Udayavni Special

ಕಾನೂನು ಬಾಹಿರ ಲೇಔಟ್‌ ಮುಟ್ಟು ಗೋಲಿಗೆ ಆಗ್ರಹ


Team Udayavani, Jun 2, 2021, 8:41 PM IST

d್ಗಹಗ್ದ್ಬ್

ಮುದ್ದೇಬಿಹಾಳ: ಕಾನೂನು ಬಾಹಿರ ಲೇಔಟ್‌ ಗಳನ್ನು ಪುರಸಭೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಕಾಯ್ದೆ ಪ್ರಕಾರ ಇದ್ದ ಲೇಔಟ್‌ಗಳ ಮಾಲಿಕರಿಗೆ ತೊಂದರೆ ನೀಡಬಾರದು ಎಂದು ಪುರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ಹುಲಗಪ್ಪ ನಾಯಕಮಕ್ಕಳ, ಸುನೀಲ ಹಡಲಗೇರಿ, ಸದಾನಂದ ಮಾಗಿ ಮತ್ತಿತರರು ಮಾತನಾಡಿ, ಲೇಔಟ್‌ಗಳ 2, 3, 4ನೇ ಮಾಲೀಕರಿಗೆ ಉತಾರ ಕೊಡಬೇಕು. ಇವರಿಗೆ ವಿನಾಕಾರಣ ತೊಂದರೆ ಕೊಡಬಾರದು. ಹಿಂದೇನಾಗಿದೆಯೋ ಬೇಕಾಗಿಲ್ಲ. ಮುಂದೆಯಾದರೂ ಎಲ್ಲರೂ ಕಾಯ್ದೆ ಪ್ರಕಾರ ಇರುವಂತೆ ನೋಡಿಕೊಳ್ಳಿ.

ದಂಡ ಹಾಕಲು ಇರುವ ಅವಕಾಶ ಬಳಸಿಕೊಂಡು ಪುರಸಭೆಗೆ ಲಾಭ ಆಗುವಂತೆ ಮಾಡಿ ಪಟ್ಟಣದ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಪುರಸಭೆಯಲ್ಲಿ ಕೆಲ ಸಿಬ್ಬಂದಿ ಲಂಚ ತೆಗೆದುಕೊಂಡು ಒಳ ಬಾಗಿಲಿನಿಂದ ಉತಾರ ಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತಪಾಸಣೆ ನಡೆಸಿ ಇದನ್ನು ತಡೆಗಟ್ಟಬೇಕು.

ಇದು ಹೀಗೆಯೆ ಮುಂದುವರಿದಲ್ಲಿ ಪುರಸಭೆ ಆಡಳಿತ ಮಂಡಳಿ ಹೆಸರು ಕೆಡುತ್ತದೆ ಎಂದು ಸದಸ್ಯರಾದ ಬಸವರಾಜ ಮುರಾಳ, ಸಂಗಮ್ಮ ದೇವರಳ್ಳಿ ಆರೋಪಿಸಿದಾಗ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಅವರು ಹಾಗೇನು ನಡೆದಿದ್ದು ಕಂಡು ಬಂದಿಲ್ಲ. ಒಂದು ವೇಳೆ ಇಂಥದ್ದು ನಡೆಯುತ್ತಿದ್ದರೆ ತಡೆಗಟ್ಟಲಾಗುತ್ತದೆ ಎಂದು ಸಮಾಧಾನಪಡಿಸಲು ಯತ್ನಿಸಿದರು.

ಕೋವಿಡ್‌ ಜಾಗೃತಿ: ಕೋವಿಡ್‌-19 ನಗರ ಮೇಲ್ವಿಚಾರಕ ಎಂ.ಎಸ್‌. ಗೌಡರ ಮಾತನಾಡಿ, ಕೋವಿಡ್‌ ನಿಯಂತ್ರಿಸಲು ಜನರ ಸಹಕಾರ ಅಗತ್ಯವಾಗಿದೆ. ಪಟ್ಟಣದ ಕೆಲವು ಏರಿಯಾಗಳು ಹೈ ರಿಸ್ಕ್ ಆಗಿದ್ದು ಅಲ್ಲಿ ಹೆಚ್ಚಿನ ಕಾಳಜಿ ತೋರಿಸಬೇಕು. ಸುಧಾರಿಸಿದ ಏರಿಯಾಗಳಲ್ಲೇ ಜಾಸ್ತಿ ಪ್ರಕರಣಗಳು ಕಂಡು ಬಂದಿವೆ. ಹಳೆ ಏರಿಯಾಗಳಲ್ಲಿ ಪ್ರಕರಣ ಕಡಿಮೆ ಇದೆ. ಆಶಾ, ಆರೋಗ್ಯ ಕಾರ್ಯಕರ್ತೆಯರು ಶ್ರಮವಹಿಸಿ ನಿಯಂತ್ರಣಕ್ಕೆ ತಂದಿದ್ದಾರೆ.

ಪುರಸಭೆ ಆಡಳಿತವೂ ಹೆಚ್ಚಿನ ಕಾಳಜಿ ತೋರಿಸಿ ಪ್ರತಿಯೊಂದು ವಾರ್ಡ್‌ನಲ್ಲೂ ಕೊರೊನಾ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿ ಸಿದ ಆಡಳಿತ ಮಂಡಳಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವ್ಯಾವ ಏರಿಯಾಗಳಲ್ಲಿ ಸಮಸ್ಯೆ ಹೆಚ್ಚಾಗಿದೆಯೋ ಅಂಥ ಏರಿಯಾಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಎಲ್ಲ ಸದಸ್ಯರು, ಪೌರ ಕಾರ್ಮಿಕರು ಶ್ರಮಿಸಬೇಕು ಎಂದು ತೀರ್ಮಾನಿಸಲಾಯಿತು. ಸನ್ಮಾನ: ಸಭೆ ಆರಂಭದಲ್ಲಿ ಸರ್ಕಾರದಿಂದ ಪುರಸಭೆಗೆ ನೂತನವಾಗಿ ನಾಮನಿರ್ದೇಶಿತಗೊಂಡ ಸದಸ್ಯರಾದ ರಾಜಶೇಖರ ಹೊನ್ನುಟಗಿ, ರಾಜಶೇಖರ ಹೊಳಿ, ಹುಲಗಪ್ಪ ನಾಯಕಮಕ್ಕಳ, ಸುನೀಲ ಹಡಲಗೇರಿ ಅವರನ್ನು ಸನ್ಮಾನಿಸಲಾಯಿತು.

ಸಂತಾಪ: ಕೋವಿಡ್‌ ಮಹಾಮಾರಿಗೆ ಬಲಿಯಾದ ಪುರಸಭೆ ಮಾಜಿ ಅಧ್ಯಕ್ಷ ರಸೂಲ್‌ದೇಸಾಯಿ, ಬಸವರಾಜ ಸುಕಾಲಿ, ನೂತನವಾಗಿ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದರೂ ಅ ಧಿಕಾರ ಸ್ವೀಕರಿಸುವ ಮುನ್ನವೇ ನಿಧನರಾದ ಮನೋಹರ ತುಪ್ಪದ ಸೇರಿ ಪಟ್ಟಣ ವ್ಯಾಪ್ತಿಯಲ್ಲಿ ನಿಧನರಾದ ಇನ್ನಿತರರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಿ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಪ್ರಭಾರ ಮುಖ್ಯಾಧಿ ಕಾರಿಎಂ.ಬಿ.ಮಾಡಗಿ ಸೇರಿ ಸಿಬ್ಬಂದಿ ಸಂತಾಪ ಸೂಚಿಸಿದರು.

 

ಟಾಪ್ ನ್ಯೂಸ್

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

statue

ಕುಡುಕನಿಂದ ಗಾಂಧೀಜಿ ಪ್ರತಿಮೆ ಭಗ್ನ : ಸ್ಥಳಕ್ಕೆ ಡಿಎಸ್‌ಪಿ, ತಹಶೀಲ್ದಾರ್ ಭೇಟಿ, ಪರಿಶೀಲನೆ

730-doctors-died-of-covid-19-in-second-wave-ima-data

ಕೋವಿಡ್ ಎರಡನೇ ಅಲೆಯಿಂದಾಗಿ ದೇಶದಾದ್ಯಂತ 730 ವೈದ್ಯರನ್ನು ಕಳೆದುಕೊಂಡಿದ್ದೇವೆ : ಐಎಂಎ

ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್

ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್

289

ಕೋವಿಡ್ : ಕಾಸರಗೋಡು ಜಿಲ್ಲೆಯಲ್ಲಿ ವಾರ್ಡ್ ಮಟ್ಟದಲ್ಲಿ ನಿಯಂತ್ರಣ

ಕಲಬುರಗಿ: ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೋವಿಡ್ ಸೋಂಕಿತೆ ಸಾವು

ಕಲಬುರಗಿ: ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೋವಿಡ್ ಸೋಂಕಿತೆ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸದ್ಗಹಗತರತಗಹಗ್

ಹೆಚ್ಚಿನ ಬೆಲೆಗೆ ಗೊಬ್ಬ ರ ಮಾರಿದರೆ ಕ್ರಮ

cats

ಎಲ್ಲ ರಂಗದಲ್ಲೂ ಮಹಿಳೆಯೇ ಸುಲಭ ಗುರಿ ; ನಟಿ ರಾಗಿಣಿ

ಎರತಯುಯತರೆಡೆರತಯು

ಜವಳಿ ವ್ಯಾಪಾರಕ್ಕೂ ಅನುಮತಿಸಲು ಮನವಿ

sertytrewrtyu

ಕೇಂದ್ರ-ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ

54

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

MUST WATCH

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

16-13

ಬಡವರ ಮರಳು ಜಪ್ತಿಗೆ ಅವಕಾಶ ಕೊಡಲ್ಲ

16-12

ನೈಜ ಫಲಾನುಭವಿಗಳಿಗೆ ಯೋಜನೆ ಲಾಭ ಸಿಗಲಿ

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?

16-11

ಮಾನವೀಯ ಮೌಲ್ಯ ಪುನರುತ್ಥಾನಕ್ಕೆ ಪಾದಯಾತ್ರೆ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.