Udayavni Special

ಪ್ರತಿಭೆ ಬೆಳಕಿಗೆ ತರುವುದು ಎಲ್ಲರ ಜವಾಬ್ದಾರಿ; ನ್ಯಾಮಗೌಡ

ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಬೇಕು

Team Udayavani, Feb 9, 2021, 5:59 PM IST

ಪ್ರತಿಭೆ ಬೆಳಕಿಗೆ ತರುವುದು ಎಲ್ಲರ ಜವಾಬ್ದಾರಿ; ನ್ಯಾಮಗೌಡ

ವಿಜಯಪುರ: ಸಮಾಜದ ಬೆಳವಣಿಗೆಗೆ ಸಮುದಾಯದ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಆರ್ಥಿಕವಾಗಿ ಬೆಳಕಿಗೆ ತರುವಲ್ಲಿ ಸಮುದಾಯಗಳ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಮೇಲ್ಮನೆ ಮಾಜಿ ಶಾಸಕ ಜಿ.ಎಸ್‌. ನ್ಯಾಮಗೌಡ ಅಭಿಪ್ರಾಯಪಟ್ಟರು. ನಗರದ ವನಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಾಣಿಗ ಸಮಾಜದ 11ನೇ ವಾರ್ಷಿಕೋತ್ಸವದ ಅಂಗವಾಗಿ ಎಸ್ಸೆಸ್ಸೆಲ್ಸಿ , ಪಿಯುಸಿಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಣಿಗ ಸಮಾಜ ಮೊದಲು ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸಮಾಜದ ಏಳ್ಗೆ ಜೊತೆಗೆ ಮುಖ್ಯವಾಹಿನಿಗೆ ತರುವಲ್ಲಿ ಸಮಾಜದ ಜವಾಬ್ದಾರಿ ಅತ್ಯಂತ ಮಹತ್ತರವಾಗಿದೆ ಎಂದರು. ಪ್ರತಿಯೊಬ್ಬರು ಶೈಕ್ಷಣಿಕ ಸಾಧನೆ ಜೊತೆಗೆ ದೇಶಕ್ಕೆ
ಅನ್ನ ನೀಡುವ ಕೃಷಿ ಉದ್ಯೋಗದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜ ಪ್ರತಿ ವ್ಯಕ್ತಿಯೂ ನಮ್ಮ ಸಮಾಜವನ್ನು ಪ್ರೀತಿಸುವುದರ ಮೂಲಕ ಇತರೆ
ಸಮಾಜಗಳನ್ನು ಆದರದಿಂದ ಗೌರವಿಸಬೇಕಾದದ್ದು ನಮ್ಮ ಸಮಾಜದ ಧ್ಯೇಯವಾಗಬೇಕು. ಅಂದರೆ ಮಾತ್ರ ಇತರ ಜಾತಿಗಳ ಬೆಂಬಲ ಎಲ್ಲ ಜಾತಿಗಳಿಗೆ
ಅವಶ್ಯಕವಾಗಿದೆ ಎಂದರು.

ಗದಗ ಜಿಲ್ಲೆಯ ಹಿರಿಯ ಸಾಹಿತಿ ವೀರನಗೌಡ ಮರಿಗೌಡರ ಮಾತನಾಡಿ, ಶ್ರೇಷ್ಠ ಶ್ರಮ ಜೀವಿಗಳನ್ನು ಹೊಂದಿರುವ ಗಾಣಿಗರು ಸಮಾಜದಲ್ಲಿ ಹಲವಾರು ಜಾತಿ ವರ್ಗಗಳು ತಮ್ಮ ಜಾತಿ ಬಗ್ಗೆ ಪ್ರೀತಿ ಇರಿಸಿಕೊಂಡಿದ್ದಾರೆ. ಜೊತೆಗೆ ಇತರೆ ಸಮುದಾಯಗಳ ಜನರೊಂದಿಗೆ ಸೌಹಾರ್ದಯುತವಾಗಿ ಬೆರೆಯುವ ಸೌಜನ್ಯದ ಗುಣ ಹೊಂದಿದೆ. ಗಾಣಿಗ ಸಮಾಜ ಪುರಾತನ ಕಾಲದಿಂದಲೂ ತನ್ನದೇ ವಿಶಿಷ್ಟ ಇತಿಹಾಸ ಹೊಂದಿದೆ. ಒಂದೊಂದು ಜಾತಿಗಳು, ವರ್ಗಗಳು ತಮ್ಮ ಕಾಯಕ ವೃತ್ತಿಯಿಂದ ಬೆಳೆಕಿಗೆ ಬಂದಿವೆ. ಗಾಣ ಹಾಕಿಕೊಂಡು ವೃತ್ತಿಯಿಂದ ಮುಂದೆ ಬಂದವರು. ಆದ್ದರಿಂದ ನಮ್ಮ ಸಮುದಾಯವನ್ನು ಆರ್ಥಿಕವಾಗಿ ಬೆಳೆಯಬೇಕಾದರೆ ಅನ್ಯ ಜಾತಿಯ ಸಹಕಾರ ಬೆಂಬಲ ಅಗತ್ಯವಾಗಿದೆ ಎಂದರು.

ಬಿಜೆಪಿ ಯುವ ಘಟಕದ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿ, ಸಮಾಜ ಸಮುದಾಯ ಕಟ್ಟುವಲ್ಲಿ ಎಲ್ಲರಲ್ಲಿ ಒಗ್ಗಟ್ಟತನ ಕ್ರಿಯಾಶೀಲತೆ, ಸರಳತೆ, ಮಾನವೀಯತೆ ಅತಿ ಅವಶ್ಯ. ಸಮಾಜವನ್ನು ನಾವು ಗೌರವಿಸಿದರೆ ಆ ಸಮುದಾಯ ನಮ್ಮನ್ನು ಗೌರವಿಸುತ್ತದೆ. ಆರ್ಥಿಕ, ಶೈಕ್ಷಣಿಕ, ಸಮಾಜಿಕವಾಗಿ ಬೆಳೆಯಲು ಎಲ್ಲರಲ್ಲಿ ಪರಸ್ಪರ ಹೊಂದಾಣಿಕೆ ಮುಖ್ಯ. ಸಮಾಜದ ಬಡ ಪ್ರತಿಭಾವಂತರ ಆರ್ಥಿಕ ನೆರವಿಗಾಗಿ 1.11 ಲಕ್ಷ ರೂ. ದೇಣಿಗೆ ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯಿಂದ ದೇಶದ ದುರವ್ಯವಸ್ಥೆ ಆವರಿಸಿದ್ದು, ಸಾಮಾಜಿಕ ವ್ಯವಸ್ಥೆ ಕಲುಷಿತಗೊಂಡಿದೆ. ಆದ್ದರಿಂದ ಅತಿಯಾದ ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಜ್ಞಾನ ಹೆಚ್ಚುತ್ತದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಬೇಕು ಎಂದರು. ಗಾಣಿಗ ಸಮಾಜದ ಪೀಠಾಧ್ಯಕ್ಷ ಡಾ| ಜಯಬಸವಕುಮಾರ ಶ್ರೀ, ಕೊಲ್ಹಾರದ ಕಲ್ಲಿನಾಥ ಶ್ರೀ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ರಮೇಶ ಭೂಸನೂರ, ಬಿ.ಜಿ. ಪಾಟೀಲ
(ಹಲಸಂಗಿ), ಅಖೀಲ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು.

ಮಲಕಪ್ಪ ಮೊಸಲಗಿ, ನಿಂಗರಾಜ ಬಗಲಿ, ಸಿದ್ದಲಿಂಗ ಹಂಜಗಿ, ಮಲ್ಲಣ್ಣ ಮನಗೂಳಿ, ಎಂ.ಎನ್‌. ಬಿಸ್ಟಗೊಂಡ, ಪರಮಾನಂದ ಯಾಳವಾರ, ಪ್ರಕಾಶ ಬಗಲಿ, ಬಂಡೆಪ್ಪ ತೇಲಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮಹಾದೇವ ಆಹೇರಿ, ಬಿ.ಪಿ. ಸರನಾಡಗೌಡ, ಆರ್‌.ಎನ್‌. ಸಜ್ಜನ, ಎಸ್‌ .ಜಿ.ಪಾಟೀಲ, ಅಶೋಕ ನ್ಯಾಮಗೌಡ ಇದ್ದರು. ಡಾ| ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿದರು. ಎಸ್‌.ಬಿ. ಪುಟ್ಟಿ ನಿರೂಪಿಸಿದರು. ಎಂ.ಡಿ. ಹೆಬ್ಬಿ ವಂದಿಸಿದರು.

ಟಾಪ್ ನ್ಯೂಸ್

MMMMMM movie

ಆಸ್ಕರ್ ರೇಸಿನಲ್ಲಿ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ ಸಿನಿಮಾ

Prosperous Maharashtra, Karnataka hide a disparity within. Development is not for all: Study

ಮಹಾರಾಷ್ಟ್ರ ಹಾಗೂ ಕರ್ನಾಟಕಗಳ ಅಸಮತೋಲನಗಳನ್ನು ಮರೆಮಾಚುವ ಸಮೃದ್ಧಿ : ಅಧ್ಯಯನ

Kim

ಪತಿಗೆ ಡಿವೋರ್ಸ್ ನೀಡಿದ ಮರುದಿನವೇ ಬೆತ್ತಲೆ ಫೋಟೊ ಹರಿಬಿಟ್ಟ ನಟಿ ಕಿಮ್

ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ:ಅಶ್ವತ್ಥನಾರಾಯಣ

ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ಮಾದರಿಯಲ್ಲೇ ಕೃಷಿ ವಿವಿ ಪರಿವರ್ತನೆ:ಅಶ್ವತ್ಥನಾರಾಯಣ

Hrutik Roshan

‘ಫೇಕ್ ಇಮೇಲ್ ಪ್ರಕರಣ…ಪೊಲೀಸ್ ಠಾಣೆಗೆ ನಟ ಹೃತಿಕ್ ಹಾಜರು   

ಸಂಪಾಜೆ: ಕಾಡಾನೆ ದಾಳಿಗೆ 40 ಅಡಿಕೆ ಮರ, 2 ತೆಂಗಿನಮರ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

ಸಂಪಾಜೆ: ಕಾಡಾನೆ ದಾಳಿಗೆ 40 ಅಡಿಕೆ ಮರ, 2 ತೆಂಗಿನಮರ ನಾಶ; ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ

ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27-11

ಕಾಂಗ್ರೆಸ್‌ಮನೆಕದ ತಟ್ಟಿದ ಮನಗೂಳಿ ಪುತ್ರ ಅಶೋಕ

ಜಲಜೀವನದಿಂದ ಮನೆ ಮನೆಗೆ ನೀರು

ಜಲಜೀವನದಿಂದ ಮನೆ ಮನೆಗೆ ನೀರು

ಸಮಿತಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ

ಸಮಿತಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ

ವಿಜಯಪುರ ಜಿ.ಪಂ. ಬಳಿ ಗ್ಯಾಸ್ ಸಿಲಿಂಡರ್ ಪೈಪ್ ಗೆ: ಬೆಂಕಿ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ

ವಿಜಯಪುರ ಜಿ.ಪಂ. ಬಳಿ ಗ್ಯಾಸ್ ಸಿಲಿಂಡರ್ ಪೈಪ್ ಗೆ ಬೆಂಕಿ: ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ

Jolle

ಸಾರ್ವಜನಿಕ ಸಮಸ್ಯೆ ಪರಿಹಾರಕ್ಕೆ ಆದ್ಯತೆ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

27-11

ಕಾಂಗ್ರೆಸ್‌ಮನೆಕದ ತಟ್ಟಿದ ಮನಗೂಳಿ ಪುತ್ರ ಅಶೋಕ

27-10

ರಸ್ತೆ ಬದಿಯಲ್ಲೇ ಹೋಂವರ್ಕ್‌ ಮಾಡುವ ಮಕ್ಕಳು

ಕಸ ವಿಲೇವಾರಿ ಅಸಮರ್ಪಕ: ದೂರು

ಕಸ ವಿಲೇವಾರಿ ಅಸಮರ್ಪಕ: ದೂರು

27-9

ಜಿಲ್ಲಾಡಳಿತ ಮೌನಕ್ಕೆ ಭುಗಿಲೆದ್ದ ಆಕ್ರೋಶ

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

ತಹಶೀಲ್ದಾರ್‌ಗೂ ಕ್ಯಾರೇ ಎನ್ನದ ಐಆರ್‌ಬಿ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.