ಕೃಷ್ಣೆಗೂ ನೀಡಿ ಕಾವೇರಿಯಷ್ಟೇ ಮಹತ್ವ


Team Udayavani, Aug 8, 2017, 3:32 PM IST

08-BJP-4.jpg

ಆಲಮಟ್ಟಿ: ರಾಜ್ಯವನ್ನಾಳಿದ ಸರ್ಕಾರಗಳು ಕೃಷ್ಣೆ ಹಾಗೂ ಕಾವೇರಿಗಳೆರಡೂ ಕಣ್ಣುಗಳು ಹೇಳುತ್ತವೆ. ಆದರೆ ಕಾರ್ಯರೂಪದಲ್ಲಿ ಕಾವೇರಿಗೆ ಕೊಡುವ ಮಹತ್ವವನ್ನು ಕೃಷ್ಣೆಗೆ ಕೊಡುತ್ತಿಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆರೋಪಿಸಿದರು.

ಸೋಮವಾರ ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕೃಷ್ಣಾ ಜಲನಿಧಿಗೆ ಬಾಗಿನ ಅರ್ಪಣೆಗೂ ಮುನ್ನ ನಡೆದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿಯೇ ಬೃಹತ್‌ ನೀರಾವರಿ ಯೋಜನೆಗಳಲ್ಲೊಂದಾದ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾಗಿ ಅರ್ಧ ಶತಮಾನ ಕಳೆದರೂ ಕೂಡ  ಇನ್ನೂವರೆಗೆ ಯೋಜನೆ ಪೂರ್ಣಗೊಳ್ಳದಿರಲು ರಾಜ್ಯವನ್ನಾಳಿದ ಸರ್ಕಾರಗಳೇ ಕಾರಣವಾಗಿವೆ. ಉತ್ತರ ಕರ್ನಾಟಕದ ಸಮಗ್ರ ನೀರಾವರಿಗಾಗಿಯೇ ಯೋಜಿಸಲಾದ ಯೋಜನೆ ಇನ್ನೂವರೆಗೆ ಪೂರ್ಣಗೊಳ್ಳದಿರುವುದರಿಂದ ಹಾಗೂ ಸಕಾಲಿಕವಾಗಿ ಸಮರ್ಪಕ ಮಳೆ ಸುರಿಯದಿರುವುದರಿಂದ ರೈತಾಪಿ ವರ್ಗ ತೀವ್ರ ತೊಂದರೆಗೀಡಾಗುವಂತಾಗಿದೆ ಎಂದರು.

ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ನದಿಯೆಂದರೆ ಕೇವಲ ಕಾವೇರಿ ನದಿ ಎಂದು ತಿಳಿದಿದ್ದಾರೆ ಇದು ಸರಿಯಲ್ಲ. ಎರಡೂ ನದಿಗಳನ್ನು ಸಮಾನ ದೃಷ್ಟಿಯಲ್ಲಿ ಕಾಣಬೇಕು ಮತ್ತು ಆಲಮಟ್ಟಿ ಜಲಾಶಯದಲ್ಲಿ 123.81 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಇದರ ಅರ್ಧಕ್ಕಿಂತಲೂ ಕಡಿಮೆ ನೀರು
ಸಂಗ್ರಹವಾಗುವ ಕಾವೇರಿ ಬಗ್ಗೆ ಇರುವ ಕಾಳಜಿಯನ್ನು ಬೃಹತ್‌ ನೀರಾವರಿ ಯೋಜನೆ ಕೃಷ್ಣೆಗೂ ಆದ್ಯತೆ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಂಡು ಇದರ ಲಾಭ ರೈತರಿಗೆ ಸಕಾಲದಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು.

ರೈತ ಮುಖಂಡ ಪಂಚಪ್ಪ ಕಲುºರ್ಗಿ ಮಾತನಾಡಿ, ಉತ್ತರ  ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಈ ಭಾಗ ಸಂಪೂರ್ಣ ನೀರಾವರಿಯಾಗಬೇಕು. ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡದೇ ಒಂದೇ ಧ್ವನಿಯಲ್ಲಿ ಸರ್ಕಾರವನ್ನು ಪಕ್ಷಾತೀತವಾಗಿ ಎಚ್ಚರಿಸಬೇಕು ಎಂದರು. ಸಾನ್ನಿಧ್ಯವಹಿಸಿದ್ದ ನಿಡಗುಂದಿ ರುದ್ರಮುನಿ ಸ್ವಾಮೀಜಿ ಮಾತನಾಡಿ, ರೈತರು ಜಾಗೃತರಾಗಿ ನೀರು ಹಾಗೂ ಮಣ್ಣು ಬಳಕೆ ಬಗ್ಗೆ ಅರಿತುಕೊಂಡು ನಡೆಯಬೇಕು ಹಾಗೂ ಜಾನುವಾರುಗಳ ಸಾಕಣೆಯಿಂದ ಹಲವಾರು ಬಗೆಯಲ್ಲಿ ಲಾಭಗಳಿವೆ ಎಂದರು.

ರಾಮಲಿಂಗೆಶ್ವರ ದೇವಸ್ಥಾನದಲ್ಲಿ ಸುಮಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ವಿವಿಧ ವಾದ್ಯವೈಭವಗಳೊಂದಿಗೆ ದೇವಸ್ಥಾನದಿಂದ ಚಂದ್ರಮ್ಮದೇವಿ ದೇವಸ್ಥಾನ ಮಾರ್ಗವಾಗಿ ಸುಮಂಗಲೆಯರಿಂದ  ರ್ಣಕುಂಭ ಮೇಳದೊಂದಿಗೆ ಕೃಷ್ಣೆಯ ಹಿನ್ನೀರು ಪ್ರದೇಶಕ್ಕೆ ತೆರಳಿ ಗಂಗಾಪೂಜೆ ನೆರವೇರಿಸಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯದ ಜಲನಿಧಿಗೆ ಬಾಗಿನ ಅರ್ಪಿಸಲಾಯಿತು. 

ಪೂಜಾ ಕೈಂಕರ್ಯವನ್ನು ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಾಮಾಚಾರಿ ಚಿಮ್ಮಲಗಿ ಹಾಗೂ ಶ್ರೀಶೈಲಯ್ಯ ಹಿರೇಮಠ ನಡೆಸಿಕೊಟ್ಟರು. ಸಾಹಿತಿ ಅರವಿಂದ ಕೊಪ್ಪ, ಅಶೋಕ ಹಂಚಲಿ, ದಸ್ತಗೀರ ಸಾಲೋಡಗಿ, ಶಾಂತಪ್ಪ ಮನಗೂಳಿ, ಸಿದ್ದಲಿಂಗಚೌಧರಿ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಜಿ.ಸಿ.ಮುತ್ತಲದಿನ್ನಿ, ಅಂದಾನಿ ತೋಳಮಟ್ಟಿ, ರಮೆಶ ಆಲಮಟ್ಟಿ, ರಾಮುಜಗತಾಪ, ಮಕಬುಲ ಬಾಗವಾನ, ರಾಜು ಬೋರಣ್ಣವರ, ಪ್ರಕಾಶ ಕಾರಕೂನ, ನಿಂಗರಾಜ ಆಲೂರ, ಲಕ್ಷ್ಮೀ ದೇಸಾಯಿ, ವಿಜಯಾ ಮುಚ್ಚಂಡಿ, ವಿದ್ಯಾವತಿ ಪಟ್ಟಣಶೆಟ್ಟಿ, ಲಕ್ಷ್ಮೀ ಸಜ್ಜನ ಸೇರಿದಂತೆ ಆಲಮಟ್ಟಿ, ಅರಳದಿನ್ನಿ, ಬೇನಾಳ, ವಡವಡಗಿ, ಯರಝರಿ, ಯಲಗೂರ, ಕಾಳಗಿ, ಬಳಬಟ್ಟಿ ಗ್ರಾಮಗಳ ರೈತರು ಭಾಗವಹಿಸಿದ್ದರು.
 

ಟಾಪ್ ನ್ಯೂಸ್

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

Tesla’s market cap crosses $1 trillion

ಟೆಸ್ಲಾ ಮಾರುಕಟ್ಟೆ ಮೌಲ್ಯ 1ಲಕ್ಷ ಕೋಟಿ ರೂ. ದಾಟಿದೆ..!

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

siddaramaiah

ಜನತಾ ನ್ಯಾಯಾಲಯದ ಮುಂದೆ ಚರ್ಚೆಗೆ ಭಯವೇಕೆ : ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

14govt-hospital

ಬಡವರಿಗೆ ವರವಾದ ಸರ್ಕಾರಿ ಆಸ್ಪತ್ರೆ

730

ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು: ಸಚಿವ ವಿ.ಸೋಮಣ್ಣ

12

ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸುವೆ

hdk

1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

MUST WATCH

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

ಹೊಸ ಸೇರ್ಪಡೆ

bhagavanth-kubha

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

21school

ಊಟಕ್ಕಾಗಿ 1ಕಿ.ಮೀ ನಡೆಯುತ್ತಿದ್ದ ಮಕ್ಕಳು: ಕೊನೆಗೂ ಬಂತು ಬಿಸಿಯೂಟ

ಮೈಸೂರು ಆರ್ಟಿಸ್ಟ್‌ ಅಸೋಸಿಯೇಷನ್‌ನಿಂದ ಸಾಮೂಹಿಕ ನಾಡಗೀತೆ

ಅನಂತಸ್ವಾಮಿ ಗೀತೆಯನ್ನೇ ನಾಡಗೀತೆಯಾಗಿ ಘೋಷಿಸಿ

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

20lake

ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.