Udayavni Special

ಕುಮಾರಣ್ಣನಿಂದ ಆಂಧ್ರಕ್ಕೆ ಕೃಷ್ಣೆ ನೀರು


Team Udayavani, Feb 10, 2019, 11:05 AM IST

vij-1.jpg

ವಿಜಯಪುರ: ಸಮಗ್ರ ಕರ್ನಾಟಕ ಕುರಿತು ಮಾತನಾಡುತ್ತಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಯೋಜನೆ ನಿರ್ದಿಷ್ಟ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಜಿಲ್ಲೆಗೆ ತುರ್ತು ಅಗತ್ಯ ಇರುವ ನೀರಾವರಿಗೆ ಆದ್ಯತೆ ನೀಡದ ಪರಿಣಾಮ ರಾಜ್ಯದ ಪಾಲಿನ ಕೃಷ್ಣೆ ನೀರು ಆಂಧ್ರಪ್ರದೇಶದ ಪಾಲಾಗುತ್ತಿದೆ.

ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಸೇರದಂತೆ ಉತ್ತರ ಕರ್ನಾಟಕಕ್ಕೆ ಕೃಷ್ಣೆ ಜೀವ ನದಿ ಎನಿಸಿದೆ. ಕೃಷ್ಣಾ ಕೊಳ್ಳದಲ್ಲಿ ರಾಜ್ಯದ ಪಾಲಿನ 130 ಟಿಎಂಸಿ ನೀರು ಬಳಸಿಕೊಂಡು ನೀರಾವರಿ ಮಾಡಿಕೊಳ್ಳಲು ಯಾವುದೇ ತಕರಾರುಗಳಿಲ್ಲ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ತುರ್ತಾಗಿ ಆಗಬೇಕಿರುವುದು ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಗೇಟ್‌ಗಳನ್ನು 519 ಮೀ.ನಿಂದ 524 ಮೀ.ವರೆಗೆ ಎತ್ತರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಇದಾಗದ ಹೊರತು ನೀರಾವರಿ ಕೇವಲ ಭಾಷಣದಲ್ಲಿ ಸಾಧನೆ ಅಗಲಿದೆ. ರಾಜ್ಯದ ಪಾಲಿನ ನೀರು ಮಾತ್ರ ಆಂಧ್ರಕ್ಕೆ ಹರಿಯುತ್ತಿದೆ.

ಜಿಲ್ಲೆಯವರೇ ಆದ ಡಾ| ಎಂ.ಬಿ. ಪಾಟೀಲ ಜಲ ಸಂಪನ್ಮೂಲ ಸಚಿವರಾಗಿದ್ದ ವೇಳೆ ರಾಜ್ಯದ ಪಾಲಿನ 130 ಟಿಎಂಸಿ ಅಡಿ ನೀರಿನಲ್ಲಿ ವಿಜಯಪುರ ಜಿಲ್ಲೆಯಲ್ಲೇ ಸುಮಾರು 80 ಟಿಎಂಸಿ ನೀರಿನ ಯೋಜನೆಗಳು ತಲೆ ಎತ್ತಿದ್ದವು. ರಾಜಕೀಯ ಕಾರಣಕ್ಕೆ ಏನೆಲ್ಲ ಟೀಕೆಗಳನ್ನು ಎದುರಿಸಿದರೂ ಎಂ.ಬಿ. ಪಾಟೀಲ ಅವರ ಒತ್ತಡದ ಪರಿಣಾಮ ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿತ್ತು.

ಆದರೆ ಇದೀಗ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವ ಎಲ್ಲ ಯೋಜನೆಗಳೂ ಕಳೆದ ಒಂದು ವರ್ಷದಿಂದ ಸಂಪೂರ್ಣ ಸ್ಥಗಿತವಾಗಿವೆ. ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಹಳೆ ಯೋಜನೆಗಳು ಮುಂದುವರಿದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದಲ್ಲದೇ ಎಂ.ಬಿ. ಪಾಟೀಲ ಅವರ ಅವಧಿಯಲ್ಲಿ ಬೂದಿಹಾಳ-ಪೀರಾಪುರ, ಚಡಚಣ, ನಗರಬೆಟ್ಟ, ತುಬಚಿ-ಬಬಲೇಶ್ವರ ಹೀಗೆ ಹಲವು ಯೋಜನೆಗಳು ಘೋಷಣೆಯಾಗಿ, ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ನಿರ್ದಿಷ್ಟ ಅನುದಾನವಿಲ್ಲದೇ ಜಿಲ್ಲೆಯ ನೀರಾವರಿ ಯೋಜನೆಗಳೆಲ್ಲ ಐತಿಹಾಸಿಕ ಬಾರಾಕಮಾನ್‌ ಮಾದರಿಯಲ್ಲಿ ದುಸ್ಥಿತಿ ಸಾರುತ್ತಿವೆ.

ಇಷ್ಟಕ್ಕೂ ಜಿಲ್ಲೆಯ ನೀರಾವರಿ ಯೋಜನೆಗಳ ಕಾಲುವೆ ಕಾಮಗಾರಿ ತಕ್ಷಣ ಮುಗಿಸಲು ಕ್ರಮ ಕೈಗೊಂಡರೂ ರೈತರ ಹೊಲಕ್ಕೆ ನೀರು ಹರಿಸಲು ಸಾಧ್ಯವಿಲ್ಲ. ಏಕೆಂದರೆ ಶಾಸ್ತ್ರಿ ಜಲಾಶಯದ ಗೇಟ್‌ಗಳನ್ನು ಎತ್ತರಿಸಿದರೆ ಮಾತ್ರ ರಾಜ್ಯದ ಪಾಲಿನ 130 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯ. ಆಗ ಮಾತ್ರ ರೈತರ ಕನಸು ನನಸು ಮಾಡಲು ಸಾಧ್ಯ. ಇದರ ಹೊರತಾಗಿ ಉತ್ತರ ಕರ್ನಾಟಕದ ರೈತರ ಜಮೀನನ್ನು ಸಮಗ್ರ ನೀರಾವರಿ ಮಾಡಲು ಸಾಧ್ಯವೇ ಇಲ್ಲ.

ಇತ್ತ ಜಲಾಶಯದ ಗೇಟ್ ಎತ್ತರದಿಂದ 20 ಹಳ್ಳಿಗಳು ಮತ್ತೆ ಮುಳುಗಲಿವೆ. ಮುಳಗಡೆಯಾಗಲಿರುವ ಈ ಹಳ್ಳಿಗಳ ಸಂತ್ರಸ್ತರಿಗೆ ಪುನರ್ವಸತಿ-ಪುನರ್‌ ನಿರ್ಮಾಣ ಕಾರ್ಯ ಆಗಬೇಕು. ಇದಾದ ಬಳಿಕ ಗೇಟ್ ಅಳವಡಿಸಲು ಸಾಧ್ಯವಿದೆ. ಗೇಟ್ ಅಳವಡಿಸಿದರೆ ಮಾತ್ರವೇ ವಿಜಯಪುರ ಜಿಲ್ಲೆ ಪ್ರಮುಖ 9 ಏತ ನೀರಾವರಿ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳಲ್ಲಿ ನಿರ್ಮಾಣಗೊಂಡಿರುವ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪರಿಹಾರ, ಕಾಲುವೆ ನಿರ್ಮಾಣ ಸೇರಿದಂತೆ ಒಟ್ಟು ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ರೂ. ಹಣಬೇಕು. ಕನಿಷ್ಠ ಪ್ರಸಕ್ತ ವರ್ಷ ಸುಮಾರು 35 ಸಾವಿರ ಕೋಟಿ ರೂ. ನೀಡಿದ್ದರೆ ಭೂಸ್ವಾಧೀನ-ಪುನರ್ವಸತಿ ಕಾರ್ಯಕ್ಕೆ ಚಾಲನೆ ನೀಡಲು ಸಾಧ್ಯವಿತ್ತು. ಆದರೆ ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಇದರಲ್ಲೇ ಕಾವೇರಿ ಕೊಳ್ಳದ ಯೋಜನೆಗಳನ್ನು ಘೋಷಿಸಿಕೊಂಡಿದೆ. ವಿಜಯಪುರ ಜಿಲ್ಲೆಯ ಪ್ರಮುಖ ಯೋಜನೆಗಳೇ ಅರ್ಧಕ್ಕೆ ನಿಂತರುವಾಗ ಕುಮಾರಸ್ವಾಮಿ ಅವರು ರೇವಣಸಿದ್ದೇಶ್ವರ ಏತ ನೀರಾವರಿ ಹೆಸರಿನಲ್ಲಿ ಮತ್ತೂಂದು ಯೋಜನೆ ಘೋಷಿಸಿರುವುದು ರೈತರನ್ನು ನಗುವಂತೆ ಮಾಡಿದೆ.

ಜಿಲ್ಲೆಯ ಹೆಸರು ಉಲ್ಲೇಖಕ್ಕೆ ಎಂಬಂತೆ ಜಿಲ್ಲೆಗೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದರೂ, ಕಳೆದ ಬಜೆಟ್‌ನಲ್ಲಿ ತಾವೇ ಘೋಷಿಸಿದ್ದ ಬಹುತೇಕ ಯೋಜನೆಗಳಿಗೆ ಕುಮಾರಸ್ವಾಮಿ ಅನುದಾನದ ನೀಡಿಲ್ಲ. ಈಗ ಘೋಷಿತ ಯೋಜನೆಗಳಿಗೆ ನೀಡುವ ನಿರೀಕ್ಷೆ ಮಾತ್ರ ಮಾಡಬದುದು, ಖಚಿತವಾಗಿಲ್ಲ. ಇಂಥ ಸ್ಥಿತಿಯಲ್ಲಿ ನಿರ್ದಿಷ್ಟ ಅನುದಾನವಿಲ್ಲದೇ ಕೃಷ್ಣೆಯ ಮಕ್ಕಳು ಮತ್ತೂಮ್ಮೆ ಕಣ್ಣೀರು ಹಾಕುವಂತಾಗಿದೆ. ಪರಿಣಾಮ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವ ವಿಧಾನ ಹೇಗೆ ಎಂಬುದನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಹಾಗೂ ಜಿಲ್ಲೆಯ ಆಡಳಿತ ಪಕ್ಷದ ಮೂವರು ಸಚಿವರು, ಇಬ್ಬರು ಶಾಸಕರು ಉತ್ತರಿಸಬೇಕಿದೆ.

ಜಿ.ಎಸ್‌. ಕಮತರ

ಟಾಪ್ ನ್ಯೂಸ್

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ನೂತನ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ ವಿಂಗಡನೆ ಶುರು

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

ಕೊಣ್ಣೂರಲ್ಲಿ ದೇಗುಲ ಚೆತ್‌ ನಿರ್ಮಾಣಕ್ಕೆ ಭೂಮಿಪೂಜೆ

23

ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ರೈಲು ತಡೆ ಚಳವಳಿ  

22

ಕಾಂಗ್ರೆಸ್‌ಗೆ ಮತ ನೀಡಿ ಪ್ರಗತಿಗೆ ಸಹಕರಿಸಲು ಸಿದ್ದರಾಮಯ್ಯ ಮನವಿ

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ : ಭಯದಿಂದ‌ ಮನೆಯಿಂದ ಹೊರ ಓಡಿದ ಜನ

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪನ : ಭಯಗೊಂಡು ಮನೆಯಿಂದ ಹೊರ ಓಡಿದ ಜನ

ಚುನಾವಣಾ ಕರ್ತವ್ಯ ಲೋಪ : ಮೂವರು ಶಿಕ್ಷಕರ ಅಮಾನತು

ಚುನಾವಣಾ ಕರ್ತವ್ಯ ಲೋಪ : ಮೂವರು ಶಿಕ್ಷಕರ ಅಮಾನತು

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

ಜೈಲುಗಳಲ್ಲಿ ಇನ್ನು ಸಿಬಂದಿಗೂ ಮೊಬೈಲ್‌ ನಿಷೇಧ!

ಅ. 21ರಿಂದ ಜಿಲ್ಲೆಯಾದ್ಯಂತ ಜಾರಿ; ಮಕ್ಕಳು, ಶಿಕ್ಷಕರ ಬೆಂಬಲಕ್ಕೆ “ಶಾಲಾ ಸ್ಪಂದನ’

ಅ. 21ರಿಂದ ಜಿಲ್ಲೆಯಾದ್ಯಂತ ಜಾರಿ; ಮಕ್ಕಳು, ಶಿಕ್ಷಕರ ಬೆಂಬಲಕ್ಕೆ “ಶಾಲಾ ಸ್ಪಂದನ’

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

ಭಾರತೀಯ ರೆಸ್ಟೋರೆಂಟ್‌ ಮೇಲೆ ದಾಳಿ ಕೇಸ್‌ ಎಫ್ ಬಿಐಗೆ

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಹೊಂಡಮಯ ರಸ್ತೆ ವಾಹನ ಸವಾರರಿಗೆ ಸವಾಲು

ಹೊಂಡಮಯ ರಸ್ತೆ ವಾಹನ ಸವಾರರಿಗೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.