ನರೇಗಾ ಪರಿಣಾಮಕಾರಿಗೆ ಪಣ

ಇನ್ಮುಂದೆ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ: ಶಾಸಕ ನಡಹಳ್ಳಿ

Team Udayavani, Jun 12, 2020, 12:36 PM IST

12-June-25

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುದ್ದೇಬಿಹಾಳ: ನಿತ್ಯ ಒಂದೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದಂತೆ ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ 5 ಜಿಪಂ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಡಿ ಭೂರಹಿತ ಕೃಷಿ ಕೂಲಿಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ನೋಂದಣಿ ಕಾರ್ಯದ ಪ್ರಗತಿ ಪರಿಶೀಲಿಸುವೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜೂನ್‌ 12ರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚಾರ ಆರಂಭಿಸಿ ಪರಿಶೀಲನಾ ಕಾರ್ಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆ. ಹೀಗಾಗಿ ಆಯಾ ಗ್ರಾಪಂ ಪಿಡಿಒಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜೂ. 12ರಂದು ಯರಝರಿ, 13ರಂದು ರಕ್ಕಸಗಿ, 14ರಂದು ಹಿರೇಮುರಾಳ, 15ರಂದು ಕೊಣ್ಣೂರ ಹಾಗೂ 16ರಂದು ಬಸರಕೋಡ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳಿಗೆ ಭೇಟಿ ನೀಡುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ನನ್ನ ಜತೆಯಲ್ಲಿ ಬರಲಿದ್ದಾರೆ. ಆಯಾ ಗ್ರಾಪಂ ವ್ಯಾಪ್ತಿಯ ಕಾರ್ಮಿಕರನ್ನು ಗ್ರಾಪಂನ ಪಿಡಿಒಗಳೇ ಗ್ರಾಪಂ ಕಚೇರಿಗೆ ಕರೆತರತಕ್ಕದ್ದು. ಸ್ಥಳದಲ್ಲೇ ಉದ್ಯೋಗ ಖಾತ್ರಿ ನೋಂದಣಿ, ಜಾಬ್‌ ಕಾರ್ಡ್‌ ಸೇರಿ ಅಗತ್ಯ ಚಟುವಟಿಕೆ ನಡೆಸಬೇಕು. ಇದೇ ಸಂದರ್ಭ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆಯ ಸರ್ಕಲ್‌ಗ‌ಳು ಸ್ಥಳದಲ್ಲಿದ್ದು, ಅರ್ಹರಿಗೆ ಪಡಿತರ ಕಾರ್ಡ್‌, ಸಾಮಾಜಿಕ ಭದ್ರತಾ ಯೋಜನೆ ಅಡಿ ವಿವಿಧ ಮಾಸಾಶನ ಸೇರಿ ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದು ತಿಳಿಸಿದರು.

ಸದ್ಯ ಮಳೆ ಪ್ರಾರಂಭವಾಗಿದೆ. ಪರಿಶೀಲನೆ ನಡೆಸುವ ಸಮಯ ಮಳೆ ಬರುವ ವಾತಾವರಣ ಕಂಡುಬಂದಲ್ಲಿ ಪಂಚಾಯಿತಿ ಕೇಂದ್ರಸ್ಥಾನದವರನ್ನು ಮಾತ್ರ ಕರೆಸಿ ಸೌಲಭ್ಯ ವಿತರಿಸಬೇಕು. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರನ್ನು ಕರೆಸುವ ಅಗತ್ಯ ಇಲ್ಲ. ಮಳೆ ನಿಂತ ಮೇಲೆ ಅವರನ್ನೂ ಪಂಚಾಯಿತಿಗೆ ಕರೆಸಿಕೊಂಡು ಸೌಲಭ್ಯ ಒದಗಿಸಿಕೊಡಬೇಕು. ಒಟ್ಟಾರೆ ಆಯಾ ಸಂದರ್ಭದ ಪರಿಸ್ಥಿತಿಗನುಸಾರ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಕುರಿತು ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಶಶಿಕಾಂತ ಶಿವಪುರೆ, ಭೂರಹಿತ ಕೃಷಿ ಕಾರ್ಮಿಕರ ಸಮೀಕ್ಷೆ ನಡೆಸಿದ ವೇಳೆ ಅಂದಾಜು 5000 ಕುಟುಂಬಗಳ ವರದಿ ಸಿಕ್ಕಿದ್ದು, ಅವರು ಹಾಗೂ ವಲಸೆ ಕಾರ್ಮಿಕರು ಸೇರಿ ಒಟ್ಟಾರೆ ಅಂದಾಜು 12000ವರೆಗೆ ಕಾರ್ಮಿಕರು ಲಭ್ಯವಿದ್ದಾರೆ. ಇವರೆಲ್ಲರಿಗೂ ಉದ್ಯೋಗ ಖಾತ್ರಿ ಅಡಿ ಉದ್ಯೋಗ ದೊರಕಿಸಿಕೊಡಲು ಕ್ರಮ ಕೈಕೊಳ್ಳಲಾಗುತ್ತದೆ. ಜೂ.15 ಮತ್ತು 16ರಂದು ರಾಜ್ಯತಂಡ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯವರ ತಂಡ ಈ ತಾಲೂಕಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಲಿದ್ದು, ಆ ಎರಡು ದಿನಗಳಂದು ಶಾಸಕರ ಪರಿಶೀಲನೆಗೆ ತೊಡಕಾಗಬಹುದಾಗಿದೆ. ಒಂದು ವೇಳೆ ರಾಜ್ಯ ತಂಡ ಬಂದಲ್ಲಿ ಆ ಎರಡು ದಿನಗಳ ಶಾಸಕರ ಪರಿಶೀಲನಾ ಕಾರ್ಯಕ್ರಮವನ್ನು ನಂತರದ ದಿನಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ತಹಸೀಲ್ದಾರ್‌ ಜಿ.ಎಸ್‌.ಮಳಗಿ ಈ ಸಂದರ್ಭ ಹಾಜರಿದ್ದು ಎಲ್ಲ ಗ್ರಾಮಲೆಕ್ಕಿಗರಿಗೆ, ಕಂದಾಯ ಇಲಾಖೆ ಸರ್ಕಲ್‌ಗ‌ಳಿಗೆ, ನಾಡಕಚೇರಿ ಉಪ ತಹಸೀಲ್ದಾರ್‌ ಗಳಿಗೆ ಶಾಸಕರ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಿರಬೇಕು ಮತ್ತು ಸರ್ಕಾರದ ಸೌಲಭ್ಯ ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದು ನಿರ್ದೇಶನ ನೀಡುವುದಾಗಿ ತಿಳಿಸಿದರು.

ಟಾಪ್ ನ್ಯೂಸ್

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25protest

ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ

23goat

ವೈಜ್ಞಾನಿಕ ಆಡು ಸಾಕಾಣಿಕೆಗೆ ಸಲಹೆ

22white

ಹಂಪ್‌ಗೆ ಬಿಳಿ ಬಣ್ಣ ಬಳಿದು ಜಾಗೃತಿ

25sweets

ಕಾರ್ಮಿಕರ ಮಕ್ಕಳಿಗೆ ಸಿಹಿ ವಿತರಣೆ

24india

ವಿಶ್ವದಲ್ಲಿಯೇ ನಮ್ಮದು ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.