ಬಿಎಲ್‌ಒ ಕಾರ್ಯದಿಂದ ಬಿಡುಗಡೆ ಮಾಡಲು ಮನವಿ
ಕಳೆದ 15 ವರ್ಷದಿಂದ ಬಿಎಲ್ ಒಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯ
Team Udayavani, Jan 18, 2021, 6:32 PM IST
ವಿಜಯಪುರ: ಬಿಎಲ್‌ಒಗಳನ್ನು ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ತಿಕೋಟಾ ತಾಲೂಕು ಘಟಕಗಳಿಂದ ತಿಕೋಟಾ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು. ಕಳೆದ 15 ವರ್ಷದಿಂದ ಬಿಎಲ್ ಒಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಮ್ಮ ವೇತನಾಧಿ ಕಾರಿಗಳು ಗಳಿಕೆ ರಜೆ ಕೊಡಲಿಕ್ಕೆ ಬರುವದಿಲ್ಲವೆಂದು ತಿಳಿಸಿ ಗಳಿಕೆ ರಜೆ ದಾಖಲಿಸುವುದನ್ನು ನಿಲ್ಲಿಸಿದ್ದಾರೆ.
ಈ ಕಾರ್ಯ ನಮಗೆ ಹೆಚ್ಚುವರಿ ಹೊರೆಯಾಗಿದ್ದು, ನಮ್ಮ ಕರ್ತವ್ಯ ಭಾರವು ಹೆಚ್ಚಾಗಿದ್ದು ಈ ಕೆಲಸವನ್ನು ಬೇರೆ ಇಲಾಖೆಗೆ ಅಥವಾ ನಿರುದ್ಯೋಗಿಗಳಿಗೆ ಹಂಚಿಕೆ ಮಾಡಿ ನಮ್ಮನ್ನು ಬಿಎಲ್‌ಒ ಕೆಲಸದಿಂದ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ತಿಕೋಟಾ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಟಕ್ಕಳಕಿ, ಖಜಾಂಚಿ ಹನುಮಂತ ಕಾಲೆಬಾಗ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎ.ಬಿ. ಧಡಕೆ, ಜಿಒಸಿಸಿ ಬ್ಯಾಂಕ್ ನಿರ್ದೇಶಕ ಈರಪ್ಪ ತೇಲಿ, ಸಾಬು ಗಗನಮಾಲಿ, ಪುಷ್ಪಾ ಗಚ್ಚಿನಮಠ, ಸವಿತಾ ಬಿ.ಎಂ, ದ್ರೌಪದಿ ಕಬಾಡೆ, ಐ.ಬಿ. ಪಾಟೀಲ, ವಿದ್ಯಾವತಿ ಸವನಳ್ಳಿ, ಸೋಮನಾಥ ಬಾಗಲಕೋಟಿ, ಎಂ.ಐ. ಕಣಬೂರ, ಜೆ.ಎಚ್. ವಠಾರ, ಕುಮಾರ ಗಳತಗಿ, ಬಿ.ಎಸ್. ಸಾವಳಗಿ, ಎಸ್.ಎನ್. ತಡಲಗಿ, ಎಸ್.ಐ.ಬಾಗಲಕೋಟ, ಜಯಶ್ರೀ ಬಾಗಲಕೋಟ ಇದ್ದರು.