Udayavni Special

ಪಾದಯಾತ್ರಿಗಳು ಕೋವಿಡ್‌ ನಿಯಮ ಪಾಲಿಸಲಿ


Team Udayavani, Mar 23, 2021, 6:55 PM IST

mnhjmhnm

ವಿಜಯಪುರ: ಯುಗಾದಿ ಹಬ್ಬಕ್ಕಾಗಿ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಬರುವ ಕರ್ನಾಟಕದ ಪಾದಯಾತ್ರಿಗಳು ಗಂಟಲು ದ್ರವ ಮಾದರಿ ಪರೀಕ್ಷಿಸಿಕೊಂಡು, ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ತರುವುದು ಕಡ್ಡಾಯ ಎಂದು ಆಂಧ್ರಪ್ರದೇಶ ಸರ್ಕಾರದ ಶ್ರೀಶೈಲಂ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎಸ್‌. ರಾಮರಾವ್‌ ಹೇಳಿದರು.

ಸೋಮವಾರ ವಿಜಯಪುರ ನಗರದ ಎಪಿಎಂಸಿ ಮಚಂìಟ್‌ ಅಸೋಸಿಯೇಶನ್‌ನ ನೀಲಕಂಠೇಶ್ವರ ಮಂಗಲ ಭವನದಲ್ಲಿ ನಡೆದ ಶ್ರೀಶೈಲ ಪಾದಯಾತ್ರಿ ಭಕ್ತರು, ದಾಸೋಹಿಗಳ ಸಭೆ, ಭ್ರಮರಾಂಬಿಕಾ-ಮಲ್ಲಿಕಾರ್ಜುನ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಸೂಚನೆ ನೀಡಿದರು.

ಯುಗಾದಿ ಹಬ್ಬದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಲಕ್ಷಾಂತತರ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ, ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕವೂ ಶ್ರೀಕ್ಷೇತ್ರ ದರ್ಶನಕ್ಕೆ ಬರುತ್ತೀರಿ. ಪ್ರತಿ ವರ್ಷದಂತೆ ಈ ವರ್ಷ ಮುಕ್ತ ಪ್ರವೇಶ ನೀಡುವುದಿಲ್ಲ. ಕ್ಷೇತ್ರಕ್ಕೆ ಬರುವಾಗ ಕೋವಿಡ್‌-19 ರೋಗ ಇಲ್ಲ ಎಂಬುದಕ್ಕೆ ಆರೋಗ್ಯ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಕಡ್ಡಾಯ ಎಂದರು.

ಕೋವಿಡ್‌ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೊರೊನಾ ನಿಗ್ರಹಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ಈ ವಿಷಯದಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯ ಸರಕಾರಗಳು ರೂಪಿಸಿರುವ ಮುಂಜಾಗೃತಾ ನಿಯಮಗಳ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಭಕ್ತರಿಗೆ ಸೂಚಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಪೀಠದ ಚನ್ನಸಿದ್ದರಾಮೇಶ್ವರ ಪಂಡಿತರಾಧ್ಯ ಶ್ರೀಗಳು ಮಾತನಾಡಿ, ಯುಗಾದಿ ಹಬ್ಬದಲ್ಲಿ ಭಕ್ತ ಸಮೂಹ ಶ್ರೀಶೈಲದಲ್ಲಿ ಹೆಚ್ಚಾಗುವುದರಿಂದ ದೇಶದ ಅನೇಕ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ಕೋವಿಡ್‌-19 ಹೆಚ್ಚಾಗುತ್ತಿರುವ ಕಾರಣ ನಿಮ್ಮ ಆರೋಗ್ಯ ಹಿತದೃಷ್ಟಿಯಿಂದ ಸರಕಾರದ ನಿಯಮಾವಳಿಗಳನ್ನು ಪಾಲಿಸಬೇಕು. ಕ್ಷೇತ್ರಕ್ಕೆ ಆಗಮಿಸುವ ಪಾದಯಾತ್ರಿಕರಿಗೆ ಭೀಮನಕೊಳ್ಳದಲ್ಲಿ ದೇವರ ದರ್ಶನಕ್ಕೆ ಒಂದು ಗುರುತಿನ ಮುದ್ರೆಯನ್ನು ಕೊಡಲಾಗುವುದು ಕ್ಷೇತ್ರದಲ್ಲಿ ಪ್ರತಿಯೊಬ್ಬರು ಸ್ವತ್ಛತೆ ಶಿಸ್ತು ವಹಿಸಬೇಕೆಂದು ತಿಳಿಸಿದರು. ಅರ್ಚಕರಾದ ಜಿ.ವೀರಭದ್ರಯ್ಯ, ರಮೇಶ ಬಿದನೂರ, ರವೀಂದ್ರ ಬಿಜ್ಜರಗಿ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

ghmftghf

ನಿಧಿ ಆಸೆ : ಪುರಾತನ ದೇವಾಲಯದ ಶಿವಲಿಂಗ ಕದ್ದೊಯ್ದ ಖದೀಮರು

jhggg

ರಾಜ್ಯದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ : ಇಂದು 8778 ಪ್ರಕರಣಗಳು ಪತ್ತೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ರಸಗೊಬ್ಬರ ದರ ಏರಿಕೆಗೆ ರೈತರ ಆಕ್ರೋಶ

ದಯಾಮರಣಕ್ಕೆ ಅನ್ನದಾತನಿಂದ ಅರ್ಜಿ

ದಯಾಮರಣಕ್ಕೆ ಅನ್ನದಾತನಿಂದ ಅರ್ಜಿ

ಃಘ‍್್ಧೇಋಥೈಃಝಭ

ಕೃಷ್ಣಾ ನದಿ ತಟದಲ್ಲಿ ಪಲ್ಲಕ್ಕಿಗಳ ವೈಭವ

nhjfgjgbvc

ವರ್ಷದ ಹಿಂದೆ ಬೆಚ್ಚಿ ಬಿದ್ದಿತ್ತು ಗುಮ್ಮಟ ನಗರಿ

ಮನಬವಚಷಞ

ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮ ಆರಂಭ

MUST WATCH

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

udayavani youtube

News bulletin 13- 04-2021 | UDAYAVANI

udayavani youtube

ಮಂಗಳೂರಿನಲ್ಲಿ ಇಳಿಯಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್: ಪರದಾಡಿದ ಪ್ರಯಾಣಿಕರು

udayavani youtube

ಎಲ್ಲವೂ ಸುಳ್ಳು ಸುದ್ದಿ : ಸಿಡಿ ಲೇಡಿಯ ಮತ್ತೊಂದು ವಿಡಿಯೋ

udayavani youtube

Kanchipuram ಸೀರೆಗಳ ನಿಮ್ಮ Favorite Spot

ಹೊಸ ಸೇರ್ಪಡೆ

dgssd

ವಿಟ್ಲ : ಬೈಕ್‍-ಪಿಕಪ್ ಡಿಕ್ಕಿ : ಓರ್ವ ಸಾವು

hkjghjgh

ನಾಳೆಯಿಂದ ಮಹಾರಾಷ್ಟ್ರಾದ್ಯಂತ ಸೆಕ್ಷನ್ 144 ಜಾರಿ : ಸಿಎಂ ಉದ್ದವ್ ಠಾಕ್ರೆ

fhf

ರಸಗೊಬ್ಬರ ವಿಚಾರ: ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸದಾನಂದ ಗೌಡ ತಿರುಗೇಟು

jghjjty

ವಿಟ್ಲ : ಅಕ್ರಮ ಗೋವು ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು

gfhjfgj

ಮತ್ತೆ ಪೊಲೀಸ್ ಠಾಣೆಗೆ ‘ದಾಂಪತ್ಯ ಕಲಹ’ : ಪತಿ ವಿರುದ್ಧ ದೂರು ನೀಡಿದ ಚೈತ್ರಾ ಕೊಟ್ಟೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.