ವಿರುಪಾಕ್ಷಯ್ಯ ಶಾಸ್ತ್ರೀಗಳಿಗೆ ಕನ್ನಡ ಕುರಾನ್ ಗ್ರಂಥ ಸಮರ್ಪಣೆ
Team Udayavani, Sep 8, 2017, 2:50 PM IST
ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿವಯೋಗಿಗಳ ಹಾಗೂ ಶ್ರೀ ವಿರಕ್ತ ಶ್ರೀಗಳ ಮೂರನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಪುರಾಣ ಪ್ರವಚನ ನೀಡುತ್ತಿರುವ ಪುಟ್ಟರಾಜ ಗವಾಯಿಗಳ ಶಿಷ್ಯ ವಿರುಪಾಕ್ಷಯ್ಯ ಶಾಸ್ತ್ರೀಗಳಿಗೆ ಇಲ್ಲಿಯ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಪದಾಧಿಕಾರಿಗಳು ಕನ್ನಡ ಭಾಷೆಯಲ್ಲಿರುವ ಕುರಾನ್ ಗ್ರಂಥ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿಹಿಂದ್ ಸಂಘಟನೆ ಅಧ್ಯಕ್ಷ ಅಲ್ಲಾಭಕ್ಷ ನಮಾಜಕಟ್ಟಿ, ಶ್ರೀ ಖಾಸ್ಗತೇಶ್ವರ ಮಠ ಸಾಮರಸ್ಯ ಎತ್ತಿ ಹಿಡಿಯುತ್ತಾ ಸಾಗಿ ಬಂದಿದೆ. ಶ್ರೀ ಮಠದೊಂದಿಗೆ ಹಿಂದಿನಿಂದಲೂ ಸಮಾನತೆ ಇಸ್ಲಾಮಿ ಹಿಂದ್ ಸಂಘಟನೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಹೇಳಿದರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಗೇಶ ವಿರಕ್ತಮಠ, ಸಂಗಯ್ಯ ವಿರಕ್ತಮಠ, ವಿಶ್ವನಾಥ ವಿರಕ್ತಮಠ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ದಾವೂದ್ ತಹಶೀಲ್ದಾರ, ಅಬ್ದುಲ್‌ಗನಿ ಮಕಾಂದಾರ, ಕುತುಬುದ್ದೀನ್ ಮೋಮಿನ್, ಕಾಶಿಮ ನಮಾಜಕಟ್ಟಿ, ಇರ್ಫಾನ್ ಖಾಜಿ, ಮುಜಾಯಿದ್ ನಮಾಜಕಟ್ಟಿ, ಉಸ್ಮಾನಗನಿ ಖಾಜಿ ಇದ್ದರು.