ಎಚ್1ಎನ್1 ರೋಗ ಹರಡದಂತೆ ಅಗತ್ಯ ಕ್ರಮ
Team Udayavani, Oct 16, 2018, 6:30 AM IST
ಬಸವನಬಗೇವಾಡಿ: ರಾಜ್ಯದಲ್ಲಿ ಎಚ್1ಎನ್1 ರೋಗಹರಡದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಎಚ್1ಎನ್1 ರೋಗ ಚಿಕಿತ್ಸೆಗೆ ಬೇಕಾಗುವ ಔಷಧೋಪಚಾರ ಸಿದಟಛಿವಾಗಿವೆ.
ಕಳೆದ ವರ್ಷ ರಾಜ್ಯದಲ್ಲಿ 3 ಸಾವಿರ ಜನರಿಗೆ ರೋಗ ತಲುಲಿದ್ದು 15 ಜನ ಮೃತಪಟ್ಟಿದ್ದರು. ಈ ವರ್ಷ ರಾಜ್ಯದಲ್ಲಿ 456 ಜನರಲ್ಲಿ ಎಚ್1ಎನ್1 ಕಂಡು ಬಂದಿದ್ದು 6 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಎಚ್1ಎನ್1 ರೋಗ ಏಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ತೀವ್ರ ಸ್ವರೂಪದ ಜ್ವರ, ಗಂಟಲು ನೋವು, ಕೆಮ್ಮು, ಉಸಿರಾಟ ತೊಂದರೆ, ಎದೆ ನೋವು ಕಂಡು ಬಂದಲ್ಲಿ ತಕ್ಷಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆಗಾಲದಲ್ಲಿ ಕಾಡಿಗೆ ಲಾರಿಗಳ ಪ್ರವೇಶಕ್ಕೆ ನಿರ್ಬಂಧ ; ಸಭೆಯಲ್ಲಿ ಹಾಲಪ್ಪ ಸೂಚನೆ
ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ
ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ
ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ
ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ