Udayavni Special

ರೇವಣಸಿದ್ದೇಶ್ವರ ಏತ ನೀರಾವರಿಗೆ ಹಣ ಕೊಡಿಸಿದರೆ ಎಂಬಿಪಿ ಪ್ರತಿಮೆ ಸ್ಥಾಪನೆ


Team Udayavani, Jul 11, 2021, 6:38 PM IST

ಮಜಹಗ್ಗಹಹಗ್ಚಗಹಹಗ್ಚ್ಗಹುಇಉಗ

ವಿಜಯಪುರ: ಪದೇ ಪದೇ ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ನಮ್ಮದೇ ಪಕ್ಷದ ಶಾಸಕರಾದ ಎಂ.ಬಿ. ಪಾಟೀಲ ತಾವಿನ್ನೂ ಜಲ ಸಂಪನ್ಮೂಲ ಖಾತೆ ಸಚಿವರೆಂಬ ಭ್ರಮೆಯಲ್ಲಿದ್ದಾರೆ. ಅವರಿಗೆ ನಿಜಕ್ಕೂ ಬಿಜೆಪಿ ಸರ್ಕಾರದಲ್ಲಿ ಪ್ರಭಾವ ಬೀರುವ ಶಕ್ತಿ ಇದ್ದರೆ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಮಾಡಿಸಿ ಕೊಡಲಿ, ನಾನೇ ಅವರ ಪ್ರತಿಮೆ ಸ್ಥಾಪಿಸುತ್ತೇನೆ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಪಾಟೀಲ ಹೆಸರು ಪ್ರಸ್ತಾಪಿಸದೇ ವಾಗ್ಧಾಳಿ ನಡೆಸಿದ ಅವರು, ಮುಖ್ಯಮಂತ್ರಿ ಕಚೇರಿಯಿಂದ ನನ್ನ ಇಂಡಿ ಕ್ಷೇತ್ರದ ಕೆರೆ ತುಂಬುವ ಯೋಜನೆಗೆ ಅನುಮತಿ, ಅನುದಾನ ಸಿಗುವ ಮಾಹಿತಿ ಪಡೆದು ಸಭೆಗೆ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಂಜೆ ವೇಳೆಗೆ ಸರ್ಕಾರ ಅನುದಾನ ಘೋಷಿಸುತ್ತಲೇ ತಮ್ಮಿಂದಲೇ ಆಯ್ತು ಎಂಬಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಾನು ಪ್ರತಿನಿಧಿಸುವ ಇಂಡಿ ತಾಲೂಕಿನ ಕೆರೆ ತುಂಬುವ ಯೋಜನೆಗೆ ಅನುದಾನ ಸಿಕ್ಕಿದೆ ಎಂಬಂತೆ ಸಾರ್ವಜನಿಕಾಗಿ ಬಿಂಬಿಸುತ್ತಿದ್ದಾರೆ.

ತಮ್ಮನ್ನು ತಾವು ಇನ್ನೂ ಜಲ ಸಂಪನ್ಮೂಲ ಸಚಿವರೆಂದೇ ಭಾವಿಸಿದ್ದು ಅಂಥ ಭ್ರಮೆಯಲ್ಲೇ ಜೀವಿಸುತ್ತಿದ್ದಾರೆ. ಅವರ ಹೇಳಿಕೆ ರಾಜಕೀಯ ಸಣ್ಣತನದ ಪ್ರತೀಕ ಎಂದು ಕಿಡಿಕಾರಿದರು. ಬಿಜೆಪಿ ವಕ್ತಾರರಂತೆ ವರ್ತಿಸುತ್ತಿರುವ ಬಬಲೇಶ್ವರ ಶಾಸಕರು ಸ್ವಪಕ್ಷೀಯ ಕಾಂಗ್ರೆಸ್‌ ಶಾಸಕರು. ನಾವೆಲ್ಲ ವಿಕ್ಷದಲ್ಲಿದ್ದೇವೆ ಎಂಬುದನ್ನು ಮರೆತು, ತಾವಿನ್ನೂ ಸಚಿರಾಗಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆ ವಿರುದ್ಧ ಪಕ್ಷದ ನಾಯಕರಿಗೆ ದೂರು ನೀಡಿದ್ದೇನೆ. ಪದೇ ಪದೇ ಅವರು ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಲೇ ಇದ್ದಾರೆ. ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿರುವ ನನಗೂ ರಾಜಕೀಯ ಮಾಡುವುದು ಗೊತ್ತಿದೆ. ರಾಜಕೀಯವಾಗಿ ನಾವೆಲ್ಲ ಪ್ರಬುದ್ಧರಾಗಬೇಕಾದ ಸಂದರ್ಭದಲ್ಲಿ ಕೀಳು ಮಟ್ಟದ ಪ್ರಚಾರದ ವರ್ತನೆ ತೋರುತ್ತಿದ್ದಾರೆ. ನನ್ನ ತಾಳ್ಮೆ ಹಾಗೂ ಸಹನೆಯನ್ನು ಪರೀಕ್ಷಿಸುವ ಕೆಲಸ ಮುಂದುವರಿಸಿದರೆ ನಾನೂ ನನ್ನ ವರಸೆ ತೋರಿಸಲು ಸಿದ್ಧ ಎಂದೂ ಗುಡುಗಿದ್ದಾರೆ.

ತಮ್ಮಿಂದಲೇ ನನ್ನ ಕ್ಷೇತ್ರದ ನೀರಾವರಿ ಸೌಲಭ್ಯ ಆಯ್ತು ಎಂದಾದರೆ, ತಮ್ಮದೇ ಸಂಸ್ಥೆಯಿಂದ ಡಾ| ಫ‌.ಗು. ಹಳಕಟ್ಟಿ ಸಂಸ್ಥೆ ಕುರಿತಾಗಿ ಸಲ್ಲಿಸಿದ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ಏಕೆ ಸಾಧ್ಯವಾಗಲಿಲ್ಲ. ನಾನು ಅಸಾಧ್ಯ ಎಂಬುದನ್ನು ಸಾಧ್ಯವಾಗಿಸಿ ತೋರಿಸಿದ ಛಲಗಾರ. ಕ್ಷೇತ್ರದ ಜನರು ನನ್ನನ್ನು ತಮ್ಮ ಸೇವೆಗೆ ಆಯ್ಕೆ ಮಾಡಿಕೊಂಡಿದ್ದು, ಅವರ ಆಶಯಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದೇನೆ. ಒಂದೊಮ್ಮೆ ಇವರಿಗೆ ನಿಜಕ್ಕೂ ಬಿಜೆಪಿ ಸರ್ಕಾರದಲ್ಲಿ ತಮ್ಮ ಪ್ರಭಾವ ಬೀರಿ ಯೋಜನೆ ಮಂಜೂರು ಮಾಡಿಸುವ ಶಕ್ತಿ ಇದ್ದರೆ ರೇವಣಸಿದ್ದೇಶರ ಏತ ನೀರಾವರಿ ಯೋಜನೆಗೆ ಅನುದಾನ ತಂದು ತೋರಿಸಲಿ. ಆಗ ನಾನೇ ಹೆದ್ದಾರಿ ಪಕ್ಕದಲ್ಲಿ ಅವರ ಪ್ರತಿಮೆ ಸ್ಥಾಪಿಸುತ್ತೇನೆ. ಇಲ್ಲವೇ ತಮ್ಮದೇ ಕ್ಷೇತ್ರದಲ್ಲಿ ನನ್ನಂತೆ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ತೋರಿಸಲಿ. ಅವರಂತೆ ನಾನು ಬಬಲೇಶ್ವರ ಕ್ಷೇತ್ರದಲ್ಲಿ ಕೈಹಾಕಿದರೆ ಏನಾದೀತು ಎಂಬುದನ್ನು ಅರಿತು ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ನೀರಾವರಿ ಯೋಜನೆಗಳ ವಿಷಯದಲ್ಲಿ ರಾಜಾರಾಮ ದುದೆ, ಸುಂಗದಿ ಮುರಿಗೆಪ್ಪ ಅವರಂಥ ಹಲವು ನಾಯಕರ ಪರಿಶ್ರಮದಿಂದ ಜನ್ಮತಳೆದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಸ್ತು ಎಂದು, ಚಾಲನೆ ನೀಡಿದ್ದು ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ ಅವರು. ಆದರೆ ನಮ್ಮ ಪಕ್ಷದ ಶಾಸಕರು ಇಡಿ ಯೋಜನೆ ತಮ್ಮಿಂದಲೇ ಆಗಿದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯನ್ನು ಎಲ್ಲ ಶಾಸಕರು, ಜನಪ್ರತಿನಿಧಿಗಳು ಇವರಿಗೇನು ಗುತ್ತಿಗೆ ನೀಡಿದ್ದೇವೆಯೇ ಎಂದು ಕಿಡಿ ಕಾರಿದರು.

 

ಟಾಪ್ ನ್ಯೂಸ್

ಬೈಕ್‌ ಕಳ್ಳನಿಂದ ಯುಟ್ಯೂಬ್‌, ಆಲ್ಬಂ ಸಾಂಗ್ಸ್‌ ನಿರ್ಮಾಣ!

ಬೈಕ್‌ ಕಳ್ಳನಿಂದ ಯುಟ್ಯೂಬ್‌, ಆಲ್ಬಂ ಸಾಂಗ್ಸ್‌ ನಿರ್ಮಾಣ!

ಹಸರಂಗ ಕಮಾಲ್‌: ಟಿ20 ಸರಣಿ ಗೆದ್ದ ಲಂಕಾ

ಹಸರಂಗ ಕಮಾಲ್‌: ಟಿ20 ಸರಣಿ ಗೆದ್ದ ಲಂಕಾ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

dfgyt

ಸಿಎಂ ಎದುರು ಸಮಸ್ಯೆಗಳ ಸುರಿಮಳೆ

tretert

ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಶಿಲ್ಪಾ ಶೆಟ್ಟಿ

ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ ಓರ್ವ ಮಹಿಳೆ ದುರ್ಮರಣ

ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ: ಓರ್ವ ಮಹಿಳೆ ದುರ್ಮರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura Dist Muddebihala News, Udayavani

ಕೃಷ್ಣೆಗೆ ಪ್ರವಾಹ :  ಗಂಗೂರಿನ ದೇವಸ್ಥಾನ ಜಲಾವೃತ

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

hinniru

ಬಸವಸಾಗರ ಹಿನ್ನೀರಿನ ಪ್ರಮಾಣದಲ್ಲಿ ಏರಿಕೆ : ಬೆಳೆಗಳು ಜಲಾವೃತ

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು

ಎಚ್.ಸಿ. ಮಹದೇವಪ್ಪ

ದಲಿತ ಸಿಎಂ ಎಂಬುದು ದಲಿತರ ಮನಸ್ಸು ವಿಭಜಿಸುವ ತಂತ್ರ‌: ಎಚ್.ಸಿ. ಮಹದೇವಪ್ಪ

MUST WATCH

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

udayavani youtube

ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ :ಸಿದ್ದುಗೆ ಬಿಜೆಪಿ ತಿರುಗೇಟು

udayavani youtube

ರಾಷ್ಟ್ರೀಯ ಪ್ರಾಣಿಯಾಗಿದ್ದ ಸಿಂಹವನ್ನು ಹುಲಿ ಹಿಂದಿಕ್ಕಿದ್ದು ಹೇಗೆ ?

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

ಹೊಸ ಸೇರ್ಪಡೆ

ಬೈಕ್‌ ಕಳ್ಳನಿಂದ ಯುಟ್ಯೂಬ್‌, ಆಲ್ಬಂ ಸಾಂಗ್ಸ್‌ ನಿರ್ಮಾಣ!

ಬೈಕ್‌ ಕಳ್ಳನಿಂದ ಯುಟ್ಯೂಬ್‌, ಆಲ್ಬಂ ಸಾಂಗ್ಸ್‌ ನಿರ್ಮಾಣ!

ಹಸರಂಗ ಕಮಾಲ್‌: ಟಿ20 ಸರಣಿ ಗೆದ್ದ ಲಂಕಾ

ಹಸರಂಗ ಕಮಾಲ್‌: ಟಿ20 ಸರಣಿ ಗೆದ್ದ ಲಂಕಾ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಒಲಿಂಪಿಕ್ಸ್‌ನಲ್ಲಿ ಗುರುವಾರ 24 ಕೋವಿಡ್ ಪ್ರಕರಣ

ಒಲಿಂಪಿಕ್ಸ್‌ನಲ್ಲಿ ಗುರುವಾರ 24 ಕೋವಿಡ್ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.