Udayavni Special

ಶಾಸಕ ಪಾಟೀಲ ವಿರುದ್ಧ ನೇದಲಗಿ ಆಕ್ರೋಶ

ಶಾಂತಿಯಿಂದ ಬದುಕು ಸಾಗಿಸುತ್ತಿದ್ದ ನಾವೆಲ್ಲರೂ ಶಾಂತಿಯಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದೇವೆ.

Team Udayavani, Jan 19, 2021, 6:42 PM IST

ಶಾಸಕ ಪಾಟೀಲ ವಿರುದ್ಧ ನೇದಲಗಿ ಆಕ್ರೋಶ

ಇಂಡಿ: ಯಾವುದೇ ಶಾಸಕರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೋಗಿ ಶಾಂತಿ ಕದಡುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗಿನ ಶಾಸಕ  ಯಶವಂತರಾಯಗೌಡ ಪಾಟೀಲ ಅವರು ಸಾಲೋಟಗಿ ಗ್ರಾಮಕ್ಕೆ ಬಂದು ಗ್ರಾಪಂಗೆ ತಮ್ಮ ಬೆಂಬಲಿಗರನ್ನು ನಿಲ್ಲಿಸಿ ನಮ್ಮಲ್ಲಿ ಶಾಂತಿ ಕದಡಿಸುವ ಸಣ್ಣತನ ಮಾಡಿದ್ದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು.

ಪಟ್ಟಣದ ಡಾ| ಸಾರ್ವಭೌಮ ಬಗಲಿ ಚಿಕ್ಕಮಕ್ಕಳ ಆಸ್ಪತ್ರೆ ಸಭಾ ಭವನದಲ್ಲಿ ಇಂಡಿ ತಾಲೂಕಿನ ಸಾಲೋಟಗಿ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿ ಸಿದ ನೇದಲಗಿ ಪ್ಯಾನಲ್‌ ಗುಂಪಿನ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಲೋಟಗಿ ಗ್ರಾಮದಲ್ಲಿ ಶಾಂತಿಯಿಂದ ಬದುಕು ಸಾಗಿಸುತ್ತಿದ್ದ ನಾವೆಲ್ಲರೂ ಶಾಂತಿಯಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದೇವೆ. ಆದರೆ ಶಾಸಕ ಪಾಟೀಲ ಅವರು ಗ್ರಾಮದಲ್ಲಿ ಬಂದು ಶಾಂತಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಮುಂಬರುವ ದಿನದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಬಿಜೆಪಿಯಿಂದ ಯಾರೇ ಟಿಕೇಟ್‌ ತಂದರೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ಮಾತನಾಡಿ, ಸಾಲೋಟಗಿ ಗ್ರಾಮದ ಶಿವಯೋಗೆಪ್ಪ ನೇದಲಗಿ ಈ ಭಾಗದಲ್ಲಿ ದೊಡ್ಡ ಶಕ್ತಿಯಾಗಿದ್ದು, ಅವರನ್ನು ಬಿಜೆಪಿಯಲ್ಲಿ ಸೇರ್ಪಡೆ ಮಾಡಿಕೊಂಡರೆ ಬಿಜೆಪಿಗೆ ಆನೆ ಬಲ ಬಂದಂತಾಗುತ್ತದೆ. ಅವರನ್ನು ಬಿಜೆಪಿಯಲ್ಲಿ ಸೇರ್ಪಡೆ ಮಾಡಿಕೊಂಡರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಬೆಂಗಳೂರಿನಲ್ಲಿ ಭೇಟಿಯಾದ ಸಚಿವ ಗೋವಿಂದ ಕಾರಜೋಳ ಅವರಿಗೆ ತಿಳಿಸಿದ್ದೇನೆ.

ತಾಲೂಕಿನಲ್ಲಿ ಬಿಜೆಪಿ ಆಶಕ್ತವಾಗಿದೆ. ಇಂಡಿ ತಾಲೂಕಿನಲ್ಲಿ ಬಿಜೆಪಿಗೆ ಶಕ್ತಿ ತುಂಬಬೇಕಾದರೆ ಶಿವಯೋಗೆಪ್ಪ ನೇದಲಗಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಕೇವಲ ಬಿಜೆಪಿ ಸದಸ್ಯನಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಪ್ರಯೋಜನವಿಲ್ಲ. ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೇಟ್‌ ನೀಡಬೇಕು ಎಂದು ಸಚಿವ ಕಾರಜೋಳ ಅವರಿಗೆ ಮನವರಿಕೆ ಮಾಡಿದ್ದೇನೆ. ಅಲ್ಲದೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸೋಲಿಸಬೇಕಾದರೆ ಅದು ನೇದಲಗಿ ಅವರಿಗೆ ಟಿಕೇಟ್‌ ನೀಡಿದರೆ ಮಾತ್ರ ಸಾಧ್ಯ ಎಂದು ಹೇಳಿದ್ದೇನೆ ಎಂದರು.

ಶಾಸಕರಿಗೆ ಅಂಜಿ ಯಾರೂ ಅವರ ವಿರುದ್ಧಮಾತನಾಡುತ್ತಿಲ್ಲ. ಅವರ ವಿರುದ್ಧ ಧೈರ್ಯ ತೋರಿ ಎದೆಗಾರಿಕೆಯಿಂದ ಮಾತನಾಡುವವರು ನೇದಲಗಿ
ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ನನಗೆ ಬಿಜೆಪಿಯಲ್ಲಿನ ಉನ್ನತ ಮಟ್ಟದ ವರಿಷ್ಠರ ಪರಿಚಯ ಇದೆ. ಇವರಿಗೆ ಟಿಕೇಟ್‌ ನೀಡಿದರೆ ಅನುಕೂಲವಾಗುತ್ತದೆ ಎಂದು ಹೇಳುವೆ ಎಂದರು. ಶಿವಯೋಗೆಪ್ಪ ಚನಗೊಂಡ, ಆದಮ್‌ ಅಗರಖೇಡ, ಶ್ರೀಮಂತ ಬಾರಿಕಾಯಿ, ಅಯೂಬ ನಾಟೀಕಾರ, ಶಿವಯೋಗಿ ರೂಗಿಮಠ ಇದ್ದರು.

ಟಾಪ್ ನ್ಯೂಸ್

Ram Mandira

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ

salar movie

‘ಸಲಾರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್…!

ಸುರತ್ಕಲ್ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲು!

ಸುರತ್ಕಲ್ ಬೀಚ್ ನಲ್ಲಿ ಶಿವಮೊಗ್ಗ ಮೂಲದ ಬಾಲಕ ಸಮುದ್ರ ಪಾಲು!

ಸಿ.ಡಿಯಿಂದ, ಫೋಟೊದಿಂದಲೋ ಯೋಗೇಶ್ವರ್ ಗೆ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ

ಸಿ.ಡಿಯಿಂದ, ಫೋಟೊದಿಂದಲೋ ಯೋಗೇಶ್ವರ್ ಗೆ ಬಿಜೆಪಿ ಪರಿಷತ್‌ ಸ್ಥಾನ ಕೊಟ್ಟು ಮಂತ್ರಿ ಮಾಡಿದೆ

Puneeth Rajkuamr

ಅಪ್ಪು ಸಿನಿ ಪಯಣಕ್ಕೆ 45 ವಸಂತಗಳ ಸಂಭ್ರಮ…ತಾರೆಯರಿಂದ ಶುಭಹಾರೈಕೆಗಳ ಸುರಿಮಳೆ  

Indian Oil Launches 100 Octane Fuel In Hyderabad

ಹೈದರಾಬಾದ್ ನಲ್ಲಿ 100 ಆಕ್ಟೇನ್ ಪ್ರೀಮಿಯಂ ಪೆಟ್ರೊಲ್ ಬಿಡುಗಡೆ ಮಾಡಿದ ಐಒಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ ಉಪ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೇಟ್ ಆಕಾಂಕ್ಷಿ : ಮುತಾಲಿಕ್

ಬೆಳಗಾವಿ ಉಪ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೇಟ್ ಆಕಾಂಕ್ಷಿ : ಮುತಾಲಿಕ್

ಸಾರಿಗೆ ಸಂಸ್ಥೆ ಬಸ್ ದರ ಏರಿಕೆ ಪ್ರಸ್ತಾವನೆ ಸರ್ಕಾರ ಮುಂದಿಲ್ಲ : ಸವದಿ

ಸಾರಿಗೆ ಸಂಸ್ಥೆ ಬಸ್ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸವದಿ

27-11

ಕಾಂಗ್ರೆಸ್‌ಮನೆಕದ ತಟ್ಟಿದ ಮನಗೂಳಿ ಪುತ್ರ ಅಶೋಕ

ಜಲಜೀವನದಿಂದ ಮನೆ ಮನೆಗೆ ನೀರು

ಜಲಜೀವನದಿಂದ ಮನೆ ಮನೆಗೆ ನೀರು

ಸಮಿತಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ

ಸಮಿತಿಗೆ ತಪ್ಪು ಮಾಹಿತಿ ನೀಡಿದರೆ ಕ್ರಮ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

Harihareswar Swami Fair

ಹರಿಹರೇಶ್ವರ ಬ್ರಹ್ಮ ರಥೋತ ರಥೋತ್ಸವ

Ram Mandira

ರಾಮಮಂದಿರ ನಿರ್ಮಾಣಕ್ಕೆ ತಳುಕಿನ ಎಂಜಿನಿಯರ್‌ ಸೀತಾರಾಮ್‌ ಸಾಥ್‌

Taralubalu HUnnime

ತರಳಬಾಳು ಹುಣ್ಣಿಮೆಗಿಲ್ಲ ಜಾತಿ-ಮತದ ಬೇಲಿ

Turavanuru Ratostava

ತುರುವನೂರಲ್ಲಿ ರಥೋತ್ಸವ-ದಾಸಯ್ಯನ ಪವಾಡ

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

ಬಾದಾಮಿಯ ತಾಣಗಳಿಗೆ ಶೀಘ್ರವೇ ಹೊಸ ಮೆರಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.