂತ ಕುಲಪತಿ ಎಂ.ಐ. ಸವದತ್ತಿ ಅವರ ಪುತ್ರಿ ಕಲಬುರ್ಗಿ ಕೇಂದ್ರೀಯ ವಿವಿ ಅರ್ಥಶಾಸ್ತ್ರ ವಿಭಾಗದ ಪುಷ್ಪಾ ಸವದತ್ತಿ (ಲಿಂಗಾಯತ) ಹೆಸರು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

 

– ಜಿ.ಎಸ್‌.ಕಮತರ

ಟಾಪ್ ನ್ಯೂಸ್

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayapura news

ಗುಡಿಹಾಳದಲ್ಲೊಂದು ಮಾದರಿ ಗ್ರಂಥಾಲಯ

1-aa

ಸಿಂದಗಿ: ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ: ಭಯದಿಂದ‌ ಮನೆಯಿಂದ ಹೊರ ಓಡಿದ ಜನ

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ: ಭಯದಿಂದ‌ ಮನೆಯಿಂದ ಹೊರ ಓಡಿದ ಜನ

ಕೆಟ್ಟುನಿಂತ ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ಸಾವು

ಕೆಟ್ಟುನಿಂತ ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರು ಸೇರಿ, ನಾಲ್ವರ ಸಾವು

Untitled-1

ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿರುವ ಸಿಂದಗಿ ವೈದ್ಯೆ

MUST WATCH

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

ಹೊಸ ಸೇರ್ಪಡೆ

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

Untitled-1

ಸ್ವಚ್ಛ ಶಿರ್ವ-ನಮ್ಮ ಶಿರ್ವ ಅಭಿಯಾನ: ಕಸ ತ್ಯಾಜ್ಯ ನಿರ್ಮೂಲನೆಗೆ ಪಣತೊಟ್ಟ ಗ್ರಾ.ಪಂ.ಅಧ್ಯಕ್ಷ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

Sakleshpur: Destroy paddy crop for forest attack

ಸಕಲೇಶಪುರ: ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.