ವಿಜಯಪುರ: ಕೃಷಿ ಕಾಯ್ದೆ ವಿರೋಧಿಸಿ ರೈಲುತಡೆ ಯತ್ನಿಸಿದ ರೈತರನ್ನು ವಶಕ್ಕೆ ಪಡೆದು ಬಿಡುಗಡೆ
Team Udayavani, Feb 18, 2021, 3:54 PM IST
ವಿಜಯಪುರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಗರದಲ್ಲಿ ರೈಲು ಸಂಚಾರ ತಡೆಯಲು ಯತ್ನಿಸಿದ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಗುರುವಾರ ಸಂಯುಕ್ತ ಕಿಸಾನ್ ಮೋರ್ಚಾ, ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದಲ್ಲಿರುವ ರೈಲು ನಿಲ್ದಾಣದ ಎದುರು ಜಮಾಯಿಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಿಂದ ವಿಜಯಪುರ ನಗರಕ್ಕೆ ಬಸವ ರೈಲು ಬರುವ ಸಂದರ್ಭದಲ್ಲಿ ರೈಲು ಸಂಚಾರ ತಡೆಗೆ ಮುಂದಾದಾಗ ಪೊಲೀಸರು ನಿಲ್ದಾಣದ ಪ್ರವೇಶ ದ್ವಾರದಲ್ಲೇ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.
ರೈತ-ಕಾರ್ಮಿಕರ ಮುಖಂಡರಾದ ಭೀಮಶಿ ಕಲಾದಗಿ, ಭಗವಾನರಡ್ಡಿ, ಬಾಳು ಜೇವೂರ, ಅಕ್ರಂ ಮಾಶ್ಯಾಳಕರ, ಎಚ್.ಟಿ. ಮಲ್ಲಿಕಾರ್ಜುನ, ಸದಾನಂದ ಮೋದಿ, ಭರತಕುಮಾರ, ರೇಣುಕಾ, ಲಕ್ಷ್ಮಣ ಹಂದ್ರಾಳ, ಪವಿತ್ರಾ, ರೇಣುಕಾ ಸೇರಿದಂತೆ ನೂರಾರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು, ರೈಲು ಸಂಚಾರ ತಡೆ ಹೋರಾಟವನ್ನು ವಿಫಲಗೊಳಿಸಿದರು