ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಭೂಮಿಪೂಜೆ
Team Udayavani, Jan 23, 2022, 5:48 PM IST
ಚಡಚಣ: ಹೊರ್ತಿ ಗ್ರಾಮದ ಸ್ವತ್ಛತೆಗೆ ಪ್ರಮುಖ ಆದ್ಯತೆ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೊರ್ತಿ ಪಿಡಿಒ ಶಿವಪ್ಪ ಪೂಜಾರಿ ಹೇಳಿದರು.
ನಿಂಬಾಳ ರಸ್ತೆಯ ಗ್ರಾಪಂ ಬಿನ್ ಶೇತ್ಕಿ ಜಾಗದಲ್ಲಿ 12 ಲಕ್ಷ ರೂ. ವೆಚ್ಚದ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಗ್ರಾಮದ ಪ್ರತಿ ಮನೆಗೂ 4 ಸಾವಿರಕ್ಕೂ ಅಧಿಕ ಒಣ ಮತ್ತು ಹಸಿ ಕಸ ಹಾಕುವ ತೊಟ್ಟಿಗಳನ್ನು ವಿತರಿಸಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಂಡು ಎಲ್ಲರೂ ಸ್ವಚ್ಛ ಮತ್ತು ನಿರ್ಮಲ ಗ್ರಾಮಕ್ಕೆ ಹೆಚ್ಚು ಒತ್ತು ಕೊಟ್ಟು ಸಹಕರಿಸಲು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಬಸಲಿಂಗಪ್ಪ ಪೂಜೇರಿ ಮತ್ತು ಅಮಸಿದ್ಧ ಲೋಣಿ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಕಾರ್ಯದರ್ಶಿ ವಿ.ಆರ್.ಬಿರಾದಾರ, ಗ್ರಾಪಂ ಸದಸ್ಯ ಶರಣಬಸು ಡೋಣಗಿ, ಹುಸೇನಸಾಬ ಹತ್ತರಕಿಹಾಳ, ರಾಜು ವಡ್ಡರ, ರೇವಣಸಿದ್ಧ ತೇಲಿ, ಮಲ್ಲೇಶಿ ಭೋಸಗಿ, ಶಿವಶರಣಪ್ಪ ಡೊಳ್ಳಿ, ಪವನ ಕುಲಕರ್ಣಿ, ವಿಠ್ಠಲ ಬಬಲಾದ, ಶ್ರೀಶೈಲ ಕಂದಗಲ್ ಇದ್ದರು. ಮಲ್ಲೇಶಿ ಭೋಸಗಿ ಸ್ವಾಗತಿಸಿದರು. ಪವನ ಕುಲಕರ್ಣಿ ನಿರೂಪಿಸಿದರು. ರೇವಣಸಿದ್ಧ ತೇಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್ಟಿ ಪರೀಕ್ಷೆ
ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ಒಳ ಹರಿವು ಆರಂಭ: ಜೀವನದಿ ಕೃಷ್ಣೆಗೆ ಜೀವಕಳೆ
ವಿಜಯಪುರ ಸರ್ಕಾರಿ ಆಸ್ಪತ್ರೆ ಪ್ರಕರಣ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ದೂರು
ಪದವೀಧರ ಪರೀಕ್ಷಾ ಕೇಂದ್ರಕ್ಕೆ ಡಿಸಿ-ಎಸ್ಪಿ ಭೇಟಿ
ಬಾಣಂತಿಯರ ಶಸ್ತ್ರಚಿಕಿತ್ಸೆಯಲ್ಲಿ ಲೋಪ : ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಉಪ ಲೋಕಾಯುಕ್ತ ಭೇಟಿ