ಬಡ-ನಿರ್ಗತಿಕರಿಗೆ ಆಹಾರ ಪೊಟ್ಟ ಣ ವಿತರಣೆ
Team Udayavani, May 24, 2021, 8:44 PM IST
ತಾಳಿಕೋಟೆ: ಕೋವಿಡ್-19 ಎರಡನೇ ಅಲೆಯಿಂದ ಸಂಕಷ್ಟಕ್ಕಿಡಾದ ಬಡವರಿಗೆ ಮತ್ತು ನಿರ್ಗತಿಕರಿಗೆ ಅಲ್ಲದೇ ಅಸಂಘಟಿತ ಕಾರ್ಮಿಕರಿಗೆ ಆರ್.ಎಸ್. ಪಾಟೀಲ (ಕೂಚಬಾಳ) ಅಭಿಮಾನಿ ಬಳಗದ ವತಿಯಿಂದ ಆಹಾರ ಪೊಟ್ಟಣ ಮತ್ತು ನೀರಿನ ಬಾಟಲ್ ವಿತರಿಸುವ ಕಾರ್ಯ ಮುಂದುವರಿದಿದೆ.
ರವಿವಾರ ತಾಳಿಕೋಟೆ ತಾಲೂಕಿನ ಹಗರಗುಂಡ, ಮೂಕಿಹಾಳ, ಕೊಣ್ಣೂರ, ತಮದಡ್ಡಿ, ಹಿರೂರ, ಗ್ರಾಮಗಳನ್ನೊಳಗೊಂಡು ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಡಬಗ್ಗರಿಗೆ, ನಿರ್ಗತಿಕರಿಗೆ ಆಹಾರ ಪೊಟ್ಟಣ, ಮೊಟ್ಟೆ, ನೀರಿನ ಬಾಟಲ್ ವಿತರಿಸಲಾಯಿತು. ಅಸಂಘಟಿತ ಕೂಲಿ ಕಾರ್ಮಿಕರಿಗೆ ಅಲ್ಲದೇ ದಾರಿ ಹೋಕರಿಗೂ ಕೂಡಾ ಆಹಾರ ಪೊಟ್ಟಣಗಳನ್ನು ನೀಡಿದರು.
ಕೇವಲ ಗ್ರಾಮಗಳಲ್ಲಿ ಅಷ್ಟೇ ಅಲ್ಲದೇ ತಾಳಿಕೋಟೆ ಮತ್ತು ಮುದ್ದೇಬಿಹಾಳ ಪಟ್ಟಣದಲ್ಲಿಯ ಬಡವರಿಗೆ ಆರ್.ಎಸ್. ಪಾಟೀಲ(ಕೂಚಬಾಳ) ಮತ್ತು ಪ್ರಭುಗೌಡ ದೇಸಾಯಿ ಅಭಿಮಾನಿ ಬಳಗದ ನೇತೃತ್ವದಲ್ಲಿ ಲಾಕ್‌ಡೌನ್ ಅಂತ್ಯದವರೆಗೂ ವಿತರಣೆ ಕಾರ್ಯ ನಡೆಯಲಿದೆ ಎಂದು ಅಭಿಮಾನಿ ಬಳಗದ ಸಂಚಾಲಕ ಬಸನಗೌಡ ಮಾಲಿಪಾಟೀಲ ಪತ್ರಿಕೆಗೆ ತಿಳಿಸಿದ್ದಾರೆ. ಆಹಾರ ಪೊಟ್ಟಣ ವಿತರಿಸುವ ವೇಳೆ ಕಿರಣ ಬಡಿಗೇರ, ಅನಿಲ ಹಜೇರಿ, ಮುತ್ತು ಹಿಪ್ಪರಗಿ, ಸೋಮು ಹೇರೂರ, ಮುನ್ನಾ ಠಾಕೂರ, ಕಾಶೀನಾಥ ಗಾಯಕವಾಡ, ಕಾಶೀನಾಥ ಹಿರೇಮಠ, ಸಂತೋಷ ಪೂಜಾರಿ, ಕುಶಾಲ ಅಂಬಿಗೇರ, ಕಾಶೀನಾಥ ಪಾಟೀಲ, ರಾಜು ಪಾಟೀಲ, ಅಶೋಕ ವಠಾರ, ಶಂಕರಗೌಡ ಪಾಟೀಲ ಇದ್ದರು.