ಜಲ ಗ್ರಾಮವಾಗಿ ಕಂಗೊಳಿಸಲಿದೆ ಸೋಮದೇವರಹಟ್ಟಿ

Team Udayavani, Feb 16, 2019, 8:15 AM IST

ವಿಜಯಪುರ: ಊರಿಗೊಂದು ವನ, ಗ್ರಾಮಕ್ಕೊಂದು ಕೆರೆ ಎಂಬುದು ಘೋಷಣೆಯಾಗಿತ್ತು. ಗ್ರಾಮಕ್ಕೊಂದು ಕೆರೆ ನಿರ್ಮಾಣ ಕಷ್ಟಸಾಧ್ಯ. ಅದಕ್ಕೆ ನೂರಾರು ಅಡಚಣೆಗಳು. ಕೆರೆ ನಿರ್ಮಾಣಕ್ಕೆ ಸೂಕ್ತ ನಿವೇಶನ ಇಲ್ಲದಿರುವದು. ನಿವೇಶನ ಇದ್ದರೆ, ಭೂಸ್ವಾಧೀನ ಸಮಸ್ಯೆ. ರೈತರು ಭೂಮಿ ನೀಡಿದರೂ ಯೋಗ್ಯ ಪರಿಹಾರದ ತೊಂದರೆಗಳು. ಇಷ್ಟಾಗಿ ಹಣಕಾಸಿನ, ತಾಂತ್ರಿಕ ಅನುಮೋದನೆಗಳು. ಮೇಲಾಗಿ ರಾಜಕೀಯ ಇಚ್ಛಾಶಕ್ತಿ ಕೊರತೆ. ಇಂತಹ ಹಲವು ಅಡೆತಡೆ ನಿವಾರಿಸಿ, ಸಣ್ಣ ಗ್ರಾಮದಲ್ಲಿ 3ನೇ ಕೆರೆ ನಿರ್ಮಾಣಗೊಳ್ಳುತ್ತಿದೆ.

ತಿಕೋಟಾ ಸಮೀಪದ ಸೋಮದೇವರಹಟ್ಟಿ ಒಂದಲ್ಲ, ಎರಡಲ್ಲ ಮೂರು ಕೆರೆಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬರದ ಜಿಲ್ಲೆ ಎಂದೇ ಈ ಹಿಂದೆ ಖ್ಯಾತವಾಗಿದ್ದ ವಿಜಯಪುರ ಜಿಲ್ಲೆ ಅದರಲ್ಲೂ ಗೃಹ ಸಚಿವ ಎಂ.ಬಿ. ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಕೆರೆಗಳ ತವರೂರು. ಇಲ್ಲಿ ಎಲ್ಲಿ ನೋಡಿದರಲ್ಲಿ ಕೆರೆಗಳು. ಆ ಕೆರೆಗಳಿಗೆ ದೂರದ ಕೃಷ್ಣಾ ನದಿಯಿಂದ ನೀರೆತ್ತಿ ತುಂಬಿಸಲಾಗುತ್ತಿದ್ದು, ಬೇಸಿಗೆಯಲ್ಲಿಯೂ ಈ ಕೆರೆಗಳು ನೀರಿನಿಂದ ನಳ-ನಳಿಸುತ್ತಿವೆ. 

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ಮಾಣಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ ಫೆ. 18 ರಂದು ಸಂಜೆ ಭೂಮಿಪೂಜೆ ನೆರೆವೇರಿಸಲಿದ್ದು, ಈ ಕೆರೆ ನಿರ್ಮಾಣದಿಂದ ಒಂದೇ ಗ್ರಾಮದಲ್ಲಿ ಮೂರು ಕೆರೆ ಹೊಂದಿದ ಹೆಮ್ಮೆ ಸೋಮದೇವರಹಟ್ಟಿಗೆ ದೊರೆಯಲಿದೆ. 

ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾದ ತಿಕೋಟಾ ಹೋಬಳಿಯಲ್ಲಿಯೇ ಇನ್ನು ಎತ್ತರವಾಗಿರುವ ಒಣಭೂಮಿ ಹೊಂದಿರುವ ಗುಡ್ಡಗಾಡು ಪ್ರದೇಶವೇ ಸೋಮದೇವರಹಟ್ಟಿ ಗ್ರಾಮ. ಇಲ್ಲಿ ಪ್ರಥಮವಾಗಿ ಕೆರೆ ನಿರ್ಮಾಣವಾಗಿದ್ದು, ಕಾಖಂಡಕಿಯ ಜಿ.ಎನ್‌. ಪಾಟೀಲರು 1974ರಲ್ಲಿ ತಿಕೋಟಾ
ಶಾಸಕರಾಗಿದ್ದ ಸಂದರ್ಭದಲ್ಲಿ, 2.88 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕೆರೆ ಇಂದಿಗೂ ಎರಡನೂರು ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಿಸುತ್ತದೆ. 2007ರಲ್ಲಿ ಈ ಗ್ರಾಮದಲ್ಲಿ ಅಂದು ತಿಕೋಟಾ ಶಾಸಕರಾಗಿದ್ದ ಎಂ.ಬಿ. ಪಾಟೀಲರು 30 ಲಕ್ಷ ವೆಚ್ಚದಲ್ಲಿ ಕೆರೆ ನಿರ್ಮಿಸಿದ್ದು, ಇದು ನೂರು ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ಇದೀಗ ಸೋಮದೇವರಹಟ್ಟಿಯಲ್ಲಿ ನಿರ್ಮಿಸುತ್ತಿರುವ ಸೈಟ್‌-3 ಕೆರೆ 91 ಲಕ್ಷ ರೂ. ವೆಚ್ಚದಲ್ಲಿ 9 ತಿಂಗಳು ಅವಧಿಯಲ್ಲಿ ನಿರ್ಮಾಣವಾಗಲಿರುವ ಈ ಕೆರೆ ಉದ್ದ 130 ಮೀಟರ್‌ ಆಗಿದ್ದು, 8.18 ಮೀಟರ್‌ ಎತ್ತರವಿದ್ದು, 2ಎಂ.ಸಿ.ಎಫ್‌.ಟಿ ನೀರು ಶೇಖರಣಾ ಸಾಮರ್ಥಯ ಹೊಂದಿದ್ದು, 35 ಮೀಟರ್‌ ಕೋಡಿ ಇದೆ. ಈ ಎಲ್ಲ ಕೆರೆಗಳಿಗೂ ಕೆರೆ ತುಂಬುವ ಯೋಜನೆಯಡಿ ಪೈಪ್‌ಲೈನ್‌ ಅಳವಡಿಸಿ, ನೀರು ತುಂಬಿಸಲಾಗುತ್ತಿದ್ದು, ಇದೀಗ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ಜಾಲದ ಮುಖಾಂತರ ಕೂಡ ಈ ಕೆರೆ ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಒಂದೇ ಗ್ರಾಮದಲ್ಲಿ ಮೂರು ಕೆರೆಗಳನ್ನು ಹೊಂದುವ ಮೂಲಕ ಸೋಮದೇವರಹಟ್ಟಿ ಜಲಗ್ರಾಮವಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ತಾಳಿಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ 93 ವರ್ಷದಿಂದ ದೇಶಭಕ್ತಿ ಮೂಡಿಸುತ್ತ ಸಾಗಿದೆ ಎಂದು ಆರೆಸ್ಸೆಸ್‌ ಜಿಲ್ಲಾ ವಿಭಾಗ ಪ್ರಚಾರಕ ಪ್ರಮುಖ ದಯಾನಂದ ಹೇಳಿದರು....

  • ವಿಜಯಪುರ: ವರ್ಗವಾಗಿ ಬಂದ ಪಿಎಸ್ ಐ ಮೆರವಣಿಗೆ ಮೂಲಕ ಠಾಣೆಗೆ ಕರೆತಂದು, ಮಹಿಳೆಯರು ಸಾಂಪ್ರದಾಯಿಕ ಆರತಿ ಎತ್ತಿ ಸನ್ಮಾನಿಸಿದ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ...

  • ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ಸಂವಿಧಾನದ  371ನೇ ಜೆ ವಿಧಿ ಜಾರಿ ವಿಶೇಷ ಸೌಲಭ್ಯದಡಿ ವಿಜಯಪುರ ಜಿಲ್ಲೆಯೂ ಸೇರಿಸಿಕೊಂಡರೆ ಒಳ್ಳೆಯದಾಗಿತ್ತು...

  • „ಸೋಮಶೇಖರ ಜಮಶೆಟ್ಟಿ ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಚುನಾವಣೆಯಲ್ಲಿ ದಿನದಿಂದ ದಿನಕ್ಕೆ ಪ್ರಚಾರದ ಕಾವು ರಂಗೇರುತ್ತಿದೆ. ಆರೋಪ-ಪ್ರತ್ಯಾರೋಪಗಳ...

  • ಜಿ.ಎಸ್‌. ಕಮತರ ವಿಜಯಪುರ: ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀ ಅವನು ಪೇಳªಂತೆ ಪಯಣಿಗರು, ಮದುವೆಗೋ, ಮಸಣಕೋ, ಹೋಗೆಂದ ಕಡೆ ಪದ ಕುಸಿಯೋ ಎಂಬುದು ಡಿ.ವಿ.ಜಿ...

ಹೊಸ ಸೇರ್ಪಡೆ