ತಿಕೋಟಾದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ
Team Udayavani, Jun 3, 2021, 10:10 PM IST
ವಿಜಯಪುರ: ತಿಕೋಟಾ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಯನ್ನು ಆರಂಭಗೊಂಡಿತು.
ಸರಕಾರದ ನಿರ್ದೇಶನದಂತೆ ರಿಯಾಯಿತಿ ದರದಲ್ಲಿ ಸಜ್ಜೆ, ಶಕ್ತಿಮಾನ ಗೋವಿನಜೋಳ, ತೊಗರಿ, ಹೆಸರು ಮುಂತಾದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಸ್ಥಳೀಯ ಕೃಷಿ ಅಧಿ ಕಾರಿ ಟಿ.ಎ. ಸೋಲಾಪುರಕರ ತಿಳಿಸಿದ್ದಾರೆ. ಕೋವಿಡ್ ನಿಯಮದಂತೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಸೇರಿದಂತೆ ರೈತರಿಗೆ ಸೂಚನೆಗಳನ್ನು ಅನುಸರಿಸುವಂತೆ ತಿಳಿಸಿ ವಿತರಣೆ ಆರಂಭಗೊಂಡಿದೆ. ತಾಲೂಕಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು ಎಲ್ಲ ರೈತರು ಸರಕಾರದ ಸೌಲಭ್ಯ ಪಡೆದುಕೊಂಡು ಉತ್ತಮ ಬಿತ್ತನೆ ಬೀಜ ಪಡೆದು ಅ ಧಿಕ ಇಳುವರಿ ಹೊಂದಿ ಆರ್ಥಿಕವಾಗಿ ಸಬಲರಾಗಲು ಕೋರಲಾಗಿದೆ. ಕೃಷಿ ಅ ಧಿಕಾರಿ ಬಿ.ಆರ್. ಬೋರಗಿ, ನಿವೃತ್ತ ಸಹಾಯಕ ಕೃಷಿ ಅ ಧಿಕಾರಿ ಸೋಮಶೇಖರ ಜತ್ತಿ, ಎ.ಬಿ. ಪಾಟೀಲ, ಎಸ್ .ಬಿ. ಬಿರಾದಾರ, ಮುಸ್ತಾಕ್ ಬಾಳಿಕಾಯಿ, ಮುತ್ತಪ್ಪ ಶಿರಹಟ್ಟಿ, ಕಿರಣ ಜತ್ತಿ, ಅಶೋಕ ಅವಟಿ, ಶಿವಾನಂದ ಬಂಡಗಾರ, ಜಗದೀಶ ದಿಂಡೂರ, ಕಲ್ಲಪ್ಪ ಕಂಠಿ, ಕುಬೇರ ಹಟ್ಟಿ, ಮೀಯಾಸಾಬ ಮುಲ್ಲಾ ಇದ್ದರು