Udayavni Special

ಅಧಿಕಾರಕ್ಕೆ ತೀವ್ರಗೊಂಡ ಪೈಪೋಟಿ


Team Udayavani, Feb 18, 2019, 9:33 AM IST

vij-2.jpg

ಇಂಡಿ: ಕಳೆದ ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದು ಕಳೆದ ಬಾರಿ ಕಬ್ಬು ನುರಿಸಲು ಪ್ರಾರಂಭಿಸಿದ ತಾಲೂಕಿನ ಮರಗೂರದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಫೆ. 24ರಂದು ಚುನಾವಣೆ ನಿಗದಿಯಾಗಿದ್ದು ಘಟಾನುಘಟಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು 55 ನಾಮಪತ್ರ ಸಲ್ಲಿಕೆಯಾಗಿದ್ದು ಪರಿಶಿಷ್ಟ ಪಂಗಡದ ಕ್ಷೇತ್ರಕ್ಕೆ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರೆ ನಾಮಪತ್ರ ತಪಾಸಣೆ ವೇಳೆ ಒಟ್ಟು 3 ನಾಮಪತ್ರ ತಿರಸ್ಕೃತವಾಗಿದ್ದು 53 ನಾಮಪತ್ರಗಳು ಕ್ರಮಬದ್ಧವಾಗಿವೆ. ಶಂಕ್ರಪ್ಪ ಹೂಗಾರ, ಹಾಜಿಮಲಂಗ ವಾಲೀಕಾರ, ಶ್ರೀಮಂತ
ಕಾಪ್ಸೆ ನಾಮಪತ್ರಗಳು ತಿರಸ್ಕೃತಗೊಂಡಿವೆ. ಫೆ. 18 ಮಧ್ಯಾಹ್ನ 3ರವರೆಗೆ ನಾಮಪತ್ರ ವಾಪಸ್‌ ಪಡೆಯಲು ಕಾಲಾವಕಾಶವಿದೆ.

ಒಂದೆಡೆ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಸಕ್ಕರೆ ಕಾರ್ಖಾನೆಯಲ್ಲಿ ರಾಜಕೀಯ ಬೇಡ. ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಕರಿಸಿ ಕಾರ್ಖಾನೆ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಾಡಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ. ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಮತದಾನದ ಮೇಲೆಯೇ ಅಭ್ಯರ್ಥಿಗಳ ಆಯ್ಕೆಯಾಗಲಿ ಎಂದು ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ಹೇಳುತ್ತಿದ್ದಾರೆ.

ಚುನಾವಣೆಗೆ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ, ಮಾಜಿ ಶಾಸಕ ರವಿಕಾಂತ ಪಾಟೀಲರ ಪತ್ನಿ ಭಾರತಿ ಪಾಟೀಲ, ಸಂಕೇತ ಬಗಲಿ, ಬಳ್ಳೊಳ್ಳಿಯ ಜೆಡಿಎಸ್‌ ಮುಖಂಡ ಎಂ.ಆರ್‌. ಪಾಟೀಲ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದ್ದಾರೆ.

ಒಂದು ವೇಳೆ ಚುನಾವಣೆ ನಡೆದರೆ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ನಡುವೆ ಪೈಪೋಟಿ ನಡೆಯಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟು 13 ನಿರ್ದೇಶಕ ಹುದ್ದೆಗಳಿದ್ದು ಅದರಲ್ಲಿ 1 ಸರ್ಕಾರ, 1 ಆರ್ಥಿಕ ಸಂಸ್ಥೆ ಇದೆ. ಇನ್ನು ಚುನಾಯಿತರಾಗುವವರು 11 ಜನರಲ್ಲಿ ಸಾಮಾನ್ಯ ಕ್ಷೇತ್ರಕ್ಕೆ 3, ಹಿಂದುಳಿದ ವರ್ಗ 2, ಎಸ್‌ .ಸಿ 1, ಎಸ್‌.ಟಿ, 1 ಮಹಿಳಾ 2, ಕಬ್ಬು ಬೆಳೆಗಾರರಲ್ಲದವರ 1, ಸಂಘ ಸಂಸ್ಥೆಗಳಿಂದ 1 ಹುದ್ದೆಗಳಿಗೆ ಚುನಾವಣೆ ನಡೆಯಬೇಕಿದೆ.

„ಉಮೇಶ ಬಳಬಟ್ಟಿ

ಟಾಪ್ ನ್ಯೂಸ್

congress

ಅಲ್ಪಸಂಖ್ಯಾತರ ಕಾಳಜಿ ಎಚ್ ಡಿಕೆಗೆ ಫಲ ನೀಡುವುದಿಲ್ಲ: ಕೈ ನಾಯಕರು ಕಿಡಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

dinesh-gu

ಭಾಗವತ್‌ರ ಹೇಳಿಕೆ ಅರ್ಚಕರ ಬದುಕಿಗೆ ಕೊಳ್ಳಿ‌ ಇಡಲಿದೆ : ದಿನೇಶ್ ಗುಂಡೂರಾವ್

vghggy

ಇನ್ಮುಂದೆ ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ !

jghjgyj

ಕೋವಿಡ್ ಮದ್ದು, ಅನ್ಯ ಕಾಯಿಲೆಗೂ ಗುದ್ದು?  

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

ಮಲ್ಲಿಕಾರ್ಜುನ ಖರ್ಗೆಯ ಭ್ರಷ್ಟ ಸಂಪತ್ತಿನ ಮುಂದೆ ಮಿಕ್ಕವರೆಲ್ಲ ಲೆಕ್ಕಕ್ಕಿಲ್ಲ: ಬಿಜೆಪಿ ಆರೋಪ

1-aa

ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಕಾರಣ ನೀವು ದಂಡ ಕಟ್ಟಬೇಕು: ಪದ್ಮಶ್ರೀ ಮಂಜಮ್ಮ ಜೋಗತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

ಬಿಜೆಪಿಯಿಂದ ಮಾತ್ರ ತಾಂಡಾ ಅಭಿವದ್ಧಿ

14

ಜನ ನನ್ನ ಕೈ ಬಿಡಲ್ಲ: ರಮೇಶ ಭೂಸನೂರ

11

ಭೂಸನೂರ ಪರ ಸಚಿವ ಸಿ.ಸಿ. ಪಾಟೀಲ ಪ್ರಚಾರ

10

ಬಿಜೆಪಿ-ಕಾಂಗ್ರೆಸ್‌ ರಾಜ್ಯದ ಅಭಿವೃದ್ಧಿಗೆ ಮಾರಕ: ನಾಜಿಯಾ

eart

ವಿಜಯಪುರದಲ್ಲಿ ಮತ್ತೆ ಭೂಕಂಪನ : ಜನರಲ್ಲಿ ಹೆಚ್ಚುತ್ತಿರುವ ಆತಂಕ

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

chitrdurga news

ಜಯದೇವ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ

chikkamagalore news

ಕಾಫಿನಾಡಲ್ಲಿ ಪ್ರವಾಸಿ ತಾಣಕ್ಕೆ ಮುಗಿ ಬಿದ್ದ ಜನ

congress

ಅಲ್ಪಸಂಖ್ಯಾತರ ಕಾಳಜಿ ಎಚ್ ಡಿಕೆಗೆ ಫಲ ನೀಡುವುದಿಲ್ಲ: ಕೈ ನಾಯಕರು ಕಿಡಿ

jgjuyuy

3ನೇ ಬಾರಿ ಇಡಿ ವಿಚಾರಣೆಗೆ ಬಾರದ ಜಾಕ್ವೆಲಿನ್‌! 

shivamogga news

ಸಿದ್ದು ಅಲ್ಪಸಂಖ್ಯಾತರಿಗೆ ಉತ್ತರ ನೀಡಲಿ: ಎಚ್ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.