ತೋಟಗಾರಿಕೆ ಬೆಳೆ ಬೆಳೆಯಿರಿ
Team Udayavani, Sep 28, 2020, 6:22 PM IST
ಸಿಂದಗಿ: ರೈತರಿಗೆ ಕಷ್ಟ ಕಾಲದಲ್ಲಿಯೂ ಆರ್ಥಿಕವಾಗಿ ಸಹಾಯ ಮಾಡುವ ತೋಟಗಾರಿಕೆ ವ್ಯವಸಾಯ ಎಟಿಎಂ ಇದ್ದಂತೆ. ಕಡಿಮೆ ಅವ ಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಮೋಘಿ ಹಿರೇಕುರಬರ ಅಭಿಪ್ರಾಯಪಟ್ಟರು.
ತಾಲೂಕಿನ ಬೂದಿಹಾಳ, ಹರನಾಳ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡಿ, ತೋಟಗಾರಿಕೆ ಬೆಳೆ ವೀಕ್ಷಣೆ ಮಾಡಿ ಅವರು ಮಾತನಾಡಿದರು. ದೀರ್ಘಾವಧಿ ಮತ್ತು ಅಲ್ಪಾವಧಿ ತೋಟಗಾರಿಕೆ ಬೆಳೆಗಳು ಲಾಭದಾಯಕವಾಗಿವೆ. ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಸಾಂಪ್ರದಾಯಿಕ ಕೃಷಿ ಜೊತೆಗೆ ಅಲ್ಪಾವಧಿ ತೋಟಗಾರಿಕೆ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಆದಾಯ ಪಡೆಯಬೇಕು ಎಂದರು.
ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ, ರೈತರಿಗೆ ಇಲಾಖೆ ನೀಡಿದ ಅವಕಾಶಗಳನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ರೈತರಿಂದಲೇ ತಿಳಿದುಕೊಂಡರು. ಪ್ರಸ್ತುತ ಕೋವಿಡ್ ದಿಂದಾಗಿ ರೈತರಿಗೆ ಉಂಟಾಗಿರುವ ಸಮಸ್ಯೆಗಳನ್ನು ಕೇಳಿ ಅವುಗಳಿಗೆ ಇಲಾಖೆಯಿಂದ ಯಾವ ರೀತಿಯಲ್ಲಿ ಪರಿಹಾರ ದೊರಕಿಸಿಕೊಡಬೇಕು ಎಂಬುದನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.
……………………………………………………………………………………………………………………………………………………………….
ಮನೆಯಂಗಳದಲ್ಲಿ ಆಟ-ಪಾಠ : ಮುದ್ದೇಬಿಹಾಳ: ಚವನಭಾವಿ ಗ್ರಾಮದಲ್ಲಿ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಮನೆ ಅಂಗಳದಲ್ಲಿ ಆಟ-ಪಾಠ ಹಾಗೂ ಇತರೆ ಚಟುವಟಿಕೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್ ಹಾವಳಿ ಹೆಚ್ಚುತ್ತಿರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಬರುವಂತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸರ್ಕಾರ ಮನೆ ಅಂಗಳದಲ್ಲಿ ಆಟ-ಪಾಠ ಕಾರ್ಯಕ್ರಮ ಪ್ರಾರಂಭಿಸಿದೆ. ಇದು ರಾಜ್ಯಾದ್ಯಂತ ಪ್ರಾರಂಭಗೊಂಡಿದೆ ಎಂದರು.
ಇದೇ ವೇಳೆ ಮಕ್ಕಳನ್ನು ಒಂದೆಡೆ ಸೇರಿಸಿ ಆಟ-ಪಾಠ ಸೇರಿದಂತೆ ಹಲವು ಚಟುವಟಿಕೆ ನಡೆಸಿಕೊಟ್ಟರು. ಅಡವಿ ಸೋಮನಾಳ ಗ್ರಾಪಂ ವ್ಯಾಪ್ತಿಯ ಚವನಭಾವಿ, ಅಡವಿ ಹುಲಗಬಾಳ ಹಾಗೂ ತಾಂಡಾ, ಡೊಂಕಮಡು, ಖ್ಯಾತನಡೋಣಿ, ಅಡವಿ ಸೋಮನಾಳ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಮಕ್ಕಳಿಗೆ ಈ ಕಾರ್ಯಕ್ರಮ ನಡೆಸಿಕೊಡಲಾಯಿತು.
ಹಿರೇಮುರಾಳ ವಲಯದಲ್ಲಿ ಬರುವ ಎಲ್ಲ ಗ್ರಾಮಗಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು- ಸಹಾಯಕಿಯರು ಮಕ್ಕಳಿಗೆ ಪಾಠ ಹೇಳುವ ಜತೆಗೆ ಮನೆ ಮನೆಗೆ ತೆರಳಿ ಕೋವಿಡ್ ಅರಿವು ಮೂಡಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರಾದ ವಿನೋದ ಚಿಮ್ಮಲಗಿ, ಇಂದಿರಾ ಕುಂಬಾರ, ಶಾಂತಾ ಈಳಗೇರ, ಸುನಂದಾ ಸೇಲಾರ, ಬಸಮ್ಮ ಕಡಿ, ಅಂಜಿನಾ ಬಡಿಗೇರ, ಲಕ್ಷ್ಮೀ ಗುಡಗುಂಟಿ, ಯಮನಮ್ಮ ವಾಲೀಕಾರ, ರೇಣುಕಾ ಗುಂಡಕನಾಳ, ಚನ್ನಮ್ಮ ಗುಡದಾರಿ, ಸತ್ಯಮ್ಮ ನಾಗರಾಳ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ