ರಸ್ತೆಯಲ್ಲೇ ಮಾಂಸ ಮಾರಾಟ

•ಪ್ರವಾಸಿಗರು-ಸಾರ್ವಜನಿಕರಿಗೆ ಮುಜುಗುರ•ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಒತ್ತಾಯ

Team Udayavani, Jul 23, 2019, 12:22 PM IST

ಬಸವನಬಾಗೇವಾಡಿ: ಪಟ್ಟಣದ ಹೆದ್ದಾರಿ ಮೇಲೆ ಮಾಂಸಾಹಾರಿ ಅಂಗಡಿಗಳು.

ಬಸವನಬಾಗೇವಾಡಿ: ರಾಜ್ಯ ಹೆದ್ದಾರಿ ಮೇಲೆ ಮಟನ್‌, ಚಿಕನ್‌, ಮೀನು ಮಾರುತ್ತಿರುವುದರಿಂದ ಸಾರ್ವಜನಿ ಕರಿಗೆ ಮತ್ತು ಪ್ರವಾಸಿಗರಿಗೆ ಮುಜುಗರವಾಗುತ್ತಿದೆ.

ಪಟ್ಟಣದ ತೆಲಗಿ ರಸ್ತೆಯ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಎಡ ಮತ್ತು ಬಲ ಭಾಗದ ಮುಖ್ಯ ರಸ್ತೆ ಉದ್ದಕ್ಕೂ ಕುರಿ, ಕೋಳಿ, ಮೀನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರು ಮುಜುಗರಕ್ಕೆ ಒಳಗಾಗಿ ಏನಪ್ಪಾ. ನಾವು ಯಾವ ಸ್ಥಳಕ್ಕೆ ಬಂದಿದ್ದೇವೆ ಎಂದು ಕೊಳ್ಳುವಂತಾಗಿದೆ.

12ನೇ ಶತಮಾನದಲ್ಲಿ ಸಮಾಜಕ್ಕೆ ಸಮಾನತೆ ಸಾರಿದ ಬಸವಣ್ಣನವರ ಜನ್ಮಸ್ಥಳದಲ್ಲಿ ಈ ರೀತಿ ಹೆದ್ದಾರಿ ಅಕ್ಕ ಪಕ್ಕದಲ್ಲಿ ಚಿಕನ್‌, ಮಟನ್‌ ಹಾಗೂ ಮೀನಿನ ಮಾಂಸ ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಗೊತ್ತಿಲ್ಲ. ಆದರೆ ಈ ಕ್ಷೇತ್ರಕ್ಕೆ ಬರುವ ಪ್ರವಾಸಿಗರು ಮಾತ್ರ ಈ ರಾಜಾರೋಷವಾಗಿ ರಾಜ್ಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಸಾಲು ಸಾಲಾಗಿ ಅಂಗಡಿಗಳ ಮುಂದೆ ಕುರಿ, ಕೋಳಿ ತೂಗು ಹಾಕಿರುವುದನ್ನು ನೋಡಿ ಪ್ರವಾಸಿಗರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಆದರೆ ಪುರಸಭೆ ಮಾತ್ರ ಪಟ್ಟಣದಲ್ಲಿ ಒಂದು ಸುಸಜ್ಜಿತವಾದ ಮಾಂಸಾಹಾರಿ ಮಾರುಕಟ್ಟೆ ನಿರ್ಮಾಣ ಮಾಡಿಲ್ಲ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣದಲ್ಲಿ ಪ್ರತ್ಯೇಕವಾದ ಮತ್ತು ಸುಸಚ್ಚಿತವಾದ ಮಾಂಸಾಹಾರಿ ಮಾರುಕಟ್ಟೆ ನಿರ್ಮಾಣ ಮಾಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಗೆ ಪುರಸಭೆ ಮುಂದಾಗಿಲ್ಲ. ಹಲವಾರು ಬಾರಿ ಪುರಸಭೆ ಸಾಮಾನ್ಯೆ ಸಭೆಗಳಲ್ಲಿ ಈ ಮಾರುಕಟ್ಟೆ ನಿರ್ಮಾಣಕ್ಕಾಗಿ ಚರ್ಚೆ ಮಾಡಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಸಭೆಯಲ್ಲಿ ಮಾತ್ರ ಮಾಂಸಾಹಾರಿ ಮಾರುಕಟ್ಟೆ ನಿರ್ಮಾಣದ ಭರವಸೆ ನೀಡುತ್ತಾರೆ. ನಂತರ ಅದರ ಗೋಜಿಗೆ ಹೋಗದೆ ಇರುವುದರಿಂದ ಸಾರ್ವಜನಿಕರಿಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಹೋಗಿದ್ದಾರೆ.

ಆರೋಗ್ಯದ ಮೇಲೆ ಪರಿಣಾಮ: ರಾಜ್ಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಮಟನ್‌, ಚಿಕನ್‌, ಮೀನು ಮಾರಾಟ ಮಳಿಗೆಗಳಿದ್ದು ಹೊರಗಡೆ ಮಾಂಸಾಹಾರ ತೂಗು ಹಾಕಿರುತ್ತಾರೆ. ಹೆದ್ದಾರಿ ಮೇಲೆ ನಿತ್ಯ ನೂರಾರು ವಾಹನಗಳು ಚಲಿಸುವುದರಿಂದ ರಸ್ತೆ ಮೇಲಿನ ತ್ಯಾಜ್ಯ ಮತ್ತು ವಾಹನಗಳ ಮಾಲಿನ್ಯ ಮಾಂಸಾಹಾರ ಮೇಲೆ ಪರಿಣಾಮ ಬೀಳುತ್ತದೆ. ಈ ಮಾಂಸಾಹಾರ ಸೇವನೆ ಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾಂಸಾಹಾರ ಅಂಗಡಿಗಳನ್ನು ಮುಚ್ಚು ಅಂತ ಹೇಳುತ್ತಿಲ್ಲ. ಮಾಂಸಾಹಾರ ಸೇವನೆ ಮಾಡುವುದು ಅವರವರ ಭಾವನೆಗೆ ಬಿಟ್ಟಿದ್ದು. ಆದರೆ ಅದಕ್ಕೊಂದು ಪ್ರತ್ಯೇಕ ಮಾರುಕಟ್ಟೆ ನಿರ್ಮಾಣ ಮಾಡಿದರೆ ಮಾತ್ರ ಸೂಕ್ತವಾಗುತ್ತದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಬಸವಣ್ಣನವರು ಜನ್ಮವೆತ್ತಿದ ಈ ಸ್ಥಳದಲ್ಲಿ ರಸ್ತೆ ಮೇಲೆ ಮಾಂಸ ಮಾರಾಟ ಮಾಡಿದರೆ ಇನ್ನೊಬ್ಬರ ಭಾವನೆ ಮತ್ತು ಮನಸ್ಸಿಗೆ ನೋವಾಗುತ್ತದೆ. ಹೀಗಾಗಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮಾಂಸಾಹಾರ ಮಾರಾಟದ ಮಳಿಗೆಗಳನ್ನು ಸ್ಥಳಾಂತರಿಸಬೇಕು.•ಶಿವಪ್ರಕಾಶ ಶಿವಾಚಾರ್ಯರು, ಹಿರೇಮಠ

ರಸ್ತೆಯ ಅಕ್ಕ ಪಕ್ಕ ಖಾಸಗಿ ಮತ್ತು ಅವರವರ ಸ್ವಂತ ಅಂಗಡಿಗಳಲ್ಲಿ ಮಾಂಸಾಹಾರ ಮಾರಲಾಗುತ್ತಿದೆ. ಮಾಂಸಾಹಾರ ಮಾರುಕಟ್ಟೆ ನಿರ್ಮಾಣಕ್ಕಾಗಿ ಸೂಕ್ತ ಸ್ಥಳ ಪರಿಶೀಲನೆ ಮಾಡುತ್ತಿದ್ದು ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಯೋಜನೆ ಪುರಸಭೆ ಹೊಂದಿದೆ.•ಬಿ.ಎ. ಸೌದಾಗರ, ಪುರಸಭೆ ಮುಖ್ಯಾಧಿಕಾರಿ

ಪಟ್ಟಣದಲ್ಲಿ ಪರವಾನಗಿ ಪಡೆದಿರುವ ಒಟ್ಟು 15 ಚಿಕನ್‌ ಮತ್ತು ಮಟನ್‌ ಅಂಗಡಿಗಳು ಇವೆ. ಅನಧಿಕೃತ ಅಂಗಡಿಗಳು ಇಲ್ಲ. ಪುರಸಭೆಯಿಂದ ನಾವು ಪರವಾನಗಿ ನೀಡುವ ಮುನ್ನ ಯಾವುದೇ ಹಲವಾರು ನಿರ್ಬಂಧನೆ ಹೇರಿರುತ್ತೇವೆ. ಅದನ್ನು ಪಾಲಿಸವುದು ಅವರ4 ಕರ್ತವ್ಯ.•ಸಿದ್ದಾರ್ಥ ಕಳ್ಳಿಮನಿ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ

 

•ಪ್ರಕಾಶ ಬೆಣ್ಣೂರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ