ಕೊರವರಿಗೆ ಬೇಕು ಸರ್ಕಾರದ ನೆರವು

Team Udayavani, Mar 29, 2018, 3:23 PM IST

vij-1.jpg

ತಾಳಿಕೋಟೆ: ಬುಟ್ಟಿ ಹೆಣೆಯುವದೇ ತಮ್ಮ ಉದ್ಯೋಗ ರೂಪಿಸಿಕೊಳ್ಳುತ್ತ ಈ ಹಿಂದಿನಂತೆ ಸಾಗಿ ಕರ್ನಾಟಕದಲ್ಲಿ ವಲಸೆ ಬಂದಿದ್ದ ಆಂಧ್ರದ ಕೆಲವು ಕೊರವ ಜನಾಂಗದ ಕುಟುಂಬಗಳು ರಾಜ್ಯ ಸರ್ಕಾರದ ಸಹಾಯ ಅಪೇಕ್ಷಿಸುತ್ತಿರುವದು ಇತ್ತೀಚಿ‌ಗೆ ಪತ್ರಿಕೆ ಸಂಪರ್ಕಿಸಿದಾಗ ಬೆಳಕಿಗೆ ಬಂದಿದೆ.

ಕಳೆದ 10 ವರ್ಷಗಳಿಂದ ಆಂಧ್ರದ ನೆಲ್ಲೂರ ಗ್ರಾಮದವರಾದ ರಾಮು ನರಸಯ್ಯ ನೆಲ್ಲೂರ ಅವರು ಈಗ ತಾಳಿಕೋಟೆ ಪ್ರವಾಸಿ ಮಂದಿರದ ಪಕ್ಕದ ಫುಟ್‌ಪಾತ್‌ನಲ್ಲಿ ಬಿಸಿಲು ಚಳಿ ಎನ್ನದೇ ತಮ್ಮ ಬುಟ್ಟಿ ಹೆಣೆಯುವ ವೃತ್ತಿಯನ್ನು ತಮ್ಮ ಕುಟುಂಬದೊಂದಿಗೆ ಮುಂದುವರಿಸಿಕೊಂಡು ಹೊರಟಿದ್ದಾರೆ. ಪತ್ನಿ ಪೋಲಮ್ಮ ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರನಿದ್ದಾನೆ. ಗಂಡು ಮಗು ಹುಟ್ಟಿನಿಂದಲೇ ಮೂಗನಾಗಿದ್ದಾನೆ.

ಬುಟ್ಟಿ ಹೆಣೆಯುವ ಉದ್ಯೋಗದಲ್ಲಿ ಖಜೂರು ಕಟ್ಟಿಗೆ ಹಾಗೂ ಪ್ಲಾಸ್ಟಿಕ್‌ ವೈರ್‌ ಬಳಸಿಕೊಂಡು ಪ್ಲಾವರ್‌ ಬುಟ್ಟಿ, ಬಟ್ಟೆ ಹಾಕುವ ಬುಟ್ಟಿ, ರೊಟ್ಟಿ ಬುಟ್ಟಿ, ಕಾಯಪಲ್ಲೆ ಹಾಕುವ ಬುಟ್ಟಿ, ಪೂಜೆಗಾಗಿ ಕೊಂಡೊಯ್ಯುವ ಬುಟ್ಟಿ ಹೀಗೆ ನಾನಾ ತರಹದ ಸುಂದರವಾಗಿ ಹೆಣೆಯುವುದರೊಂದಿಗೆ ತಮ್ಮ ಕಲೆ ಪ್ರದರ್ಶಸಿ ಅಡ್ಡ ದುಡ್ಡಿಗೆಯಂತೆ ಇಡಿ ಈ ಕುಟುಂಬ ತುತ್ತಿನ ಚೀಲ ತುಂಬಿಕೊಳ್ಳಲು ತಮ್ಮ ಪುರಾತನ ಕಾಯಕದಲ್ಲಿಯೇ ತೊಡಗಿದ್ದಾರೆ. 

ಈಗಾಗಲೇ ಈ ಕುಟುಂಬ ಕಲಬುರಗಿ, ಇಂಡಿ, ವಿಜಯಪುರ, ಬಾಗಲಕೋಟೆ, ರಾಯಚೂರುಗಳಲ್ಲಿ ಸಂಚರಿಸಿ ತಾಳಿಕೋಟೆಯಲ್ಲಿ ವಾಸವಾಗಿ ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಇವರ ಕುಟುಂಬದವರಂತೆ ಆಂಧ್ರಪ್ರದೇಶದ ಕೊರವ ಜಾತಿ ಜನಾಂಗದವರು ಮುದ್ದೇಬಿಹಾಳ, ಬಸವನಬಾಗೇವಾಡಿ, ಲಿಂಗಸ್ಗೂರ, ವಿಜಯಪುರ ಸೇರಿದಂತೆ ಮೊದಲಾದ ನಗರ ಪ್ರದೇಶಗಳ ಹೊರ ವಲಯದಲ್ಲಿ ವಾಸಿಸುತ್ತ ತಮ್ಮ ಕಾಯಕದಲ್ಲಿ ತೊಡಗಿದ್ದಾರೆಂದು ರಾಮು ನೆಲ್ಲೂರ ತಿಳಿಸಿದ್ದಾರೆ.

ತಮ್ಮ ಜನಾಂಗದ ಕುಟುಂಬದವರಿಗೆ ಗುರುತಿಸುವಂತಹ ಕಾರ್ಯ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮಾಡಿಲ್ಲ ಎಂಬ ಕೊರಗು ಕೋರವ ಜನಾಂಗದಲ್ಲಿ ಕಾಡಲಿಕ್ಕೆ ಹತ್ತಿದೆ. ಇಂತಹ ಉದ್ಯೋಗ ಅರಸಿಕೊಂಡು ಬಂದ ಕೊರವ ಜನಾಂಗದ ಕುಟುಂಬಗಳಿಗೆ ವಾಸಿಸಲು ಸರ್ಕಾರ ಮನೆಯನ್ನು ನೀಡಿದರೆ ತಮ್ಮ ಉದ್ಯೋಗದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ದೊರಕಿಸಿಕೊಡಲು ಅನುಕೂಲವಾಗಲಿದೆ. 10, 15 ವರ್ಷಗಳಿಂದ ಈ ರಾಜ್ಯದಲ್ಲಿ ಉದ್ಯೋಗ ಅರಿಸಿಕೊಂಡು ಬಂದು ಉದ್ಯೋಗ ದೊರಕದ ಕಾರಣದಿಂದಲೇ ತಮ್ಮ ಕಲೆಯ ಬುಟ್ಟಿ ಹೆಣೆಯುವ ಕಾಯಕದಲ್ಲಿ ಮುಂದುವರಿಯಲು ಕಾರಣವಾಗಿದೆ ಎನ್ನುತ್ತಾರೆ ರಾಮು ನೆಲ್ಲೂರ.

ಬುಟ್ಟಿ ಹೆಣೆಯುವ ಕಲೆ ಮುಂದುವರಿಸಿಕೊಂಡು ಮುನ್ನಡೆದ ನಮ್ಮ ಕುಟುಂಬದವರಿಗೆ ಇಲ್ಲಿವರೆಗೂ ಚುನಾವಣೆಯ ಗುರುತಿನ ಚೀಟಿಯಿಲ್ಲ, ಆಧಾರ್‌ ಕಾರ್ಡ್‌, ರೇಶನ್‌ ಕಾರ್ಡ್‌ ಇಲ್ಲವೆಂದು ಅಳಲು ತೋಡಿಕೊಂಡರು. ತಮ್ಮ ಕಲೆಯನ್ನೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಕೊರವ ಜನಾಂಗದ ನಿರ್ಗತಿಕರನ್ನು ಸರ್ಕಾರ ಗುರುತಿಸಿ ಸಹಾಯ ಹಸ್ತ ಚಾಚಬೇಕಿದೆ.

ಜಿ.ಟಿ. ಘೋರ್ಪಡೆ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.