ಮಾಸಾಶನ ಬಿಡುಗಡೆಗೆ ಆಗ್ರಹ

Team Udayavani, Dec 30, 2017, 4:18 PM IST

ಇಂಡಿ: ಮಾಸಾಶನ ಬಿಡುಗಡೆಗೆ ಆಗ್ರಹಿಸಿ ನೂರಾರು ಫಲಾನುಭವಿಗಳು ಪಟ್ಟಣದ ಅಂಚೆ ಕಚೇರಿ ಹಾಗೂ ಉಪ
ಖಜಾನೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಂಚೆ ಕಚೇರಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಜೆಡಿಎಸ್‌ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ವೃದ್ಧರಿಗೆ, ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಸುಮಾರು ನಾಲ್ಕು ತಿಂಗಳುಗಳಿಂದ ಮಾಸಾಶನ ಸ್ಥಗಿತಗೊಂಡಿದೆ.

ಇದರಿಂದ ಅವರು ಜೀವನ ಸಾಗಿಸುವುದು ಕಷ್ಟವಾಗಿದೆ. ಎಷ್ಟೋ ಬಡ ಜನತೆ ಇವುಗಳಿಂದ ತಮ್ಮ ಜೀವನ ಸಾಗಿಸಿಕೊಂಡು ಹೊಗುತ್ತಿದ್ದಾರೆ. ಕೂಡಲೆ ಸರ್ಕಾರ ಅವರ ಉಳಿದ ಮಾಸಾಶನ ಮಂಜೂರು ಮಾಡಬೇಕು ಹಾಗೂ ಪ್ರತಿ ತಿಂಗಳಿಗೊಮ್ಮೆ ಸಮಯಕ್ಕೆ ಸರಿಯಾಗಿ ಮಾಸಾಶನ ಕೊಡಬೇಕು ಎಂದು ಆಗ್ರಹಿಸಿದರು.

ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಂಚೆ ಇಲಾಖೆ ಮತ್ತು ಖಜಾನೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಮಾಸಾಶನ ನೀಡಬೇಕು. ಸರಕಾರ ಬಡ ಜನರತೆಯ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಹಲವಾರು ಯೋಜನೆಗಳು ಯಾವುದೇ ಸಮಸ್ಯೆಯಾಗದಂತೆ ಅರ್ಹ ಫಲಾನುಭವಿಗಳಿಗೆ ಅವುಗಳ ಲಾಭ ಮುಟ್ಟುವಂತೆ
ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಬಡ ನಿರ್ಗತಿಕರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ
ಎಂದರು. ಈ ಕೂಡಲೇ ಎಲ್ಲರ ಮಾಸಾಶನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಿಳಿಸಬೇಕು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ಈ ವೇಳೆ ಪುರಸಭೆ ಸದಸ್ಯ ಸಿದ್ದುಡಂಗಾ, ಪ್ರಧಾನ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ, ಸಂತೋಷ
ರಾಠೊಡ, ದುಂಡಪ್ಪ ಬಿರಾದಾರ, ಸಧೀರ ಕರಕಟ್ಟಿ, ಎಲ್ಲೂ ಹೂಗಾರ, ಸಂತೋಷ ಅಳ್ಳಗಿ, ಮಾಳಪ್ಪ ಪೂಜಾರಿ,
ಶ್ರೀಮಂತ ನಾಟೀಕಾರ ಹಾಗೂ ನೂರಾರು ವೃದ್ಧರು, ವಿಧವೆಯರು, ಅಂಗವಿಕಲರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಡಚಣ: ತಾಲೂಕಿನ ಹಲಸಂಗಿ ಗ್ರಾಮದಿಂದ ನಂದ್ರಾಳವರೆಗಿನ 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರು ತೀವೃ ತೊಂದರೆ...

  • ಚಡಚಣ: ಮನೆಗೊಂದು ಶೌಚಾಲಯ ಎಷ್ಟು ಮುಖ್ಯವೋ ಅಷ್ಟೇ ಗ್ರಾಮಕ್ಕೊಂದು ಗ್ರಂಥಾಲಯ ಮುಖ್ಯ. ಗ್ರಾಮದಲ್ಲಿ ಗ್ರಂಥಾಲಯವಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರ...

  • ವಿಜಯಪುರ: ವಿಜಯಪುರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದ...

  • ಆಲಮಟ್ಟಿ: ಈ ಭಾಗದ ಶ್ರೀಕ್ಷೇತ್ರಗಳಲ್ಲೊಂದಾಗಿರುವ ಯಲಗೂರ ಗ್ರಾಮದ ಯಲಗೂರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತತ ಎರಡು ದಿನ ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರಿಂದ...

  • ವಿಜಯಪುರ: ಬಹು ವರ್ಷಗಳ ಬೇಡಿಕೆಯಾಗಿದ್ದ ವಿಜಯಪುರ - ಹುಬ್ಬಳ್ಳಿ ಇಂಟರ್ ಸಿಟಿ ಪ್ರಯಾಣಿಕರ ರೈಲು ಸೇವೆಗೆ ಸೋಮವಾರ ನಗರದ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಚಾಲನೆ...

ಹೊಸ ಸೇರ್ಪಡೆ