ಬಿಜೆಪಿಗೆ ಮತ್ತೂಮ್ಮೆ ಅಧಿಕಾರ ಕೊಡಿ

Team Udayavani, Dec 4, 2017, 1:07 PM IST

ಸಿಂದಗಿ: ಹಿಂದೂ-ಮುಸ್ಲಿಂ-ಕ್ರೈಸ್ತ ಎಂದು ಜಾತಿಭೇದ ಮಾಡದೆ ಮನುಷ್ಯ ಜಾತಿ ಒಂದೇ ಎಂದು ಹೋರಾಟ ಮಾಡುವ ಬಿಜೆಪಿ ಪಕ್ಷಕ್ಕೆ ಮತ್ತೆ ರಾಜ್ಯದಲ್ಲಿ ಅಧಿಕಾರ ನೀಡಿ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರವಿವಾರ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತಾನಾ ಯಾತ್ರೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ರಮೇಶ ಭೂಸನೂರ ಪ್ರಾಮಾಣಿಕ ಮತ್ತು ಕ್ರಿಯಾಶೀಲ ಶಾಸಕನಾಗಿದ್ದಾರೆ. ಅವರನ್ನು ಸಿಂದಗಿ ಕ್ಷೇತ್ರದಿಂದ ಎರಡು ಬಾರಿ ಚುನಾಯಿಸಿದ್ದು, ಮುಂಬರುವ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸುವ ಮೂಲಕ ಅವರ ಹ್ಯಾಟ್ರಿಕ್‌ ಗೆಲುವಿಗೆ ಕಾರಣರಾಗಬೇಕು. ಅವರು ಎರಡು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮನವಿ ಮಾಡಿದರು. 

ಈ ಹಿಂದೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿದ್ದಾಗ ನಾನು ಮುಖ್ಯಮಂತ್ರಿಯಾದ 7 ದಿನಗಳಲ್ಲಿಯೇ ಅಪ್ಪ-ಮಗ ಸೇರಿ
ಷರತ್ತುಗಳನ್ನು ಹಾಕಲು ಪ್ರಾರಂಭಿಸಿದರು. ಅವರೊಂದಿಗೆ ಸೇರಿ ಕರ್ನಾಟಕ ಹಾಳು ಮಾಡಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿ ಮತ್ತೆ ಜನಾದೇಶಕ್ಕೆ ಬಂದೆವು. ಜನತೆ ನಮ್ಮನ್ನು ಆಶೀರ್ವದಿಸಿ ಮುಖ್ಯಮಂತ್ರಿ ಮಾಡಿದರು. ಕೃಷಿ ಬಜೆಟ್‌ ಮಂಡನೆ ಮಾಡಿದೆ. ಬೈಸಿಕಲ್‌ ಯೋಜನೆ, ಬಡ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷಿ ಬಾಂಡ್‌ ಯೋಜನೆ ಜಾರಿಗೆ ತಂದೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶೇ. 40 ರಷ್ಟು ಹೆಣ್ಣುಮಕ್ಕಳು ಭಾಗ್ಯಲಕ್ಷ್ಮಿ ಬಾಂಡ್‌ ಯೋಜನೆ ಲಾಭ ಪಡೆದರು. ಆದ್ದರಿಂದ ಕರ್ನಾಟಕದ ಅಭಿವೃದ್ಧಿಗೆ ಯಡಿಯೂರಪ್ಪನವರ ಕೈ ಬಲಪಡಿಸಿ ಎಂದು ಕೋರಿದರು.

ರಾಜ್ಯದಲ್ಲಿ ಮತ್ತೆ ನಮ್ಮ ಸರಕಾರ ಬಂದ 2 ತಿಂಗಳಲ್ಲಿ ಆಲಮೇಲ ಪಟ್ಟಣವನ್ನು ತಾಲೂಕಾ ಕೇಂದ್ರವಾಗಿ ಘೋಷಣೆ ಮಾಡುತ್ತೇನೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನದಿಗಳ ಜೋಡಣೆ ಕುರಿತು ಚಿಂತನೆ ನಡೆಸಿದ್ದರೆ ಕೃಷ್ಣೆಯಿಂದ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೂಡ ನೀರಾವರಿ ಸಚಿವ ಎಂ.ಬಿ. ಪಾಟೀಲರಿಂದ ಆಗಿಲ್ಲ. ಕೂಡಲಸಂಗಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ನಡೆ ಕೃಷ್ಣೆ ಕಡೆಗೆ ಎಂದು ಘೋಷಣೆ ಮಾಡಿದರು. ಆದರೆ ಈಗ ಅವರ ನಡೆ ಕೃಷ್ಣೆ ಕಡೆಗಲ್ಲ ಮನೆ ಕಡೆಗೆ ಎಂದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ರಮೇಶ ಭೂಸನೂರ, ಶಾಸಕ ಲಕ್ಷಣ ಸವದಿ , ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕಧೋಂಡ, ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಸಂಸದ ಬಿ. ಶ್ರೀರಾಮುಲು, ಶಾಸಕರಾದ ಅರುಣ ಶಹಾಪೂರ, ಅರವಿಂದ ಲಿಂಬಾವಳಿ, ಹಣಮಂತ ನಿರಾಣಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಎನ್‌.ರವಿಕುಮಾರ, ವಿಜುಗೌಡ ಪಾಟೀಲ, ಸೋಮನಗೌಡ ಪಾಟೀಲ, ರಾಜುಗೌಡ ಪಾಟೀಲ, ಸಂಗರಾಜ ದೇಸಾಯಿ, ಆರ್‌.ಎಸ್‌. ಪಾಟೀಲ, ಜಿಪಂ ಸದಸ್ಯರಾದ ವಿಜಯಲಕ್ಷ್ಮಿ ನಾಗೂರ, ಬಿ.ಆರ್‌. ಯಂಟಮನ, ಮಹಾಂತಗೌಡ ಪಾಟೀಲ, ಬಿಂದುರಾಯಗೌಡ ಪಾಟೀಲ, ರಾಜ್ಯ ಪರಿಷತ್‌ ಸದಸ್ಯ ಚಂದ್ರಶೇಖರ ನಾಗೂರ, ಅಶೋಕ ಅಲ್ಲಾಪೂರ, ಎಂ.ಎಸ್‌.ಮಠ, ಶ್ರೀಮಂತ ನಾಗೂರ, ಶಂಕರ ಬಗಲಿ, ಸಂತೋಷ ಪಾಟೀಲ ಡಂಬಳ, ಶಿಲ್ಪಾ ಕುದರಗೊಂಡ, ಮಲ್ಲಿಕಾರ್ಜುನ ಜೋಗುರ, ಬಿ.ಎಚ್‌.ಬಿರಾದಾರ, ಪ್ರಭುಗೌಡ ಪಾಟೀಲ, ಪ್ರವೀಣ ಕಂಟಿಗೊಂಡ, ಶ್ರೀಕಾಂತ ಸೋಮಜಾಳ, ಸಿದ್ರಾಯ ಪೂಜಾರಿ, ಬಸವರಾಜ ಹೂಗಾರ, ಶ್ರೀಶೈಲ ಪಾರಗೊಂಡ, ಪ್ರಕಾಶ ದಸ್ಮಾ, ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ಶಿವಾನಂದ ರೊಡಗಿ ಬಮ್ಮಣ್ಣಿ ಸೇರದಿಂದತೆ ಸಿಂದಗಿ ಮತಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡರು ವೇದಿಕೆ ಮೇಲೆ ಇದ್ದರು. 

ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೇಗಿಲು ನೀಡಿ ಬೃಹತ್‌ ಹಾರ ಹಾಕುವ ಮೂಲಕ ಶಾಸಕ ರಮೇಶ ಭೂಸನೂರ ಹಾಗೂ ಕಾರ್ಯಕರ್ತರು ಸನ್ಮಾನಿಸಿದರು. ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಿಂದ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಬೈಕ್‌ ರ್ಯಾಲಿ: ಪಟ್ಟಣದ ಹೊರವಲಯದ ಬಸ್‌ ಡಿಪೋದಿಂದ ಬೈಕ್‌ ರ್ಯಾಲಿ ಪ್ರಾರಂಭವಾಗಿ ಟಿಪ್ಪು ಸುಲ್ತಾನ ವೃತ್ತ, ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕ್ರೀಡಾಂಗಣ ತಲುಪಿತು. ಸಾವಿರಾರು ಕಾರ್ಯಕರ್ತರು ಬೈಕ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಜಯಪುರ :ತನಗೆ ಸಾಲ ನೀಡದ ಬ್ಯಾಂಕ್ ಮ್ಯಾನೇಜರ್ ಗೆ ರೈತನೊಬ್ಬ ಹತಾಶನಾಗಿ ಕಪಾಳಮೋಕ್ಷ ಮಾಡಿದ ಘಟನೆ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಜರುಗಿದೆ. ಎರಡು ದಿನದ...

  • ವಿಜಯಪುರ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನದಿ ಪಾತ್ರದಲ್ಲಿ ಯಾವುದೇ ರೀತಿ ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧ ಕುರಿತು ಶೀಘ್ರದಲ್ಲೇ...

  • ಬಸವನಬಾಗೇವಾಡಿ: ಒಂದು ಕಾಲದಲ್ಲಿ ಶಿಕ್ಷಣದಿಂದ ಕೆಲವರು ವಂಚಿತರಾಗಿದ್ದರು. ಆದರೆ ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಂತ ಕೆಲಸವಾಗುತ್ತಿದ್ದು ಇದರ ಜೊತೆಯಲ್ಲೇ...

  • ಸಿಂದಗಿ: ಸರ್ಕಾರ ಭೂ ಮಾಪಕರಿಗೆ ಮಾಸಿಕ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿರುವ ಸುತ್ತೋಲೆ ಹಿಂಪಡೆದು ಮೊದಲಿದ್ದ 23 ಕಡತಗಳ ಗುರಿ ಮುಂದುವರಿಸಬೇಕು ಎಂದು ಒತ್ತಾಯಿಸಿ...

  • ಮುದ್ದೇಬಿಹಾಳ: ದೇಶದ ಸಂವಿಧಾನದ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗ ಎನ್ನಿಸಿಕೊಂಡಿರುವ ಮಾಧ್ಯಮವೂ ಕಲುಷಿತಗೊಂಡಿದೆ ಎನ್ನುವುದಕ್ಕೆ ವಿಷಾದಿಸುತ್ತೇನೆ...

ಹೊಸ ಸೇರ್ಪಡೆ