ಕುಡಿಯಲು ನೀರು ಕೊಡಲಾಗದ ಮಹಾರಾಷ್ಟ್ರಕ್ಕೆ ಕನ್ನಡದ ನೆಲಬೇಕಂತೆ; ಎಂ.ಬಿ.ಪಾಟೀಲ್ ಕಿಡಿ
ಕನ್ನಡಿಗರನ್ನು ಕೆಣಕುವ ಕೆಲಸ: ಹರಿಹಾಯ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
Team Udayavani, Nov 26, 2022, 10:03 PM IST
ವಿಜಯಪುರ: ಮಹಾರಾಷ್ಟ್ರದ ನೆಲದಲ್ಲಿರುವ ಕನ್ನಡ ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಯೋಗ್ಯತೆ ಇಲ್ಲದ ಮಹಾರಾಷ್ಟ್ರ ಸರ್ಕಾರ ಕನ್ನಡದ ಗ್ರಾಮಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇಂತ ಸ್ಥಿತಿಯಲ್ಲಿ ರಾಜಕೀಯ ಕಾರಣಕ್ಕೆ ಕನ್ನಡದಲ್ಲಿರುವ ನಗರಗಳು ಬೇಕೆಂದು ಮಹಾರಾಷ್ಟ್ರ ನಾಯಕರು ಕನ್ನಡಿಗರನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗಡಿಯಲ್ಲಿ ಮಹಾರಾಷ್ಟ್ರದ ನೆಲದಲ್ಲಿ ಇರುವ ಕನ್ನಡ ಹಳ್ಳಿಗಳಲ್ಲಿ ಕನ್ನಡಿಗರು ಅತ್ಯಂತ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮಹಿಷಾಳ ಏತ ನೀರಾವರಿ ಯೋಜನೆಗಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಸ್ಪಂದಿಸುವ ಸೌಜನ್ಯ ಮಹಾರಾಷ್ಟ್ರ ಸರ್ಕಾರ ಮಾಡಿಲ್ಲ. ಈ ಬಗ್ಗೆ ನಾವು ಮಾತಮಾಡಬಾರದು ಎಂದಾದರೂ ಮಹಾರಾಷ್ಟ್ರ ನಾಯಕರ ವರ್ತನೆಗಾಗಿ ಕನ್ನಡಿಗರ ಪರ ಧ್ವನಿ ಎತ್ತಲೇ ಬೇಕಿದೆ ಎಂದರು.
ವಿಜಯಪುರ ಜಿಲ್ಲೆಯ ಗಡಿಯಲ್ಲಿ ಇರುವ ಕನ್ನಡದ ಗ್ರಾಮಗಳ ಜನರ ದುಸ್ಥಿತಿ ನೋಡಲಾಗದೇ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾನವೀಯ ನೆಲೆಯಲ್ಲಿ ತುಬಚಿ-ಬಬಲೇಶ್ವರ ಯೋಜನೆ ಕೊನೆ ಭಾಗದ ನೀರನ್ನು ಮಹಾರಾಷ್ಟ್ರದ ಗಡಿ ಗ್ರಾಮಗಳಿಗೆ ಹರಿಸುವಂತೆ ಮಾಡಿದ್ದೇ. ಗುಡ್ಡಾಪುರ, ಸಂಖ, ತಿಕ್ಕುಂಡಿ ಭಾಗದಲ್ಲಿ ಕನ್ನಡಿಗರು ಮೂಲಭೂತ ಸೌಕರ್ಯಗಳಿಲ್ಲದೇ ಅತ್ಯಂತ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಬೆಳಗಾವಿ, ಕಾರವಾರ ಬೇಕು ಎಂದು ಅನಗತ್ಯವಾಗಿ ಭಾಷಾ ಸಾಮರಸ್ಯ ಹಾಳುಮಾಡುವ ಕೆಲಸವನ್ನು ಮಹಾರಾಷ್ಟ್ರ ನಾಯಕರು ಬಿಡಬೇಕು. ರಾಜಕೀಯ ಪ್ರೇರಿತ ಪ್ರಚೋದನಾತ್ಮಕ ಹೇಳಿಕೆ ನೀಡುವ ಮೊದಲು ತನ್ನ ನೆಲದಲ್ಲಿರುವ ಕನ್ನಡಿಗರಿಗೆ ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣದಂಥ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜಿಸಿ, ಅನುಷ್ಠಾನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್
ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ
ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ
ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಯಲ್ಲಾಪುರ: ಹೆಣ್ಣು ಚಿರತೆ ಅಸಹಜ ಸಾವು, ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
MUST WATCH
ಹೊಸ ಸೇರ್ಪಡೆ
ರಣಜಿ ಟ್ರೋಫಿ ಸೆಮಿಫೈನಲ್: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು
ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್
ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ