ಸರ್ವಜ್ಞರ ತತ್ವಾದರ್ಶ ಪರಿಚಯವಾಗಲಿ


Team Udayavani, Feb 21, 2018, 1:13 PM IST

vij-1.jpg

ವಿಜಯಪುರ: ತ್ರಿಪದಿ ವಚನಕಾರ ಸರ್ವಜ್ಞ ಶರಣರು ಸಮಾಜದ ಅವ್ಯವಸ್ಥೆ ಸುಧಾರಿಸಲು ವಚನಗಳ ಮೂಲಕ ಸಾರಿದ ತತ್ವ ಸಿದ್ಧಾಂತಗಳು ಪ್ರಸಕ್ತ ಸಂದರ್ಭದಲ್ಲಿ ಯುವ ಪೀಳಿಗೆಗೆ ತಿಳಿಸಿ ಹೇಳುವ ಕೆಲಸದ ಅಗತ್ಯವಿದೆ ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ವಜ್ಞರು ಸಂಸ್ಕೃತ ಕಲಿತು ಪಂಡಿತರು ಎನಿಸಿಕೊಂಡವರಗಿಂತ ಅದ್ಭುತವಾದ ಸಂದೇಶಗಳನ್ನ ಅಪ್ಪಟ ಕನ್ನಡದಲ್ಲೇ ತ್ರಿಪದಿಗಳಲ್ಲೇ ಕಟ್ಟಿಕೊಟ್ಟರು. ಅಲ್ಲದೇ ಯಾವ ವಿಷಯ ಬಿಡದೇ ಎಲ್ಲ ಸಂಗತಿಗಳ ಕುರಿತು ವಚನ ರಚಿಸಿದ ಅವರನ್ನು ಇದೇ ಕಾರಣಕ್ಕೆ ಆಡು ತಿನ್ನದಿರುವ ಕಸವಿಲ್ಲ, ವಚನಗಳಲ್ಲಿ ಸರ್ವಜ್ಞರು ಹೇಳದ ವಿಷಯಗಳಿಲ್ಲ ಎಂದು ಬಣ್ಣಿಸಿದರು. 

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಯು.ಎನ್‌. ಕುಂಟೋಜಿ, ಸರ್ವಜ್ಞ ಎಂದರೆ ಎಲ್ಲವನ್ನು ತಿಳಿದವನು ಎಂದರ್ಥ. ಅಂಥ ಹೆಸರಿನ ಅಂಕಿತ ಬಳಸಿಕೊಂಡು ವಚನಗಳನ್ನು ರಚಿಸಿದ ಸರ್ವಜ್ಞರು, ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಪಂಪ, ರನ್ನ, ಜನ್ನ, ಪೊನ್ನ ಇವರೆಲ್ಲಾ ಸಾಹಿತಿಗಳು ಸಂಸ್ಕೃತ ಅಧ್ಯಯನ ಮಾಡಿದ ಪಂಡಿತರಾದರೆ, ಸರ್ವಜ್ಞರು ಅಪ್ಪಟ ಕನ್ನಡದ ಕವಿ ಎಂದು ವಿಶ್ಲೇಷಿಸಿದರು.

ಒಂದು ತುಂಡು ಬಟ್ಟೆಯನ್ನುಟ್ಟು ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದ ಸರ್ವಜ್ಞರು ಇತಿಹಾಸದ ಸಾಹಿತ್ಯದಲ್ಲಿ ಲೋಕಜ್ಞಾನ ಬೆಳೆಸಿದವರು. ಅರಿಷಡ್ವರ್ಗಗಳನ್ನು ಮೀರಿದ ಈ ಶರಣ ಸಮಾಜಕ್ಕೆ ಬೆಳಕು ಚೆಲ್ಲಿದ ಮಹಾತ್ಮ ಎಂದು ವಿವರಿಸಿದರು. 

ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ಕುಂಬಾರ ಸಮಾಜ ರಾಜಕೀಯವಾಗಿ ಬಹಳ ಹಿಂದುಳಿದಿದೆ. ಸಮಾಜದಲ್ಲಿ ಏನಾದರೂ ಬೆಳವಣಿಗೆ ಆಗಬೇಕಾದರೆ ನಾವು ಹಾಕಿಕೊಂಡಿರುವ ಯೋಚನೆ ಯೋಜನೆಗಳಾಗಿ ಅನುಷ್ಠಾನಕ್ಕೆ ಬರಬೇಕು. ಆಗಲೇ ಸರ್ವಜ್ಞ ಎಂಬ ಮಹಾತ್ಮನ ಬಡ ಸಮಾಜ ಅಭಿವೃದ್ಧಿ ಸಾಧಿ ಸಿ ಸಮಾಜದಲ್ಲಿ ಸುಧಾರಣೆ ಕಾರಣಲು ಸಾಧ್ಯ. ಸರ್ಕಾರ ಸರ್ವಜ್ಞರ ವೃತ್ತ, ಭವನವನ್ನು ನಿರ್ಮಿಸಬೇಕು. ಕುಂಬಾರ ಸಮಾಜದಲ್ಲಿ ಜನಿಸಿದ ಸರ್ವಜ್ಞ ಸಂತ ಸರ್ವ ಸಮಾಜದ ಆದರ್ಶ ಕಾಯಕವಾದಿ ಎಂದು ವಿವರಿಸಿದರು.

ಪಾಲಿಕೆ ಸದಸ್ಯ ಉಮೇಶ ವಂದಾಲ, ಆರ್‌. ಕುಂಬಾರ, ಜಿ.ವಿ. ದಶವಂತ, ಸಿ.ಬಿ. ಕುಂಬಾರ, ಎಸ್‌ .ಪಿ. ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಎಸ್‌.ಜಿ. ಕುಂಬಾರ ಸೇರಿದಂತೆ ಇದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ
ಮಹೇಶ ಪೋತದಾರ ನಿರೂಪಿಸಿದರು. ಶಶಿಕಲಾ ಕುಲಹಳ್ಳಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದರೆ, ನವರಸ ನೃತ್ಯ ಕಲಾ ಸಂಸ್ಥೆಯ ರಂಗನಾಥ ಬತ್ತಾಸೆ ನೇತೃತ್ವದಲ್ಲಿ ಕಲಾವಿದರು ಸರ್ವಜ್ಞರ ನೃತ್ಯ ರೂಪಕ ಪ್ರದರ್ಶಿಸಿದರು.

ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್‌ ಹನುಮಂತರಾಯ ರಂಗಮಂದಿರದವರೆಗೆ ಕುಂಭಮೇಳದೊಂದಿಗೆ ಮೆರವಣಿಗೆ ನಡೆಯಿತು. ಉಪ ವಿಭಾಗಾಧಿಕಾರಿ ಡಾ| ಶಂಕರ ವಣಕ್ಯಾಳ ಮೆರವಣಿಗೆಗೆ ಚಾಲನೆ ನೀಡಿದರು.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

9-muddebihala

Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ

1-wqweqewq

BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.