Udayavni Special

ಆಡು-ಕುರಿಗಳಿಗೆ ಕಾಡುತ್ತಿದೆ ಪಿಪಿಆರ್‌ ರೋಗ ಭೀತಿ

ಆಡುಗಳನ್ನು ಕೂಡಲೆ ಹಿಂಡಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿಟ್ಟು ಉಪಚರಿಸಬೇಕು

Team Udayavani, Sep 6, 2021, 6:03 PM IST

ಆಡು-ಕುರಿಗಳಿಗೆ ಕಾಡುತ್ತಿದೆ ಪಿಪಿಆರ್‌ ರೋಗ ಭೀತಿ

ಇಂಡಿ: ಕುರಿಗಳಿಗೆ ಪಿಪಿಆರ್‌ ರೋಗ ಆವರಿಸುತ್ತಿದೆ. ಈ ರೋಗ ಬಂದಲ್ಲಿ ಆಡುಗಳು ಮೇವು ತಿನ್ನುವುದು ಕಡಿಮೆ ಮಾಡಿ, ನೆಗಡಿ, ಜ್ವರ, ಭೇದಿ ಮತ್ತು ಇತರೆ ಲಕ್ಷಣಗಳು ಕಾಣಿಸುತ್ತವೆ. ರೋಗದ ಬಗ್ಗೆ ನಿರ್ಲಕ್ಷ ಮಾಡದೆ ಪಶು ವೈದ್ಯರನ್ನು ಸಂಪರ್ಕಿಸಿ ಎಂದು ಪಶು ವಿಜ್ಞಾನಿ ಡಾ| ಸಂತೋಷ ಶಿಂಧೆ ತಿಳಿಸಿದರು.

ಶನಿವಾರ ತಾಲೂಕಿನ ಝಳಕಿ, ಲೋಣಿ ಹಾಗೂ ತದ್ದೆವಾಡಿ ಗ್ರಾಮದ ಆಡು ಸಾಕಾಣಿಕೆ ಮಾಡುತ್ತಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಇದರ ಪರಿಶೀಲನೆ ಮಾಡಿ ರೈತರಿಗೆ ಅವರು ತಿಳಿವಳಿಕೆ ಹೇಳಿದರು. ಪಿಪಿಆರ್‌ ರೋಗ ಪ್ಯಾರಮಿಕೊÕ ಗುಂಪಿಗೆ ಸೇರಿದ ಮಾರಿºಲಿ ಎಂಬ ವೈರಾಣುದಿಂದ ಕುರಿ ಮತ್ತು ಮೇಕೆಗಳಲ್ಲಿ ರೋಗ ಬರುತ್ತದೆ. ಈ ರೋಗಕ್ಕೆ ಆಡುಗಳ ಪ್ಲೇಗ್‌ ಎಂದು ಕರೆಯುತ್ತಾರೆ.

ರೋಗ ಬಂದ ಹಿಂಡಿನಲ್ಲಿ ಶೇ. 100 ಆಡುಗಳು ಅಥವಾ ಕುರಿಗಳು ರೋಗಕ್ಕೆ ತುತ್ತಾಗುತ್ತವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನಿಡದಿದ್ದರೆ ಶೇ. 90 ಆಡುಗಳು ಅಥವಾ ಕುರಿಗಳು ಸಾವನ್ನುಪ್ಪತ್ತವೆ. ಈರೋಗಕ್ಕೆಕಡಿಮೆ(ಒಂದುವರ್ಷದೊಳಗೆ) ವಯಸ್ಸಿನ ಆಡು ಅಥವಾ ಕುರಿಗಳು ಹೆಚ್ಚಾಗಿ ತುತ್ತಾಗುತ್ತವೆ. ವೈರಾಣು ರೋಗಗ್ರಸ್ತ ಕುರಿಯ ಸಿಂಬಳ, ಮಲ ಮತ್ತು ಕಣ್ಣಿನ ಕೀವು ಮಿಶ್ರಿತ ಪಿಸಿರಿನಲ್ಲಿದ್ದು ಕಲುಷಿತಗೊಂಡ ನೀರು ಅಥವಾ ಮೇವಿನ ಮೂಲಕ ಹರಡುತ್ತದೆ. ಈ ವೈರಾಣು ಗಾಳಿ ಮೂಲಕ ಆರೋಗ್ಯವಂತ ಕುರಿಗಳಿಗೂ ಬರುವ ಸಾಧ್ಯತೆ ಇದೆ.

ಜೊತೆಯಲ್ಲಿ ಬೇರೆ ಪ್ರದೇಶದಿಂದ ಖರೀದಿ ಮಾಡಿ ಸಾಕುತ್ತಿರುವ ಹಿಂಡಿನಲ್ಲಿ ಈ ರೋಗ ಹೆಚ್ಚಾಗಿ ಕಾಣಬಹುದಾಗಿದೆ ಎಂದರು. ರೋಗದ ಲಕ್ಷಣಗಳು: ತೀವ್ರ ಜ್ವರ, ಮೊದಲು ನೀರಿನಂತರ ಸಿಂಬಳ ಬರುವುದು, ನಂತರ ಕಣ್ಣುಗಳಿಂದ ಮತ್ತು ಹೊಳ್ಳೆಗಳಿಂದ ಹಳದಿ ಕೀವು ಮಿಶ್ರಿತ ದ್ರವ ಹೊರಬರುತ್ತದೆ. ಈ ರೋಗದಲ್ಲಿ ಭೇದಿ (ದುರ್ವಾಸನೆ) ಕಾಣಬಹುದು. ರೋಗ ಕಾಣಿಸಿಕೊಂಡ 3-4 ನಾಲ್ಕು ದಿನಗಳಲ್ಲಿ ತುಟಿ, ವಸಡು, ದವಡೆ ಮತ್ತು ನಾಲಿಗೆ ಮೇಲೆ ಹುಣ್ಣುಗಳು ಕಾಣಿಸಿಕೊಂಡು, ನಂತರ ಕೊಳೆತು ಮೇಲ್ಪದರವು ಉದುರಿ ಹೋಗುವಂತಾಗುತ್ತದೆ.
ಉಸಿರಾಟದ ತೊಂದರೆ ಮತ್ತು ನಿರ್ಜಲೀಕರಣದಿಂದಾಗಿ ಕುರಿಗಳು ನಿತ್ರಾಣಗೊಂಡು5-10ದಿನದಲ್ಲಿಸಾವನ್ನಪ್ಪುತ್ತವೆ. ಗರ್ಭ ಧರಿಸಿದ ಕುರಿ ಮತ್ತು ಮೇಕೆಗಳು ಕಂದು ಹಾಕಬಹುದು.

ರೋಗನಿಯಂತ್ರಣ-ನಿರ್ವಹಣೆ: ರೋಗಪೀಡಿತ ಕುರಿ, ಆಡುಗಳನ್ನು ಕೂಡಲೆ ಹಿಂಡಿನಿಂದ ಬೇರ್ಪಡಿಸಿ ಪ್ರತ್ಯೇಕವಾಗಿಟ್ಟು ಉಪಚರಿಸಬೇಕು. ಕುರಿ ಅಥವಾ ಆಡುಗಳ ಮನೆಯಲ್ಲಿ ಸ್ವತ್ಛತೆ ಕಾಪಾಡಬೇಕು.

ಆಡುಗಳ ಮನೆಯನ್ನು ಫಿನೈಲ್‌ ಅಥವಾ ಶೇ. 5 ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು, ರೋಗಗ್ರಸ್ತ ಆಡುಗಳಿಗೆ ರೋಗ ಬರದಂತೆ ತಡೆಯಲು 3 ವರ್ಷಕ್ಕೊಮ್ಮೆ ಲಸಿಕೆಯನ್ನು ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ 4-6 ತಿಂಗಳ ಮೇಲ್ಪಟ್ಟ ಕುರಿ ಅಥವಾ ಆಡುಗಳಿಗೆ ತಪ್ಪದೆ ಹಾಕಿಸಬೇಕು. ಈ ತರಹದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪಶು ಆಸ್ಪತ್ರೆ ಭೇಟಿ ನೀಡಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮಾಹಿತಿಗಾಗಿ ಡಾ| ಸಂತೋಷ ಶಿಂಧೆ (8791107090) ಅವರನ್ನು ಸಂಪರ್ಕಿಸಬಹುದು.

ಟಾಪ್ ನ್ಯೂಸ್

ಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ

ಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ

ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ತಲೆಗೆ ಜಾಕ್ ಲಿವರ್ ನಿಂದ ಹೊಡೆದು 40 ಅಡಿ ಆಳಕ್ಕೆ ಎಸೆದರೂ ಬದುಕುಳಿದ ಮಹಿಳೆ : ನಾಲ್ವರ ಬಂಧನ

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ವಿಜಯಾನಂದ ಕಾಶಪ್ಪನವರ್

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಅ.1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 30,773 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 30,773 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆ

ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್ ಗೆ ಶಂಕರಾಚಾರ್ಯರ ಹೆಸರು ಸೂಕ್ತ :ಕರಂದ್ಲಾಜೆ

ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್ ಗೆ ಶಂಕರಾಚಾರ್ಯರ ಹೆಸರು ಸೂಕ್ತ :ಕರಂದ್ಲಾಜೆ

ನಂಜನಗೂಡು ಮಂದಿರದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

ನಂಜನಗೂಡು ಮಂದಿರದಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಜ್ಯ ರಹಿತ ನೆಮ್ಮದಿ ಜೀವನ ನಡೆಸಿ; ಸುರೇಶ ಸವದಿ

ವ್ಯಾಜ್ಯ ರಹಿತ ನೆಮ್ಮದಿ ಜೀವನ ನಡೆಸಿ; ಸುರೇಶ ಸವದಿ

fgdyrty

ಸೆ.27ರ ಕರ್ನಾಟಕ ಬಂದ್‍ಗೆ ಬೆಂಬಲಿಸಿ : ಕುರುಬೂರ ಶಾಂತಕುಮಾರ ಕರೆ

ನಾಲ್ಕನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ

ನಾಲ್ಕನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ

ಗ್ರಾ.ಪಂ.ಚುನಾವಣೆ ಧ್ವೇಷಕ್ಕೆ ಸುಪಾರಿ ಹತ್ಯೆ :ಐವರ ಬಂಧನ ;ಅಪಘಾತ ಎಂದು ಬಿಂಬಿಸಿದ್ದ ಪ್ರಕರಣ

ಗ್ರಾ.ಪಂ.ಚುನಾವಣೆ ಧ್ವೇಷಕ್ಕೆ ಸುಪಾರಿ ಹತ್ಯೆ :ಐವರ ಬಂಧನ ;ಅಪಘಾತ ಎಂದು ಬಿಂಬಿಸಿದ್ದ ಪ್ರಕರಣ

ಕಾಲುವೆಯಲ್ಲಿ ನೀರಿನ ಬದಲು ಹೂಳು-ಗಿಡಗಂಟಿ!

ಕಾಲುವೆಯಲ್ಲಿ ನೀರಿನ ಬದಲು ಹೂಳು-ಗಿಡಗಂಟಿ!

MUST WATCH

udayavani youtube

ಖಾಸಗಿ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ

udayavani youtube

ಕಾಲಿನಿಂದ ಒದ್ದು ,ನೆಕ್ಕಿ ಮಾಡುವ TOASTನ್ನು ನಾವು ತಿನ್ನೋದ ?

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

ಹೊಸ ಸೇರ್ಪಡೆ

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ

ಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ

ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ತಲೆಗೆ ಜಾಕ್ ಲಿವರ್ ನಿಂದ ಹೊಡೆದು 40 ಅಡಿ ಆಳಕ್ಕೆ ಎಸೆದರೂ ಬದುಕುಳಿದ ಮಹಿಳೆ : ನಾಲ್ವರ ಬಂಧನ

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ವಿಜಯಾನಂದ ಕಾಶಪ್ಪನವರ್

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಅ.1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.