ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವಿಗೌಡ ನಿಧನ
Team Udayavani, Sep 6, 2020, 2:49 PM IST
ವಿಜಯಪುರ: ಕಾಂಗ್ರೆಸ್ ಪಕ್ಷದ ವಿಜಯಪುರ ಜಿಲ್ಲೆಯ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
15 ದಿನಗಳ ಹಿಂದಷ್ಟೇ ರವಿಗೌಡ ಪಾಟೀಲ ತಂದೆ ವಿಠ್ಠಲಗೌಡ ಪಾಟೀಲ ನಿಧರಾಗಿದ್ದು, ಆಗಲೇ ರವಿಗೌಡ ಅನಾರೋಗ್ಯ ಪೀಡಿತರಾಗಿದ್ದರು.
ನಗರದ ಬಿಎಲ್ ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರದ ಹಿಂದೆ ಸೋಲಾಪುರ ಆಸ್ಪತ್ರೆಗೆ ದಾಖಲಿಸಿತ್ತು. ನಂತರ ಕೆಲ ದಿನಗಳ ಹಿಂದಷ್ಟೇ ಪುಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಿಸದೇ ಭಾನುವಾರ ಬೆಳಿಗ್ಗೆ ರವಿಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರವಿಗೌಡ ನಿಧನಕ್ಕೆ ಮಾಜಿ ಸಚಿವರಾದ ಜಿಲ್ಲೆಯ ಹಾಲಿ ಶಾಸಕರಾದ ಡಾ.ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ.