Udayavni Special

ಕಠಿಣ ನಿರ್ಬಂಧ ಜಾರಿಗೆ ಪೊಲೀಸರ ಹರಸಾಹಸ


Team Udayavani, May 11, 2021, 10:22 AM IST

bvgfd

ಮುದ್ದೇಬಿಹಾಳ: ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಭಾಗಶಃ ಕೊರೊನಾ ಕರ್ಫ್ಯೂ ಕಠಿಣ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇಲ್ಲಿನ ಪೊಲೀಸರು ಸೋಮವಾರ ಹರಸಾಹಸ ಪಟ್ಟಿದ್ದಾರೆ.

ಬೆಳಗ್ಗೆಯಿಂದಲೇ ವಾಹನಗಳಲ್ಲಿ ಸಂಚರಿಸುತ್ತಿದ್ದ ಜನರಿಗೆ ಪೊಲೀಸರು ಕಂಡ ಕಂಡಲ್ಲಿ ಲಾಠಿ ರುಚಿ ತೋರಿಸಿದ್ದೂ ಅಲ್ಲದೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳನ್ನು ಸೀಜ್‌ ಮಾಡಿದ್ದಾರೆ. ಕೆಲವರ ಮೇಲೆ ಕ್ರಿಮಿನಲ್‌ ಮೊಕದ್ದಮೆಯನ್ನೂ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಹಲವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಪೊಲೀಸರ ಲಾಠಿ ಏಟಿಗೆ ಹೆದರಿ ಬೆಳಗ್ಗೆ 10 ಗಂಟೆ ನಂತರ ಜನ, ವಾಹನಗಳ ಸಂಚಾರ ಇಲ್ಲದೆ ಪಟ್ಟಣದ ಬಹುತೇಕ ಪ್ರದೇಶಗಳು ಬಿಕೋ ಎನ್ನುವುದು ಕಂಡು ಬಂತು. ರವಿವಾರ ರಾತ್ರಿಯೇ ಪೊಲೀಸರು ಸೋಮವಾರದ ಕೊರೊನಾ ಕರ್ಫ್ಯೂ ವೇಳೆ ಏನು ಮಾಡಬೇಕು, ಮಾಡಬಾರದು ಎನ್ನುವ ಕುರಿತು ಪೊಲೀಸ್‌ ಜೀಪ್‌ನಲ್ಲಿರುವ ಧ್ವನಿವರ್ಧಕದ ಮೂಲಕ ಜನತೆಗೆ ಮಾಹಿತಿ ರವಾನಿಸಿದ್ದರು.

ಹೀಗಿದ್ದರೂ ಹಠಮಾರಿತನದಿಂದ ಮನೆ ಬಿಟ್ಟು ಅನವಶ್ಯಕವಾಗಿ ಹೊರಗೆ ಬಂದು ಸುತ್ತಾಡುತ್ತಿದ್ದವರಿಗೆ ಬಿಸಿ ಮುಟ್ಟಿಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಪ್ರಮುಖ ವೃತ್ತ, ರಸ್ತೆ, ಜನನಿಬಿಡ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಸಿಪಿಐ ಆನಂದ ವಾಘೊ¾àಡೆ, ಪಿಎಸೈ ಮಡಿವಾಳಪ್ಪಗೌಡ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸರ್ಕಾರ ವಿ ಧಿಸಿದ ನಿರ್ಬಂಧಗಳನ್ನು ಜಾರಿಗೊಳಿಸಲು ಸಾಕಷ್ಟು ಹೆಣಗಿದರು.

ಒಂದೇ ಕಡೆ ಕಾಯಿಪಲ್ಲೆ ಮಾರಾಟ: ಬೆಳಗ್ಗೆ 6ರಿಂದ 10ರವರೆಗೆ ಕಾಯಿಪಲ್ಲೆ, ದಿನಸಿ ಮಾರಾಟಕ್ಕೆ ಅವಕಾಶ ಇದ್ದುದರಿಂದ ವಿಬಿಸಿ ಪ್ರೌಢಶಾಲೆಯ ವಿಶಾಲವಾದ ಮೈದಾನದಲ್ಲಿ ಪುರಸಭೆಯವರು ಕಾಯಿಪಲ್ಲೆ ಹರಾಜು ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಬಹಳಷ್ಟು ಜನ ಇಲ್ಲೇ ಬಂದು ಸಾಮಾಜಿಕ ಅಂತರ ಪಾಲಿಸಿ ಖರೀದಿಯಲ್ಲಿ ತೊಡಗಿದ್ದರು. ಗುಂಪುಗೂಡುತ್ತಿದ್ದವರನ್ನು ಆಗಾಗ ಪೊಲೀಸರು, ಹೋಮಗಾರ್ಡ್‌, ಪುರಸಭೆ ಸಿಬ್ಬಂದಿ ಚದರಿಸುತ್ತಿದ್ದರು. ಮಾಸ್ಕ್ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದರು.

ಬೆಳಗ್ಗೆ 10 ಗಂಟೆ ಸಮಯ ಮುಗಿದ ಮೇಲೆ ಹಲವು ಮಾರಾಟಗಾರರು ತಳ್ಳು ಗಾಡಿಯಲ್ಲಿ ಕಾಯಿಪಲ್ಲೆ, ಹಣ್ಣು ಮುಂತಾದವುಗಳನ್ನು ಇಟ್ಟುಕೊಂಡು ಬಡಾವಣೆಗಳಲ್ಲಿ ಸಂಚರಿಸಿ ಸಂಜೆವರೆಗೂ ಮಾರುತ್ತಿರುವುದು ಹಲವೆಡೆ ಕಂಡು ಬಂತು. 10 ಗಂಟೆ ನಂತರ ಎಲ್ಲವೂ ಸ್ತಬ್ಧ: ಪೊಲೀಸರು ಪುರಸಭೆಯ ನೆರವಿನೊಂದಿಗೆ ಮುಖ್ಯ ರಸ್ತೆ ಸಂಪರ್ಕಿಸುವ ಕೆಲವು ಸಂಪರ್ಕ ರಸ್ತೆಗಳನ್ನು ಸಂಚಾರಕ್ಕೆ ಬಂದ್‌ ಮಾಡಿದ್ದರು. ಇದರಿಂದಾಗಿ ಅನವಶ್ಯಕವಾಗಿ ಸಂಚರಿಸುವವರಿಗೆ ಕಡಿವಾಣ ಹಾಕಿದಂತಾಗಿತ್ತು. ಬೆಳಗ್ಗೆ 10 ಗಂಟೆ ನಂತರ ಎಲ್ಲವೂ ಹೆಚ್ಚು ಕಡಿಮೆ ಸ್ಥಬ್ಧಗೊಂಡಂತಾಗಿತ್ತು.

ಹುಡ್ಕೊàದಲ್ಲಿ ಕೆಲ ಅಂಗಡಿಕಾರರು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವುದನ್ನು ಕಂಡು ಹಿಡಿದ ಪೊಲೀಸರು ಅಲ್ಲಿಗೆ ತೆರಳಿ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿ ಬಂದ್‌ ಮಾಡಿಸಿದರು. ಅವಶ್ಯಕ ಸೇವೆ, ಚಿಕನ್‌, ಮಾಂಸ, ಹಾಲು ಮುಂತಾದವುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧವಾಗಿತ್ತು. ಮುಖ್ಯ ರಸ್ತೆಯಿಂದ ದೂರ ಇರುವ ಬಡಾವಣೆಗಳಲ್ಲಿ ಮಾತ್ರ ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಕಾರರು ಅಂಗಡಿ ಓಪನ್‌ ಇಟ್ಟು ವ್ಯಾಪಾರ ನಡೆಸಿದರು.

ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ: ಪೊಲೀಸರು ಪಟ್ಟಣ ಪ್ರದೇಶದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ಗ್ರಾಮೀಣ ಪ್ರದೇಶಗಳ ಕಡೆಗೆ ಲಕ್ಷé ಕಡಿಮೆ ಆಗಿತ್ತು. ಕೆಲವು ಪ್ರಜ್ಞಾವಂತರು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್‌ ಮಾಡಿದ್ದರು. ಇನ್ನು ಕೆಲವರು ಒಳ ಒಳಗೆ ವ್ಯಾಪಾರ ನಡೆಸಿದರು. ಇದು ಮಿಶ್ರ ಪ್ರತಿಕ್ರಿಯೆಗೆ ಅವಕಾಶ ಮಾಡಿಕೊಟ್ಟಂತಾಗಿತ್ತು

 

ಟಾಪ್ ನ್ಯೂಸ್

\172.17.1.5ImageDirUdayavaniDaily17-06-21Daily_NewsHeather Knight

ವನಿತಾ ಟೆಸ್ಟ್‌ :ಭಾರತದೆದುರು ಇಂಗ್ಲೆಂಡ್‌ ಬ್ಯಾಟಿಂಗ್‌ ಮೇಲುಗೈ

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

ED

ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚನೆ : ಮಹಾರಾಷ್ಟ್ರದ ಮಾಜಿ ಶಾಸಕ ಬಂಧನ

16-14

ಹೆಚ್ಚಾಯ್ತು ಬೇಡಿಕೆ; ಆಗ್ತಿಲ್ಲ ಪೂರೈಕೆ

986

ಅಪರೂಪದ ಮಾವು ಬೆಳೆದ ರೈತ: ಒಂದು ಕೆಜಿ ಹಣ್ಣಿಗೆ ಎಷ್ಟು ಲಕ್ಷ ರೂ. ಗೊತ್ತಾ ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸದ್ಗಹಗತರತಗಹಗ್

ಹೆಚ್ಚಿನ ಬೆಲೆಗೆ ಗೊಬ್ಬ ರ ಮಾರಿದರೆ ಕ್ರಮ

cats

ಎಲ್ಲ ರಂಗದಲ್ಲೂ ಮಹಿಳೆಯೇ ಸುಲಭ ಗುರಿ ; ನಟಿ ರಾಗಿಣಿ

ಎರತಯುಯತರೆಡೆರತಯು

ಜವಳಿ ವ್ಯಾಪಾರಕ್ಕೂ ಅನುಮತಿಸಲು ಮನವಿ

sertytrewrtyu

ಕೇಂದ್ರ-ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ

54

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

MUST WATCH

udayavani youtube

2 ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, : ಕಟೀಲ್

udayavani youtube

ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ : ನಟಿ ರಾಗಿಣಿ

udayavani youtube

ಬೋರ್ ವೆಲ್ ಪಂಪ್ ಹೊಡೆದು ದಾಹ ನೀಗಿಸಿಕೊಂಡ ಮರಿ ಆನೆ

udayavani youtube

ಹೈನುಗಾರಿಕೆಯಲ್ಲಿ ಖುಷಿ ಕಂಡ ರಾಜಕಾರಣಿ

udayavani youtube

ಮಾವಿನ ಬೆಳೆಯಲ್ಲಿ ಸಿಹಿಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

\172.17.1.5ImageDirUdayavaniDaily17-06-21Daily_NewsHeather Knight

ವನಿತಾ ಟೆಸ್ಟ್‌ :ಭಾರತದೆದುರು ಇಂಗ್ಲೆಂಡ್‌ ಬ್ಯಾಟಿಂಗ್‌ ಮೇಲುಗೈ

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಯೂರೋ ಕಪ್‌: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್‌ ಶುಭಾರಂಭ 

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್‌

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

ಕ್ವಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಟಿ20: ಬಿಸಿಸಿಐ ಸ್ವಾಗತ

16-22

ಹುಲಿಕಲ್‌ ಘಾಟ್‌ ರಸ್ತೆ ಮಾರ್ಗಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.