Udayavni Special

ರನ್‌ ವೇ ಉನ್ನತೀಕರಣಕ್ಕೆ ಪ್ರಸ್ತಾವನೆ

Team Udayavani, Apr 18, 2021, 8:02 PM IST

ಗಹಜಗ್ಷ

ವಿಜಯಪುರ: ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣದಲ್ಲಿರುವ ಮೊದಲ ಹಂತದ ಕಾಮಗಾರಿ ಭರದಿಂದ ಸಾಗಿದ್ದು, ನಿಗದಿಗಿಂತ ಒಂದು ತಿಂಗಳ ಮೊದಲೇ ಕಾಮಗಾರಿ ಮುಗಿಯಲಿದೆ.

ಇದೇ ವೇಳೆ ಸರಕು ಸಾಗಿಸುವ ಬೃಹತ್‌ ವಿಮಾನಗಳು ಇಳಿಯಲು ಅವಕಾಶ ಕಲ್ಪಿಸುವ ರನ್‌ ವೇ ಉನ್ನತೀಕರಣಕ್ಕೆ 90 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಶನಿವಾರ ಮದಭಾವಿ-ಬುರಣಾಪುರ ಪ್ರದೇಶದಲ್ಲಿ ಉದ್ದೇಶಿತ ವಿಜಯಪುರ ವಿಮಾನ ನಿಲಾœಣ ಯೋಜನಾ ಪ್ರದೇಶದಲ್ಲಿ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ಸದ್ಯ 80ಆರ್‌72 ಮಾದರಿಯಲ್ಲಿ ಕೇವಲ ಪ್ರಯಾಣಿಕರ ಸಣ್ಣ ವಿಮಾನ ಇಳಿಯುವ ವ್ಯವಸ್ಥೆಯ ರನ್‌ವೇ ನಿರ್ಮಿಸಲಾಗುತ್ತಿದೆ.

ಆದರೆ ರಫ್ತು ಗುಣಮಟ್ಟದ ದ್ರಾಕ್ಷಿ, ಲಿಂಬೆ, ದಾಳಿಂಬೆಯಂಥ ತೋಟಗಾರಿಕೆ ಬೆಳೆ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ರೈತರ ಉತ್ಪನ್ನಗಳು ವಿದೇಶಕ್ಕೆ ರವಾನಿಸಲು ಅವಕಾಶ ಕಲ್ಪಿಸಬೇಕಿದೆ. ಹೀಗಾಗಿ ಸರಕು ಸಾಗಾಣಿಕೆಯ ಬೃಹತ್‌ ಸಾಮರ್ಥ್ಯದ ವಿಮಾನ ಇಳಿಯುವ ವ್ಯವಸ್ಥೆ ಕಲ್ಪಿಸಲು ಯೋಜಿಸಿದೆ ಎಂದರು. ಇದಕ್ಕಾಗಿ 3 ಕಿ.ಮೀ. ಉದ್ದದ ಹಾಗೂ 40 ಮೀಟರ್‌ ಅಗಲದ ರನ್‌ವೇ ಮಾಡಬೇಕಿದೆ. ಒಂದೊಮ್ಮೆ ಇದೀಗ ನಡೆದಿರುವ ಕಾಮಗಾರಿಯಂತೆ 2050 ಮೀಟರ್‌ ಉದ್ದ ಹಾಗೂ 30 ಮೀಟರ್‌ ಅಗಲದ ರನ್‌ವೇ ಮಾಡಿದಲ್ಲಿ ಭವಿಷ್ಯದಲ್ಲಿ ಉನ್ನತೀಕರಣಕ್ಕೆ ಈ ರನ್‌ವೇ ಕಿತ್ತು ಹಾಕಿಯೇ ಉನ್ನತೀಕರಿಸಬೇಕು.

ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟವಾಗಲಿದೆ. ನಮ್ಮಲ್ಲಿ ಅಗತ್ಯ ಸ್ಥಳ ಇರುವ ಕಾರಣ ಈಗಲೇ ದೊಡ್ಡ ಪ್ರಮಾಣದ ವಿಮಾನ ಇಳಿಯುವ ರನ್‌ವೇ ನಿರ್ಮಿಸುವ ಚಿಂತನೆ ನಡೆದಿದೆ ಎಂದರು. ದೊಡ್ಡ ಗಾತ್ರದ ಸರಕು ವಿಮಾನಗಳ ರನ್‌ವೇ ನಿರ್ಮಾಣಕ್ಕಾಗಿ ಮೂರನೇ ಹಂತದ ಯೋಜನೆ ರೂಪಿಸಿ, ತಾಂತ್ರಿಕ ಸಲಹೆ ನೀಡಿರುವ ಅ ಧಿಕಾರಿಗಳು ಇದಕ್ಕಾಗಿ 90 ಕೋಟಿ ರೂ. ವೆಚ್ಚದ ಅಂದಾಜು ಮಾಡಿದ್ದಾರೆ.

ಈ ಪ್ರಸ್ತಾವನೆ ಸಲ್ಲಿಸಿ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ನನ್ನ ಕನಸಿನ ವಿಮಾನ ನಿಲ್ದಾಣ ಯೋಜನೆ ಮಾಡಿಯೇ ತೀರುತ್ತೇನೆ ಎಂದರು. ಈಗಾಗಲೇ 220 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದ ಕಾಮವಾರಿ ರೂಪಿಸಿದ್ದು, ಮೊದಲ ಹಂತದಲ್ಲಿ 905 ಕೋಟಿ ರೂ. ಕಾಮಗಾರಿ ಭರದಿಂದ ನಡೆದಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಆಲೂರ ಹಸರಿನ ಗುತ್ತಿಗೆದಾರರು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದು, 11 ತಿಂಗಳ ಕಾಲಮಿತಿಯ ಕಾಮಗಾರಿ 10 ತಿಂಗಳಲ್ಲೇ ಮುಗಿಸುವ ನಿರೀಕ್ಷೆ ಇದೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಹಣ ನೀಡಿ, ವಿಜಯಪುರ ವಿಮಾನ ನಿಲ್ದಾಣಕ್ಕೆ ಕಡಿಮೆ ಅನುದಾನದ ಕೊಟ್ಟು ತಾರತಮ್ಯ ಮಾಡಿದ್ದಾರೆ ಎಂಬ ವಾದ ಸರಿಯಲ್ಲ.

ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದಾಗ ತನ್ನ ತವರಿಗೆ ಹೆಚ್ಚಿನ ಆದ್ಯತೆಯ ಪ್ರೀತಿ ತೋರುವುದು ಸಾಮಾನ್ಯ. ಹಾಗಂತ ಇದನ್ನು ಅನ್ಯಾಯ ಮಾಡಿದ್ದಾರೆ ಎನ್ನಲಾದು. ಇಷ್ಟಕ್ಕೂ ಶಿವಮೊಗ್ಗಕ್ಕೂ, ವಿಜಯಪುರಕ್ಕೂ ಹೋಲಿಕೆ ಮಾಡದೇ ನಮಗೂ ಹೆಚ್ಚಿನ ಅನುದಾನ ನೀಡಿ ಎಂದು ಆಗ್ರಹಿಸುವುದು ಸೂಕ್ತ. ನಾನು ಇದನ್ನೇ ಮಾಡಲು ಹೊರಟಿದ್ದೇನೆ ಎಂದು ಸಮರ್ಥಿಸಿದರು. ಮೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್‌ ಘಟಕಾಂಬಳೆ, ಲೋಕೋಪಯೋಗಿ ಎಎ ಬಿ.ಬಿ. ಪಾಟೀಲ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಇದ್ದರು.

ಟಾಪ್ ನ್ಯೂಸ್

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

sadu

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆ

cats

ದಾವಣಗೆರೆ ಜಿಲ್ಲೆಯಲ್ಲಿಂದು ಕೋವಿಡ್ ಗೆದ್ದ 187 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ವಿಜಯಪುರ ಜಿಲ್ಲೆಯಲ್ಲಿ ಮತ್ತೆ 10  ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ

ಭೀಮಾನದಿ ಪಾತ್ರದಲ್ಲಿ ಅನಧಿಕೃತ ಮರಳು ಅಡ್ಡೆಗೆ ದಾಳಿ: 5 ಲಕ್ಷ .ರೂ ಮೌಲ್ಯದ ಮರಳು ವಶ

ಭೀಮಾನದಿ ಪಾತ್ರದಲ್ಲಿ ಅನಧಿಕೃತ ಮರಳು ಅಡ್ಡೆಗೆ ದಾಳಿ: 5 ಲಕ್ಷ .ರೂ ಮೌಲ್ಯದ ಮರಳು ವಶ

ಬಬಲೇಶ್ವರ ಕ್ಷೇತ್ರದ ಕಾರಜೋಳ, ತಿಕೋಟಾ ಪಟ್ಟಣದಲ್ಲಿ ಕೋವಿಡ್ ಕೇರ್ ಕೇಂದ್ರ: ಎಂ.ಬಿ.ಪಾಟೀಲ

ಬಬಲೇಶ್ವರ ಕ್ಷೇತ್ರದ ಕಾರಜೋಳ, ತಿಕೋಟಾ ಪಟ್ಟಣದಲ್ಲಿ ಕೋವಿಡ್ ಕೇರ್ ಕೇಂದ್ರ: ಎಂ.ಬಿ.ಪಾಟೀಲ

m b patil

ಬಬಲೇಶ್ವರ ಕ್ಷೇತ್ರದ ಕಾರಜೋಳ, ತಿಕೋಟಾದಲ್ಲಿ ಕೋವಿಡ್ ಕೇರ್ ಕೇಂದ್ರ: ಎಂ.ಬಿ.ಪಾಟೀಲ್

ಪತ್ರಕರ್ತ ದತ್ತಾತ್ರೇಯ ಪನಾಳಕರ ಕೋವಿಡ್ ಗೆ ಬಲಿ

ವಿಜಯಪುರ: ಪತ್ರಕರ್ತ ದತ್ತಾತ್ರೇಯ ಪನಾಳಕರ ಕೋವಿಡ್ ಗೆ ಬಲಿ

MUST WATCH

udayavani youtube

ಉಡುಪಿ ಮಲ್ಲಿಗೆ ಬೆಳೆದು ಆದಾಯ ಗಳಿಸಿದ ಪುತ್ತೂರಿನ ಲೋಬೋ..!

udayavani youtube

ಮಳೆಗೆ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!

udayavani youtube

ಆಪತ್ಬಾಂಧವ ಆಟೋ ಡ್ರೈವರ್ – ಮಹೇಶ್ ಮಣಿಪಾಲ

udayavani youtube

ಕೊರೊನಾ ವಿಷಮ ಸ್ಥಿತಿ ಯಲ್ಲಿರುವ ಭಾರತಕ್ಕೆ “ಸಂಜೀವಿನಿ’

udayavani youtube

ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ನಾಗಿಣಿ ಡ್ಯಾನ್ಸ್ ಶಿಕ್ಷೆ

ಹೊಸ ಸೇರ್ಪಡೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

ಎಬಿ ಡಿ ವಿಲಿಯರ್ ನಿವೃತ್ತಿ ಪಕ್ಕಾ : ಕ್ರಿಕೆಟ್‌ ಸೌತ್‌ ಆಫ್ರಿಕಾ ಸ್ಪಷ್ಟನೆ

sadu

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

18-23

ಖಾಸಗಿ ವೈದ್ಯರಿಂದ ತಪಾಸಣೆಗೆ ಅನುಮತಿ ನೀಡಲು ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.