Udayavni Special

ತೈಲ ಬೆಲೆ ಏರಿಕೆ ಖಂಡಿಸಿ “ಕೈ ‘ ಪ್ರತಿಭಟನೆ


Team Udayavani, Jun 13, 2021, 8:57 PM IST

srtyuytrewq

ಇಂಡಿ: ಕಳೆದ ಹಲವು ದಿನಗಳಿಂದ ದೇಶದಲ್ಲಿ ಪೆಟ್ರೋಲ್‌ -ಡೀಸೆಲ್‌ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಶಾಸಕ ಯಶವಂತ್ರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದ ಶಹಾ ಪೆಟ್ರೋಲ್‌ ಬಂಕ್‌ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ ನಿರಂತರ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಸುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಹಿಂದೆ ಕಾಂಗ್ರೆಸ್‌ನ ಮನಮೋಹನ ಸಿಂಗ್‌ರವರ 10 ವರ್ಷದ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತೈಲ ಬೆಲೆ ಗಗನಕ್ಕೇರಿತ್ತು. ಒಂದು ಬ್ಯಾರೆಲ್‌ ಆಯಿಲ್‌ಗೆ 110 ಡಾಲರ್‌ ಇತ್ತು. ಆದರೂ ಪೆಟ್ರೋಲ್‌ ಬೆಲೆ ಏರಿಸಲಿಲ್ಲ. ಬೆಲೆ ನಿಯಂತ್ರಣದಲ್ಲಿತ್ತು.

ಈಗ ಅಂತಾರಾಷ್ಟ್ರೀಯ ತೈಲ ಬೆಲೆ ಒಂದು ಬ್ಯಾರೆಲ್‌ಗೆ 40 ಡಾಲರ್‌ ಇಳಿಕೆಯಾಗಿದ್ದರೂ ತೈಲದ ಮೇಲೆ ಹೆಚ್ಚು ತೆರಿಗೆ ವಿ ಧಿಸುತ್ತಿರುವ ದೇಶ ಭಾರತ. ಪ್ರತಿ ಲೀಟರ್‌ ಪೆಟ್ರೋಲ್‌ ದರ 35 ರೂ. ಮಾತ್ರ ಇದ್ದು ಕೇಂದ್ರದ ತೆರಿಗೆ, ರಾಜ್ಯ ಡೀಲರ್‌ ಕಮಿಷನ್‌ ಸೆಸ್‌ ಸೇರಿ 100 ರೂ. ಆಗುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಎಲ್ಲ ವಲಯದ ಮೇಲೆ ಬೆಲೆ ಏರಿಕೆ ಗಂಭೀರ ಪರಿಣಾಮ ಬೀರಿದೆ. ಸದ್ಯಕ್ಕೆ ಪೆಟ್ರೋಲ್‌ ಬೆಲೆ 98 ರೂ. ಗೆ ಏರಿಕೆಯಾಗಿದೆ. ಡೀಸೆಲ್‌ ಬೆಲೆ 90 ರೂ. ದಾಟಿದೆ. ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ 860 ರೂ. ಆಗಿದ್ದು ಜನ ಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿ ಹಳ್ಳಿಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಸಂಭಾಜಿರಾವ್‌ ಮಿಸಾಳೆ ಮಾತನಾಡಿ, ಇಂಧನ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ.

ದರ ಏರಿಕೆಯಿಂದ ಕೇವಲ ವಾಹನ ಹೊಂದಿದವರಿಗೆ ಮಾತ್ರವಲ್ಲ. ರೈತರಿಗೂ ತೊಂದರೆಯಾಗುತ್ತಿದೆ ಎಂದರು. ಕಾಂಗ್ರೆಸ್‌ ಯುವ ಧುರೀಣ ಪ್ರಶಾಂತ ಕಾಳೆ, ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಾವೀದ ಮೋಮಿನ್‌, ಅವಿನಾಶ ಬಗಲಿ ಇತರರು ಮಾತನಾಡಿ, ಪೆಟ್ರೋಲ್‌ -ಡೀಸೆಲ್‌ ಬೆಲೆ ಏರಿಕೆಯಾಗುತ್ತಿದ್ದು 100ರ ಗಡಿ ದಾಟುತ್ತಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಜನ ಸಾಮಾನ್ಯರ ಮೇಲಿನ ಹೊರೆ ಇಳಿಸುವಂತೆ ಆಗ್ರಹಿಸಿದರು. ಪುರಸಭೆ ಸದಸ್ಯ ಲಿಂಬಾಜಿ ರಾಠೊಡ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಮುತ್ತಪ್ಪ ಪೋತೆ, ಮಲ್ಲು ಪಾಟೀಲ ಸಾಲೋಟಗಿ, ಸಿದರಾಯ ಐರೋಡಗಿ ಮಾತನಾಡಿದರು. ಈ ವೇಳೆ ಶಾಂತು ಹದಗಲ್‌, ಶಿವಕುಮಾರ ಬಿಸನಾಳ, ಸಿದ್ದು ಬೇಲ್ಯಾಳ, ಜೀತಪ್ಪ ಕಲ್ಯಾಣಿ, ಅಶೋಕ ಕರೂರ, ಇಸ್ಮಾಯಿಲ್‌ ಅರಬ್‌, ರಶೀದ ಅರಬ, ಶ್ರೀಶೈಲ ಪೂಜಾರಿ, ಸತೀಶ ಕುಂಬಾರ, ಅಯೂಬ ಬಾಗವಾನ, ಸತ್ತಾರ ಬಾಗವಾನ, ಭೀಮಾಶಂಕರ ಮೂರಮನ ಇತರರು ಇದ್ದರು.

ಟಾಪ್ ನ್ಯೂಸ್

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ನೆರವು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

Ex Eshwarppa Asked DCM seat in Mysore

ಉಪ ಮುಖ್ಯಮಂತ್ರಿಯನ್ನಾದರೂ ಮಾಡಲಿ : ಮಾಜಿ ಸಚಿವ ಈಶ್ವರಪ್ಪ

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

More than 220 tourists stuck in Lahaul-Spiti after cloudburst, rescue ops on

ಮೇಘ ಸ್ಪೋಟ : ಲಾಹೌಲ್ ಸ್ಪಿಟಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ 200ಕ್ಕೂ ಹೆಚ್ಚು ಪ್ರವಾಸಿಗರು..!

ಸಾಗರ: ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

banks-should-cooperate-more-to-face-covid-crisis-says-kerala-cm

ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಬ್ಯಾಂಕ್ ಗಳು ಸಹಕರಿಸಬೇಕು : ಪಿಣರಾಯಿ ವಿಜಯನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura Dist Muddebihala News, Udayavani

ಕೃಷ್ಣೆಗೆ ಪ್ರವಾಹ :  ಗಂಗೂರಿನ ದೇವಸ್ಥಾನ ಜಲಾವೃತ

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

hinniru

ಬಸವಸಾಗರ ಹಿನ್ನೀರಿನ ಪ್ರಮಾಣದಲ್ಲಿ ಏರಿಕೆ : ಬೆಳೆಗಳು ಜಲಾವೃತ

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಎಚ್.ಸಿ. ಮಹದೇವಪ್ಪ

ದಲಿತ ಸಿಎಂ ಎಂಬುದು ದಲಿತರ ಮನಸ್ಸು ವಿಭಜಿಸುವ ತಂತ್ರ‌: ಎಚ್.ಸಿ. ಮಹದೇವಪ್ಪ

MUST WATCH

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

udayavani youtube

ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ :ಸಿದ್ದುಗೆ ಬಿಜೆಪಿ ತಿರುಗೇಟು

udayavani youtube

ರಾಷ್ಟ್ರೀಯ ಪ್ರಾಣಿಯಾಗಿದ್ದ ಸಿಂಹವನ್ನು ಹುಲಿ ಹಿಂದಿಕ್ಕಿದ್ದು ಹೇಗೆ ?

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

ಹೊಸ ಸೇರ್ಪಡೆ

Coastal Belt Tredition Aati

ಸುಖ ದು:ಖಗಳ ಸಮ್ಮಿಲನ ಆಟಿ ತಿಂಗಳು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ನೆರವು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

Ex Eshwarppa Asked DCM seat in Mysore

ಉಪ ಮುಖ್ಯಮಂತ್ರಿಯನ್ನಾದರೂ ಮಾಡಲಿ : ಮಾಜಿ ಸಚಿವ ಈಶ್ವರಪ್ಪ

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.