Udayavni Special

ಹತ್ತಿ ಬೆಳೆದ ರೈತನಿಗೆ ಸಿಕ್ತು ಬರೀ ಹತ್ತಿಕಟ್ಟಿಗೆ!

ಕಳೆದ ಬಾರಿ ಉತ್ತಮ ಬೆಲೆಯಿತ್ತೆಂದು ಬೆಳೆದ್ರು ಹತ್ತಿ

Team Udayavani, Nov 3, 2020, 7:07 PM IST

ಹತ್ತಿ ಬೆಳೆದ ರೈತನಿಗೆ ಸಿಕ್ತು ಬರೀ ಹತ್ತಿಕಟ್ಟಿಗೆ!

ತಾಂಬಾ: ಕಳೆದ ಬಾರಿ ಉತ್ತಮ ಬೆಲೆಯಿತ್ತು ಎಂಬ ಕಾರಣಕ್ಕೆ ಈ ಭಾಗದ ಒಣ ಬೇಸಾಯ ಹೊಂದಿರುವ ಅನೇಕ ರೈತರು ಈ ಬಾರಿ ಹತ್ತಿಬೆಳೆದಿದ್ದರು ಆದರೆ ಅದಕ್ಕೀಗ ಕೆಂಪುರೋಗ ಭಾದೆ ಕಾಡುತ್ತಿರುವುದರಿಂದ ಈ ಭಾಗದ ಅನ್ನದಾತರು ಕಂಗಾಲಾಗಿದ್ದಾರೆ. ಇದರಿಂದ ಹತ್ತಿ ಬೆಳೆದ ರೈತನಿಗೆ ಮಾತ್ರ ಹಣ ಸಿಗುವ ಬದಲು ಹತ್ತಿಕಟ್ಟಿಗೆ ದೊರೆಯುವಂತಾಗಿದೆ.

ತಾಂಬಾ ಗ್ರಾಮ ಸೇರಿದಂತೆ ಕೆಂಗನಾಳ, ಶಿರಕನಳ್ಳಿ, ಶಿವಪುರ, ಬೆನಕನಳ್ಳಿ, ಅಥರ್ಗಾ, ತಡವಲಗಾ, ಹಿರೇರೂಗಿ, ಬೋಳೆಗಾಂವ, ಹಿರೇಮಸಳಿ, ಗೊರನಾಳ, ತೆನ್ನಿಹಳ್ಳಿ, ಬಂಥನಾಳ, ವಾಡೆ, ಸುರಗಿಹಳ್ಳಿ, ಚಿಕ್ಕರುಗಿ, ಗಂಗನಳ್ಳಿ ಸೇರಿದಂತೆ ಅನೇಕ ಗ್ರಾಮಗಳ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹತ್ತಿ ಬೆಳದಿದ್ದಾರೆ.

ಹತ್ತಿ ಕಾಯಿ ಕಟ್ಟುವ ಸಮಯದಲ್ಲಿ ಬೆಳೆಗೆ ಕೆಂಪುರೋಗ ಭಾದೆ ತಟ್ಟಿದೆ. ಗಿಡದ ತುಂಬಾ ಜೋತಾಡುತ್ತಿದ್ದ ಕಾಯಿಗಳು ರೋಗದಿಂದ ಉದುರಿವೆ. ಕಾಲಕ್ರಮೇಣ ಗಿಡ ಒಣಗಿದ್ದು ನೂರಾರು ಎಕರೆ ಜಮೀನಿನಲ್ಲಿ ನಿರೀಕ್ಷಿತ ಪ್ರಮಾಣದ ಇಳುವರಿ ಕಾಣದಂತಾಗಿದೆ. ಬೆಳೆಗಾರರಿಗೆ ಸಂಕಷ್ಟ: ರೋಗಭಾದೆಯೊಂದಿಗೆ ಬೇಡಿಕೆ ದರ ಕುಸಿತವಾಗಿರುವುದು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಎಕರೆಗೆ ಸಾವಿರಾರು ರೂ ಖರ್ಚು ಮಾಡಲಾಗಿದ್ದು ಎಕರೆಗೆ ಕಳೆದ ಬಾರಿಯಂತೆ 13 ರಿಂದ 15 ಕ್ವಿಂಟಲ್‌ ಬೆಳೆ ನಿರೀಕ್ಷಿಸಲಾಗಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ ನಾನಾ ಕ್ರಿಮಿ ನಾಶಕಗಳ ಸಿಂಪರಣೆ ಮಾಡಿದರೂ ಪ್ರಯೋಜನವಾಗಿಲ್ಲ.

ಹೀಗಾಗಿ ಕೇವಲ ಎರಡ್ಮೂರು ಕ್ವಿಂಟಲ್‌ ಮಾತ್ರ ಇಳುವರಿ ಬರುತ್ತಿದೆ ಎಂಬುದು ರೈತರ ಅಳಲಾಗಿದೆ. ಮಾರುಕಟ್ಟೆಯಲ್ಲಿ ಕಳೆದ ಬಾರಿ ಕ್ವಿಂಟಲ್‌ಗೆ 5 ಸಾವಿರಕ್ಕೂ ಅಧಿಕ ಬೆಲೆ ಇತ್ತು ಆದರೆ ಈ ಬಾರಿ 3 ರಿಂದ 4 ಸಾವಿರಕ್ಕೆ ಕುಸಿತ ಕಂಡಿದೆ. ರೋಗಭಾದೆ ಹೆಚ್ಚಾಗಿರುವ ಕಾರಣ ಹತ್ತಿಯನ್ನು ದಲ್ಲಾಳಿಗಳು ಕೊಳ್ಳಲು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಅಪಾರ ನಷ್ಟ ಬೆಳೆಗಾರರ ಹೆಗಲೇರಿದೆ.

ಹತ್ತಿ ಬೆಳೆಯಿಂದ ಕೈ ಸುಟ್ಟುಕೊಂಡುಕಂಗಾಲಾದ ರೈತರ ನೆರವಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ಬಾರಿ ರಾಜ್ಯ ಸರ್ಕಾರ 5 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ರೈತರಿಂದ ಹತ್ತಿ ಖರೀದಿಸಿತ್ತು. ಆದರೆ ಈ ಬಾರಿ ಬೆಳೆಗಾರರು ಅಪಾರ ನಷ್ಟಕ್ಕೆ ತುತ್ತಾಗಿದ್ದರು. ಇದುವರೆಗೆ ಯಾವುದೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿಲ್ಲ. ಇನ್ನಾದರೂ ಸರ್ಕಾರ ರೈತರ ಹಿತ ಕಾಪಾಡಬೇಕಿದ್ದು ಬೆಂಬಲ ಬೆಲೆ ಘೋಷಿಸಬೇಕಾಗಿದೆ.

ನಮ್ಮ 5 ಎಕರೆ ಹೊಲ್ದಾಗ ಹತ್ತಿ ಮೊದ್ಲ ಚೋಲೋ ಇತ್ತು. ಕಾಯಿ ಕುಂತ ಮ್ಯಾಲೆ ತಾಮ್ರ ರೋಗ ಬಿದ್ದು ಎಲ್ಲಾ ಹಾಳಾಗೈತಿ. ಗಿಡಕ್‌ ಏನಿಲ್ಲಂದ್ರು ಶಂಬೋರ್‌ ಮ್ಯಾಗ ಕಾಯಿ ಕೂಡಬೇಕಿತ್ತು ಈಗ ಅದರ ಅರ್ದಾನು ಇಲ್ಲ. ಯಾರ್‌ ಚೋಲೋ ಅಂತಾರ ಅಂತಾ ಔಷಧ ಹೊಡದ್ರೂ ಏನೂ ಆಗಿಲ್ಲ. ಏನಿಲ್ಲಂದ್ರೂ ಹದಿನೈದು ಸಾವಿರ ಮ್ಯಾಗ ಖರ್ಚು ಮಾಡೀನಿ ಆದ್ರ ಸಿಕ್ಕಿದ್ದು ಮಾತ್ರ ಹತ್ತಿ ಕಟಗಿ. ಮಲ್ಲಪ್ಪ ಪೂಜಾರಿ -ಹತ್ತಿ ಬೆಳೆದ ಅಥರ್ಗಾ ರೈತ

 

-ಲಕ್ಷ್ಮಣ ಹಿರೇಕುರುಬರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

“ಪ್ರಜಾಪ್ರಭುತ್ವಕ್ಕೆ ಈ ವರ್ಷ ಪರೀಕ್ಷೆ’

“ಪ್ರಜಾಪ್ರಭುತ್ವಕ್ಕೆ ಈ ವರ್ಷ ಪರೀಕ್ಷೆ’

ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ

ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

0000

ಕಣ್ಣಿಲ್ಲದವನಲ್ಲಿ ಸಾಧಿಸುವ ಕನಸಿತ್ತು : ಕೋಟಿ ಕೋಟಿ ಲಾಭ ಗಳಿಸುವ ಸಂಸ್ಥೆಯ ಸಿಇಓ ಶ್ರೀಕಾಂತ್

“ದೆಹಲಿ ಚಲೋ’ ವೇಳೆ ರೈತರು-ಪೊಲೀಸರ ನಡುವೆ ಘರ್ಷಣೆ; ಹರ್ಯಾಣದಲ್ಲಿ ಹೈಡ್ರಾಮಾ

“ದೆಹಲಿ ಚಲೋ’ ವೇಳೆ ರೈತರು-ಪೊಲೀಸರ ನಡುವೆ ಘರ್ಷಣೆ; ಹರ್ಯಾಣದಲ್ಲಿ ಹೈಡ್ರಾಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿಂದಗಿ ಅಭಿವೃದ್ಧಿ ನನ್ನ ಕೆಲಸ: ಶಾಸಕ ಮನಗೂಳಿ

ಸಿಂದಗಿ ಅಭಿವೃದ್ಧಿ ನನ್ನ ಕೆಲಸ: ಶಾಸಕ ಮನಗೂಳಿ

30ರಂದು ಗ್ರಾಮ ಸ್ವರಾಜ್ಯ ಸಮಾವೇಶ

30ರಂದು ಗ್ರಾಮ ಸ್ವರಾಜ್ಯ ಸಮಾವೇಶ

ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ

ಭೈರಗೊಂಡ ಹತ್ಯಾ ಯತ್ನ ಪ್ರಕರಣ : ಪೊಲೀಸರಿಂದ ಮತ್ತಿಬ್ಬರ ಬಂಧನ

ವಿಜಯಪುರ: ಕಬ್ಬಿನ‌ ಗದ್ದೆಯಲ್ಲಿ 2 ಚಿರತೆ ಮರಿಗಳು ಪತ್ತೆ

ವಿಜಯಪುರ: ಕಬ್ಬಿನ‌ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ

ಬ್ಯಾಂಕ್‌ ಏಳ್ಗೆಗೆ ಗ್ರಾಹಕರ ಸಹಕಾರ ಅಗತ್ಯ: ಯತ್ನಾಳ

MUST WATCH

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

ಹೊಸ ಸೇರ್ಪಡೆ

“ಪ್ರಜಾಪ್ರಭುತ್ವಕ್ಕೆ ಈ ವರ್ಷ ಪರೀಕ್ಷೆ’

“ಪ್ರಜಾಪ್ರಭುತ್ವಕ್ಕೆ ಈ ವರ್ಷ ಪರೀಕ್ಷೆ’

ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ

ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ

ಬಳ್ಳಾರಿ ಬುಡಾ ಆಯುಕ್ತ ವರ್ಗಾವಣೆ: ನೂತನ ಆಯುಕ್ತರಾಗಿ ವೀರೇಂದ್ರ ನಿಯೋಜನೆ

ಬಳ್ಳಾರಿ: ಬುಡಾ ಆಯುಕ್ತ ವರ್ಗಾವಣೆ: ನೂತನ ಆಯುಕ್ತರಾಗಿ ವೀರೇಂದ್ರ ನಿಯೋಜನೆ

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

“ಅಮಾನತಿಗೊಳಗಾದ ಅಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತಿಲ್ಲ’

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಆಗದು: ಎಚ್‌. ವಿಶ್ವನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.