ಶೌಚಾಲಯ ಅನುದಾನ ಬಳಕೆ ವರದಿ ನೀಡಿ; ಉಪ ಲೋಕಾಯುಕ್ತ ಪಾಟೀಲ ತಾಕೀತು

ಮಾಸ್ಕ್ ಧರಿಸುವ ಕುರಿತು ಆರೋಗ್ಯ ಕಾರ್ಯಕರ್ತರಿಂದ ಸೂಕ್ತ ಅರಿವು ಮೂಡಿಸಬೇಕು.

Team Udayavani, Jan 12, 2021, 4:18 PM IST

ಶೌಚಾಲಯ ಅನುದಾನ ಬಳಕೆ ವರದಿ ನೀಡಿ; ಉಪ ಲೋಕಾಯುಕ್ತ ಪಾಟೀಲ ತಾಕೀತು

ವಿಜಯಪುರ: ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ನೈರ್ಮಲ್ಯಕ್ಕೆ ವಿಶೇಷ ಗಮನ ನೀಡಬೇಕು. ಈಗಾಗಲೇ ನಿರ್ಮಾಣಗೊಂಡಿರುವ ಎಲ್ಲ ಶೌಚಾಲಯಗಳ ಅನುದಾನದ ಸಮರ್ಪಕ ಬಳಕೆ, ದುರ್ಬಳಕೆ ಕುರಿತು ಪಂಚಾಯತ್‌ ವಾರು ತಿಂಗಳಲ್ಲಿ ಸಮಗ್ರ ವರದಿ
ನೀಡುವಂತೆ ರಾಜ್ಯ ಉಪ ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ಇಲಾಖೆಗಳ ಬಾಕಿ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಶೌಚಾಲಯ ನಿರ್ಮಾಣದಲ್ಲಿ ಅನುದಾನ ದುರ್ಬಳಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಸ್ವಯಂ ಪ್ರೇರಿತ ದೂರು
ದಾಖಲು ಮಾಡಿ, ಅನುದಾನ ದುರ್ಬಳಕೆ ಮಾಡಿದ ಸಿಬ್ಬಂದಿಯಿಂದ ಬಡ್ಡಿ ಸಮೇತ ಮರುಪಾವತಿಗೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಲೋಕಾಯುಕ್ತ ಅಧಿಕಾರಿ ಸೂಕ್ತ ಕ್ರಮಕ್ಕೆ ತಾಪಂ ಇಒಗಳಿಗೆ ಹೊಣೆ ನಿರ್ವಹಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯದ ಬಾಕಿ ಪ್ರಕರಣಗಳು, ಸರ್ಕಾರದ ಸೌಲಭ್ಯ ವಂಚಿತ, ನೆರೆ ಸಂತ್ರಸ್ತರ ಅರ್ಜಿ ಇತ್ಯರ್ಥದ ಕುರಿತು ಎಲ್ಲ ತಹಶೀಲ್ದಾರ್‌ರು ತಿಂಗಳಲ್ಲಿ ಸಮಗ್ರ ವರದಿ ಹಾಗೂ ಬಾಕಿ ಪ್ರಕರಣಗಳ ಕುರಿತು ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.

ರೈತರಿಗೆ ಸರ್ಕಾರದ ಸೌಲಭ್ಯಗಳು ಸಕಾಲಕ್ಕೆ ದೊರೆಯಲು ಮತ್ತು ತಮ್ಮ ವ್ಯವಸಾಯದಲ್ಲಿ ಆಗುವಂತಹ ನಷ್ಟ ತಪ್ಪಿಸಲು ಮಣ್ಣು ತಪಾಸಣೆ, ಸಸಿ, ಬೆಳೆ ಸಂರಕ್ಷಣೆ, ರಸ ಗೊಬ್ಬರಗಳ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಈವರೆಗೆ ರೈತರಿಗೆ ಮಣ್ಣು ತಪಾಸಣೆ ಸೌಲಭ್ಯ ಕಲ್ಪಿಸಿದ ಬಗ್ಗೆ ಗ್ರಾಮವಾರು ವರದಿ ಸಲ್ಲಿಸಲು ಸೂಚಿಸಿದ ಅವರು, ರೈತರಿಗೆ ಇಲಾಖೆಗಳ ಮಾಹಿತಿ ಕುರಿತು ಜಾಗೃತಿ ಮೂಡಿಸಲು ಸೂಚಿಸಿದರು.

ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ವರದಿ ಸಲ್ಲಿಸುವ ಜೊತೆಗೆ ವಿವಿಧ ಬೆಳೆಗಳಿಗೆ ರೋಗ ನಿಯಂತ್ರಣ ಹತೋಟಿಗೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು. ಕೃಷಿ-ತೋಟಗಾರಿಕೆ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ರೂಪಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಬೃಹತ್‌-ಸಣ್ಣ ನೀರಾವರಿ ಯೋಜನೆಗಳು ವ್ಯಾಪ್ತಿಯಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ವಿವಿಧ ಕಾಲುವೆಗಳ ಮೂಲಕ ನೀರು ಹರಿದು ಕೆರೆಗಳ
ಭರ್ತಿಯಾಗಿ ನೀರು ಪೋಲಾಗದಂತೆ ತಡೆಗಟ್ಟಲು ಈವರೆಗೆ ನಿರ್ಮಿಸಿದ ಬ್ಯಾರೇಜ್‌, ಚೆಕ್‌ಡ್ಯಾಮ್‌ ನಿರ್ಮಾಣ ವಿವರ ನೀಡುವಂತೆ ಸೂಚಿಸಿದ ಅವರು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳವಂತೆ ಸರ್ಕಾರಕ್ಕೆ ನಿರ್ದೇಶನ ನಿಡಿವುದಾಗಿಯೂ ಸೂಚಿಸಿದರು. ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಕಾಲುವೆ ನಿರ್ಮಾಣ ಮತ್ತು ಇತರೆ ಕಾಮಗಾರಿಗಳಿಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಸಂತ್ರಸ್ತರಿಗೆ ನಿಗದಿತ ಪರಿಹಾರ ನೀಡಿ, ಯೋಜನೆ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಅದರಂತೆ ಕೋವಿಡ್‌ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಹಾಗೂ ಕೋವಿಡ್‌-19 ಪಾಸಿಟಿವ್‌ ಪ್ರಮಾಣ ಕಡಿಮೆ ಮಾಡಿರುವುದಕ್ಕೆ ಜಿಲ್ಲಾಡಳಿತ
ಹಾಗೂ ಆರೋಗ್ಯ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೋವಿಡ್‌ ಎರಡನೇ ಅಲೆ ಬಗ್ಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.

ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕುರಿತು ಆರೋಗ್ಯ ಕಾರ್ಯಕರ್ತರಿಂದ ಸೂಕ್ತ ಅರಿವು ಮೂಡಿಸಬೇಕು. ವಿವಿಧ ಗ್ರಾಮಗಳಲ್ಲಿ ಬಹಿರ್ದೆಸೆ ಪದ್ಧತಿಯಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ವಿಜಯಪುರ ನಗರದ ಸ್ವತ್ಛತೆ ಬಗ್ಗೆ ವಿಶೇಷ ಕ್ರಮ ಕೈಗೊಳ್ಳಬೇಕು. ಮಧ್ಯಪ್ರದೇಶದ ಇಂದೋರ್‌ ಮತ್ತು ಮೈಸೂರು ಮಾದರಿಯಲ್ಲಿ ಸಮಗ್ರ ಸ್ವತ್ಛತೆಗೆ ವಿಶೇಷ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಪೊಲೀಸ್‌ ಇಲಾಖೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಅದರಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ದೂರುಗಳಿಗೆ ಸ್ಪಂದಿಸದ, ಭ್ರಷ್ಟಾಚಾರದಲ್ಲಿ ತೊಡಗಿರುವಂತಹ ಅ ಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ವಿವಿಧ ವಸತಿ ಯೋಜನೆಗಳಡಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು. ಅನರ್ಹರಿಗೆ ಈ ಸೌಲಭ್ಯ ದೊರೆಯಬಾರದು. ಅಧಿಕಾರಿಗಳು ಸಾಮಾಜಿಕ ಬದ್ಧತೆಯೊಂದಿಗೆ ಜನರಿಗಾಗಿ ಸೇವೆ ಕಲ್ಪಿಸಬೇಕು. ಕರ್ತವ್ಯದಲ್ಲಿ ಬದ್ಧತೆ ಮತ್ತು ತಕ್ಷಣ ಸ್ಪಂದಿಸಬೇಕು. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸುವ ಜೊತೆಗೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ, ಎಡಿಸಿ ಡಾ| ಔದ್ರಾಮ್‌, ಲೋಕಾಯುಕ್ತ ಪೊಲೀಸ್‌ ಅಧೀಕ್ಷಕಿ ಯಶೋಧಾ ಒಂಟಗೋಡಿ, ಎಎಸ್ಪಿ ರಾಮ ಅರಿಸಿದ್ದಿ ಇದ್ದರು.

ಟಾಪ್ ನ್ಯೂಸ್

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ನಾನಿನ್ನೂ ಜೆಡಿಎಸ್‌ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ

ನಾನಿನ್ನೂ ಜೆಡಿಎಸ್‌ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25protest

ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ

23goat

ವೈಜ್ಞಾನಿಕ ಆಡು ಸಾಕಾಣಿಕೆಗೆ ಸಲಹೆ

22white

ಹಂಪ್‌ಗೆ ಬಿಳಿ ಬಣ್ಣ ಬಳಿದು ಜಾಗೃತಿ

25sweets

ಕಾರ್ಮಿಕರ ಮಕ್ಕಳಿಗೆ ಸಿಹಿ ವಿತರಣೆ

24india

ವಿಶ್ವದಲ್ಲಿಯೇ ನಮ್ಮದು ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಅಧ್ಯಯನ ಪೀಠಗಳಲ್ಲಿ ಸಂಶೋಧನೆ ನಡೆಯಲಿ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ನಾನಿನ್ನೂ ಜೆಡಿಎಸ್‌ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ

ನಾನಿನ್ನೂ ಜೆಡಿಎಸ್‌ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.