ಕೋವಿಡ್ ನಿಯಂತ್ರಿಸಲು ಕಠಿಣ ಕ್ರಮಕ್ಕೆ ಸೂಚನೆ
Team Udayavani, Apr 25, 2021, 6:48 PM IST
ಸಿಂಧನೂರು: ಕೋವಿಡ್ 2ನೇ ಅಲೆ ಭಾರಿ ವೇಗವಾಗಿ ಹರಡುತ್ತಿರುವುದರಿಂದ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟುಹಾಕುವಂತಿಲ್ಲ ಎಂದು ಶಾಸಕ ವೆಂಕಟರಾವ ನಾಡಗೌಡ ಸೂಚನೆ ನೀಡಿದರು.
ನಗರದ ಮಿನಿ ವಿಧಾನಸೌಧದಲ್ಲಿ ಶನಿವಾರ ಕರೆದಿದ್ದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ನಿಯಂತ್ರಣಕ್ಕಾಗಿ ಸರಕಾರ ಮಾರ್ಗಸೂಚಿ ಅನುಸಾರ ಎಲ್ಲ ರೀತಿಯಿಂದಲೂ ಅಧಿಕಾರಿಗಳು ಮುನ್ನೆಚ್ಚರಿಕೆವಹಿಸಬೇಕು ಎಂದರು.
ನಿತ್ಯ 550 ಸ್ಯಾಂಪಲ್ ಸಂಗ್ರಹ: ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಮಾತನಾಡಿ,ಪ್ರತಿದಿನ 400 ಟಾರ್ಗೇಟ್ ಇದ್ದರೂ 500 ರಿಂದ 550 ಸ್ಯಾಂಪಲ್ ಕಳುಹಿಸಲಾಗುತ್ತಿದೆ. ಕಳೆದ ಒಂದುವಾರದಿಂದ ಪಾಸಿಟಿವ್ ಪ್ರಮಾಣ ಏರುಗತಿಯಲ್ಲಿದೆ.ಸೌಮ್ಯ ಲಕ್ಷಣಗಳಿದ್ದರೆ ಹೋಮ್ ಐಸೋಲೇಶನ್ ಗೆ ಒಳಪಡಿಸಲಾಗುತ್ತಿದೆ. ಕೆಲವರು ಸ್ವಾಬ್ ಪರೀಕ್ಷೆ ಮಾಡಿಸದೇ ಸಿಟಿ ಸ್ಕ್ಯಾನ್‌ಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದು, ಸಾರ್ವಜನಿಕಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಶಾಸಕ ನಾಡಗೌಡ ಮಾತನಾಡಿ, ಕೋವಿಡ್ ತಡೆಗೆ ಯುದೊœàಪಾದಿಯಲ್ಲಿ ಕೆಲಸ ಮಾಡಬೇಕು. ಪರೀಕ್ಷೆ-ಸಂಪರ್ಕ-ಚಿಕಿತ್ಸೆ ನೀಡಲು ಮೊದಲ ಆದ್ಯತೆ ಕೊಡಬೇಕು. ಪರೀಕ್ಷೆ ಪ್ರಮಾಣ ಹೆಚ್ಚಿಸುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸ್ವಾಬ್ ಟೆಸ್ಟ್‌ಗೆ ನೀಡಿದ 24 ಗಂಟೆಯಲ್ಲೇ ವರದಿ ಬಂದರೆ ಪಾಸಿಟಿವ್ ಬಂದವರನ್ನು ಸಂಪರ್ಕ ಮಾಡುವುದರಿಂದ ಹರಡುವಿಕೆ ನಿಯಂತ್ರಣ ಮಾಡಬಹುದು. ಕಳೆದ ವರ್ಷದಂತೆಯೂ ಈ ವರ್ಷವೂ ಈ ಬಗ್ಗೆ ಪತ್ತೆ ಹಚ್ಚುವ ತಂಡ ರಚನೆ ಮಾಡಬೇಕು ಎಂದು ತಹಶೀಲ್ದಾರ್ ಕವಿತಾ ಅವರಿಗೆ ಸೂಚಿಸಿದರು.
ಸೌಲಭ್ಯ ಕಲ್ಪಿಸಿ: ಫ್ರಂಟ್‌ಲೆçನ್ ವರ್ಕರ್ಸ್‌ಗೆ ಅಗತ್ಯವಾದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಇತರ ಸೌಲಭ್ಯಗಳು ಕೊರತೆಯಾಗಬಾರದು. ಸಿಬ್ಬಂದಿ ಭಯದ ನಡುವೆಯೂ ಕೆಲಸ ಮಾಡುತ್ತಿರುವುದರಿಂದ ಅವರ ಕಾಳಜಿಯೂ ಬಹುಮುಖ್ಯ. ಏನೇ ಕೊರತೆಗಳು ಕಂಡುಬಂದರೆ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಟಿಎಚ್‌ಒ ಅವರಿಗೆ ಶಾಸಕರು ಸೂಚಿಸಿದರು. ಇಡೀ ನಗರವನ್ನು ಸ್ಯಾನಿಟೈಸ್ ಮಾಡುವಂತೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿ ಅವರಿಗೆ ತಿಳಿಸಿದರು.
ರೆಮ್‌ಡೆಸಿವಿಯರ್ ಅಭಾವ ಇಲ್ಲ: ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕೋವಿಡ್‌ಗೆ ನೀಡುವ ರೆಮ್‌ಡೆಸಿವಿಯರ್ ಚುಚ್ಚುಮದ್ದು ಕೊರತೆಯಿಲ್ಲ. ಡ್ರಗ್ ಕಂಟ್ರೋಲರ್ ಬಳಿ ಬೇಡಿಕೆ ಸಲ್ಲಿಸಿಚುಚ್ಚುಮದ್ದು ಪಡೆದುಕೊಳ್ಳಬಹುದು. ಸಿಂಧನೂರು ನಗರದ ಶಾಂತಿ, ಆದರ್ಶ, ಗವಿಸಿದ್ದೇಶ್ವರ ಆಸ್ಪತ್ರೆಗಳಲ್ಲಿಕೋವಿಡ್ ಚಿಕಿತ್ಸೆ ಲಭ್ಯವಿರುವುದರಿಂದ ಮೊದಲು ಈಆಸ್ಪತ್ರೆಗಳಿಗೆ ಬೇಡಿಕೆಗೆ ತಕ್ಕಂತೆ ರೆಮ್‌ಡೆಸಿವಿಯರ್‌ಚುಚ್ಚುಮದ್ದು ಪೂರೈಕೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಯಿತು.
ಎಲ್ಲ ಕ್ಯಾಂಪ್ಗಳಲ್ಲಿ ಸ್ಯಾನಿಟೇಶನ್: ಮಲ್ಕಾಪುರಗ್ರಾಮದಲ್ಲಿ 23 ಹಾಗೂ ದೇವಿಕ್ಯಾಂಪಿನಲ್ಲಿ 15 ಪಾಸಿಟಿವ್ ಬಂದಿದ್ದು, ಆತಂಕ ಮೂಡಿಸಿದೆ.ನರೇಗಾ ಕೆಲಸಕ್ಕಾಗಿ ಹೆಚ್ಚು ಜನ ಸೇರುವುದರಿಂದಇಂತಹ ಕಡೆಗಳಲ್ಲಿ ಎಚ್ಚರಿಕೆ ಅಗತ್ಯವಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಬೇಕು. ನಾಳೆಯಿಂದಲೇ ಎಲ್ಲಾ ಗ್ರಾಮ,ಕ್ಯಾಂಪುಗಳಲ್ಲಿ ಸ್ಯಾನಿಟೇಶನ್ ಮಾಡಬೇಕು.ಜೊತೆಗೆ ಅನಗತ್ಯವಾಗಿ ಓಡಾಡುವುದು, ಮಾಸ್ಕ್ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸೇರದಂತೆ ಜಾಗೃತಿಮೂಡಿಸಲು ಬೈಕ್ ಮೂಲಕ ಪ್ರಚಾರ ಮಾಡುವಂತೆ ಸೂಚನೆ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ತಹಶೀಲ್ದಾರ್ ಕವಿತಾ ಆರ್, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸುರೇಶಗೌಡ, ಕೋವಿಡ್ ತಾಲೂಕು ನೋಡಲ್ ಅಧಿಕಾರಿ ಡಾ| ಜೀವನೇಶ್ವರಯ್ಯ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಐಎಂಎ ಅಧ್ಯಕ್ಷ ಡಾ| ಸುಬ್ಬರಾವ್, ಸಿಪಿಐ ಶ್ರೀಕಾಂತ, ಬಿಇಒ ಶರಣಪ್ಪ ವಟಗಲ್, ಎಸಿಡಿಪಿಒ ಲಿಂಗನಗೌಡ, ಜೆಡಿಎಸ್ ಮುಖಂಡ ಬಿ.ಶ್ರೀಹರ್ಷ ಇದ್ದರು