ಗ್ರಾಪಂ ಗದ್ದುಗೆಗೆ ಲೆಕ್ಕಾಚಾರ ಶುರು

ಬಹುಮತಕ್ಕೆ ಬೇಕಿರುವ ಸದಸ್ಯರ ಬೆಂಬಲ ಪಡೆಯಲು ಗೆದ್ದವರಿಗೆ ಪಕ್ಷಗಳ ಮುಖಂಡರಿಂದ ಗಾಳ

Team Udayavani, Jan 5, 2021, 1:37 PM IST

vp-tdy-1

ಸಿಂದಗಿ: ಗ್ರಾಮ ಪಂಚಾಯತ್‌ಗಳಲ್ಲಿ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಡಿಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಜ.1ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಗ್ರಾಪಂ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಏರಲುಕಸರತ್ತು ತೀವ್ರಗೊಂಡಿದೆ. ಪ್ರತಿ ಪಂಚಾಯ್ತಿಯಲ್ಲೂ ಗೆದ್ದವರ ಗುಂಪು ರಚಿಸುತ್ತಿರುವ ರಾಜಕೀಯ ಪಕ್ಷಗಳು ಮೀಸಲಾತಿ ಪ್ರಕಟಗೊಳ್ಳುವ ಮುನ್ನವೆ ಬಹುಮತಕ್ಕೆ ಬೇಕಿರುವ ಸದಸ್ಯರ ಬೆಂಬಲ ಪಡೆಯಲು ಗೆದ್ದವರಿಗೆ ಗಾಳ ಹಾಕುತ್ತಿವೆ.

ಗ್ರಾಪಂ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಲೆಹಾಕುವ ಮೂಲಕ ಅಧಿ ಕಾರದ ಗದ್ದುಗೆ ಹಿಡಿಯಲು ತೆರೆಮರೆಯಲ್ಲಿಸಿದ್ಧತೆ ನಡೆಸಿವೆ. ಸಿಂದಗಿ ಮತ್ತು ಆಲಮೇಲತಾಲೂಕಿನ 23 ಗ್ರಾಪಂಗಳ 431 ಸ್ಥಾನಗಳಲ್ಲಿ51 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 380 ಸ್ಥಾನಗಳಿಗೆ ಸದಸ್ಯರು ಚುನಾಯಿತರಾಗಿದ್ದಾರೆ. ತಾಲೂಕಿನ ಮತದಾರರು ಪಕ್ಷ ಆಧರಿಸದೆ ವ್ಯಕ್ತಿಗಳ ಆಧಾರದಲ್ಲಿ ಮತ ಚಲಾಯಿಸಿದ್ದಾರೆ.

ಆಯೋಗದ ಸೂಚನೆ: ತಾಲೂಕಿನ ಜನಸಂಖ್ಯೆಹಾಗೂ ಲಭ್ಯ ಸ್ಥಾನ ಆಧರಿಸಿ ಮೀಸಲಾತಿ ನಿಗದಿಪಡಿಸಬೇಕು. ಮೊದಲಿಗೆ ಪರಿಶಿಷ್ಟ ಜಾತಿ, ನಂತರಪರಿಶಿಷ್ಟ ಪಂಗಡದ ಮೀಸಲಾತಿ ನಿಗದಿಯಾಗಲಿದೆ.ನಂತರ ಹಿಂದುಳಿದ “ಅ’ ಮತ್ತು “ಬ’ ವರ್ಗ ಹಾಗೂಕೊನೆಯಲ್ಲಿ ಸಾಮಾನ್ಯ ವರ್ಗದ ಮೀಸಲಾತಿ ನಿಗದಿಪಡಿಸಬೇಕು ಎಂದು ಆಯೋಗ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಒಂದೇ ಗ್ರಾಪಂನಲ್ಲಿ ಏಕ ಕಾಲಕ್ಕೆ ಪರಿಶಿಷ್ಟ ಜಾತಿ ಅಥವಾ ಪಂಗಡದವರನ್ನೇಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಮಾಡುವಂತಿಲ್ಲ. ಎರಡೂ ಹುದ್ದೆಗಳಲ್ಲಿಒಂದಕ್ಕೆ ಪರಿಶಿಷ್ಟ ಜಾತಿ ಮತ್ತು ಮತ್ತೂಂದಕ್ಕೆಪರಿಶಿಷ್ಟ ಪಂಗಡದವರನ್ನು ಆಯ್ಕೆ ಮಾಡುವಂತಿಲ್ಲ. ಎರಡೂ ಹುದ್ದೆಗಳಿಗೆ ಏಕ ಕಾಲಕ್ಕೆ ಮಹಿಳೆಯರನ್ನು, ಹಿಂದುಳಿದ “ಅ’ ವರ್ಗ ಅಥವಾ “ಬ’ ವರ್ಗದವರನ್ನು ಆಯ್ಕೆ ಮಾಡುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಮೊದಲು ಅಧ್ಯಕ್ಷ ಹುದ್ದೆಗಳನ್ನು, ನಂತರ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸಬೇಕು ಎಂದು ಆಯೋಗ ಸೂಚಿಸಿದೆ.

ಮೀಸಲು ಲೆಕ್ಕಾಚಾರ: ಚುನಾವಣಾ ಆಯೋಗ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ವರ್ಗವಾರುನಿಗದಿಪಡಿಸಲು ಎಲ್ಲ ಜಿಲ್ಲಾ ಧಿಕಾರಿಗಳಿಗೆ ಆದೇಶ ಪತ್ರ ರವಾನಿಸಿದ್ದು ಜಿಲ್ಲಾ ಧಿಕಾರಿಗಳು ಮೀಸಲಾತಿ ಪ್ರಕಟಿಸಬೇಕಿದೆ. ಆ ನಂತರವೇ ಹಳ್ಳಿ ರಾಜಕೀಯ ಮತ್ತೂಮ್ಮೆ ಗರಿಗೆದರಲಿದೆ. ಆದರೆ, ಈ ಹಿಂದಿನ ಹಾಗೂ ಮುಂದೆ ಪ್ರಕಟಗೊಳ್ಳಬಹುದಾದ ಮೀಸಲಾತಿ ಬಗ್ಗೆ ಲೆಕ್ಕ ಹಾಕಿ ಇಂತಹದೇ ಮೀಸಲಾತಿ ಸಿಗಬಹುದು ಎಂಬಅಂದಾಜಿನ ಮೇಲೆ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಇಲ್ಲಿ ಯಾವ ಮೀಸಲಾತಿ ಬಂದರೆ ಯಾರಿಗೆ ಅಧಿಕಾರ ನೀಡುವುದು ಎಂಬ ವಿಚಾರ ಇಟ್ಟುಕೊಂಡು ಬೆಂಬಲಿತ ಸದಸ್ಯರ ಗುಂಪು ರಚಿಸಲಾಗುತ್ತಿದೆ. ಸಾಮಾನ್ಯ ವರ್ಗದ ಮೀಸಲಾತಿ ಬರಬಹುದಾದ ಗ್ರಾಪಂಗಳಲ್ಲಿ ಅತ್ಯಂತ ತುರುಸಿನ ಚಟುವಟಿಕೆಗಳು ನಡೆದಿವೆ. ಯಾವ ಪಕ್ಷದ ಬೆಂಬಲ ಪಡೆಯದೇ ಪಕ್ಷೇತರವಾಗಿ ಗೆದ್ದಿರುವ ಅಭ್ಯರ್ಥಿಗಳಿಗೆ ಭಾರಿ ಬೇಡಿಕೆಯಿದ್ದು, ಚುನಾವಣೆಗೆ ಖರ್ಚು ಮಾಡಿದ ಹಣವನ್ನೆಲ್ಲ ಹಿಂಪಡೆಯುವ ಲೆಕ್ಕಾಚಾರದಲ್ಲಿ ಕೆಲವರಿದ್ದರೇ, ಮಿಸಲಾತಿಯಲ್ಲಿ ಅವಕಾಶ ಸಿಕ್ಕರೆ ಅ ಧಿಕಾರ ಪಡೆದೇ ತೀರುವ ಹುಮ್ಮಸ್ಸಿನಲ್ಲಿ ಮತ್ತೆ ಕೆಲವರಿದ್ದಾರೆ.

ಕುದುರೆ ವ್ಯಾಪಾರ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯಲ್ಲಿ ಅವಕಾಶ ಸಿಕ್ಕರೆ ಸದಸ್ಯರನ್ನು ಪ್ರವಾಸಿ ತಾಣಗಳಿಗೆ, ದೇವಸ್ಥಾನಗಳಿಗೆ ಕರೆದೊಯ್ಯಬೇಕು ಎಂಬ ಲೆಕ್ಕಾಚಾರ ಕೆಲ ಸದಸ್ಯರು ನಡೆಸಿದ್ದಾರೆ.

ಪ್ರತಿಷ್ಠೆಗೆ ಬಿದ್ದ ಪಕ್ಷಗಳು: ತಮ್ಮ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿ ಸಿದ್ದಾರೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೇರಲು ಅಷ್ಟೇ ಪ್ರತಿಷ್ಠೆಗೆ ಬಿದ್ದಿವೆ. ಹಲವೆಡೆ ಸ್ಪಷ್ಟ ಬಹುಮತಕ್ಕೆ ಬೇಕಾದ ಸದಸ್ಯರ ಕೊರತೆಯನ್ನು ಮೂರೂ ಪಕ್ಷಗಳ ಬೆಂಬಲಿತರಗುಂಪುಗಳು ಎದುರಿಸುತ್ತಿವೆ. ಹೀಗಾಗಿ ಇಲ್ಲಿ ಕೊರತೆ ಇರುವ ಸ್ಥಾನಗಳನ್ನು ತುಂಬಲು ಎಲ್ಲಿಲ್ಲದ ಕಸರತ್ತು ನಡೆಸಲಾಗುತ್ತಿದೆ.

ಗ್ರಾಪಂ ಅಧಿಕಾರ ಯಾರಿಗೆ ಹೋಗಲಿ. ಮೊದಲು ಊರ ಉದ್ಧಾರ ಮಾಡುವವರು ಬೇಕಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಗ್ರಾಮ ಸ್ವಚ್ಛತೆ ಸಮರ್ಪಕವಾಗಿ ಆಗಬೇಕು. ಪಿಡಿಒಗಳು ನಿತ್ಯ ಪಂಚಾಯತ್‌ಗೆ ಬರುವಂತಾಗಬೇಕು.ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರೇ ಪಿಡಿಒ ಮನೆಗೆ ಹೋಗುವಂತಾಗಬಾರದು. ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. – ಅನ್ನಪೂರ್ಣ ಹಿರೇಮಠ, ರೈತ ಮಹಿಳೆ, ಮುಳಸಾವಳಗಿ

ಗ್ರಾಮಗಳು ಸಾಕಷ್ಟು ಸಮಸ್ಯೆಗಳ ಆಗರಗಳಾಗಿವೆ. ಗ್ರಾಪಂಅಧ್ಯಕ್ಷ-ಉಪಾಧ್ಯಕ್ಷ ಯಾರೇ ಆಗಲಿಸಮಸ್ಯೆಗಳಿಗೆ ಸ್ಪಂ ದಿಸಬೇಕು. ಸರಕಾರದಯೋಜನೆಗಳನ್ನು ಸರಿಯಾಗಿ ಅನುಷ್ಠಾನಮಾಡಬೇಕು. ಮಹಿಳೆಯರಿಗೆಸಾರ್ವಜನಿಕ ಶೌಚಾಲಯಗಳನ್ನು ಸುಸಜ್ಜಿತವಾಗಿನಿರ್ಮಿಸಬೇಕು. ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆ ಮೊದಲು ಕಲ್ಪಿಸಬೇಕು. ಆಗ ಮನೆಗೊಂದು ಶೌಚಾಲಯನಿರ್ಮಾಣವಾಗುತ್ತವೆ.ಕಸ್ತೂರಿಬಾಯಿ ಹೂಗಾರ ಗ್ರಾಮಸ್ಥೆ, ಅಂತರಗಂಗಿ

ಮಕ್ಕಳ ಆರೋಗ್ಯ, ರಕ್ಷಣೆ ಮತ್ತು ಶಿಕ್ಷಣಅಭಿವೃದ್ಧಿಗಾಗಿತಳಮಟ್ಟದಿಂದಲೇ ಅವಶ್ಯಕ ಸುಧಾರಣಾ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಸಂಬಂಧಿ ಸಿದ ಸಮಗ್ರ ಅಭಿವೃದ್ಧಿ ಅಂಶಗಳ ಅನುಷ್ಠಾನಕ್ಕಾಗಿ ಪ್ರತಿಗ್ರಾಮಗಳಲ್ಲಿ ಗ್ರಾಮ ಸಭೆ ಕಡ್ಡಾಯ ಮತ್ತುಸಮರ್ಪಕವಾಗಿ ನಡೆಸಬೇಕು. – ಜ್ಯೋತಿ ಪೂಜಾರ ಕಾರ್ಯದರ್ಶಿ, ಮಕ್ಕಳ ಕಲ್ಯಾಣ ಪ್ರತಿಷ್ಠಾನ, ಸಿಂದಗಿ

 

ರಮೇಶ ಪೂಜಾರ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.