ಕಲ್ಲು ಪುಡಿ ಘಟಕಗಳೇ ಮಾರಕ

Team Udayavani, Feb 23, 2019, 9:30 AM IST

ವಿಜಯಪುರ: ಮನೆ ಬಾಗಿಲು ತೆಗೆಯಂಗಿಲ್ಲ. ಹೊರಗೆ ಬಂದರೆ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು. ನಿತ್ಯವೂ ಕೆಮ್ಮಿನ ಔಷಧ ತರಬೇಕು, ಬೀಗರು-ಬಿಜ್ಜರು ಬಂದರೆ ಎರಡು ದಿನವೂ ಇರುವುದಿಲ್ಲ. ನಮ್ಮ ಬದುಕೇ ನರಕಯಾತನೆ. ನಮ್ಮ ಗೋಳು ಕೇಳುವವರಿಲ್ಲ. ಎಲ್ಲರೂ ಉದ್ಯಮಿಗಳ ಪರವಾಗೇ
ಇದ್ದಾರೆ. ಇಂತಹ ನರಕಯಾತನೆಯಲ್ಲಿ ಬಡವರು ಬದುಕುವುದು ಅನಿವಾರ್ಯವಾಗಿದೆ… ಇದು ನಗರ ವ್ಯಾಪ್ತಿಯ ಗಾಂಧಿನಗರ, ಹಮಾಲರ ಕಾಲೋನಿ, ಬಸವನಗರ, ಯೋಗಾಪುರ ಕಾಲೋನಿ, ಸ್ಪಿನ್ನಿಂಗ್‌ಮಿಲ್‌ ತಾಂಡಾ, ಭಾವಿಕಟ್ಟಿ ತಾಂಡಾ ಸೇರಿದಂತೆ ಸುಮಾರು ನಾಲ್ಕೈದು
ಬಡಾವಣೆಯ ಸುಮಾರು 22 ಸಾವಿರಕ್ಕೂ ಹೆಚ್ಚು ಜನರ ಸಮಸ್ಯೆ. ಈ ಗೋಳು ಇಂದು-ನಿನ್ನೆಯದಲ್ಲ. 

ಕಳೆದ 10 ವರ್ಷಗಳಿಂದಲೂ ಇಲ್ಲಿನ ಜನರು ಅದೇ ನರಕಯಾತನೆಯಲ್ಲಿ ಬದುಕುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡರೂ ಕ್ರಮ ಕೈಗೊಳ್ಳುವ ದಿಟ್ಟತನ ಯಾರೂ ಎಂಬುದು ಇಲ್ಲಿನ ಜನರ ಆಕ್ರೋಶ.

 ಮಾರಕವಾದವು ಕಲ್ಲುಪುಡಿ ಘಟಕ : ಗಾಂಧಿನಗರ, ಭಾವಿಕಟ್ಟಿ ತಾಂಡಾ, ಯೋಗಾಪುರ ಕಾಲೋನಿ, ಸ್ಪಿನ್ನಿಂಗ್‌ಮಿಲ್‌ ತಾಂಡಾ, ಬಸವನಗರ ಸೇರಿದಂತೆ ಹೆದ್ದಾರಿಯಾಚೆಗೆ ಸುಮಾರು 7,600ಕ್ಕೂ ಹೆಚ್ಚು ಮನೆಗಳಿವೆ. ಯೋಗಾಪುರ, ಗಾಂಧಿನಗರ, ಹಮಾಲರ ಕಾಲೋನಿ ಸೇರಿದಂತೆ ಇಲ್ಲಿನ ಜನರಿಗೆ ವಿವಿಧ ಯೋಜನೆಗಳಡಿ ಸರ್ಕಾರವೇ ಆಶ್ರಯ ಮನೆ ನಿರ್ಮಿಸಿಕೊಟ್ಟಿದೆ. ಇಲ್ಲಿರುವವರೆಲ್ಲರೂ ಅತಿ ಬಡವರೇ. ನಿತ್ಯವೂ ನಗರದ ವಿವಿಧೆಡೆ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ದುಡಿಯದಿದ್ದರೆ ಅವರ ಬದುಕು ಸಾಗಲ್ಲ. ಆದರೆ, ಅವರು ದುಡಿದ ಹಣದಲ್ಲಿ ಶೇ. 30ರಷ್ಟು ಆಸ್ಪತ್ರೆಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಪ್ರದೇಶಗಳಲ್ಲಿ ಮೊದಲು 15 ರಿಂದ 18 ಕಲ್ಲುಪುಡಿ ಘಟಕಗಳು ಮಾತ್ರ ಇದ್ದವು. ಆದರೆ, ಈಗ ಸುಮಾರು 64ಕ್ಕೂ ಹೆಚ್ಚು ಘಟಕ ಆರಂಭಗೊಂಡಿವೆ. ಪ್ರತಿಯೊಂದು ಘಟಕವೂ ಮಹಾನಗರ ಪಾಲಿಕೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮ ಸಂಪೂರ್ಣ ಗಾಳಿಗೆ ತೂರಿವೆ. ಹೀಗಾಗಿ ಈ ಕಲ್ಲುಪುಡಿ ಘಟಕಗಳು, ಜನರ ಬದುಕಿಗೆ ಮಾರಕವಾಗಿವೆ.

ಪರಿಸರ ಹಾನಿ: ಕಲ್ಲುಪುಡಿ ಘಟಕಗಳು ಮುಖ್ಯವಾಗಿ 3 ಇಲಾಖೆ ಅಧೀನದಲ್ಲಿ ಬರುತ್ತವೆ. ಪರವಾನಿಗೆ ಸಹಿತ ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿಯೂ ಈ ಇಲಾಖೆಗಳ ಮೇಲಿದೆ. ಆದರೆ, ಈ ಇಲಾಖೆಗಳ ಅಧಿಕಾರಿಗಳು ತಿಂಗಳಿಗೊಮ್ಮೆ ಕಲ್ಲುಪುಡಿ ಘಟಕಗಳ ಸ್ಮರಿಸುತ್ತಾರೆ. ಅದು ಜೇಬು ತುಂಬಿಸಿಕೊಳ್ಳಲು. ಆ ಘಟಕಗಳ ಮಾಲಿಕರು, ಭೇಟಿಯಾಗದಿದ್ದರೆ, ಪರಿಶೀಲನೆ ಹೆಸರಲ್ಲಿ ಭೇಟಿ ಕೊಡುತ್ತಾರೆ. ಆ ಬಳಿಕ ಮಾಲಿಕರು, ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ. ಆಗ ಎಲ್ಲವೂ ಪರಿಸರಮಿತ್ರ ಘಟಕಗಳಾಗುತ್ತವೆ ಎಂಬ ಆರೋಪ ಕೇಳಿ ಬರುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ನಿಂತು ನೋಡಿದರೆ ಭೂಮಿ-ಆಕಾಶ ಒಂದೇ ಎಂಬಂತೆ ಕಾಣುತ್ತದೆ. ಕಾರಣ, ಇಡೀ ನಾಲ್ಕೈದು ಏರಿಯಾಗಳು, ಸಂಪೂರ್ಣ ಧೂಳಿನಿಂದ ಕೂಡಿರುತ್ತವೆ. ಅದೇ ಧೂಳು ತುಂಬಿದ ಬಡಾವಣೆಯಲ್ಲಿ ಜನರು ಬದುಕು ನಡೆಸುತ್ತಿದ್ದಾರೆ.

ನಿಯಮಗಳಿಗೂ ಧೂಳು: ಕಲ್ಲುಪುಡಿ ಘಟಕ ನಿರ್ವಹಣೆ, ನಿರ್ಮಾಣಕ್ಕೆ ಹಲವು ನಿಯಮಗಳಿವೆ. ಜನವಸತಿ ಪ್ರದೇಶದಿಂದ ಕನಿಷ್ಠ 5 ಕಿ.ಮೀ. ದೂರ ಇರಬೇಕು. ಘಟಕಗಳಿಂದ ಧೂಳು ಬರದಂತೆ, ಘಟಕದ ಬೆಲ್ಟ್‌ಗಳಿಗೆ ನಿರಂತರ ನೀರು ಬಿಡುತ್ತಿರಬೇಕು. ಘಟಕಗಳ ಸುತ್ತಲೂ ವರ್ಷಕ್ಕೆ ನಿಂತಿಷ್ಟು ಸಸಿ ನೆಟ್ಟು ಪರಿಸರ ಕಾಳಜಿ ತೋರಬೇಕು. ಇಲ್ಲದಿದ್ದರೆ ಅಂತಹ ಕಲ್ಲುಪುಡಿ ಘಟಕಗಳ ಪರವಾನಿಗೆ ರದ್ದುಪಡಿಸುವ ಅಧಿಕಾರ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗಿದೆ. ಮುಖ್ಯವಾಗಿ ಮಹಾನಗರ ಪಾಲಿಕೆಯ ಕರ್ತವ್ಯವೂ ಇದರಲ್ಲಿವೆ. 

ಆದರೆ, ಈ ಮೂರು ಇಲಾಖೆಗಳಲ್ಲಿ ಸಮನ್ವಯತೆ ಇಲ್ಲ. ನಮಗೆ ಸಂಬಂಧವಿಲ್ಲ. ಧೂಳು ತಡೆಯಲು ಕ್ರಮ ಕೈಗೊಳ್ಳಬೇಕಿರುವುದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲಸ ಎಂದು ಇತರೇ ಇಲಾಖೆಯವರು ಬೇಜವಾಬ್ದಾರಿ ತೋರುತ್ತಾರೆ. ಹೀಗಾಗಿ ಕಲ್ಲುಪುಡಿ ಘಟಕಗಳಿಗೆ ವಿಧಿಸಿರುವ ನಿಯಮಗಳೂ ಧೂಳು ತಿನ್ನುತ್ತಿವೆ ಎಂಬ ಅಸಮಾಧಾನ ಜನರದ್ದು.

ಒಮ್ಮೆ ವಾಸ್ತವ್ಯ ಮಾಡಿ ನೋಡಿ ಸ್ವಾಮಿ…

ಗಾಂಧಿನಗರ ಸುತ್ತಲಿನ ಜನರ ಗೋಳು ಆಲಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ದಿನ ವಾಸ್ತವ್ಯ ಮಾಡಿ ನೋಡಿ ಎಂಬ ಒತ್ತಾಯ ಇಲ್ಲಿನ ಜನರು ಮಾಡುತ್ತಾರೆ. ಒಂದೆಡೆ ಕಲ್ಲುಪುಡಿ ಘಟಕದಿಂದ ಧೂಳು ಇಡೀ
ವಾತಾವರಣ ಕಲುಷಿತಗೊಳಿಸಿದರೆ, ನಿತ್ಯ ಓಡಾಡುವ ಸಾವಿರಾರು ವಾಹನಗಳೂ ಧೂಳೆಬ್ಬಿಸುತ್ತಿವೆ. ಇದರಿಂದ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ಅಧಿಕಾರಿಗಳು- ಜನಪ್ರತಿನಿಧಿಗಳು ಕನಿಷ್ಠ ನಾಲ್ಕೈದು ಗಂಟೆ ನಮ್ಮ ಬಡಾವಣೆಗೆ ಬಂದು ಹೋಗಲಿ. ಆಗಲಾದರೂ, ನಿಯಮ ಮೀರಿ ನಡೆಯುತ್ತಿರುವ ಕಲ್ಲುಪುಡಿ ಘಟಕಗಳಿಂದ ಜನರ ಆರೋಗ್ಯ ಮೇಲೆ, ಪರಿಸರದ ಮೇಲಾಗುತ್ತಿರುವ ಹಾನಿಗೆ ಕ್ರಮ ಕೈಗೊಳ್ಳಿ ಎಂಬುದು ಜನರ ಒತ್ತಾಯ.

ಬದುಕು ಅನಿವಾರ್ಯ 
ನಾವು ಐದು ವರ್ಷದಿಂದ ಇಲ್ಲಿ ವಾಸವಾಗಿದ್ದೇವೆ. ನಮ್ಮ ಹೊಲದ ಪಕ್ಕದಲ್ಲೇ ಕಲ್ಲುಪುಡಿ ಘಟಕ ಇವೆ. ಧೂಳು
ಬರದಂತೆ, ಘಟಕದ ಬೆಲ್ಟಗಳಿಗೆ ನೀರು ಹಾಕಬೇಕು. ಆದರೆ, ತೋರಿಸಲು ಮಾತ್ರ ನೀರು ಇಟ್ಟಿರುತ್ತಾರೆ. ಬಳಕೆ ಮಾಡುವುದಿಲ್ಲ. ಹೀಗಾಗಿ ನಿತ್ಯವೂ ಮನೆ, ಬೆಳೆಗಳ ಮೇಲೆ ಧೂಳು ಬಿದ್ದು ಬೆಳೆಯೂ ಬರಲ್ಲ. ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ. ನಾವು ಅನಿವಾರ್ಯವಾಗಿ ಬದುಕುತ್ತಿದ್ದೇವೆ.  ಸಂತೋಷ ಶಂಕರ ದಳವಾಯಿ, ಬಸವನಗರ ನಿವಾಸಿ-ರೈತ

ಪ್ರತಿ ಮನೆಯಲ್ಲೂ ರೋಗಿ
ಗಾಂಧಿನಗರ ಒಂದರಲ್ಲೇ 1500 ಮನೆಗಳಿವೆ. ಹತ್ತಿಕೊಂಡು ನಾಲ್ಕೈದು ಏರಿಯಾಗಳಿದ್ದು, 7600ಕ್ಕೂ ಮನೆಗಳಿದ್ದು, ಪ್ರತಿಯೊಂದು ಮನೆಯಲ್ಲಿ ಕೆಮ್ಮು, ನೆಗಡಿ, ಅಲರ್ಜಿ ರೋಗಿಗಳಿದ್ದಾರೆ. ವಾರಕ್ಕೊಮ್ಮೆ ಆಸ್ಪತ್ರೆಗೆ ತೋರಿಸಲು 300 ರಿಂದ 500 ಹಾಕುವ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಮುಕ್ತಿ ಕೊಡುವ ಗಂಡು ಯಾರೂ ಇಲ್ಲವಾಗಿದೆ. ಎಲ್ಲರೂ ಹಣದ ಹಿಂದೆ ಬಿದ್ದು, ಬಡವರ ಬದುಕು ಹಾಳು ಮಾಡುತ್ತಿದ್ದಾರೆ.
 ಬಾಬು ಎಸ್‌. ಕಡಣಿ, ಗಾಂಧಿನಗರ ನಿವಾಸಿ

ಧೂಳು ಅಪಾಯಕಾರಿ ಧೂಳು, ಆರೋಗ್ಯಕ್ಕೆ ಬಹಳ ಅಪಾಯಕಾರಿ. ಅಸ್ತಮಾ, ಅಲರ್ಜಿ, ಹೃದಯ ಕಾಯಿಲೆ ಬರಲು ಕಾರಣವಾಗುತ್ತದೆ. ಶ್ವಾಸಕೋಶ ಸಂಬಂಧಿತ ಎಲ್ಲ ರೋಗಗಳು ಇದರಿಂದ ಬರುತ್ತವೆ. ಮುಖ್ಯವಾಗಿ ಹೃದಯ ಸಂಬಂಧಿ ರೋಗಿಗಳಿ ಗೆದ್ದರೆ, ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಕಲ್ಲುಪುಡಿ ಘಟಕಗಳಿಂದ ಧೂಳು ಹೊರ ಬರದಂತೆ ಎಚ್ಚರಿಕೆ ವಹಿಸಲು ಹಲವು ತಂತ್ರಜ್ಞಾನಗಳಿದ್ದು ಅವುಗಳ ಬಳಕೆ ಮಾಡಬೇಕು. 
 ಡಾ|ಶೀತಲ ಬಾಬುರಾಜೇಂದ್ರ ನಾಯಕ, ಹೃದಯರೋಗ ತಜ್ಞ ವೈದ್ಯರು 

„ವಿಶೇಷ ವರದಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಚಡಚಣ: ತಾಲೂಕಿನ ಹಲಸಂಗಿ ಗ್ರಾಮದಿಂದ ನಂದ್ರಾಳವರೆಗಿನ 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರು ತೀವೃ ತೊಂದರೆ...

  • ಚಡಚಣ: ಮನೆಗೊಂದು ಶೌಚಾಲಯ ಎಷ್ಟು ಮುಖ್ಯವೋ ಅಷ್ಟೇ ಗ್ರಾಮಕ್ಕೊಂದು ಗ್ರಂಥಾಲಯ ಮುಖ್ಯ. ಗ್ರಾಮದಲ್ಲಿ ಗ್ರಂಥಾಲಯವಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರ...

  • ವಿಜಯಪುರ: ವಿಜಯಪುರದಲ್ಲಿ ಸ್ಯಾಟ್‌ ಲೈಟ್‌ ಬಸ್‌ ನಿಲ್ದಾಣದಿಂದ ಸಂಚಾರ ದಟ್ಟಣೆ ಅತ್ಯಂತ ಕಡಿಮೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದ...

  • ಆಲಮಟ್ಟಿ: ಈ ಭಾಗದ ಶ್ರೀಕ್ಷೇತ್ರಗಳಲ್ಲೊಂದಾಗಿರುವ ಯಲಗೂರ ಗ್ರಾಮದ ಯಲಗೂರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತತ ಎರಡು ದಿನ ರಾಜ್ಯದ ಪ್ರಸಿದ್ಧ ಸಂಗೀತ ಕಲಾವಿದರಿಂದ...

  • ವಿಜಯಪುರ: ಬಹು ವರ್ಷಗಳ ಬೇಡಿಕೆಯಾಗಿದ್ದ ವಿಜಯಪುರ - ಹುಬ್ಬಳ್ಳಿ ಇಂಟರ್ ಸಿಟಿ ಪ್ರಯಾಣಿಕರ ರೈಲು ಸೇವೆಗೆ ಸೋಮವಾರ ನಗರದ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಚಾಲನೆ...

ಹೊಸ ಸೇರ್ಪಡೆ