ಗಣೇಶೋತವ ಸಂಭ್ರಮಕ್ಕೆ ವರುಣನ ಸಾಥ್‌!

Team Udayavani, Aug 28, 2017, 11:55 AM IST

bijapur.jpg

ವಿಜಯಪುರ: ಭೀಕರ ಬರದಿಂದ ತತ್ತರಿಸಿರುವ ಬಿಸಿಲನಾಡು ವಿಜಯಪುರ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ಪರಿಣಾಮ ಮಳೆನಾಡಾಗಿ ಪರಿವರ್ತನೆಗೊಂಡ ಅನುಭವ ನೀಡುತ್ತಿದೆ. ಇದರಿಂದ ಕಳೆ ಕಳೆದುಕೊಂಡು ಸುಕ್ಕುಗಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗಣೇಶ ಹಬ್ಬ ಎಂದರೆ ಮಳೆಯ ದರ್ಶನ ಖಾತ್ರಿ ಎಂದು ನಂಬಿಕೆ ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ಮಳೆ ಸಾಬೀತು ಮಾಡಿದೆ. ಸಮೃದ್ಧಿಯ ಪೂಜೆ, ನೈವೇದ್ಯ ಮಾಡಿದ ಭಕ್ತರಿಗೆ ಉತ್ತಮವಾಗಲೆಂದು ಮಳೆ ಸುರಿಸಿದ್ದಾನೆ ಎಂಬ ನಂಬಿಕೆಯ ಮಾತುಗಳು ದೈವಿ ಭಕ್ತರಿಂದ ಕೇಳಿ ಬರುತ್ತಿದೆ. ಜಿಲ್ಲೆಯ ಬಹುತೇಕ ಎಲ್ಲೆಡೆ ಕಳೆದ ಮೂರು-ನಾಲ್ಕು
ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಒಮ್ಮೆ ಅಬ್ಬರಿಸಿ, ಮತ್ತೂಮ್ಮೆ ಬೊಬ್ಬಿರಿದು, ಮತ್ತೂಮ್ಮೆ ಸಮಾಧಾನವಾಗಿ,
ಮಗದೊಮ್ಮೆ ಮಂದಹಾಸಿಯಂತೆ ತುಂತುರಾಗಿ ಬಹುರೂಪಿಯಾಗಿ ಬಸವನಾಡಿನಲ್ಲಿ ವಿವಿಧ ರೀತಿಯಲ್ಲಿ ದರ್ಶನ ನೀಡುತ್ತಿದೆ. ಇದರಿಂದ ರೈತರು ಸಂತಸಗೊಂಡಿದ್ದು ಉಳುಮೆಗೆ ಸಿದ್ಧಪಡಿಸಿಕೊಂಡಿರುವ ಜಮೀನುಗಳಲ್ಲಿ ಹಿಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಇತ್ತ ಕಾಣೆಯಾಗಿದ್ದ ಮಳೆಯಿಂದಾಗಿ ಮನೆಯ ಮೂಲೆಯಲ್ಲಿ ಮಡಚಿಕೊಂಡು ಮಲಗಿದ್ದ ಛತ್ರಿಗಳೆಲ್ಲ ಗರಿ ಬಿಚ್ಚಿಕೊಂಡು, ಧೂಳು ಕೊಡವಿಕೊಂಡು ಹೊರಬಂದಿವೆ. ಆಕಾಶಕ್ಕೆ ಮುಖ ಮಾಡಿ ಹಿಡಿಕೆ ಹಿಡಿದವರಿಗೆ ಮಳೆ ಹನಿ ನೀರು ಸಿಡಿಯದಂತೆ ರಕ್ಷಣೆ ನೀಡುತ್ತಿರುವ ಛತ್ರಿಗಳಿಗೆ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ ಬಂದಿದೆ. ಮಳೆ ಕಾರಣದಿಂದಾಗಿ ನಗರದ ಮುಖ್ಯ ಹಾಗೂ ಪ್ರಮುಖ ಬಡಾವಣೆಗಳ ರಸ್ತೆಗಳೆಲ್ಲ ನೀರಿನಿಂದ ಆವರಿಸಿಕೊಂಡಿವೆ. ಪರಿಣಾಮ ಬೀದಿಬದಿ ವ್ಯಾಪಾರಕ್ಕೆ ಕೊಕ್ಕೆ ಬಿದ್ದಿದ್ದು, ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿದ್ದ
ವಾರದ ಸಂತೆಗಳೂ ಸಂಕಷ್ಟ ಅನುಭವಿಸುವಂತಾಗಿದೆ. ತರಕಾರಿ ವ್ಯಾಪಾರಿಗಳು ಮಳೆಯಿಂದಾಗಿ ಕೊಂಡು ತಂದು ಮಾರಲು ಮಾರುಕಟ್ಟೆಗೆ ಬಂದರೂ ಕೊಳ್ಳುವವರಿಲ್ಲದೇ ಪರದಾಡುವಂತಾಗಿದೆ. ಮಳೆಯ ಹನಿ ಪ್ರತ್ಯಕ್ಷವಾಗುತ್ತಲೇ ಸಿಕ್ಕ ಬೆಲೆಗೆ ತರಕಾರಿ ಮಾರಿಕೊಂಡು ನಷ್ಟನುಭವಿಸುತ್ತಿದ್ದಾರೆ. ಆದರೆ ಮಳೆಯಾದರೂ ಆಗಲಿ, ಬಿಡಿ ಎಂದು ತಮ್ಮ ನಷ್ಟದಲ್ಲೂ ಸಂತೃಪ್ತಿ ಭಾವ ವ್ಯಕ್ತಪಡಿಸುತ್ತಿದ್ದಾರೆ.

ಟಾಪ್ ನ್ಯೂಸ್

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.