Udayavni Special

ಬೆಳಕಿನ ಹಬ್ಬಕ್ಕೆ ಕೋವಿಡ್ ಕರಿನೆರಳು

ಕೆಜಿ ಚೆಂಡು ಹೂವು 100 ರಿಂದ 300ರೂ. ವರೆಗೂ ಮಾರಾಟ

Team Udayavani, Nov 15, 2020, 4:36 PM IST

ಬೆಳಕಿನ ಹಬ್ಬಕ್ಕೆ ಕೋವಿಡ್ ಕರಿನೆರಳು

ಮುದ್ದೇಬಿಹಾಳ: ಕೋವಿಡ್ ಸಂಕಷ್ಟದ ನಡುವೆ ಬಂದಿರುವ ಹಿಂದುಗಳ ದೊಡ್ಡ ಹಬ್ಬ ದೀಪಾವಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜೊತೆಗೆ ಆರ್ಥಿಕ ಸಂಕಷ್ಟ ಬಡವರನ್ನು ಹೈರಾಣು ಮಾಡಿದೆ. ಆದರೆ ಕೋವಿಡ್ ದಿಂದಾದ ಆರ್ಥಿಕ ನಷ್ಟ ಭರ್ತಿ ಮಾಡಿಕೊಳ್ಳಲು ಸಣ್ಣ, ದೊಡ್ಡ ವ್ಯಾಪಾರಸ್ಥರು ತಮ್ಮ ಖಜಾನೆ ತುಂಬಿಕೊಳ್ಳುವ ಧಾವಂತದಲ್ಲಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ದೀಪಾವಳಿ ಬಡವರ ಸಂಭ್ರಮಕ್ಕೆ ತಣ್ಣೀರು ಎರಚಿದ್ದು ಇಲ್ಲೆಲ್ಲ ಎದ್ದು ಕಾಣುತ್ತಿದೆ. ಲಕ್ಷ್ಮೀ ಪೂಜೆಗೆ, ಪಾಡ್ಯಕ್ಕೆ, ಮನೆ ಅಲಂಕರಿಸಲು ಅಗತ್ಯ ಎನ್ನಿಸಿಕೊಂಡಿರುವ ಚೆಂಡು ಹೂವು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಕಳೆದ ವರ್ಷ ಕೆಜಿಗೆ 30-40 ರೂ. ಇದ್ದ ಚೆಂಡು ಹೂವಿನ ದರ ಈ ಬಾರಿ ಕೇಜಿಗೆ ಹೂವಿನ ಗಾತ್ರ, ಗುಣಮಟ್ಟಆಧರಿಸಿ 100 ರಿಂದ 300ವರೆಗೂ ಮಾರಾಟ ಮಾಡಲಾಗುತ್ತಿರುವುದು ಬಡವರಿಗೆ ಹೊರೆ ಎನ್ನಿಸಿಕೊಂಡಿದೆ.

ಈ ಬಾರಿ ಅತಿವೃಷ್ಟಿಯಿಂದಾಗಿ ಬಹಳಷ್ಟು ರೈತರು ಚೆಂಡು ಹೂವನ್ನು ಬೆಳೆದಿಲ್ಲ. ಇದರಿಂದಾಗಿ ಸಹಜವಾಗಿ ಉತ್ಪನ್ನ ಕಡಿಮೆ ಆಗಿರುವುದು ಬೇಡಿಕೆ ಹೆಚ್ಚಲು, ಬೆಲೆ ಏರಲು ಕಾರಣ ಎನ್ನಲಾಗುತ್ತಿದೆ. ರೈತರು ತಮ್ಮ ಹೊಲದಲ್ಲಿ ಬೆಳೆದ ಹೂವನ್ನು ಇಲ್ಲಿನಮಾರುಕಟ್ಟೆಗೆ ತಂದಾಗ ದಲ್ಲಾಳಿಗಳು ಅದನ್ನು ಸವಾಲು ಮಾಡುತ್ತಾರೆ. ಸವಾಲು ಕೂಗುವಾಗಲೇ ದಲ್ಲಾಳಿಗಳು ಬೆಲೆ ಏರಿಸುವುದು, ತಮ್ಮವರಲ್ಲೇ 4-5 ಜನರನ್ನು ಬಿಟ್ಟು ಹೆಚ್ಚಿನ ದರಕ್ಕೆ ಸವಾಲು ಕೂಗುವ ತಂತ್ರಗಾರಿಕೆ ಬಳಸುತ್ತಾರೆ. ಇದರಿಂದಾಗಿ ಕಿರುಕುಳ ಮಾರಾಟಗಾರರು ಅನಿವಾರ್ಯವಾಗಿ ಮೋಸ ಹೋಗಬೇಕಾಗುತ್ತದೆ. ತಾವು ಮೋಸ ಹೋಗಿ ಕಳೆದುಕೊಂಡ ಹಣವನ್ನು ಗ್ರಾಹಕರ ತಲೆಗೆ ಕಟ್ಟಿ ಲಾಭ ಮಾಡಿಕೊಳ್ಳುವ ತರಾತುರಿ ಅವರಲ್ಲಿ ಎದ್ದು ಕಾಣುತ್ತಿದೆ.

ಲಕ್ಷ್ಮೀ ಪೂಜೆಗೆ ಅಗತ್ಯವಾಗಿರುವ ಬಾಳೆ ಕಂಬ, ಕಬ್ಬಿನ ಜಲ್ಲೆ, ವಿವಿಧ ರೀತಿಯ ಹಣ್ಣು, ಕಾಯಿ, ನಿಂಬೆಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆಯಂತು ಗಾಬರಿ ಬೀಳಿಸುವಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದು ಶೇ. 50-60 ಏರಿಕೆಆಗಿರುವುದು ಬಡವರ ದೀಪಾವಳಿಗೆ ಮಂಕು ಕವಿಯುವಂತೆ ಮಾಡಿದೆ.

ಕಾಣದ ಉತ್ಸಾಹ: ಕೋವಿಡ್ ದಿಂದಾಗಿ ಕೆಲಸ ಇಲ್ಲದೆ ಸಂಕಷ್ಟಕ್ಕೀಡಾಗಿರುವ ಬಡ ಮತ್ತುಮಧ್ಯಮವರ್ಗದ ಜನರು ಈ ಬಾರಿ ಖರೀದಿಗೆ ನಿರುತ್ಸಾಹ ತೋರಿರುವುದರಿಂದ ಮಾರುಕಟ್ಟೆಯಲ್ಲಿ ಕಳೆದ ವರ್ಷಗಳಲ್ಲಿ ಕಂಡು ಬರುತ್ತಿದ್ದ ಜನಸಂದಣಿ ಈ ಬಾರಿ ಇಲ್ಲದಾಗಿದೆ. ಈ ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹವೂ ಕಂಡು ಬರುತ್ತಿಲ್ಲ. ಹೇಗೋ ದೀಪಾವಳಿಯನ್ನು ಆಚರಿಸಿದರಾಯಿತು ಎನ್ನುವ ಮನೋಭಾವ ಅವರಲ್ಲಿ ಎದ್ದು ಕಾಣುತ್ತಿದೆ. ಪ್ರತಿ ವರ್ಷ ಇಲ್ಲಿನ ಬಸವೇಶ್ವರ ವೃತ್ತದಿಂದ ದ್ಯಾಮವ್ವನಕಟ್ಟೆಯವರೆಗಿನ ಮುಖ್ಯ ರಸ್ತೆ ವ್ಯಾಪಾರಿಗಳು, ಸಾರ್ವಜನಿಕರಿಂದ ತುಂಬಿ ಗಿಜಿಗುಡುತ್ತಿತ್ತು.

ಪೊಲೀಸರು ಟ್ರಾಫಿಕ್‌ ನಿಯಂತ್ರಿಸುವಲ್ಲಿ ಸಾಕಷ್ಟು ಹೆಣಗಾಡುತ್ತಿದ್ದರು. ಆದರೆ ಈ ಬಾರಿಅಂತಹ ಯಾವುದೇ ಗಿಜಿಗಿಜಿ, ಧಾವಂತ ಕಂಡು ಬರದಿರುವುದು ಪೊಲೀಸರ ಟ್ರಾಫಿಕ್‌ ನಿಯಂತ್ರಣದ ತಲೆನೋವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಿದಂತಾಗಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯ ಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮಾರಾಟದ ಭರಾಟೆ ಎಂದಿನಂತಿದ್ದರೂ ಜನರ ಕೊರತೆ ಅವರ ಮುಖದಲ್ಲೂ ಚಿಂತೆಯ ಗೆರೆಗಳನ್ನು ಮೂಡಿಸಿದ್ದು ಕಂಡು ಬಂತು.

ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ: ಕೋವಿಡ್ ದಿಂದ 3-4 ತಿಂಗಳು ವ್ಯಾಪಾರ ಇಲ್ಲದೆ ಬಟ್ಟೆ ಅಂಗಡಿಯವರು ಕಂಗಾಲಾಗಿದ್ದರು. ಹಬ್ಬದನೆಪದಲ್ಲಾದರೂ ಬಟ್ಟೆ ಖರೀದಿಗೆ ಜನ ಬರುತ್ತಾರೆಎನ್ನುವ ನಿರೀಕ್ಷೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಟ್ಟೆಬರೆ ತರಿಸಿ ಸ್ಟಾಕ್‌ ಇಟ್ಟುಕೊಂಡಿದ್ದರು. ಆದರೆ ಆರ್ಥಿಕ ಹೊಡೆತದಿಂದ ಕಂಗಾಲಾಗಿರುವ ಬಡ, ಮಧ್ಯಮ ವರ್ಗದವರು ಮೊದಲಿನಂತೆ ಬಟ್ಟೆ ಖರೀದಿಸಲು ಈ ಬಾರಿ ಹೆಚ್ಚಿನ ಉತ್ಸಾಹ ತೋರಿಸಿಲ್ಲ. ಹೀಗಾಗಿ ಎಲ್ಲೆಡೆ ಹೊಸ ಬಟ್ಟೆ ಖರೀದಿಗೂ ನಿರುತ್ಸಾಹ ಎದ್ದು ಕಾಣುತ್ತಿತ್ತು. ಆದರೂ ಹಬ್ಬ ಆಚರಿಸಲೇಬೇಕು ಎನ್ನುವ ಧಾವಂತದಲ್ಲಿ ದುಡಿಯುವ ವರ್ಗದವರುತಮ್ಮ ಮಕ್ಕಳಿಗೆ ಬಟ್ಟೆ ಕೊಡಿಸಿ ಅವರ ಸಂಭ್ರಮದಲ್ಲಿ ತಮ್ಮ ಸಾರ್ಥಕತೆ ಕಂಡು ಕೊಳ್ಳುತ್ತಿರುವುದು ಅಲ್ಲಲ್ಲಿ ಕಂಡುಬಂತು.

ಮೊದಲೆಲ್ಲ ಖರೀದಿದಾರದಿಂದ ಗಿಜಿಗುಡುತ್ತಿದ್ದ ಬಟ್ಟೆ ಅಂಗಡಿಗಳು ಈ ಬಾರಿ ಮಾತ್ರ ಅಂಥ ಯಾವುದೇ ಒತ್ತಡ ಇಲ್ಲದೆ ವ್ಯಾಪಾರ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದರು. ಹೀಗಾಗಿ ಕೊಳ್ಳುವವರ ಕೊರತೆ ಇದ್ದ ಹಿನ್ನೆಲೆ ಕೊಳ್ಳುವವರ ಮೇಲೆಯೇ ಹೆಚ್ಚಿನ ಬೆಲೆಯ ಭಾರ ಹಾಕಿ ಲಾಭ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಇದನ್ನು ಕೆಲ ಅಂಗಡಿಕಾರರು ನೇರವಾಗಿ ಒಪ್ಪಿಕೊಂಡರೂ ಅದನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿತ್ತು.

ವ್ಯಾಪಾರ ಈ ಬಾರಿ ಶೇ. 50ರಷ್ಟು ಕುಸಿತ ಕಂಡಿದೆ. ಜನ ಆರ್ಥಿಕ ಸಂಕಷ್ಟದಿಂದಾಗಿ ಮೊದಲೆಲ್ಲ ಖರ್ಚು ಮಾಡುತ್ತಿದ್ದ ಹಣದಷ್ಟು ಅರ್ಧ ಹಣ ಖರ್ಚಿಗೆ ಮುಂದಾಗಿದ್ದಾರೆ. ಅಂದರೆ ಸಾವಿರ ರೂ. ಬಟ್ಟೆ ಖರೀದಿಸುತ್ತಿದ್ದವರು 500ಕ್ಕೆ ಖರೀದಿ ಸೀಮಿತಗೊಳಿಸಿದ್ದಾರೆ. ಈ ದೀಪಾವಳಿಯಲ್ಲಿ ವ್ಯಾಪಾರಸ್ಥರು ಕೋವಿಡ್ ದಿಂದಾಗಿ ಸಾಕಷ್ಟು ಹೊಡೆತ ಅನುಭವಿಸುವಂತಾಗಿದೆ.  –ಅಶೋಕ ರೇವಡಿ, ಮಾಲೀಕರು, ಅಶೋಕ ಕ್ಲಾಥ್‌ ಸ್ಟೋರ್ಸ್‌, ಮುದ್ದೇಬಿಹಾಳ

ನಿರಂತರ ಮಳೆಯಿಂದಾಗಿ ಚೆಂಡು ಹೂವು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಇದ್ದಷ್ಟೇ ಮಾಲನ್ನು ಮಾರುಕಟ್ಟೆಗೆ ತಂದರೆ ದಲ್ಲಾಲಿಗಳ ಮೂಲಕ ಮಾರಾಟವಾಗಬೇಕು. ದಲ್ಲಾಳಿಗಳು ನಿಗದಿಪಡಿಸುವ ದರವೇ ಅಂತಿಮ. ಹೀಗಾಗಿ ಈ ಬಾರಿ ಹೂವಿನ ಬೆಲೆ ಗಗನಕ್ಕೇರಿದೆ. ನಮಗೂ ಲಾಭ, ದಲ್ಲಾಳಿಗಳಿಗೂ ಲಾಭ. –ಮಲ್ಲಪ್ಪ, ಢವಳಗಿ, ಚೆಂಡು ಹೂವು ಬೆಳೆದ ರೈತ

ಈ ಬಾರಿಯ ದೀಪಾವಳಿ ನಮ್ಮ ಪರಿಸ್ಥಿತಿ ಪರೀಕ್ಷಿಸುವಂತಿದೆ. ನಿತ್ಯ ದುಡಿದು ತಿನ್ನುವ ನಮಗೆ ಎಲ್ಲರಂತೆ ಖರೀದಿಸುವ ಶಕ್ತಿ ಇಲ್ಲ. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವಂತಾಗಿದೆ. ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಹಬ್ಬ ಆಚರಿಸಬೇಕು ಎನ್ನುವುದನ್ನು ಅರಿತು ಕಷ್ಟದಲ್ಲೂ ಸಾಲ ಸೂಲ ಮಾಡಿ ಹಬ್ಬ ಆಚರಿಸುತ್ತಿದ್ದೇವೆ.  –ತಿಮ್ಮಪ್ಪ ಬಿರಾದಾರ, ಗೌಂಡಿ ಕೆಲಸ ಮಾಡುವ ಕುಟುಂಬದ ಯಜಮಾನ

 

ಡಿ.ಬಿ. ವಡವಡಗಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆ ಸರ್ಕಾರ ತೀರ್ಮಾನ ಮಾಡುತ್ತದೆ : ಆನಂದ್ ಸಿಂಗ್

ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆ ಸರ್ಕಾರ ತೀರ್ಮಾನ ಮಾಡುತ್ತದೆ : ಆನಂದ್ ಸಿಂಗ್

Untitled-1

ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ಶಾಸಕ ದೇಸಾಯಿ : ವಿಡಿಯೋ ವೈರಲ್

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

ಮಹಾರಾಷ್ಟ್ರ: ಚಿರತೆಗಳ ಸಾವಿನ ಪ್ರಮಾಣ ಶೇ.57ಕ್ಕೆ ಏರಿಕೆ! ಪ್ರಸಕ್ತ ವರ್ಷ 172 ಚಿರತೆಗಳ ಸಾವು

ಮಹಾರಾಷ್ಟ್ರ: ಚಿರತೆಗಳ ಸಾವಿನ ಪ್ರಮಾಣ ಶೇ.57ಕ್ಕೆ ಏರಿಕೆ! ಪ್ರಸಕ್ತ ವರ್ಷ 172 ಚಿರತೆಗಳ ಸಾವು

ಮುಂದುವರಿದ ಬಿಕ್ಕಟ್ಟು; ಕೇಂದ್ರ v/s ರೈತರು-ನೂತನ ಕೃಷಿ ಕಾಯ್ದೆ ಹಿಂಪಡೆಯಲ್ಲ ಎಂದ ಕೇಂದ್ರ

ಮುಂದುವರಿದ ಬಿಕ್ಕಟ್ಟು; ಕೇಂದ್ರ v/s ರೈತರು-ನೂತನ ಕೃಷಿ ಕಾಯ್ದೆ ಹಿಂಪಡೆಯಲ್ಲ ಎಂದ ಕೇಂದ್ರ

ರಾಜ್ಯ ಸರ್ಕಾರಿ ನೌಕರರಿಗೆ 2022ರ ವೇಳೆಗೆ ಕೇಂದ್ರದ ಸಮಾನ ವೇತನ: ಸಿ.ಎಸ್.ಷಡಕ್ಷರಿ

ರಾಜ್ಯ ಸರ್ಕಾರಿ ನೌಕರರಿಗೆ 2022ರ ವೇಳೆಗೆ ಕೇಂದ್ರದ ಸಮಾನ ವೇತನ: ಸಿ.ಎಸ್.ಷಡಕ್ಷರಿ

ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ದಾಳಿ: APMC ಅಧಿಕಾರಿಯ ಬಂಧನ

ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ದಾಳಿ: APMC ಅಧಿಕಾರಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ! ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ

ಕರ್ನಾಟಕ ಬಂದ್ ಗೆ ಕರೆ ನೀಡಿದವರ ಆಸ್ತಿ ಜಪ್ತಿ ಮಾಡಿ! ಡಿ.5ರ ಬಂದ್ ವಿರೋಧಿಸಿ ಪ್ರತಿಭಟನೆ

ಬಸ್‌ ನಿಲ್ದಾಣ ಕಾಮಗಾರಿಗೆ ಅಡ್ಡಿಪಡಿಸಿಲ್ಲ: ನಾಡಗೌಡ

ಬಸ್‌ ನಿಲ್ದಾಣ ಕಾಮಗಾರಿಗೆ ಅಡ್ಡಿಪಡಿಸಿಲ್ಲ: ನಾಡಗೌಡ

ವಿದ್ಯುತ್‌ ಸಮಸ್ಯೆ ನೀಗಿಸಲು ಕ್ರಮ

ವಿದ್ಯುತ್‌ ಸಮಸ್ಯೆ ನೀಗಿಸಲು ಕ್ರಮ

ಮಾರುವೇಷದಲ್ಲಿ ಬಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್

ಮಾರುವೇಷದಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವೆ: ವಾಟಾಳ್ ನಾಗರಾಜ್ ಆಕ್ರೋಶ

vijayapura

ವಿಜಯಪುರ ಟೆಕ್ಕಿಗಳಿಂದ HIV ಸೋಂಕಿತರಿಗೆ ಆ್ಯಪ್ ಶೋಧ: ರಾಜ್ಯದ 4.75ಲಕ್ಷ ಸೋಂಕಿತರಿಗೆ ಅನುಕೂಲ

MUST WATCH

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ – ಇಬ್ಬರ ಮೃತದೇಹ ಪತ್ತೆ

udayavani youtube

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

ಹೊಸ ಸೇರ್ಪಡೆ

ಸರ್ಕಾರದ ದ್ವಂದ್ವ ನಿಲುವು ವಿರೋಧಿಸಿ: ಖಾಸಗಿ ಶಾಲಾ-ಕಾಲೇಜು ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ಸರ್ಕಾರದ ದ್ವಂದ್ವ ನಿಲುವು ವಿರೋಧಿಸಿ: ಖಾಸಗಿ ಶಾಲಾ-ಕಾಲೇಜು ಒಕ್ಕೂಟದಿಂದ ಬೃಹತ್ ಪ್ರತಿಭಟನೆ

tk-tdy-1

ಏತ ನೀರಾವರಿ ಕಾಮಗಾರಿಗಳಿಗೆ ಚುರುಕು

ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆ ಸರ್ಕಾರ ತೀರ್ಮಾನ ಮಾಡುತ್ತದೆ : ಆನಂದ್ ಸಿಂಗ್

ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆ ಸರ್ಕಾರ ತೀರ್ಮಾನ ಮಾಡುತ್ತದೆ : ಆನಂದ್ ಸಿಂಗ್

Untitled-1

ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿದ ಶಾಸಕ ದೇಸಾಯಿ : ವಿಡಿಯೋ ವೈರಲ್

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.