Udayavni Special

ರೋಗಿಗಳಿಗೆ ಸಿಗುತ್ತಿಲ್ಲ ಆಂಬ್ಯುಲೆನ್ಸ್‌ ಸೌಲಭ್ಯ


Team Udayavani, May 15, 2021, 3:55 PM IST

ರೋಗಿಗಳಿಗೆ ಸಿಗುತ್ತಿಲ್ಲ ಆಂಬ್ಯುಲೆನ್ಸ್‌  ಸೌಲಭ್ಯ

ತಾಳಿಕೋಟೆ: ಜನರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ  ನೀಡುವ ಸಲುವಾಗಿ ಆಂಬ್ಯುಲೆನ್ಸ್‌ ಸೇವೆಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡತ್ತಿದೆ. ಆದರೆ ಅಧಿ  ಕಾರಿಗಳ ನಿರ್ಲಕ್ಷéದಿಂದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ವಾಹನದ ಸೌಲಭ್ಯವೇ ಇಲ್ಲ.

ಇದರಿಂದ ಗ್ರಾಮೀಣ ಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಪರಾಡುವಂತಾಗಿದೆ. ಈ ಮೊದಲು ತಾಲೂಕು ಕೇಂದ್ರಕ್ಕೆ 30 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದರಂತೆ ತಾಳಿಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೂ ಕೂಡಾ 108 ವಾಹನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ 04-10-2020ರಂದು ಮನಗೂಳಿ ಹತ್ತಿರ ನಡೆದ ಅಪಘಾತದಿಂದಾಗಿ ಬೆಳಗಾವಿಯ ಗ್ಯಾರೇಜ್‌ ಸೇರಿಕೊಂಡ ಆಂಬ್ಯುಲೆನ್ಸ್‌ ರಿಪೇರಿಯ ದುಡ್ಡು ಕಟ್ಟಲಾಗದಿದ್ದಕ್ಕೆ ಅಲ್ಲಿಯೇ ನಿಂತಿದೆ.

ಅಪಘಾತದ ನಂತರ ಕಳೆದ ಒಂದೇ ವಾರದಲ್ಲಿ ಬೇರೆ 108 ವಾಹನವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಒದಗಿಸಿದ್ದರು. ಕೇವಲ 2 ದಿನಗಳಲ್ಲಿ ಈ ವಾಹನದ ಇಂಜಿನ್‌ ಕೆಲಸದ ಮೇಲೆ ಜಿಲ್ಲಾ ಆಸ್ಪತ್ರೆ ಆವರಣ ಸೇರಿಕೊಂಡು ವರ್ಷ ಸಮೀಸುತ್ತಿದ್ದರೂ ರಿಪೇàರಿಆಗದೇ ಅಲ್ಲಿಯೇ ಅನಾಥವಾಗಿ ಬಿದ್ದಿದೆ. 108 ವಾಹನ ಸೌಲಭ್ಯ ಇಲ್ಲದ್ದರ ಕುರಿತು ಈಗಾಗಲೇ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳೇ

ಪತ್ರ ಬರೆದು ತಿಳಿಸಿದರೂ ಸಹ ವಾಹನ ಪೂರೈಸಿಲ್ಲ. ವಾಹನ ಸೌಲಭ್ಯ ಒದಗಿಸಬೇಕೆಂದು ಈಗಾಗಲೇ ಸಾಕಷ್ಟು ಭಾರಿ ಅನೇಕ ಸಂಘ ಸಂಸ್ಥೆಯವರು ಸಂಬಂಧಿಸಿದ ಅಧಿಕಾರಿಗಳ, ಸಚಿವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.

ಕೋವಿಡ್‌ ರೋಗಿಗೂ ತೊಂದರೆ: ಕೋವಿಡ್‌ ಸೊಂಕಿತರನ್ನು ಜಿಲ್ಲಾ ಆಸ್ಪತ್ರೆಗೆ ಸೂಕ್ತ ಸಮಯದಲ್ಲಿ ಮುಟ್ಟಸಬೇಕೆಂದರೆ ನಿರ್ದಿಷ್ಟ ಪಡಿಸಿದ ವಾಹನ ಸೌಲಭ್ಯವಿಲ್ಲ. ವೈದ್ಯರು ಸೂಚಿಸಿದ ನಂತರವೇ ಕೋವಿಡ್‌ ರೋಗಿಗಳ ಸಾಗಿಸಲು 30 ಕಿ.ಮೀ ಅಂತರದಲ್ಲಿರುವ ಮುದ್ದೇಬಿಹಾಳದಿಂದ ನಿಗದಿ  ಪಡಿಸಿರುವ ವಾಹನವೇ ಬರಬೇಕು. ಅದು ಬೇರೆ ಕಡೆ ಹೋಗಿದ್ದರೆ ದಿನವಿಡಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ರೋಗಿಗಳಿಗೆ ಬಂದೊದಗಿದೆ. ಕೋವಿಡ್‌ ರೋಗಿಯನ್ನು ಕರೆದುಕೊಂಡು ಹೋಗುವ ವಾಹನ ಚಾಲಕನಿಗೆ ಮತ್ತು ಸಿಬ್ಬಂದಿಗೆ ಪಿಪಿ ಕಿಟ್‌ ಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದರೋಗಿಯನ್ನು ಕರೆದುಕೊಂಡು ಹೋಗುವ ಚಾಲಕ, ಸಿಬ್ಬಂದಿಗೆ ತಮ್ಮ ಜೀವದ ಮೇಲೆ ಭಯ ಹುಟ್ಟುವಂತಾಗಿದೆ.

ಜಿಲ್ಲೆಯಲ್ಲಿವೆ 32 ವಾಹನ: ಜಿಲ್ಲೆಯಲ್ಲಿ ಒಟ್ಟು 32 ಆಂಬ್ಯುಲೆನ್ಸ್‌ಗಳಿದ್ದು ಅದರಲ್ಲಿ ಈಗಾಗಲೇ 8 ವಾಹನಗಳು ದುರಸ್ತಿ ಕಾಣದೇ ಜಿಲ್ಲಾ ಆಸ್ಪತ್ರೆಯಲ್ಲಿತುಕ್ಕು ಹಿಡಿಯುತ್ತಿದ್ದರೆ, ಇನ್ನೂ ಕೆಲವು ವಾಹನಗಳುತಾಲೂಕು ಕೇಂದ್ರಗಳಲ್ಲಿ ತುಕ್ಕು ಹಿಡಿಯುತ್ತ ನಿಂತಿವೆ.ಹಣ ತೆರುವ ಪರಿಸ್ಥಿತಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಗು ಮಗು ಮತ್ತು ಜನನಿ ಸುರಕ್ಷಾ ಯೋಜನೆಯ ಎರಡು ಆಂಬ್ಯುಲೇನ್ಸ್‌ಗಳಿವೆ. ಅವುಗಳಲ್ಲಿ ನಗುಮಗು ಗರ್ಭಿಣಿಯರನ್ನು, ತಾಯಿ ಮಗುವನ್ನು ಮನೆಗೆ ಮತ್ತು ಆಸ್ಪತ್ರೆಗೆ ಕರೆದುಕೊಂಡು ಬರಲು ಮೀಸಲಿಡಲಾಗಿದೆ.

ಇನ್ನೊಂದು ಜನನಿ ಸುರಕ್ಷಾದ ವಾಹನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಿಟ್ಟು ಬರುವಂತಹದ್ದಾಗಿದೆ. ಆದರೆ ಜನನಿ ಸುರಕ್ಷಾ ವಾಹನದ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಈ ವಾಹನದಲ್ಲಿ ಪ್ರಥಮ ಚಿಕಿತ್ಸೆಯಾಗಲಿ, ಸ್ಟಾಫ್‌ನರ್ಸ್‌ ಆಗಲಿ ಇರಲ್ಲ. ಕೇವಲ ಚಾಲಕನ ಮೇಲೆ ನಿರ್ವಹಣೆಯಾಗುತ್ತಿದೆ. ಇದರಿಂದ ಹಣ ತೆತ್ತು ಬೇರೆ ವಾಹನದಲ್ಲಿ ಹೋಗುವಂತಾಗಿದೆ ಎಂದು ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ವಾಹನ ಒದಗಿಸುವ ಕುರಿತು ಜಿವಿಕೆಇಎಂಆರ್‌ ನಿರ್ವಹಣಾ ಸಂಸ್ಥೆಗೆಪತ್ರ ಬರೆದಿದ್ದೇನೆ. ವಾಹನ ಚಲಾಣೆಯಾಗದೇವಾಹನ ಚಲಾವಣೆಯಲ್ಲಿದೆ ಎಂದು ಆನ್‌ಲೈನ್‌ನಲ್ಲಿ ತೋರಿಸುತ್ತಿರುವುದು ಗಮನಕ್ಕೆ ಬಂದಿಲ್ಲ.ಕೂಡಲೇ ಮಾಹಿತಿ ಪಡೆದು ನಿರ್ವಹಣಾ ಸಂಸ್ಥೆ ಮೇಲೆ ಕ್ರಮಕ್ಕೆ ಕಮಿಷನರ್‌ಗೆ ಪತ್ರಬರೆಯುತ್ತೇನೆ. -ಮಹೇಂದ್ರ ಕಾಪ್ಸೆ ಡಿಎಚ್‌ಒ, ವಿಜಯಪುರ

 

-ಜಿ.ಟಿ. ಘೋರ್ಪಡೆ

ಟಾಪ್ ನ್ಯೂಸ್

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಆಲಮಟ್ಟಿ: ಸಸಿ ಪಡೆಯಲು ಅರಣ್ಯ ನರ್ಸರಿಯಲ್ಲಿ ರೈತರಿಂದ ನೂಕುನುಗ್ಗಲು: ಕೋವಿಡ್ ನಿಯಮ ಉಲ್ಲಂಘನೆ

ಆಲಮಟ್ಟಿ: ಸಸಿ ಪಡೆಯಲು ಅರಣ್ಯ ನರ್ಸರಿಯಲ್ಲಿ ರೈತರಿಂದ ನೂಕುನುಗ್ಗಲು; ಕೋವಿಡ್ ನಿಯಮ ಉಲ್ಲಂಘನೆ

asdfgew3ertfdewerfg

ಆರೋಗ್ಯ ಸುರಕ್ಷತಾ ಕ್ರಮ ಅನುಸರಿಸಲು ಡಾ|ಬೀಳಗಿ ಸಲಹೆ

xcvbnmnhgfdsertyhg

ಸಮಸ್ಯೆ ಸೌಹಾರ್ದ ಪರಿಹಾರಕ್ಕೆ  ಅಧಿಕಾರಿಗಳ ಪ್ರಯತ್ನ

MUST WATCH

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಜನಜೀವನ ಅಸ್ತವ್ಯಸ್ತ

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

ಹೊಸ ಸೇರ್ಪಡೆ

leopard

ಭೀಮಾ ತೀರದಲ್ಲಿ ಚಿರತೆ ಹಾವಳಿ: ರೈತರು ಹೊಲದಲ್ಲಿ ಕಟ್ಟಿದ್ದ ಆಕಳು ಕೊಂದು ಭಕ್ಷಣೆ

ದ್ಗಹಜಹಗ್ದ್ಗಹಜ

ಲಸಿಕೆಯೊಂದಿಗೆ ಹಳ್ಳಿ ಗೆ ಸಾರಿಗೆ ಬಸ್‌

arun-singh

‘ಅಜ್ಜಿಗೆ ಅರಿವೆ ಚಿಂತೆ,ಮೊಮ್ಮಗಳಿಗೆ ಡಾಬಿನ ಚಿಂತೆ’:ಅರುಣ್ ಸಿಂಗ್ ಭೇಟಿಗೆ ಕಾಂಗ್ರೆಸ್ ಲೇವಡಿ

ಸದ್ಗಹಜಹಗ್ದರತಯು

ಮೂಗಿನಿಂದ ಮೆದುಳಿಗೆ ಹೊಕ್ಕಿದ್ದ ಗಡ್ಡೆ ಹೊರಕ್ಕೆ

j15srs4

ಮಣ್ಣು ಬದು ನಿರ್ಮಾಣಕ್ಕೆ ಪುನಃ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.