ಭ್ರಷ್ಟರ ವಿರುದ್ಧ ಕ್ರಮಕ್ಕೆ ಶಾಸಕ ಯಶವಂತರಾಯಗೌಡ ಸೂಚನೆ


Team Udayavani, Jul 6, 2021, 9:27 PM IST

scvvgfbgvf

ಇಂಡಿ: ಗ್ರಾಮ ಪಂಚಾಯತ್‌ಗಳಲ್ಲಿ ಭ್ರಷ್ಟಾಚಾರ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಶಾಸಕ ಯಶವಂತರಾಯಗೌಡ ಪಾಟೀಲ ತಾಪಂ ಇಒ ಸುನೀಲ ಮದ್ದಿನ್‌ ಅವರಿಗೆ ಸೂಚಿಸಿದರು.

ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಸಬಾಭವನದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿ ಮಾಡಬೇಕಾದ ಅಧಿ ಕಾರಿಗಳೆ ಭ್ರಷ್ಟಾಚಾರ ಮಾಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ತಾಲೂಕಿನಲ್ಲಿ ನೀರಿಲ್ಲದೆ ಬಿತ್ತಿದ ಬೀಜಗಳು ಮೊಳಕೆಯೊಡೆಯುತ್ತಿಲ್ಲ.

ಸಚಿವ ಉಮೇಶ ಕತ್ತಿಯವರು ಇಲ್ಲಿನ ರೈತರ ಸ್ಥಿತಿ ಅರಿತು ತಕ್ಷಣ ಕಾಲುವೆಗೆ ನೀರು ಹರಿಸಬೇಕು. ಐಸಿಸಿ ಸಭೆ ಕರೆದು ಅನುಮೋದನೆ ಪಡೆಯಬೇಕು ಎಂದು ಸಚಿವರಿಗೆ ಮತ್ತು ಕೆಬಿಜೆಎನ್ನೆಲ್‌ ಅಧಿ ಕಾರಿಗಳಿಗೆ ವಿನಂತಿಸಿರುವುದಾಗಿ ತಿಳಿಸಿದರು. ಕಳೆದ ಬಾರಿ ನೆರೆ ಹಾವಳಿಯಿಂದ ಇಂಡಿ, ಚಡಚಣ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ, ಆಸ್ತಿ-ಪಾಸ್ತಿ, ಜನ ಜಾನುವಾರು ಹಾನಿಯಾಗಿತ್ತು. ಈ ಕುರಿತು ಎರಡು ರಾಜ್ಯಗಳ ಅಧಿ ಕಾರಿಗಳು ಮೇಲಿಂದ ಮೇಲೆ ಚರ್ಚೆ ನಡೆಸಿ ಸಮನ್ವಯ ಸಾಧಿ ಸಬೇಕು. ಈ ಕುರಿತು ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತರಾವ್‌ ಪಾಟೀಲರ ಜೊತೆಗೆ ಮಾತನಾಡಿ ಇಲ್ಲಿಯ ಪರಿಸ್ಥಿತಿ ಬಗ್ಗೆ ಮನವರಿಗೆ ಮಾಡಿ ಕೊಟ್ಟಿದ್ದೇನೆ ಎಂದರು.

ಪಟ್ಟಣದಲ್ಲಿನ ಮಿನಿ ವಿಧಾನಸೌಧಕ್ಕೆ ಲಿಫ್ಟ್‌ ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಸಕ್ಕರೆ ಕಾರ್ಖಾನೆ ಬಿಲ್ಲು ರೈತರ ಬ್ಯಾಂಕ್‌ ಅಕೌಂಟ್‌ ಗೆ ಜಮಾ ಮಾಡಿಸಿದೆ. ಕೃಷ್ಣಾ ಕಾಲುವೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಬೇಕು. ಈ ಕುರಿತು ಪ್ರಾ ಧಿಕಾರದ ಅ ಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದ ಅವರು, ಉಡಚಣ ರೋಡಗಿ ಬ್ರಿಡ್ಜ್ ಕಾರ್ಯ ಮುಗಿಯುವ ಹಂತದಲ್ಲಿದ್ದು ಶೀಘ್ರ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದರು. ಡ್ರಗ್ಸ್‌ ಮಾμಯಾ: ತಾಲೂಕು ಗಡಿ ಪ್ರದೇಶದಲ್ಲಿರುವುದರಿಂದ ಮಧ್ಯಪ್ರದೇಶದಿಂದ ಡ್ರಗ್ಸ್‌ ಇಂಡಿ ತಾಲೂಕಿಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಧಾಬಾಗಳಲ್ಲಿ ಡ್ರಗ್ಸ್‌ ದಂಧೆ ಜೋರಾಗಿದ್ದು ಪೊಲೀಸ್‌ ಇಲಾಖೆ ಅಂತಹ ಜಾಲವನ್ನು ಕಂಡು ಹಿಡಿಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಯುವ ಸಮೂಹ ಹಾಳಾಗುತ್ತದೆ. ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಇನ್ನೂ ಅನೇಕ ದಂಧೆಗಳು ನಡೆಯುತ್ತಿವೆ.

ಅವುಗಳಿಗೆಲ್ಲ ಇಲಾಖೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸ್‌ ಇಲಾಖೆಗೆ ಎಚ್ಚರಿಸಿದರು. ಮೆಗಾ ಮಾರ್ಕೆಟ್‌: ಪಟ್ಟಣದಲ್ಲಿ ಮುಂಬರುವ ಸೋಮವಾರ ಮೆಗಾ ಮಾರ್ಕೆಟ್‌ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಲಿದೆ. ಇಂಡಿ ಪಟ್ಟಣದ ಅಂಬೇಡ್ಕರ್‌ ನಗರದಲ್ಲಿರುವ ರುದ್ರಭೂಮಿಯಲ್ಲಿ ಲೈಟು, ನೀರು ಮತ್ತು ಆಸನದ ವ್ಯವಸ್ಥೆ ಪುರಸಭೆಯವರು ಮಾಡಬೇಕು. ತಾಲೂಕಿನಲ್ಲಿ ನೀರು ಬಳಕೆದಾರರ ಸಮಿತಿ ಅಸ್ಥಿತ್ವಕ್ಕೆ ಬರಬೇಕು. ಬಂದರೆ ಬೇರೆಯವರಿಗೆ ಮಾದರಿಯಾಗಲಿದೆ. ಪಟ್ಟಣದಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಬೂದಿಹಾಳ ಹತ್ತಿರ ಭೂಮಿ ತೆಗೆದುಕೊಳ್ಳಬೇಕು. ಹೊಲಗಳಿಗೆ ಹೋಗುವ ರೈತರಿಗೆ ದಾರಿ ಮಾಡಿ ಕೊಡಬೇಕು.

ಈ ಕುರಿತು ಎಸಿ, ತಹಶೀಲ್ದಾರರು, ತಾಲೂಕು ಪಂಚಾಯತ್‌ ಇಓ ಮಧ್ಯಸ್ಥಿಕೆ ವಹಿಸಬೇಕೆಂದರು. ಸಭೆಯಲ್ಲಿ ಆರೋಗ್ಯ, ಕೃಷಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ಇಂಡಿ ಪಟ್ಟಣದಲ್ಲಿ ವಿಜಯಪುರ ಮಾದರಿಯಲ್ಲಿ ಅಂಬೇಡ್ಕರ್‌ ಮೂರ್ತಿ ನಿರ್ಮಾಣ ಕುರಿತು, ಇಂಡಿಯ ವೈದ್ಯ ಸಂಘಕ್ಕೆ ಮತ್ತು ನಿವೃತ್ತ ಸೈನಿಕರ ಸಂಘಕ್ಕೆ ಸ್ಥಳ ನೀಡುವ ಕುರಿತು ಪುರಸಭೆ ಸಭೆಯಲ್ಲಿ ಚರ್ಚಿಸಿ ಠರಾವು ನೀಡುವ ಕುರಿತು ತಿಳಿಸಿದರು.

ಎಸಿ ರಾಹುಲ್‌ ಶಿಂಧೆ, ಡಿವೈಎಸ್‌ಪಿ ಶ್ರೀಧರ ದೊಡ್ಡಿ, ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ವೇದಿಕೆಯಲ್ಲಿದ್ದರು. ಆರೋಗ್ಯಾ ಧಿಕಾರಿ ಅರ್ಚನಾ ಕುಲಕರ್ಣಿ, ವೈದ್ಯಾ ಧಿಕಾರಿ ರಾಜೇಶ ಕೋಳೆಕರ, ಚಿಕ್ಕ ನೀರಾವರಿ ಇಲಾಖೆ ಎಇಇ ಬಸವರಾಜ ಬಿರಾದಾರ, ಜಿಪಂನ ಆರ್‌.ಎಸ್‌. ರುದ್ರವಾಡಿ, ಬಿಇಒ ವಸಂತ ರಾಠೊಡ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಅರಣ್ಯಾಧಿ ಕಾರಿ ಸುಮಾ ಹಳೆಹೊಳೆ, ರಾಜಕುಮಾರ ತೊರವಿ, ತೋಟಗಾರಿಕೆಯ ಆರ್‌.ಟಿ. ಹಿರೇಮಠ, ನಾಮ ನಿರ್ದೇಶಿತ ಸದಸ್ಯರಾದ ಅದೃಶ್ಯಪ್ಪ ವಾಲಿ, ಬೋರಮ್ಮ ಮುಳಜಿ, ಪರಶುರಾಮ ಭೋಸಲೆ, ಅಣ್ಣಪ್ಪ ಮದರಿ ಮತ್ತಿತರರಿದ್ದರು.

ಟಾಪ್ ನ್ಯೂಸ್

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

cm-bommai

ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ

ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್

ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

ಸೋಮಣ್ಣಗೆ ಚಾ.ನಗರ ಚುನಾವಣಾ ಉಸ್ತುವಾರಿ ಕೊಟ್ಟರೆ ಗೋಬ್ಯಾಕ್ ಚಳುವಳಿ: ಸ್ವಪಕ್ಷದಲ್ಲೇ ಒತ್ತಾಯ

hd-kumarswamy

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

ಹಿಂದುತ್ವವನ್ನು ಸೋಲಿಸಬಹುದು..; ವಿವಾದಾತ್ಮಕ ಟ್ವೀಟ್ ಮಾಡಿದ ನಟ ಚೇತನ್ ಬಂಧನ

ಹಿಂದುತ್ವವನ್ನು ಸೋಲಿಸಬಹುದು..; ವಿವಾದಾತ್ಮಕ ಟ್ವೀಟ್ ಮಾಡಿದ ನಟ ಚೇತನ್ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cm-bommai

ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ

ಯುಗಾದಿ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಂ.ಬಿ.ಪಾಟೀಲ

ಯುಗಾದಿ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಂ.ಬಿ.ಪಾಟೀಲ

ಮೇಲ್ಮನೆ ವಿಪಕ್ಷದ ಸಚೇತಕ ರಾಠೋಡಗೆ ಮಾತೃವಿಯೋಗ

ಮೇಲ್ಮನೆ ವಿಪಕ್ಷದ ಸಚೇತಕ ರಾಠೋಡಗೆ ಮಾತೃವಿಯೋಗ

ಅಕಾಲಿಕ ಮಳೆಗೆ ಕೊಳೆಯುತ್ತಿದೆ ದ್ರಾಕ್ಷಿ ಬೆಳೆ; ವಿಜಯಪುರ ಜಿಲ್ಲೆ ಅನ್ನದಾತರು ಕಂಗಾಲು

ಅಕಾಲಿಕ ಮಳೆಗೆ ಕೊಳೆಯುತ್ತಿದೆ ದ್ರಾಕ್ಷಿ ಬೆಳೆ; ವಿಜಯಪುರ ಜಿಲ್ಲೆ ಅನ್ನದಾತರು ಕಂಗಾಲು

prahlad joshi

ಅನುಭವದ ಮೇಲೆ ಸಿದ್ದುಗೆ ರಾಹುಲ್ ಗಾಂಧಿ ಸಲಹೆ: ಜೋಶಿ ವ್ಯಂಗ್ಯ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತಸ್ವೀಪ್‌ ಚಿತ್ತ!

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

cm-bommai

ಉರಿಗೌಡ-ನಂಜೇಗೌಡ ವಿಷಯ ರಾಜಕೀಯ ಲಾಭಕ್ಕೆ ಸಲ್ಲದು: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.