ಸೈನಿಕರ ತ್ಯಾಗ ಸ್ಮರಣೀಯ: ಕುಂಟೋಜಿಶ್ರೀ


Team Udayavani, Dec 21, 2021, 2:12 PM IST

ಸೈನಿಕರ ತ್ಯಾಗ ಸ್ಮರಣೀಯ: ಕುಂಟೋಜಿಶ್ರೀ

ಮುದ್ದೇಬಿಹಾಳ: ನಮ್ಮ ಸೈನಿಕರನ್ನು, ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದ ನಿವೃತ್ತ ಸೈನಿಕರನ್ನು ಸತ್ಕಾರ ಮಾಡುವುದು, ರಕ್ಷಣೆ ಮಾಡುವುದು ಮಠಾಧೀಶರ ಕರ್ತವ್ಯ. ಪಾಕಿಸ್ತಾನ ಯುದ್ಧದ ಸವಿ ನೆನಪಿನಲ್ಲಿ ದೇಶದೆಲ್ಲೆಡೆ ವಿಜಯ್‌ ದಿವಸ್‌ಆಚರಿಸುತ್ತಿರುವ ಸಂಭ್ರಮದ ನಡುವೆಇಂಥ ಕಾರ್ಯ ದೇಶಭಕ್ತರಿಗೆ ಪ್ರೇರಕ ಶಕ್ತಿಯಾಗಬಹುದಾಗಿದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ಹೇಳಿದರು.

ಮುದೂರ ಗ್ರಾಮದಲ್ಲಿ ವಾಸವಾಗಿರುವಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡು ಮಡಿದ ಯೋಧ ಮಲ್ಲಪ್ಪನ ಪತ್ನಿ ಶಿವಗಂಗವ್ವ ಮಾದರ,ಸೇನೆಯಿಂದ ನಿವೃತ್ತರಾದ ಮುದ್ದೇಬಿಹಾಳ ಪಟ್ಟಣದಲ್ಲಿ ವಾಸವಾಗಿರುವ ಎಸ್‌ಬಿಐಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಸ್‌.ಆರ್‌.ಕುಲಕರ್ಣಿ ಮತ್ತು ಎಸ್‌.ಎಸ್‌.ಹಿರೇಮಠ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಿ ಮಾತನಾಡಿದ ಅವರು, ಸೈನಿಕರ ತ್ಯಾಗ ಸ್ಮರಣೀಯ ಎಂದರು.

ಪತಿಯೊಂದಿಗೆ ಕೇವಲ 8 ತಿಂಗಳು ಸಂಸಾರ ನಡೆಸಿ, ಆತ ವೀರಮರಣವನ್ನಪ್ಪಿದ ಮೇಲೆ ಕಳೆದ 50 ವರ್ಷಗಳಿಂದ ಪತಿಯ ಸ್ಮರಣೆಯಲ್ಲೇ ಜೀವಿಸುತ್ತಿರುವಶಿವಗಂಗಮ್ಮಸೈನಿಕರಪತ್ನಿಯರಿಗೆ ಮಾದರಿಯಾಗಿದ್ದಾರೆ. ಸರ್ಕಾರದಿಂದ ಬರುವ ಅತ್ಯಲ್ಪ ಮಾಸಾಶನದಲ್ಲೇ ಜೀವನ ನಡೆಸುತ್ತಿರುವ ಇವರಂಥ ಅನೇಕ ವಿಧವೆಯರನ್ನು ಸರ್ಕಾರ ಗುರುತಿಸಿ ಈಗ ದೊರೆಯುವ ಸೌಲಭ್ಯಗಳನ್ನು ನೀಡಿ ಅವರ ಸೇವೆಯನ್ನು ಎತ್ತಿ ಹಿಡಿಯುವ ಅವಶ್ಯಕತೆ ಇದೆ ಎಂದರು. ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖಂಡರೂ ಆಗಿರುವ ಪತ್ರಕರ್ತ ಪುಂಡಲೀಕ ಮುರಾಳ ಮಾತನಾಡಿ, ಡಾ| ಚನ್ನವೀರ ದೇವರು ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಒಬ್ಬ ಮಠಾಧೀಶರಾಗಿ ಮಾಜಿ ಸೈನಿಕರ ಮನೆಗೇ ಹೋಗಿ ಅವರನ್ನು ಸತ್ಕರಿಸಿ ನಿಮ್ಮ ಜೊತೆ ಶ್ರೀಮಠ ಸದಾಕಾಲ ಇರುತ್ತದೆ ಎಂದು ಆಶೀರ್ವದಿಸಿ ಅವರಿಗೆ ಧೈರ್ಯ ತುಂಬಿರುವುದು ಶ್ಲಾಘನೀಯ. ಶ್ರೀಮಠದ ಈ ಸಮಾಜಮುಖೀ ಕಾರ್ಯಕ್ಕೆ ನಮ್ಮಂಥವರು ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್‌ .ಐ.ಹಿರೇಮಠ ಮಾತನಾಡಿ, ಡಾ| ಚನ್ನವೀರ ದೇವರು ಅತ್ಯಂತ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ. ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರ ಮನೆಗೆ ತೆರಳಿ ಅವರಿಗೆ ಸತ್ಕರಿಸಿದ್ದು ಇಡಿ ಸೈನ್ಯವಲಯಕ್ಕೆ ಸಂದ ಗೌರವವಾಗಿದೆ. ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ಎಂದಿಗೂ ಮರೆಯಲಾಗದಂಥದ್ದು. ಮಾಜಿ ಸೈನಿಕರ ಸಂಘವು ಸದಾ ಶ್ರೀಮಠದ ಜೊತೆಗಿದೆ ಎಂದರು.

ಸನ್ಮಾನಿತರ ಪರವಾಗಿ ಮಾತನಾಡಿದ ಎಸ್‌. ಆರ್‌.ಕುಲಕರ್ಣಿ, ನಮ್ಮಕುಲಕರ್ಣಿ ಮನೆತನಕ್ಕೂಕುಂಟೋಜಿ ಬಸವಣ್ಣನಿಗೂ ಅವಿನಾಭಾವಸಂಬಂಧ ಇದೆ. ಬಿದರಕುಂದಿ ಕುಲಕರ್ಣಿಯವರಮನೆಗೆ 16ನೇ ಶತಮಾನದಿಂದಲೂ ಕುಂಟೋಜಿ ಬಸವಣ್ಣ ಆರಾಧ್ಯದೈವವಾಗಿದ್ದಾರೆ. ನಮ್ಮ ಪೂರ್ವಜರೆಲ್ಲರೂ ಕುಂಟೋಜಿ ಬಸವಣ್ಣನಿಗೆನಡೆದುಕೊಳ್ಳುತ್ತಿದ್ದರು. ನಮ್ಮ ಮನೆಯ ದೇವರ ಕೋಣೆಯಲ್ಲೂ ಕುಂಟೋಜಿ ಬಸವಣ್ಣ ಇದ್ದಾನೆ. ನಮ್ಮ ಆರಾಧ್ಯದೈವದ ಸ್ಥಾನದಿಂದ ಬಂದುನಮ್ಮನ್ನು ಸತ್ಕರಿಸಿರುವ ಡಾ| ಚನ್ನವೀರ ದೇವರು 15-20 ವರ್ಷಗಳಿಂದ ಸದಾ ನಮ್ಮ ಹೃದಯದಲ್ಲಿ ಕುಳಿತು ನಮ್ಮನ್ನು ಕಾಪಾಡುತ್ತಿದ್ದಾರೆ ಎಂದರು.

ಎಸ್‌.ಆರ್‌.ಕುಲಕರ್ಣಿ ಮತ್ತು ಎಸ್‌.ಎಸ್‌ .ಹಿರೇಮಠರನ್ನು ದಂಪತಿ ಸಮೇತ, ಮುದೂರಿನ ಶಿವಗಂಗಮ್ಮ ಅವರಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಶ್ರೀಮಠದ ಭಕ್ತರು, ಡಾ| ಚನ್ನವೀರ ದೇವರ ಅನುಯಾಯಿಗಳು, ಪುರಸಭೆ ಮಾಜಿ ಸದಸ್ಯ ಸತೀಶ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

9-muddebihala

Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ

1-wqweqewq

BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.