ಬರಡಾಯ್ತು ರೈತರ ಬದುಕು

ಮಳೆ-ಪ್ರವಾಹದಿಂದ 52037 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿ

Team Udayavani, Oct 21, 2020, 6:30 PM IST

ಬರಡಾಯ್ತು ರೈತರ ಬದುಕು

ಸಿಂದಗಿ: ತಾಲೂಕಿನಲ್ಲಿ ಸತತ ಮಳೆ ಸುರಿದ ಪರಿಣಾಮ, ಮಹಾರಾಷ್ಟ್ರದಲ್ಲಿ ಧಾರಾಕಾರ ಸುರಿದ ಮಳೆಯಿಂದ ಭೀಮಾ ನದಿ ತೀರದ ಜಮೀನುಗಳು ಜಲಾವೃತಗೊಂಡಿವೆ. ತಾಲೂಕಿನಲ್ಲಿ 51313 ಹೆಕ್ಟೇರ್‌ನಲ್ಲಿ ಬೆಳೆದ ಕೃಷಿ ಬೆಳೆಗಳು, 724ಹೆಕ್ಟೇರ್‌ನಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳು ಸೇರಿ ಒಟ್ಟು 52037 ಹೆಕ್ಟೇರ್‌ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ.

ಭೀಮಾ ನದಿಗೆ ಮಹಾರಾಷ್ಟ್ರ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದೆ. ಈ ಪರಿಣಾಮ ತಾಲೂಕಿನ ತಾವರ ಖೇಡ,ಕಡಣಿ, ತಾರಾಪುರ, ದೇವಣಗಾಂವ, ಬ್ಯಾಡಗಿಹಾಳ, ಕುಮಸಗಿ, ಕಕ್ಕಳಮೇಲಿ ಸೇರಿದಂತೆ ಇತರ ಗ್ರಾಮಗಳಜಮೀನುಗಳು ಜಲಾವೃತಗೊಂಡಿವೆ.ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು ರೈತರು ಕಂಗಾಲಾಗಿದ್ದಾರೆ.

ತೋಟಗಾರಿಕೆ ಇಲಾಖೆ: ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ಕ್ಷೇತ್ರ ಕಳೆದ 2 ವರ್ಷಗಳಿಂದ ಹೆಚ್ಚಾಗಿದೆ. ಕಳೆದಬೇಸಿಗೆಯಲ್ಲಿ ಕೊರೊನಾ ಸೋಂಕು ತೋಟಗಾರಿಕೆ ಬೆಳೆಗಾರರಿಗೆ ಹಾನಿ ಉಂಟು ಮಾಡಿತ್ತು. ಈಗಸತತ ಮಳೆ ಮತ್ತು ಪ್ರವಾಹದಿಂದ ಒಟ್ಟು101 ಹಳ್ಳಿಗಳಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

1 ಹೆಕ್ಟೇರ್‌ನಲ್ಲಿ ಬೆಳೆದ ಪೆರಲ, 21 ಹೆಕ್ಟೇರ್‌ ಪಪ್ಪಾಯ, 17 ಹೆಕ್ಟೇರ್‌ ಬಾಳೆಕಾಯಿ, 23 ಹೆಕ್ಟೇರ್‌ ಟೋಮೇಟೊ, 188 ಹೆಕ್ಟೇರ್‌ ಮೆಣಸಿನಕಾಯಿ,33 ಹೆಕ್ಟೇರ್‌ ಡಬ್ಬು ಮೆಣಸಿನಕಾಯಿ, 431ಹೆಕ್ಟೇರ್‌ ಉಳ್ಳಾಗಡ್ಡಿ, 10 ಹೆಕ್ಟೇರ್‌ನಲ್ಲಿ ಬೆಳೆದ ಬದನೆಕಾಯಿ ಸೇರಿದಂತೆ ಒಟ್ಟು 724 ಹೆಕ್ಟೇರ್‌ ಭೂಮಿಯಲ್ಲಿ ಕಟಾವಿಗೆ ಬಂದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

ಕೃಷಿ ಇಲಾಖೆ: ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಲ್ಲಿ ಮಳೆ ಮತ್ತು ಪ್ರವಾಹದಿಂದ ತೊಗರಿ, ಹತ್ತಿ, ಕಬ್ಬು ಸೇರಿದಂತೆ ಇತರ ಬೆಳೆ ಹಾನಿಯಾಗಿದೆ. ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಲ್ಲಿ 35121 ಹೆಕ್ಟೇರ್‌ನಲ್ಲಿ ಬೆಳೆದ ತೊಗರಿ, 1550ಹೆಕ್ಟೇರ್‌ ಜೋಳ, 20 ಹೆಕ್ಟೇರ್‌ ಮೆಕ್ಕೆಜೋಳ, 240 ಹೆಕ್ಟೇರ್‌ ಶೇಂಗಾ, 4141 ಹೆಕ್ಟೇರ್‌ ಕಡಲೆ, 6678ಹೆಕ್ಟೇರ್‌ ಹತ್ತಿ, 3563 ಹೆಕ್ಟೇರ್‌ನಲ್ಲಿ ಬೆಳೆದ ಕಬ್ಬುಬೆಳೆಗಳು ನಾಶವಾಗಿದ್ದು ಒಟ್ಟು 51313 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಅತಿವೃಷ್ಟಿ ಮತ್ತು ಪ್ರವಾಹದಿಂದಾಗ ಹಾನಿಯನ್ನು ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಲಿವೆ. ಪರಿಹಾರ ಹಣಬಂದ ಮೇಲೆ ಹಾನಿಗೊಳಗಾದ ರೈತರಿಗೆ ವಿತರಿಸಲಾಗುವುದು. ಭೂಮಿಯಲ್ಲಿ ಪೋಷಕಾಂಶಗಳ ಸಮತೋಲನಕಾಪಾಡಿಕೊಳ್ಳಲು ತೋಟಗಾರಿಕೆ ಕಚೇರಿಗೆ ಬಂದು ಮಾಹಿತಿ ಪಡೆಯಬೇಕು. – ಅಮೋಘಿ ಹಿರೇಕುರಬರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಸಿಂದಗಿ

ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆ ಸಮೀಕ್ಷೆ ಶೀಘ್ರ ಮಾಡಬೇಕು. ಸರಕಾರಕ್ಕೆ ಬೇಗನೆ ವರದಿ ಸಲ್ಲಿಸಿ ರೈತರಿಗೆ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರನೀಡಬೇಕು. ಹಿಂಗಾರಿ ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರ, ಔಷ ಧಗಳನ್ನು ಉಚಿವಾಗಿ ನೀಡಬೇಕು. -ಚಂದ್ರಶೇಖರ ದೇವರೆಡ್ಡಿ ರೈತ ಮುಖಂಡ

-ರಮೇಶ ಪೂಜಾರ

ಟಾಪ್ ನ್ಯೂಸ್

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಲಮೇಲ ಪ.ಪಂ. ಮಾಜಿ ಸದಸ್ಯ, ರೌಡಿ ಶೀಟರ್ ಪ್ರದೀಪ್ ಹತ್ಯೆ

ಆಲಮೇಲ ಪ.ಪಂ. ಮಾಜಿ ಸದಸ್ಯ, ರೌಡಿ ಶೀಟರ್ ಪ್ರದೀಪ್ ಹತ್ಯೆ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರದ ಯೋಧ ಅಸ್ಸಾಂನಲ್ಲಿ ಹೃದಯಾಘಾತದಿಂದ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ವಿಜಯಪುರದ ಯೋಧ ಅಸ್ಸಾಂನಲ್ಲಿ ಹೃದಯಾಘಾತದಿಂದ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಸುಗಮ ಸಂಚಾರ ಸಮಸ್ಯೆಗೆ ಸಿಗಬೇಕಿದೆ ಮುಕ್ತಿ

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.