ನಾಡಗೌಡ ಮೌನಿಬಾಬಾ- ನಡಹಳ್ಳಿ ಡೋಂಗಿಬಾಬಾ: ವಾಲಿ


Team Udayavani, Feb 27, 2018, 3:30 PM IST

vij-5.jpg

ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 25 ವರ್ಷದಿಂದ ಆಳ್ವಿಕೆ ಮಾಡುತ್ತಿರುವ ಶಾಸಕ ಸಿ.ಎಸ್‌. ನಾಡಗೌಡರು ಇನ್ನೂ ಬ್ರಿಟಿಷರ ರೀತಿ ಪಾಳೆಗಾರಿಕೆ ಆಡಳಿತ ನಡೆಸಿದ್ದರೆ, ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಕ್ಷೇತ್ರವನ್ನು ಹಾಳುಗೆಡುವಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ಒಬ್ಬರು ಮೌನಿ ಬಾಬಾರಂತೆ ವರ್ತನೆ ಮಾಡಿದರೆ ಇನ್ನೊಬ್ಬರು ಡೋಂಗಿ ಬಾಬಾರಂತೆ ವರ್ತಿಸುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ವಾಲಿ ವ್ಯಂಗ್ಯವಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದ ನಾಲತವಾಡ ಭಾಗದಲ್ಲಿ ಇನ್ನೂ ನಾಡಗೌಡ ಪಾಳೆಗಾರಿಕೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ವಿರುದ್ಧ ಯಾರೂ ಪ್ರಶ್ನೆ ಮಾಡದಂತೆ ಮಾಡಿದ್ದಾರೆ.
 
ಉತ್ತಮ ಸಮಾಜಕ್ಕೋಸ್ಕರ ಜನ ಜಾಗೃತಿ ಅಭಿಯಾನ ನಿಮಿತ್ತ ನಾಲತವಾಡಕ್ಕೆ ತೆರಳಿದಾಗ ಬೆಂಬಲಿಗರೊಬ್ಬರು ನಾಡಗೌಡರ ಬಗ್ಗೆ ಯಾವುದೇ ರೀತಿ ಪ್ರಶ್ನೆ ಮಾಡಬೇಡಿ. ನಿನ್ನನ್ನು ಜೀವಂತ ಹೋಗಲು ಅವರು ಬಿಡುವುದಿಲ್ಲ ಎಂಬ ಬೆದರಿಕೆ ಮಾತು ಹೇಳುತ್ತಾರೆ. ಪ್ರಶ್ನಾತೀತ ನಾಯಕರೆಂದು ಹೇಳಿಕೊಳ್ಳುವ ನಾಡಗೌಡರು ಜನರು ಪ್ರಶ್ನೆ ಮಾಡದ ಹಾಗೆ ಅಭಿವೃದ್ಧಿ ಮಾಡಿಲ್ಲ, ಕೇವಲ ಭಯ ಹುಟ್ಟಿಸುವ ರೀತಿಯಲ್ಲಿ ಕಾಪಾಡಿಕೊಂಡು ಮುನ್ನಡೆದಿದ್ದಾರೆ ಎಂದರು. 

ಸಹೋದರ ಪೃಥ್ವಿರಾಜ್‌ ನಾಡಗೌಡ ನಾಲತವಾಡ ಪಪಂ ಅಧ್ಯಕ್ಷರಾಗಿದ್ದು ಅರ್ಹರಿಗೆ ಮನೆ ಹಂಚಿಲ್ಲ. ಕೆಲ ಕುಟುಂಬಗಳು ಅಂಗವಿಕಲತೆಯಿಂದ ಹಾಗೂ ಫಾರ್ಸಿಯಿಂದ ಬಳಲುತ್ತಿದ್ದು ಅಂತವರಿಗೂ ಮನೆಗಳು ಸಿಕ್ಕಿಲ್ಲ. ಶಾಸಕ ನಾಡಗೌಡರು ದೆಹಲಿ ವಿಶೇಷ ಪ್ರತಿನಿಧಿಯಾಗಿ ಟಪಾಲು ಕೊಡುವ ಕೆಲಸ ಮಾಡುತ್ತಿದ್ದಾರೆ ಹೊರತು ಕ್ಷೇತ್ರದಲ್ಲಿ ಜನರ ಸಮಸ್ಯೆಗಳು ಅವರಿಗೆ ಗೊತ್ತಿಲ್ಲ ಎಂದು ದೂರಿದರು.

ಅಡವಿಸೋಮನಾಳ ಗ್ರಾಮದಲ್ಲಿ 10 ವರ್ಷದ ಹಿಂದೆಯೇ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡ ಕಟ್ಟಲಾಗಿದೆ. ಆದರೆ ಅದು ಬಳಕೆಯಾಗದೇ ದುಸ್ಥಿತಿಗೆ ಬರುತ್ತಿದೆ. ಉದ್ಘಾಟನೆ ಮಾತ್ರ ಕಾಣುತ್ತಿಲ್ಲ. ಇನ್ನೂ ಕೆಲ ಕನ್ನಡ ಶಾಲೆಗಳಲ್ಲಿ ಪುಂಡ ಪೋಕರಿಗಳು ದಾರು ಕುಡಿದು ಜೂಜಾಡುತ್ತಿದ್ದಾರೆ. ಪೊಲೀಸ್‌ ಇಲಾಖೆಗೆ ಬೀಟ್‌ ಹಾಕಿರಿ ಎಂದು ದೂರು ನೀಡಿದರೂ ಪ್ರಯೋಜನೆಯಾಗಿಲ್ಲ ಎಂದರು. 

ಜಮೀನಿಗೆ ಸಂಬಂಧಿಸಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದ ವ್ಯಕ್ತಿಯೊಬ್ಬನಿಗೆ ಶಾಸಕ ನಡಹಳ್ಳಿ ಕಪಾಳ ಮೋಕ್ಷ ಮಾಡಿದ್ದಾರೆ. ಎಲ್ಲ ಅಧಿಕಾರಿಗಳನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದಬ್ಟಾಳಿಕೆ ಮಾಡುತ್ತಿದ್ದಾರೆ. ಜನಜಾಗೃತಿ ಅಭಿಯಾನ ಕೈಗೊಂಡರೆ ವಾಲಿ ಹಿಂದೆ ಯಾರೂ ಹೋಗಬ್ಯಾಡ್ರಿ, ನಿಮಗೆ ಏಷ್ಟು ದುಡ್ಡು ಬೇಕು ಹೇಳಿಕೆ ಎಂದು ಅವರನ್ನು ನನ್ನಿಂದ ದೂರಸರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ನಾನು ಕೈಗೊಂಡಿರುವ ಈ ಜನ ಜಾಗೃತಿ ಉದ್ದೇಶ ನಾಡಗೌಡ ನಡಹಳ್ಳಿ ಹಟಾವೋ ಮುದ್ದೇಬಿಹಾಳ ಬಚಾವೋ ಹೊಂದಿದೆ. ಈ ಇಬ್ಬರೂ ಶಾಸಕರು ಮಾವಿನಗಿಡದ ಹಾಗಿಲ್ಲ, ಬೇವಿನ ಗಿಡದ ಹಾಗೆ ವಿಷ ಕಾರುವವರಾಗಿದ್ದಾರೆ.  ಮುಂದೆಯೂ ಕೂಡಾ ಇವರಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾತ್ರ ಶೂನ್ಯ. ಮುಂದಿನ ಚುನಾವಣೆಯಲ್ಲಿ ಇವರು ಜನರ ಬಳಿಗೆ ಹೋಗುವುದಾದರೆ ರಸ್ತೆ, ನೀರು, ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರೋಗ್ರೆಸ್‌ ಕಾರ್ಡ್‌ ಮುಂದಿಟ್ಟುಕೊಂಡು ಹೋಗಲಿ, ಅದನ್ನು ಬಿಟ್ಟು ಭಯಹುಟ್ಟಿಸುತ್ತ ಮತ ಪಡೆದು ಪಾಳೇಗಾರಿಕೆ ಆಡಳಿ ನಿಲ್ಲಿಸಲಿ ಎಂದರು.

ಶಾಸಕ ನಡಹಳ್ಳಿ ಅವರಿಗೆ ಸ್ವಕ್ಷೇತ್ರ ದೇವರಹಿಪ್ಪರಗಿಯನ್ನು ಕ್ಲೀನ್‌ ಮಾಡಲು ಆಗುತ್ತಿಲ್ಲ. ಅದನ್ನು ಬಿಟ್ಟು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ನಾನು ಯಾವುದೇ ಪಕ್ಷದ ಪರ ಕೆಲಸ ಮಾಡಲು ಹೊರಟಿಲ್ಲ. ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಆಡಳಿತ ತರಬೇಕು ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕು ಬರಬೇಕೆಂಬುದು ನನ್ನ ಆಸೆಯಾಗಿದೆ. ನಾನು ರಾಜಕೀಯಕ್ಕೆ ಬರಬೇಕೆಂಬ ಆಸೆಯಿಲ್ಲ. ಸಾಮಾಜಿಕ ಹೋರಾಟಗಳನ್ನು ಮುಂದುವರಿಸಿ ಕ್ಷೇತ್ರದಲ್ಲಿ ಬದಲಾವಣೆ ತರಲು ಜನಜಾಗೃತಿ ಅಭಿಯಾನ ಕೈಗೊಂಡಿದ್ದೇನೆ ಎಂದರು.
ಮಾಳಿಂಗರಾಯ ವನಹಳ್ಳಿ, ಬಸವರಾಜ ದನ್ನೂರ, ಮಲ್ಲಿಕಾರ್ಜುನ ಲಿಂಗದಳ್ಳಿ ಇದ್ದರು. 

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-muddebihala

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.