ವಿಮಾನ ಹಾರುವ ಕನಸು ನನಸಾಗುತ್ತಾ?

Team Udayavani, Sep 17, 2019, 3:17 PM IST

ವಿಜಯಪುರ: ಮದಭಾವಿ ಬಳಿ ವಿಮಾನ ನಿಲ್ದಾಣ ಉದ್ದೇಶಿತ ಸ್ಥಳಕ್ಕೆ ಮೂಲಭೂತ ಸೌಕರ್ಯಗಳ ಸಚಿವರಾಗಿದ್ದ ರೋಷನ್‌ ಬೇಗ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ವಿಜಯಪುರ: ಜಿಲ್ಲೆಯ ಜನರು ಇಚ್ಛಾಶಕ್ತಿ ತೋರಿದರೆ ಗೋಲಗುಮ್ಮಟದಂಥ ಅದ್ಭುತವನ್ನೇ ಕಟ್ಟುತ್ತಾರೆ. ಇಲ್ಲವಾದಲ್ಲಿ ಬಾರಾಕಮಾನ್‌ಗೆ ಕೈ ತೊಳೆದುಕೊಳ್ಳುತ್ತಾರೆ ಎಂಬ ಗಾದೆ ಇದೆ. ಈ ಗಾದೆಯಲ್ಲಿನ ಎರಡನೇ ಅಂಶಕ್ಕೆ ಅಂಟಿಕೊಂಡವರಂತೆ ಕಾಣುವ ಜಿಲ್ಲೆಯ ರಾಜಕೀಯ ಮಂದಿ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಬಾರಾಕಮಾನ್‌ನಂತೆ ದುರಂಥ ಕಣ್ಣೀರ ಕಥೆ ಹೇಳುತ್ತಿದೆ.

ಬಸವನಾಡಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ, ಉತ್ಕೃಷ್ಟ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕಾರಣ ರಫ್ತು ಹಾಗೂ ಜಿಲ್ಲೆ ವಾಣಿಜ್ಯೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕೆ ಜಿಲ್ಲೆಯ ಜನರು ಎರಡು ದಶಕಗಳ ಹಜಿಂದೆ ವಿಮಾನ ನಿಲ್ದಾಣ ನಿರ್ಮಾಣದ ಕನಸು ಕಟ್ಟಿಕೊಂಡರು. ನಿರಂತರ ಚರ್ಚೆ ಹೋರಾಟಗಳ ಬಳಿಕ 2003ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಪ್ರಕ್ರಿಯೆ ಆರಂಭಿಸಿದ ಸರ್ಕಾರ 2007 ಮಾರ್ಚ್‌ 23ರಂದು ಅನುಮೋದನೆ ನೀಡಿತು.

ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಗರದ ಹೊರ ವಲಯದಲ್ಲಿರುವ ಅಲಿಯಾಬಾದ್‌, ಬುರಣಾಪುರ ಹಾಗೂ ಮದಭಾವಿ ಬಳಿ ಧಾರವಾಡ ವಲಯದ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಖಾಸಗಿ ಒಡೆತನದ 347 ಎಕರೆ ಜಮೀನಲ್ಲದೇ ಸರ್ಕಾರಿ ಒಡೆತನದ 280 ಎಕರೆ ಜಮೀನು ಸೇರಿ 727 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದೆ.

ಜಮೀನು ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ಒಣ ಬೇಸಾಯಕ್ಕೆ 8 ಲಕ್ಷ ರೂ. ಹಾಗೂ ನೀರಾವರಿ ಜಮೀನಿಗೆ 9 ಲಕ್ಷ ರೂ.ಗಳಂತೆ ಸರ್ಕಾರಕ್ಕೆ 30.65 ಕೋಟಿ ರೂ. ಪರಿಹಾರದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶ ಮೂಲಭೂತ ಸೌಲಭ್ಯ ಅಭಿವೃದ್ಧಿ ಮಂಡಳಿ (ಕೆಎಸ್‌ಐಐಡಿಸಿ ) ಮೂಲಕ 29.50 ಕೋಟಿ ರೂ. ಅನುದಾನವೂ ಬಿಡುಗಡೆ ಮಾಡಿತ್ತು. ಇದರಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಗೆ 28.52 ಕೋಟಿ ರೂ. ಪಾವತಿಸಿ, ಭೂಸಂತ್ರಸ್ತರಿಗೆ ವಿತರಿಸಲಾಗಿದೆ.

ಇದಲ್ಲದೇ ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶಿತ ಸ್ಥಳದಲ್ಲಿ ವಿದ್ಯುತ್‌ ಕಂಬಗಳ ಬದಲಾವಣೆ, ಸ್ಥಳಾಂತರದ ಜೊತೆಗೆ, ಭೂಸ್ವಾಧೀನ ಪ್ರದೇಶದಲ್ಲಿದ್ದ ಹಳೆ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿ, ಹೊಸ ರಸ್ತೆಗಳ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಈ ಎಲ್ಲ ಪ್ರಕ್ರಿಯೆ ಮುಗಿಯುವ ಹಂತದಲ್ಲೇ 7-12-2008ರಲ್ಲಿ ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದರು. ಇದರಿಂದ ಜಿಲ್ಲೆಯಲ್ಲಿ ಇನ್ನೇನು ವಿಮಾನ ನಿಲ್ದಾಣ ಆರಂಭವಾಗಿ ಲೋಹದ ಹಕ್ಕಿಗಳ ಗುಮ್ಮಟದ ಮೇಲೆ ಹಾರಿದವು ಎಂದು ವಿಶ್ವಾಸ ಇರಿಸಿದ್ದರು.

ಇದಕ್ಕೆ ಪುಷ್ಟಿ ನೀಡುವಂತೆ 2010-11ರ ಬಜೆಟ್‌ನಲ್ಲಿ ಯಡಿಯೂರಪ್ಪ ಸರ್ಕಾರ 1.15 ಕೋಟಿ ಹಣವನ್ನೂ ನೀಡಿದ್ದು, ಕರ್ನಾಟಕದ ವಿಕಾಸ ಬ್ಯಾಂಕ್‌ನಲ್ಲಿ ಈ ಹಣವನ್ನು ತಾತ್ಕಾಲಿಕ ಠೇವಣಿ ಇರಿಸಲಾಗಿದೆ. ಇದೇ ಹಂತದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಚೈನ್ನೈ ಮೂಲದ ಮೇ/ಮಾರ್ಗ ಲಿಮಿಟೆಡ್‌ ಎಂಬ ಸಂಸ್ಥೆಗೆ ನೀಡಿದರೂ ನಮ್ಮಿಂದ ಕೆಲಸ ಮಾಡಲಾಗದು ಎಂದು ಕೈ ಚೆಲ್ಲಿತು. ಇದರಿಂದಾಗಿ ಮಾರ್ಗ ಸಂಸ್ಥೆ ಬ್ಯಾಂಕ್‌ ಗ್ಯಾರಂಟಿಗೆ ಭರಿಸಿದ್ದ 2.50 ಕೋಟಿ ರೂ. ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತು. ಅಲ್ಲಿಗೆ ಲೋದಹ ಹಕ್ಕಿಗಳ ಹಾರಾಟದ ಕನು ಭಗ್ನವಾಯಿತು. ಎರಡು ವರ್ಷಗಳ ಬಳಿಕ ಕೇಂದ್ರ ಸರ್ಕಾರಿ ಒಡೆತನದ ವಿಮಾನ ನಿಲ್ದಾಣ ಪ್ರಾಧಿಕಾರ ಸಂಸ್ಥೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಅಲ್ಲದೇ ಮದಭಾವಿ ಬಳಿಯ ಉದ್ದೇಶಿತ ಸ್ಥಳದಲ್ಲಿ ವಿಮಾನ ನಿಲ್ದಾಣ ಭೂಮಿ ಸಮತಟ್ಟು ಮಾಡಲು 100 ಕೋಟಿ ರೂ. ಬೇಕು. ಈ ಅನುದಾನ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಪಾಲು ಅನುದಾನ ನೀಡಬೇಕು ಎಂಬ ಮಾತುಕತೆಯಾಯಿತು.

ಇದಕ್ಕೆ ಪೂರಕ ಎಂಂಬಂತೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳು 9-10-2013ರಂದು ಪತ್ರವನ್ನೂ ಬರೆದರು. ಕೆಎಸ್‌ಐಐಡಿಸಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ 2013 ಡಿಸೆಂಬರ್‌ 9ರಂದು ಹಾಗೂ 2014 ಆಕ್ಟೋಬರ್‌ 29ರಂದು ಎರಡು ಪತ್ರಗಳನ್ನೂ ಬರೆದಿದೆ. ಆದರೆ ಸ್ಪಂದನೆ ಮಾತ್ರ ಶೂನ್ಯ.

ಇದರ ನಂತರ ಕೇಂದ್ರ ವಿಮಾನಯಾನ ಪ್ರಾಧಿಕಾರದ ಎಂಜಿನಿಯರಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್‌.ಎನ್‌. ರಾವ್‌ ಎಂಬವರು ಮದಭಾವಿ ವಿಮಾನ ನಿಲ್ದಾಣ ಸ್ಥಳ ಪರಿಶೀಲನೆಗೆ ಮುಂದಾದಾಗ ಮತ್ತೆ ವಿಜಯಪುರ ಜಿಲ್ಲೆಯ ಜನರು ವಿಮಾನದಲ್ಲಿ ಹಾರುವ ಕನಸುಗಳಿಗೆ ರೆಕ್ಕೆ ಮೂಡಿದವು. ಜಿಲ್ಲಾಡಳಿತದೊಂದಿಗೆ ಈ ಅಧಿಕಾರಿ ಪತ್ರ ವ್ಯವಹಾರ ಕೂಡ ಮಾಡಿದರು.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರದಲ್ಲಿ ಮೂಲಭೂತ ಸಚಿವರಾಗಿದ್ದ ರೋಷನ್‌ ಬೇಗ್‌ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮದಭಾವಿ ಬಳಿ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದರು. ನಮ್ಮ ಸರ್ಕಾರದ ಅವಧಿಯಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿಯೇ ತೀರುತ್ತೇನೆ ಎಂದು ಹೇಳಿ ಹೋದವರು ಮರಳಿ ಈ ವಿಷಯದಲ್ಲಿ ಒಂದೇ ಒಂದು ಹೇಳಿಕೆಯನ್ನು ನೀಡಲಿಲ್ಲ.

ಇದಾದ ಬಳಿಕ ಕೆಎಸ್‌ಐಐಡಿಸಿ ಇಲಾಖೆ ಪರವಾಗಿ ಎಂಜಿನಿಯರ್‌ಗಳಾದ ಯತೀಶ ಹಾಗೂ ಸುಮೀತ್‌ ಗೌತಮ್‌ ಎಂಬ ಅಧಿಕಾರಿಗಳ ತಂಡ 2018ರ ಜನೇವರಿ 5ರಂದು ಸ್ಥಳ ಪರಿಶೀಲಿಸಿ ಹೋಗಿದ್ದಾರೆ. ಈ ಹಂತದಲ್ಲೇ ಸಚಿವರಾಗಿದ್ದ ಡಾ| ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯೂ ನಡೆದಿತ್ತು. ಸದರಿ ಸಭೆಯಲ್ಲಿ, ವಿಮಾನ ನಿಲ್ದಾಣ ಆರಂಭಕ್ಕೆ ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಕುರಿತು ಭರವಸೆ ನೀಡಿದ್ದರು. ಇದು ಈಡೇರುವ ಮುನ್ನವೇ ಮೈತ್ರಿ ಸರ್ಕಾರ ಪತನವಾಗಿದೆ.

ಇನ್ನು ವಿಜಯಪುರ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ನಡೆದ ಸತತ ಮೂರು ಚುನಾವಣೆಗಳಲ್ಲಿ ವಿಜಯಪುರಕ್ಕೆ ವಿಮಾನ ನಿಲ್ದಾಣ ಮಾಡಿಯೇ ತೀರುತ್ತೇನೆ ಎಂದು ಭರವಸೆ ನೀಡಿಯೇ ರಮೇಶ ಜಿಗಜಿಣಗಿ ಅವರು ಹ್ಯಾಟ್ರಿಕ್‌ ವಿಜಯ ಸಾಧಿಸಿದ್ದಾರೆ. ಆರು ಬಾರಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಹೇಳಿಕೆಗಳು ಪ್ರಚಾರಕ್ಕೆ ಸೀಮಿತವಾದವೇ ಹೊರತು, ರಾಜಕೀಯ ಇಚ್ಛಾಶಕ್ತಿ ಪ್ರದರ್ಶನವಾಗಿಲ್ಲ.

ಮದಭಾವಿ ಬಳಿ ವಿಮಾನ ನಿಲ್ದಾಣ ಆಗುತ್ತದೆ ಎಂಬ ಭರವಸೆಯಿಂದಾಗಿ ಉದ್ದೇಶಿತ ಸ್ಥಳದ ಸುತ್ತಲಿನ ಜಮೀನುಗಳನ್ನು ಖರೀದಿಸಿದ ಬಿಲ್ಡರ್‌ಗಳು ಲೇಔಟ್ ನಿರ್ಮಾಣ ಮಾಡಿಕೊಂಡು ಕುಳಿತಿದ್ದು, ಹಾಕಿದ ಬಂಡವಾಳಕ್ಕೆ ಬಡ್ಡಿ ಬರುತ್ತಿಲ್ಲ ಎಂಬ ಕೊರಗಿನಲ್ಲಿದ್ದಾರೆ. ಇಂಥ ಸ್ಥಿತಿಯಲ್ಲೇ ಜಿಲ್ಲೆಯವರೇ ಆಗಿರುವ ರಾಜ್ಯದ ಹಾಲಿ ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮದಭಾವಿ ಸ್ಥಳಕ್ಕೆ ಬದಲಾಗಿ ಮುಳವಾಡ ಬಳಿ ಕೈಗಾರಿಕೆ ನಿರ್ಮಾಣಕ್ಕೆ 3,323 ಎಕರೆ ಮೀಸಲಿಸಿದ ಸ್ಥಳದಲ್ಲಿ ವಿಮಾನ ನಿಲ್ದಾಣ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಚಿವರಾಗುವ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ವಿಷಯದಲ್ಲಿ ಇಲ್ಲದ ಗೊಂದಲ ಸೃಷ್ಟಿಸಿದ್ದು ಜನಾಕ್ರೋಶಕ್ಕೂ ಕಾರಣವಾಗಿದೆ.

ಈ ಎಲ್ಲ ಬೆಳವಣಿಗೆ ಬಳಿಕ ಕಳೆದ ಆಗಸ್ಟ್‌ 31ರಂದು ಕೆಎಸ್‌ಐಐಡಿಸಿ ನಿರ್ದೇಶನ ಮೇಲೆ ಪೈಲಟ್ ಕ್ಯಾ| ಶಮಂತ ಎಂಬ ಅಧಿಕಾರಿ ಉದ್ದೇಶಿತ ಮದಭಾವಿ ಹಾಗೂ ಡಿಸಿಎಂ ಕಾರಜೋಳ ಅವರು ಪ್ರಸ್ತಾಪಿಸಿರುವ ಮುಳವಾಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಈ ಕುರಿತು ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ.

ಆದರೆ ಲಭ್ಯ ಮಾಹಿತಿ ಪ್ರಕಾರ ಮುಳವಾಡ ಬಳಿ ವಿಮಾನ ನಿರ್ಮಾಣಕ್ಕೆ ಪೂರಕ ವಾತಾವಣರ ಇಲ್ಲ. ಈ ಪ್ರದೇಶಲ್ಲಿ ಪವನ ವಿದ್ಯುತ್‌ ಕೇಂದ್ರಗಳು, ಕೂಡಗಿ ಎನ್‌ಟಿಪಿಸಿ ಘಟಕ ಹಾಗೂ ಅದರಿಂದ ವಿದ್ಯುತ್‌ ವಿತರಣಾ ಜಾಲಗಳು, ಸಕ್ಕರೆ ಕಾರ್ಖಾನೆಗಳಂಥ ನಿರ್ಮಾಣಗಳ ನಕಾರಾತ್ಮಕ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಿವೆ. ಈ ಹಂತದಲ್ಲೇ ನೆರೆಯ ಕಲಬುರಗಿ ಜಿಲ್ಲೆಯಲ್ಲಿ ಕೆಲವೇ ತಿಂಗಳಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಅಲ್ಲಿಗೆ ಅಧಿಕಾರಿಗಳ ಸ್ಥಳ ಭೇಟಿ, ಪರಿಶೀಲನೆ ಹಂತದಲ್ಲಿ ಬಾರಾಕಮಾನ್‌ ಸ್ಮಾರಕದಂತೆ ಅರ್ಧಕ್ಕೆ ನಿಂತಂತೆ ವಿಮಾನ ನಿಲ್ದಾಣದ ಕಣ್ಣೀರ ಕಥೆ ಮುಂದುವರಿದಿದೆ.

ವಿಮಾನ ನಿಲ್ದಾಣ ನಿರ್ಮಾಣ ಕೆಲಸಕ್ಕಾಗಿ ಈಗಾಗಲೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ನಿಲ್ದಾಣ ಸ್ಥಳದ ವಿಷಯದಲ್ಲಿ ಜಿಲ್ಲಾಡಳಿತಕ್ಕೆ ಯಾವುದೇ ಗೊಂದಲವಿಲ್ಲ. ಸರ್ಕಾರ ನಿರ್ದೇಶನ ನೀಡದ ತಕ್ಷಣವೇ ವಿಮಾನ ನಿಲ್ದಾಣಕ್ಕೆ ಬೇಕಾದ ಮೂಲಸೌಕರ್ಯ ಇಲಾಖೆ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ಮಾಡಲಿದೆ. ನಿರ್ಮಾಣ ಸಂಸ್ಥೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಹಕಾರ ನೀಡಲಿದೆ. •ವೈ.ಎಸ್‌. ಪಾಟೀಲ ,ಜಿಲ್ಲಾಧಿಕಾರಿ, ವಿಜಯಪುರ

ಕ್ಯಾ| ಶಮಂತ ಎಂಬ ಅಧಿಕಾರಿ ತಂಡ ಎರಡು ವಾರಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿ, ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶಿತ ಮದಭಾವಿ ಹಾಗೂ ಮುಳವಾಡ ಬಳಿ ಕೈಗಾ ರಿಕೆಗೆ ಮೀಸಲಿಟ್ಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಜಿಲ್ಲಾಡಳಿತದ ಮೂಲಕ ಸದರಿ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಲಾಗಿದೆ.ಆದರೆ ಸದರಿ ಅಧಿಕಾರಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. •ಸಿದ್ದಣ್ಣ, ಜಂಟಿ ನಿರ್ದೇಶಕರು, ಕ್ಯೆಗಾರಿಕೆ ಇಲಾಖೆ, ವಿಜಯಪುರ

ಮದಭಾವಿ ಬಳಿ ವಿಮಾನ ನಿಲ್ದಾಣಕ್ಕೆ ಈಗಾಗಲೇ ಹಲವು ಅಧಿಕಾರಿಗಗಳ ತಂಡ ಭೇಟಿ ನೀಡಿ, ಕಾಮಗಾರಿ ಆರಂಭಕ್ಕೆ ಸೂಕ್ತ ಎಂದಿವೆ. ಇಂತ ಸ್ಥಿತಿಯಲ್ಲಿ ಮುಳವಾಡ ಪ್ರದೇಶದಲ್ಲಿ ವಿಮಾನ ನಿಲ್ದಾಣ ಪ್ರಸ್ತಾಪಿಸುವ ಮೂಲಕ ಡಿಸಿಎಂ ಗೋವಿಂದ ಕಾರಜೋಳ ಅವರು ಅಭಿವೃದ್ಧಿಗೆ ತೊಡಕುಂಟು ಮಾಡುವ ಕ್ರಮಕ್ಕೆ ನಮ್ಮ ವಿರೋಧವಿದೆ. ಸರ್ಕಾರ ತಕ್ಷಣವೇ ಮದಭಾವಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. •ರವಿ ಕಿತ್ತೂರ, ಸದಸ್ಯರು, ವಿಜಯಪುರ ವಿಮಾನ ನಿಲ್ದಾಣ ಹೋರಾಟ ಸಮಿತಿ

•ಜಿ.ಎಸ್‌. ಕಮತರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ