Udayavni Special

ನೆಗೆಟಿವ್‌ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ


Team Udayavani, Apr 26, 2021, 8:38 PM IST

ಜಕಹಗ್ಗ

ವಿಜಯಪುರ : ವಿಜಯಪುರ ಜಿಲ್ಲೆ ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿದೆ. ಸೋಂಕಿನ ಪ್ರಮಾಣ ಹೆಚ್ಚಾಗಿರುವ ಆ ರಾಜ್ಯದಿಂದ ವಿಜಯಪುರ ಜಿಲ್ಲೆಗೆ ಬರುವರಿಗೆ ಕಡ್ಡಾಯವಾಗಿ ಕೋವಿಡ್‌ ನೆಗೆಟಿವ್‌ ವರದಿ ದಾಖಲೆ ತರುವಂತೆ ತಾಕೀತು ಮಾಡಲಾಗಿದೆ ಎಂದು ಕೋವಿಡ್‌ ನಿಯಂತ್ರಣ ಚಟುವಟಿಕೆಯ ವಿಜಯಪುರ ಉಸ್ತುವಾರಿ ಅಧಿಕಾರಿಯಾಗಿರುವ ಎಡಿಜಿಪಿ ಭಾಸ್ಕರರಾವ್‌ ಹೇಳಿದರು.

ರವಿವಾರ ವಿಜಯಪುರ ಜಿಲ್ಲೆಯ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ಪೊಲೀಸರ ಸ್ಥಿತಿಗತಿ ಕುರಿತು ಜಿಲ್ಲೆಯ ಪೊಲೀಸ್‌ ಅ ಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಿಂದ ಬರುವರ ಮೇಲೆ ನಿಗಾ ಇಡಲು ಗಡಿಯಲ್ಲಿ ತೆರೆದಿರುವ ಚೆಕ್‌ಪೋಸ್‌ rಗಳಲ್ಲಿ ನೆಗೆಟಿವ್‌ ವರದಿಗಳಿದ್ದವರಿಗೆ ಮಾತ್ರ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಕ್ರಮ ಸಮರ್ಪಕವಾಗಿ ನಿರ್ವಹಣೆ ಆಗುತ್ತಿದೆ ಎಂದರು.

ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಸಂದರ್ಭದಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದಾಗಲೂ ಕೋವಿಡ್‌ ಸೋಂಕು ಬಾಧಿಸದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕರ್ತವ್ಯ ನಿರ್ವಹಿಸಬೇಕಿದೆ. ಜೀವ-ಜೀವನ ಎರಡು ರಕ್ಷಣೆ ಆಗಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸರಳವಾದ ಕರ್ಫ್ಯೂ ಜಾರಿ ಮಾಡಿದೆ, ಜನತೆ ಸರ್ಕಾರದ ನಿಯಮ ಪಾಲಿಸಿ ಕೋವಿಡ್‌ ರೋಗದಿಂದ ರಕ್ಷಿಸಿಕೊಳ್ಳಲು ಜನರೂ ಕರ್ತವ್ಯ ನಿರತ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು. ರಾಜ್ಯದಲ್ಲಿ ಸರಳವಾದ ಕರ್ಫ್ಯೂ ನಿಯಮ ಜಾರಿಯಲ್ಲಿದೆ. ಪ್ರತಿ ಜಿಲ್ಲೆಯ ವ್ಯವಸ್ಥೆಯ ಉಸ್ತುವಾರಿಗೆ ಸರ್ಕಾರ ಹಿರಿಯ ಅ ಧಿಕಾರಿಗಳನ್ನು ನೇಮಿಸಿದೆ. ನನಗೆ ಈ ಭಾಗದ ಉಸ್ತುವಾರಿ ನೀಡಿದ್ದು, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳ ಭೇಟಿ ಬಳಿಕ ವಿಜಯಪುರ ಜಿಲ್ಲೆಯ ಪರಿಸ್ಥಿತಿ ಅವಲೋಕನ ನಡೆಸಿದ್ದೇನೆ. ನಾಳೆ ಬಾಗಲಕೋಟೆ ಜಿಲ್ಲೆಗೆ ಭೇಟಿ ಬಳಿಕ ಈ ಭಾಗದ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು. ಕೋವಿಡ್‌ ಸೋಂಕು ನಿಗ್ರಹಕ್ಕಾಗಿ ಕರ್ಫ್ಯೂ ಜಾರಿಗೆ ತಂದಿದ್ದರೂ ಜನರ ಹಿತದೃಷ್ಟಿಯಿಂದ ಅನೇಕ ಚಟುವಟಿಕೆಗಳಿಗೆ ವಿನಾಯ್ತಿ ನೀಡಲಾಗಿದೆ.

ಮತ್ತೂಂದೆಡೆ ಎರಡನೇ ಅಲೆಯ ವೇಗ ತಗ್ಗಿಸಿ ಸೋಂಕಿನ ಕೊಂಡಿ ಕಳಚುವ ಕುರಿತು ಸರ್ಕಾರದೊಂದಿಗೆ ಸಹಕರಿಸಲು ಜನರೂ ಮುಂದಾಗಿದ್ದಾರೆ. ಕರ್ಫ್ಯೂ ಸಂದರ್ಭದಲ್ಲಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಿ ಮನೆಗಳಲ್ಲಿ ಉಳಿದಿದ್ದಾರೆ. ಜನರು ಕೂಡ ನಿಯಮ ಪಾಲಿಸುವ ಮೂಲಕ ಸಹಕರಿಸುತ್ತಿದ್ದಾರೆ. ಒಂದೊಮ್ಮೆ ಲಾಕ್‌ಡೌನ್‌ ಮಾಡಿದ್ದರೆ ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಿ, ಜನ ಜೀವನ ಕಷ್ಟವಾಗಲಿತ್ತು ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿದರು. ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿಯೂ ಸಹ ಜನರ ಮೇಲೆ ಯಾವುದೇ ರೀತಿ ಬಲ ಪ್ರಯೋಗ, ಪೊಲೀಸ್‌ ಬಲವಂತದ ಕ್ರಮಗಳು ನಡೆಯುತ್ತಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೊಲೀಸರು ಮನವೊಲಿಸುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ವ್ಯಾಪಾರಿಗಳೇ ಸ್ವಯಂ ಪ್ರೇರಿತವಾಗಿ ವಹಿವಾಟು ಬಂದ್‌ ಮಾಡಿದ್ದು, ಜನರೂ ಅನಗತ್ಯವಾಗಿ ಮನೆಗಳಿಂದ ಹೊರ ಬರದೇ ಸಹಕರಿಸಲು ಕಾರಣವಾಗಿದೆ ಎಂದರು. ಈಗಾಗಲೇ ಹಳ್ಳಿಗಳಲ್ಲಿಯೂ ಕೊರೊನಾ ಜಾಗೃತಿ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿಯೂ ಗ್ರಾಮೀಣ ಭಾಗದಲ್ಲಿ ಇನ್ನಷ್ಟೂ ಜಾಗೃತಿ ಕಾರ್ಯಕ್ರಮ ಸಂಘಟಿಸಲಾಗುವುದು ಎಂದು ವಿವರಿಸಿದರು. ಎಸ್ಪಿ ಅನುಪಮ್‌ ಅಗರವಾಲ್‌, ಎಎಸ್‌ಪಿ ಡಾ| ಶ್ರೀರಾಮ ಅರಸಿದ್ಧಿ ಇದ್ದರು.

ಟಾಪ್ ನ್ಯೂಸ್

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಪಂಚ ಸಚಿವರು ಫುಲ್‌ ಬ್ಯುಸಿ

ಪಂಚ ಸಚಿವರು ಫುಲ್‌ ಬ್ಯುಸಿ

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hukyutyut6

ವಿಜಯಪುರ : ಸಿಡಿಲು ಬಡಿದು ಮೂವರು ಸಾವು

jump

ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಜಿಗಿದು ಕೋವಿಡ್ ಸೋಂಕಿತ ಆತ್ಮಹತ್ಯೆ

ವಿಜಯಪುರ : ಜಿಲ್ಲೆಯಲ್ಲಿ ಮತ್ತೆ 596 ಸೋಂಕಿತರು ಪತ್ತೆ,  ನಾಲ್ವರ ಸಾವು

ವಿಜಯಪುರ : ಜಿಲ್ಲೆಯಲ್ಲಿ ಮತ್ತೆ 596 ಸೋಂಕಿತರು ಪತ್ತೆ,  ನಾಲ್ವರ ಸಾವು

ವಚಬಬವಬವಚಷವ

ವದಂತಿಗೆ ಕಿವಿಗೊಡಬೇಡಿ: ಯತ್ನಾಳ

As one for exploitation free society

ಶೋಷಣೆ ಮುಕ್ತ ಸಮಾಜಕ್ಕಾಗಿ ಒಂದಾಗಿ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಧಾಬೋಲ್ಕರ್‌ ಹತ್ಯೆ ಆರೋಪಿಗೆ ಜಾಮೀನು

ಧಾಬೋಲ್ಕರ್‌ ಹತ್ಯೆ ಆರೋಪಿಗೆ ಜಾಮೀನು

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.