ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ


Team Udayavani, Mar 15, 2019, 9:35 AM IST

vij-2.jpg

ಇಂಡಿ: ಪ್ರತಿಯೊಂದು ಸಾಧನೆ ಹಿಂದೆ ಶಿಕ್ಷಣವೇ ಮುಖ್ಯವಾಗಿರುತ್ತದೆ. ಅದನ್ನು ಯಾರೂ ಅಲ್ಲಗಳೆಯಬಾರದು. ಸಮಾಜದ ಬದಲಾವಣೆಗೆ ಮಕ್ಕಳಲ್ಲಿ ನೈತಿಕ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವಪೂರ್ಣವಾಗಿದೆ ಎಂದು ಮೌಲಾನಾ ಜೀಯಾವುಲ್‌ಹಕ್ಕ ಉಮರಿ ಹೇಳಿದರು.

ಪಟ್ಟಣದ ಅಲ್‌ಕಾದೀರ ಉರ್ದು ಪ್ರಾಥಮಿಕ ಶಾಲೆ ಹಾಗೂ ಎಸ್‌.ಜಿ.ಬಿ ಪ್ರೌಢಶಾಲೆಯ 13ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಭೌತಿಕ ಮಟ್ಟದ ನೈತಿಕ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಅಮೂಲ್ಯವಾಗಿದೆ ಎಂದರು.
 
ಸೊಲ್ಲಾಪುರದ ತೌಫಿಕ ಹತ್ತೂರೆ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಸಂಸ್ಕಾರಭರಿತ ಶಿಕ್ಷಣ ನೀಡುವುದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ. ಒಂದು ಶಿಕ್ಷಣ ಸಂಸ್ಥೆ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಅದು ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ಭೀಮಾಶಂಕರ ಸಕ್ಕರೆ ಕಾರಖಾನೆಯ ನಿರ್ದೇಶಕ ಜಟ್ಟೆಪ್ಪ ರವಳಿ ಮಾತನಾಡಿ, ತಾಲೂಕಿನಲ್ಲಿ ಅಲ್‌ ಕಾದೀರ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಅಲ್‌ ಕಾದೀರ ಉರ್ದು ಪ್ರಾಥಮಿಕ ಶಾಲೆ ಹಾಗೂ ಎಸ್‌.ಜಿ.ಬಿ ಪ್ರೌಢಶಾಲೆಯು ತಾಲೂಕಿನ ಪರಿಸರದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಕೋಮು ಸಾಮರಸ್ಯ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ, ಇಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸಾಮಾನ್ಯ ಕೆಲಸವಲ್ಲ. ಹಿಂದೆ ಹಣ, ತೋಳ್ಬಲವಿದ್ದರೆ ಮಾತ್ರ ಸಾಧ್ಯ. ಸರಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿದರೆ ಅವುಗಳ ಏಳ್ಗೆ ಸಾಧ್ಯ. ಪ್ರತಿಯೊಬ್ಬ ಮಗು ವಿದ್ಯಾವಂತರಾಗಬೇಕು. ಶಿಕ್ಷಣ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದರು.
 
ಸಂಸ್ಥೆಯ ಅಧ್ಯಕ್ಷ ಅಲ್‌ಹಾಜ ಸತ್ತಾರ ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಇಲಿಯಾಸ ಸೇಟ ಬಾಗವಾನ, ಪುರಸಭೆ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಜೈನುದ್ದಿನ ಬಾಗವಾನ, ಜಹಾಂಗೀರ ಸೌದಾಗರ, ಅಬ್ದುಲ್‌ ರಜಾಕ ಬಾಗವಾನ, ಸಾಹೀರ ಅಬ್ದುಲ್‌ ಗಣಿ ಅಡತೆ, ರೀಯಾಜ ಬುರಾನಪುರೆ, ಇರ್ಫಾನ್‌ ತುಳಜಾಪುರೆ, ನಿಸಾರಹ್ಮದ ಪಠಾಣ, ಮುನ್ನಾ ಬಾಗವಾನ, ಶಾಹುಸೇನ ಮಕಾಂದಾರ, ಹಣಮಂತ ಕೊಡತೆ, ಲಿಯಾಕತ ಸಾಲಿಮಣಿ ಇದ್ದರು. ನಾಸೀರ ಇನಾಂದಾರ ನಿರೂಪಿಸಿದರು. ಹಸನ ಮುಜಾವರ ವಂದಿಸಿದರು. 

ಟಾಪ್ ನ್ಯೂಸ್

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

1-rr

ಪಾಕ್ ವಿರುದ್ಧ ಸೋಲಿನ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

c-t-ravi

ಸಿಂದಗಿ ಜನರು ಕಾಂಗ್ರೆಸ್ ಕೋಣ, ಜೆಡಿಎಸ್ ಹಸು ಬಿಟ್ಟು ಬಿಜೆಪಿ ಎತ್ತು ಕಟ್ಟಿ : ಸಿ.ಟಿ.ರವಿ

ಜೆಡಿಎಸ್ ತನ್ನ ನಡವಳಿಕೆಯಿಂದ ಸ್ವಯಂ ಮುಗಿಸಿಕೊಳ್ಳುತ್ತದೆ: ಸಿದ್ದರಾಮಯ್ಯ

ಜೆಡಿಎಸ್ ತನ್ನ ನಡವಳಿಕೆಯಿಂದ ಸ್ವಯಂ ಮುಗಿಸಿಕೊಳ್ಳುತ್ತದೆ: ಸಿದ್ದರಾಮಯ್ಯ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

ಜಮೀರ್ ತಮ್ಮ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ : ಸವದಿ

Untitled-3

ದೌರ್ಜನ್ಯ ತಡೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಬಸವರಾಜ ಬೊಮ್ಮಾಯಿ

ನಮಗೆ ಜೆಡಿಎಸ್ ಮುಗಿಸುವ ಅಗತ್ಯವಿಲ್ಲ, ದೇವೇಗೌಡರ ಹೇಳಿಕೆ ಸರಿಯಲ್ಲ: ಸಿಎಂ ಬೊಮ್ಮಾಯಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

1-yrrt

ಕಳವಾಗಿ 2 ಸಂತೆಗೆ ಹೋದರೂ ಮಾಲೀಕರ ಸೇರಿದ 7 ಕುರಿಗಳು

gow theft – protest

ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.