Udayavni Special

ಹಳ್ಳ ದಲ್ಲಿ ಕೊಚ್ಚಿ ಹೋಗಿದ್ದ ರೈತನ ಹುಡುಕಾಟಕ್ಕೆ ಡ್ರೋಣ್‌


Team Udayavani, Jul 11, 2021, 5:52 PM IST

dಸ್ದ್ದ್ದದಗ್ಹಗಜಹ

ಆಲಮೇಲ: ಅಪಾರ ಪ್ರಮಾಣದ ಮಳೆಯಿಂದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ರೈತನ ಹುಡಕಾಟ ಮುಂದುವರಿದಿದ್ದು ಯಾವುದೆ ಸುಳಿವು ಲಭ್ಯವಾಗಿಲ್ಲ. ಶನಿವಾರ ಡ್ರೋನ್‌ ಕ್ಯಾಮರಾ ಮೂಲಕ ಹುಡಕಾಟ ನಡೆಸಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಕುಟುಂಬಸ್ಥರಿಂದ ಕಾಣೆಯಾಗಿರುವ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಾಲೂಕಾಡಳಿತ ತಿಳಿಸಿತು.

ಮಂಗಳವಾರ ಮತ್ತು ಬುಧವಾರ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಈ ಸಂದರ್ಭದಲ್ಲಿ ಹೊಲಕ್ಕೆ ತೆರಳಿದ ಕುರುಬತ್ತಹಳ್ಳಿ ಗ್ರಾಮದ ರೈತ ಬಸಣ್ಣ ಅಂಬಾಗೋಳ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದು ಮೂರು ದಿನಗಳಿಂದ ತಾಲೂಕಾಡಳಿತ ಎಲ್ಲ ರೀತಿಯ ಹುಡಕಾಟ ನಡೆಸುತ್ತಿದ್ದು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹೀಗಾಗಿ ಕಾರ್ಯಚರಣೆ ಸ್ಥಗಿತಗೊಳಿಸಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಬಸಣ್ಣ ಅಂಬಾಗೋಳ ಕುಟುಂಬದ ಒಪ್ಪಿಗೆ ಮೇರೆಗೆ ಆಲಮೇಲ ಪೊಲೀಸ್‌ ಠಾಣೆಯಲ್ಲಿ ಕಾಣೆಯಾಗಿರುವ ಪ್ರಕರಣ ದಾಖಲಿಸಿಕೊಂಡು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ರೈತ ಹಳ್ಳದಲ್ಲಿ ಕೊಚ್ಚಿ ಹೋಗಿರುವುದು ದೃಢಪಟ್ಟರೆ ಸರ್ಕಾರ ದಿಂದ ಬರುವ ಎಲ್ಲ ಪರಿಹಾರ ಒದಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ರಾಹುಲ್‌ ಶಿಂಧೆ ತಿಳಿಸಿದ್ದಾರೆ. ಗುರುವಾರ ಅಗ್ನಿಶಾಮಕ ಸಿಬ್ಬಂದಿ ಹಳ್ಳದಲ್ಲಿ ಮತ್ತು ಭೀಮಾ ನದಿಯಲ್ಲಿ ನಾವಿ ಮೂಲಕ ಹುಡಕಾಟ ಮಾಡಿದ್ದು ಯಾವುದೇ ಸುಳಿವು ಸಿಗಲಿಲ್ಲ.

ಎರಡನೇ ದಿನ ಶುಕ್ರವಾರ ಇಂಡಿ ತಾಲೂಕಿನ ಖೇಡಗಿ ಗ್ರಾಮದ ನುರಿತ ಮೀನುಗಾರರನ್ನು ಕರೆಯಿಸಿ ಭೀಮಾ ನದಿಯಲ್ಲಿ ಕಾರ್ಯಚರಣೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮತ್ತು ನುರಿತ ಮೀನುಗಾರರಿಂದ ಕಾರ್ಯಾಚರಣೆ ನಿರಂತವಾಗಿ ನಡೆಯುತ್ತಿದ್ದು ಇನ್ನಷ್ಟು ಮಾಹಿತಿಗಾಗಿ ಶನಿವಾರ ಡ್ರೋಣ್‌ ಕ್ಯಾಮರಾ ಮೂಲಕ ಹಳ್ಳದುದ್ದಕ್ಕೂ ಮತ್ತು ಭೀಮಾ ನದಿಯಲ್ಲಿ ಹುಡಕಾಟ ನಡೆಸಿದರೂ ಮಾಹಿತಿ ಲಭ್ಯವಾಗಿಲ್ಲ.

ಘಟನಾ ಸ್ಥಳಕ್ಕೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಅ ಧಿಕಾರಿಗಳ ಜತೆ ಚರ್ಚೆ ಮಾಡಿ ರೈತನ ಮಗನಿಗೆ ಧೈರ್ಯ ತುಂಬಿದರು. ಸಿಂದಗಿ ತಹಶೀಲ್ದಾರ್‌ ಸಂಜೀವಕುಮಾರ ದಾಸರ, ಕಂದಾಯ ನಿರೀಕ್ಷಕ ಎ.ಎಂ. ಅತ್ತಾರ, ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ, ಮೀನುಗಾರರು ಕಳೆದ ಮೂರು ದಿನಗಳಿಂದ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆ ನಡೆಸಿದ್ದಾರೆ.

 

ಟಾಪ್ ನ್ಯೂಸ್

ಬಿಜೆಪಿ ಸೇರಿದ  ಮಹೇಶ್‌ಗೆ ಮಂತ್ರಿ ಸ್ಥಾನ ?

ಬಿಜೆಪಿ ಸೇರಿದ  ಮಹೇಶ್‌ಗೆ ಮಂತ್ರಿ ಸ್ಥಾನ ?

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ

ಇಪ್ಪತ್ತೂಂದನೇ ಶತಮಾನ ಮತ್ತೆ ಹಾಕಿಯ ಸುವರ್ಣಯುಗವಾಗಲಿ

ಹಲವು ವರ್ಷಗಳ ಸುಧಾರಣೆಯ ಫ‌ಲ ಈ “ಅಸಾಮಾನ್ಯ ಕಂಚಿನ ಪದಕ’

ಹಲವು ವರ್ಷಗಳ ಸುಧಾರಣೆಯ ಫ‌ಲ ಈ “ಅಸಾಮಾನ್ಯ ಕಂಚಿನ ಪದಕ’

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!

ಮಳೆಗಾಲದಲ್ಲೂ  ಇಲ್ಲಿ ನೀರಿಗಾಗಿ ಪರದಾಟ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾದರಿಯಾಗಲಿದೆ ಮೆಗಾ ಮಾರುಕಟ್ಟೆ: 40 ಕೋಟಿ ವೆಚ್ಚದಲ್ಲಿ ನಿರ್ಮಾಣ

ಮಾದರಿಯಾಗಲಿದೆ ಮೆಗಾ ಮಾರುಕಟ್ಟೆ: 40 ಕೋಟಿ ವೆಚ್ಚದಲ್ಲಿ ನಿರ್ಮಾಣ

Water

ಬಿಸಿಲ ನೆಲಕ್ಕೆ ಹಸಿರು ಹೊದಿಕೆ ; ರಾಜ್ಯದಲ್ಲೇ ಪ್ರಥಮ ಬಾರಿ ಯಶಸ್ವಿಯಾದ ಪ್ರಯೋಗ ‌

Karave

ಕನ್ನಡಿಗರ ಭಾವನೆಗೆ ಧಕ್ಕೆ; ಅಣ್ಣಾಮಲೈ ವಿರುದ್ಧ ಕರವೇ ಪ್ರತಿಭಟನೆ

ನದಿ ತೀರದ ಜನತೆಯಲ್ಲಿ ನಿಲ್ಲದ ಆತಂಕ

ನದಿ ತೀರದ ಜನತೆಯಲ್ಲಿ ನಿಲ್ಲದ ಆತಂಕ

ಬಾಣಂತಿ, ಮಗುವನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಂಸ್ಥೆ ಸಿಬ್ಬಂದಿ

ಬಾಣಂತಿ, ಮಗುವನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಂಸ್ಥೆ ಸಿಬ್ಬಂದಿ

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

ಬಿಜೆಪಿ ಸೇರಿದ  ಮಹೇಶ್‌ಗೆ ಮಂತ್ರಿ ಸ್ಥಾನ ?

ಬಿಜೆಪಿ ಸೇರಿದ  ಮಹೇಶ್‌ಗೆ ಮಂತ್ರಿ ಸ್ಥಾನ ?

ಆಕಾಶ ಅವಕಾಶ :  1110 ಅಪ್ರಂಟಿಸ್‌ ಹುದ್ದೆಗಳು

ಆಕಾಶ ಅವಕಾಶ :  1110 ಅಪ್ರಂಟಿಸ್‌ ಹುದ್ದೆಗಳು

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಮಾಗದ ಅಣು ಗಾಯ: ಮತ್ತೆಂದೂ ಮರುಕಳಿಸದಿರಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಹೈಕೋರ್ಟ್‌ಗೆ ಸರಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಲಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.