ಇಂದಿನಿಂದ ಬೃಹತ್‌ ಮೀನು ಮೇಳ

Team Udayavani, Feb 3, 2018, 2:43 PM IST

vij-1.jpg

ವಿಜಯಪುರ: ಮೀನುಗಾರಿಕೆ ಕುರಿತು ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಫೆ. 3ರಿಂದ 5ರವರೆಗೆ ಬೃಹತ್‌ ಮತ್ಸ್ಯಮೇಳ ವಸ್ತುಪ್ರದರ್ಶನ-2018 ಹಮ್ಮಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ವಿಜಯಕುಮಾರ ಎಸ್‌. ಹೇಳಿದರು.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದ ಬಳಿಯಿರುವ ಆನ್‌ಲೈನ್‌ ವಾಣಿಜ್ಯ ಕಟ್ಟಡದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದಲ್ಲಿ ವಿಜ್ಞಾನಿಗಳಿಂದ ಒಳನಾಡು ಮೀನುಗಾರಿಕೆಯ ಬಗ್ಗೆ ರೈತರೊಡನೆ ಸಂವಾದ ಹಾಗೂ ದೇಶಿಯ, ವಿದೇಶಿಯ 55 ತಳಿಯ ಮೀನು ತಳಿಗಳ ಪ್ರದರ್ಶನ, ಮಾಹಿತಿ ನೀಡಲಾಗುತ್ತದೆ ಸುದ್ದಿಗೋಷ್ಠಯಲ್ಲಿ ತಿಳಿಸಿದರು. 

ಸಿಐಎಫ್‌ಎ, ಸಿಎಂಎಫ್‌ಆರೈ, ಸಿಐಎಫ್‌ಆರ್‌ಐ ಕೇಂದ್ರಿಯ ವಿದ್ಯಾಲಯಗಳ ಇಬ್ಬರು ವಿಜ್ಞಾನಿಗಳು ಮತ್ತು ಒಬ್ಬರು ಸಹಾಯಕರು ಮೇಳದಲ್ಲಿ ಪಾಲ್ಗೊಂಡು ಮೀನುಗಾರಿಕೆ ಸಂಶೋಧನೆಯಲ್ಲಿ ಕೈಗೊಂಡ ಸಂಶೋಧನೆ ಕುರಿತು ಮಾಹಿತಿ ನೀಡಲಿದ್ದಾರೆ. ನುರಿತ ವಿಜ್ಞಾನಿಗಳಿಂದ ಗೋಷ್ಠಿ ಮತ್ತು ಸಂವಾದದ ಮೂಲಕ ಮೀನುಗಾರಿಕೆ ಕುರಿತು ರೈತರಿಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದರು.

ಸಣ್ಣ ರೈತರು ಕೂಡ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಿ ಆರ್ಥಿಕ ಸಂಪನ್ಮೂಲವಾಗಿ ಮಾಡಿಕೊಳ್ಳಲು ಅವಕಾಶವಿದೆ. ಆಹಾರಕ್ಕಾಗಿ ಮಾತ್ರವಲ್ಲದೇ ಮನೆಗಳಲ್ಲಿ ಅಲಂಕಾರಿಕವಾಗಿಯೂ ಮೀನುಗಳನ್ನು ಸಾಕುವ ವಿಧಾನಗಳ ಕುರಿತು ರೈತರಿಗೆ ಕಿರು ತರಬೇತಿ ನೀಡಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ 9,500 ರೈತರು ಮೀನು ಉತ್ಪಾದನೆಯಲ್ಲಿ ತೊಡಗಿದ್ದು ಮೀನು ಸಾಕಾಣಿಕೆ ಮಾಡಿದಲ್ಲಿ ಕೃಷಿ ಹೊಂಡಗಳಲ್ಲಿರುವ ಪ್ಲಾಸ್ಟಿಕ್‌ ಹಾಳೆ ತಿನ್ನುತ್ತವೆ ಎಂಬ ಅನುಮಾನ ನಿವಾರಿಸಲಾಗಿದೆ. ಹೀಗಾಗಿ ರೈತರು ಇದೀಗ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದಾರೆ ಎಂದರು. ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಮತ್ಸ್ಯ ವಸ್ತುಪ್ರದರ್ಶನಕ್ಕೆ 10 ಸಾವಿರ ರೈತರು, ವಿದ್ಯಾರ್ಥಿಗಳು ಹಾಗೂ ಮೀನು ಉತ್ಪಾದನಾ ಆಸಕ್ತರು ಭೇಟಿ ನೀಡಿದ್ದಾರೆ. ಈ ಬಾರಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ವೀಕ್ಷಕರು ಆಗಮಿಸುವ ನೀರಿಕ್ಷೆ ಇದೆ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ| ವಿಜಯ ಎಸ್‌, ಡಾ| ಮಂಜಣ್ಣ ಎಂ, ಡಾ| ಹರಿಶ್ಚಂದ್ರ ಜಾಧವ, ಸತೀಶ ರಜಪೂತ, ಸಂತೋಷ ತಳವಾರ ಪತ್ರಿಕಾಗೋಷ್ಠಿಯಲ್ಲಿದ್ದರು. 

ಟಾಪ್ ನ್ಯೂಸ್

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ವಿಜಯ್ ಬರ್ತ್‌ಡೇ: ಹುಟ್ಟುಹಬ್ಬ ಆಚರಿಸುತ್ತಿಲ್ಲ, ಮನೆ ಬಳಿ ಬರಬೇಡಿ ಎಂದ ನಟ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ನಿರ್ಧಾರ?: ಬೊಮ್ಮಾಯಿ-ಕಟೀಲ್ ತೀರ್ಮಾನ

ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಎರಡು ಪ್ರತ್ಯೇಕ ಕೇಸು ದಾಖಲು

ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ ಪ್ರಕರಣ ದಾಖಲು

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮ

ಅಗತ್ಯವಿದ್ದರೆ ತರಗತಿ ಅವಧಿ 1 ತಾಸು ವಿಸ್ತರಿಸಲು ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಯತಯಜಯಜಹಗ್

ಪಾಟೀಲ-ಕಾರಜೋಳ ವಿರುದ್ದ ಟೀಕೆ ನಿಲ್ಲಿಸಲು ಮನವಿ

ಗಜಹಕಹಗ

ನಮ್ಮಲ್ಲಿರುವ ಜ್ಞಾನ ಪರಾಮರ್ಶೆಯೇ ಸಂಶೋಧನೆ: ತುಳಸಿಮಾಲಾ

27cleaning

ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ

26school

ಮೊರಾರ್ಜಿ ವಸತಿ ಶಾಲೆ ಲೋಕಾರ್ಪಣೆಗೆ ಸಿದ್ದ

25apeal

ಬಾಲಾಜಿ ಸಕ್ಕರೆ ಕಾರ್ಖಾನೆ ವಿರುದ್ಧ ಪ್ರತಿಭಟನೆ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

3ravura

ಗಬ್ಬು ನಾರುತ್ತಿದೆ ರಾವೂರ ಪರಿಶಿಷ್ಟರ ಓಣಿ

2covid

ಲಸಿಕೆ ಪಡೆದಲ್ಲಿ ಕೋವಿಡ್‌ ಅಪಾಯ ಕಡಿಮೆ: ಸಿದ್ದು

1DC

ಗಣರಾಜ್ಯೋತ್ಸವ ಸರಳ ಆಚರಣೆ: ಜಿಲ್ಲಾಧಿಕಾರಿ ಜ್ಯೋತ್ಸ್ನಾ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

ಭಾರತದಲ್ಲಿ 24ಗಂಟೆಯಲ್ಲಿ 3ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣ, ಒಮಿಕ್ರಾನ್ ಸಂಖ್ಯೆ 9,287

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.