ಕಾರ್ಮಿಕರ ಮಕ್ಕಳಿಗೆ ಸಿಹಿ ವಿತರಣೆ
Team Udayavani, Jan 27, 2022, 6:03 PM IST
ಮುದ್ದೇಬಿಹಾಳ: ನಮ್ಮ ದೇಶಕ್ಕೆ ಸಂವಿಧಾನವನ್ನು ದೊರಕಿಸಿಕೊಟ್ಟು ಗಣತಂತ್ರ ವ್ಯವಸ್ಥೆಗೆ ಮಹತ್ವ ತಂದು ಕೊಟ್ಟಿರುವ ಗಣರಾಜ್ಯೋತ್ಸವದ ಈ ದಿನವನ್ನು ಪ್ರತಿಯೊಬ್ಬರೂ ಶ್ರದ್ಧಾಪೂರ್ವಕವಾಗಿ ಆಚರಿಸುವ ಮೂಲಕ ದೇಶಕ್ಕಾಗಿ ಬಲಿದಾನಗೈದ ಮಹನೀಯರನ್ನು ಸ್ಮರಿಸಿಕೊಳ್ಳಬೇಕು ಎಂದು ಯರಗಲ್ಲ-ಮದರಿ ಬಳಿ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲ ಹೇಳಿದರು.
ಬುಧವಾರ ಕಾರ್ಖಾನೆ ಆವರಣದಲ್ಲಿ 73ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಈಡೇರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕಾರ್ಖಾನೆಯ ಗೌರವ ನಿರ್ದೇಶಕ ಶಿವಾನಂದ ದೇಸಾಯಿ ಕುದರಿಸಾಲವಾಡಗಿ ಅವರು ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ಕಾರ್ಖಾನೆ ಅಧಿಕಾರಿ ವರ್ಗದವರಾದ ಆಪರೇಷನ್ ಹೆಡ್ ಶ್ರೀನಿವಾರ ಅರಕೇರಿ, ಅಸಿಸ್ಟಂಟ್ ವೈಸ್ ಪ್ರಸಿಡೆಂಟ್ ರಾಹುಲ್ ಪಾಟೀಲ, ಡಿಸ್ಲೇರಿ ವಿಭಾಗದ ಅಧಿ àಕ್ ಪಾಟೀಲ, ಸ್ಟೋರ್ ಮ್ಯಾನೇಜರ್ ಪ್ರಶಾಂತ, ಕೋಜಿನ್ ಮ್ಯಾನೇಜರ್ ಶ್ರೀನಿವಾಸ ಬಡಕರ್, ರಾಜೇಶ ಬಾಗೇವಾಡಿ, ಡೊರ್ಲೆ, ಬಸವರಾಜ ಕ್ಯಾದಿ, ಎಚ್‌ಆರ್ ಮ್ಯಾನೇಜರ್ ಉಮೇಶ ಚರಂತಿಮಠ, ಚೀಫ್ ಎಂಜಿನಿಯರ್ ಐನಾಪುರ, ಅಸಿಸ್ಟಂಟ್ ಮ್ಯಾನೇಜರ್ ಅನಿಲ್ ಕೇತನ್, ರಾಮಚಂದ್ರ ಕೋರೆ, ಕೇನ್ ವಿಭಾಗದ ಡಿಜಿಎಂ ಯಲ್ಲಡಗಿ, ಕೇನ್ ಮ್ಯಾನೇಜರ್‌ಗಳಾದ ಮುತ್ತು ಹುಲಿಕೇರಿ, ಮುನ್ನಾ, ಹನುಮಂತ ಮಿಕ್ಲಿ, ಕಾರ್ಖಾನೆ ಭದ್ರತಾ ಸಿಬ್ಬಂದಿ, ಇತರೆ ಸಿಬ್ಬಂದಿ ಸೇರಿ ಹಲವರು ಪಾಲ್ಗೊಂಡಿದ್ದರು.
ಈ ಸಂದರ್ಭ ಕಾರ್ಖಾನೆ ಸಿಬ್ಬಂದಿ ಮತ್ತು ಕಾರ್ಮಿಕರ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಕಾರ್ಖಾನೆಯ ಎಚ್‌ಆರ್ ವಿಭಾಗದ ಮಾರುತಿ ಗುರವ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್ಟಿ ಪರೀಕ್ಷೆ
ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ಒಳ ಹರಿವು ಆರಂಭ: ಜೀವನದಿ ಕೃಷ್ಣೆಗೆ ಜೀವಕಳೆ
ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು
ಪದವೀಧರ ಪರೀಕ್ಷಾ ಕೇಂದ್ರಕ್ಕೆ ಡಿಸಿ-ಎಸ್ಪಿ ಭೇಟಿ
ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ