ಜಲಸಾಕ್ಷರ ಯಾತ್ರೆಗೆ ಭವ್ಯ ಸ್ವಾಗತ


Team Udayavani, Aug 3, 2017, 10:11 AM IST

03-BJP-9.jpg

ವಿಜಯಪುರ: ಬರ ಮುಕ್ತ ಭಾರತ ನಿರ್ಮಾಣಕ್ಕಾಗಿ ಜಲ ಸಾಕ್ಷರತೆಗಾಗಿ ರಾಷ್ಟ್ರೀಯ ಜಲ ಬಿರಾದರಿ ಸಂಘಟನೆಯಿಂದ ಗೋವಾ-ಗುವಾಹತಿ ಜಲಸಾಕ್ಷರತೆ ಯಾತ್ರೆ ಬುಧವಾರ ವಿಜಯಪುರಕ್ಕೆ ಆಗಮಿಸಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು.

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿದ ಜಲಯಾತ್ರೆ ಹಾಗೂ ಜಲ ಸಾಕ್ಷರತಾ ಯಾತ್ರಾರ್ಥಿಗಳು ಜಲ ಸಂರಕ್ಷಣೆ ಮಹತ್ವ ಹೇಳುವ ಬರ ಮುಕ್ತ ಭಾರತ ನಿರ್ಮಾಣದ ಜಾಗೃತಿ ಯಾತ್ರೆಯ ಕಾರ್ಯ ಚಟುವಟಿಕೆ ತಿಳಿಸುವ ಕರಪತ್ರ ವಿತರಿಸಿದರು. ಜಲ ಸಾಕ್ಷರತಾ ಯಾತ್ರಾರ್ಥಿಗಳು ಜಲ ಕೀ ರಕ್ಷಾ ಪ್ರಕೃತಿ ಕೀ ರಕ್ಷಾ…’ ಜಲ ಹೈ ತೋ ಬಲ ಹೈ… , “ಜಲ ಹೀ ಜೀವನ ಹೈ…, “ಜಲ ಹೀ ಜೀವನ ಹೈ…’, ಎಂಬಿತ್ಯಾದಿ ಘೋಷಣೆ ಕೂಗಿ ಸ್ವಾಗತಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸ್ವಾಗತಿಸಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು. ರೋಟರಿ ಕ್ಲಬ್‌ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಲ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು. 

ಈ ಯಾತ್ರೆಯು ಸೊಲ್ಲಾಪುರ ಮಾರ್ಗವಾಗಿ ಮಹಾರಾಷ್ಟ್ರ, ನಂತರ ಜಾರ್ಖಂಡ, ಛತ್ತಿಸಗಡ, ಓರಿಸ್ಸಾ, ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಹಾಯ್ದು ಕೊನೆಗೆ ಆಸ್ಸಾಂ ರಾಜ್ಯದ ರಾಜಧಾನಿ ಗುವಾಹತಿಗೆ ತಲುಪಲಿದೆ ಎಂದು ಯಾತ್ರೆ ನೇತೃತ್ವ ವಹಿಸಿರುವ ಕೃಷಿ ತಜ್ಞ ಡಾ| ರಾಜೇಂದ್ರ ಪೋದ್ದಾರ ಹೇಳಿದರು.  

ಬರ ಮುಕ್ತ ಭಾರತ ನಿರ್ಮಾಣಕ್ಕಾಗಿ ಜಲಗಾಂಧಿ ಡಾ| ರಾಜೇಂದ್ರಸಿಂಗ್‌ ನೇತೃತ್ವದಲ್ಲಿ ಜಲ ಸಾಕ್ಷರತೆ ಯಾತ್ರೆ ಕೈಗೊಳ್ಳಲಾಗಿದೆ. ಕಳೆದ ಮೇ ತಿಂಗಳಿಂದ ಮೊದಲ ಹಂತವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ, ಎರಡನೇ ಹಂತದ ಯಾತ್ರೆ ಗೋವಾದಿಂದ ಗುವಾಹತಿ ಯಾತ್ರೆಯೂ ಪ್ರಾರಂಭಗೊಂಡಿದೆ. ಈ ಎಲ್ಲ ಯಾತ್ರೆಗಳ ಸಮಾರೋಪ ವಿಜಯಪುರದಲ್ಲಿ ನಡೆಯಲಿದೆ. ರಾಷ್ಟ್ರೀಯ ನಾಯಕ ಅಣ್ಣಾ ಹಜಾರೆ, ಜಲತಜ್ಞ ಡಾ| ರಾಜೇಂದ್ರಸಿಂಗ್‌ ಸೇರಿದಂತೆ ಜಲ ಸಂರಕ್ಷಣೆ ಪರಿಣಿತಿ ಹೊದಿರುವ ದೇಶದ ಖ್ಯಾತನಾಮರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ| ರಾಜೇಂದ್ರ ಪೋದ್ದಾರ ಹೇಳಿದರು. 

ವಿಜಯಪುರ ಜಲ ಬಿರಾದಾರಿ ಅಧ್ಯಕ್ಷ ಪೀಟರ್‌ ಅಲೆಕ್ಸಾಂಡರ್‌, ಡಾ| ರಿಯಾಜ್‌ ಫಾರೂಕಿ, ವಿಶ್ವನಾಥ ಭಾವಿ, ಲಕ್ಷ್ಮೀ ದೇಸಾಯಿ, ಎಂ.ಕೆ. ಮನಗೊಂಡ, ಪ್ರಕಾಶ ಕುಂಬಾರ, ಟಿ.ಎಸ್‌. ಪಠಾಣ, ಮುನ್ನಾ ಭಕ್ಷಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. 

ಟಾಪ್ ನ್ಯೂಸ್

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muddebihala news

ಚನ್ನವೀರ ದೇವರು ಅವರಿಗೆ ಗೌರವ ಡಾಕ್ಟರೇಟ್

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

incident held at vijayapura news

ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ

23

ವಿದ್ಯುತ್ ಕೊಡದಿದ್ದರೆ ಕ್ರಿಮಿನಾಶಕ ಸೇವಿಸಿ ಕಚೇರಿ ಎದುರು ಆತ್ಮಹತ್ಯೆ

21

ಶರಣರು, ಸಂತರು, ಮಹಾತ್ಮರ ನುಡಿಗಳಲ್ಲಿರಲಿ ವಿಶ್ವಾಸ: ಪಾಟೀಲ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.