Udayavni Special

ಶೀಘ್ರ ತೊಲಗಲಿದೆ ಕೋವಿಡ್


Team Udayavani, Oct 27, 2020, 4:15 PM IST

vp-tdy-2

ಬಸವನಬಾಗೇವಾಡಿ: ರಾಜ್ಯದ ಜನರು ಇನ್ನೂ ಆರು ತಿಂಗಳು ಕೋವಿಡ್ ದೊಂದಿಗೆ ಬದುಕು ಸಾಗಿಸಬೇಕಾದ ಅನಿವಾರ್ಯತೆಇದೆ. ದೇವಿ ಕೃಪೆಯಿಂದ ದೇಶವು ಶೀಘ್ರ ಕೋವಿಡ್ ಮುಕ್ತವಾಗಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಮುತ್ತಗಿ ಗ್ರಾಮದಲ್ಲಿ ದುರ್ಗಾದೇವಿ ನೂತನ ಮೂರ್ತಿ ಪ್ರತಿಷ್ಠಾನೆ ಹಾಗೂ ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಎರಡನೇ ಹಂತಕ್ಕೆ ಕಾಲಿಟ್ಟಿದ್ದು ಜನರು ಜಾಗೃತಿಯಿಂದ ಇರಬೇಕು ಎಂದರು. ರೈತರು ಮತ್ತು ಭೋವಿ (ವಡ್ಡರು) ಸಮಾಜದ ಜನರು ಶ್ರಮಿಕರು. ನಿತ್ಯ ಕಾಯಕ ದೊಂದಿಗೆ ತಮ್ಮ ಜೀವನ ಸಾಗಿಸುವಂತ ಜನರು. ಇತಿಹಾಸದಲ್ಲಿ ಭೋವಿ ಸಮಾಜದ ಕೊಡುಗೆ ಅಪಾರವಾಗಿದೆ. ಅನೇಕ ಮಠ ಮಂದಿಯಗಳನ್ನು ಮತ್ತು ಬೃಹತ್‌ ಕಟ್ಟಡ ಗಳನ್ನು ವಾಸ್ತು ಶಿಲ್ಪ ಮೂಲಕ ನಿರ್ಮಿಸುವಂತ ಕಲೆ ಹೊಂದಿದೆ ಎಂದು ಹೇಳಿದರು.

ದಸರಾ ಹಬ್ಬ ಹಾಗೂ ದೇವಿ ಪ್ರತಿಷ್ಠಾಪನೆ ಹೆಚ್ಚು ಆಚರಣೆ ಮಾಡುವುದು ಪಶ್ಚಿಮ ಬಂಗಾಳ ರಾಜ್ಯದಲ್ಲಿ. ಹೆಚ್ಚು ದೇವಿ ಪ್ರತಿಷ್ಠಾಪಿಸಿ ಅದ್ಧೂರಿಯಿಂದ ಹಬ್ಬವನ್ನು ಆಚರಣೆ ಮಾಡುತ್ತಾರೆ. ರಾಜ್ಯದಲ್ಲಿ ಕೂಡಾ ದೇವಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಈ ಬಾರಿ ಕೋವಿಡ್‌ನಿಂದ ಸರಳ ರೀತಿ ಆಚರಿಸುವಂತ ಸ್ಥಿತಿ ಬಂದಿದೆ ಎದರು. ಸಾನ್ನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಸಂಗಬಸವ ಶಿವಚಾರ್ಯರು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ದೇವಸ್ಥಾನಗಳ ಮೂಲಕ ಸಿಗುತ್ತದೆ ಎಂದರು.

ಜಾತಿ, ಧರ್ಮ, ಬೇಧ, ಭಾವ ಬಿಟ್ಟು ಮನುಷ್ಯ ಸಮಾಜದ ಸೇವೆಗಳನ್ನು ತೊಡಗಿಕೊಂಡಾಗ ಮಾತ್ರ ಅವರ ಹೆಸರು ಉಳಿಯಲು ಸಾಧ್ಯ. ಅನೇಕ ಮಠ, ಮಂದಿರಗಳನ್ನು ನಿರ್ಮಾಣ ಮಾಡುವ ಮೂಲಕ ಭೋವಿ ಸಮುದಾಯ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

ಆರ್‌.ಎಸ್‌. ಸೂಳಿಬಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಒಕ್ಕೂಲೂತನ ಹುಟ್ಟುವಳಿ ಸಹಕಾರಿ ಸಂಘದ ಅಧ್ಯಕ್ಷ ಪ್ರೇಮು ಮ್ಯಾಗೇರಿ, ತಾಪಂ ಸದಸ್ಯ ಬಸವರಾಜ ಚಿಮ್ಮಲಗಿ, ಈರಣ್ಣ ಹಾರಿವಾಳ, ಸುರೇಶ ತಳವಾರ, ರಾಮು ಹೊಸಪೇಟಿ, ಶಿವಶಂಕರಗೌಡ ಪಾಟೀಲ, ಜಗದೇವ ಮನಹಳ್ಳಿ, ಶ್ರೀಶೈಲ ದೇವರಗಾವ, ಭೀಮಸಿ ಜಗ್ಗಲ, ಸೋಮಶೇಖರ ಹೊಸಹಳ್ಳಿ, ಚನ್ನಪ್ಪ ಸಿಡಿ, ಜಯನಾರಾಯಣ, ಡಿ.ಜಿ.ಎಂ ಮಂಜುನಾಥಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಧುಸೂಧನ ಶಿಲ್ಪಿ ಸ್ವಾಗತಿಸಿದರು ವೈ.ಎ. ಗೊಲ್ಲರ ಕಾರ್ಯಕ್ರಮ ನಿರೂಪಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Modi

ಕೋಟಿ ಕಾರ್ಯಕರ್ತರಿಗೆ ಲಸಿಕೆ; ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಘೋಷಣೆ

Train

ಸಚಿವರ ಭೇಟಿಗೆ ಸಂಸದರ ಭರವಸೆ

ನಾವು ಹಿಂದೆ ನಿಂತು ಅವರಿಗೆ ಅವಕಾಶ ಮಾಡಿ ಕೊಡೋಣ

ನಾವು ಹಿಂದೆ ನಿಂತು ಅವರಿಗೆ ಅವಕಾಶ ಮಾಡಿ ಕೊಡೋಣ

2

ಬರಲಿದೆ “ನಿರ್ಬಂಧ ಪಕ್ಷ “

ರೈತರ ಪ್ರತಿಭಟನೆ: ಸಮಸ್ಯೆ ನಿವಾರಣೆಯಾಗಲಿ

ರೈತರ ಪ್ರತಿಭಟನೆ: ಸಮಸ್ಯೆ ನಿವಾರಣೆಯಾಗಲಿ

ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ

ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ

ಸಂಪುಟ‌ ವಿಸ್ತರಣೆ: ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ

ಸಂಪುಟ‌ ವಿಸ್ತರಣೆ: ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಹೋರಾಟ ಬೆಂಬಲಿಸಿ ರೈತರ ಮೆರವಣಿಗೆ

ದೆಹಲಿ ಹೋರಾಟ ಬೆಂಬಲಿಸಿ ರೈತರ ಮೆರವಣಿಗೆ

ರೈತರ ಕೈ ಹಿಡಿಯುವ ಸಾವಯವ

ರೈತರ ಕೈ ಹಿಡಿಯುವ ಸಾವಯವ

ಅಂಗವಿಕಲರಿಗೆ ಬಳಕೆಯಾಗಿಲ್ಲ ಶೇ.5 ಅನುದಾನ

ಅಂಗವಿಕಲರಿಗೆ ಬಳಕೆಯಾಗಿಲ್ಲ ಶೇ.5 ಅನುದಾನ

ಯತ್ನಾಳ್ ಮಕ್ಕಳು ನಾಡಗೀತೆ ಹಾಡಿದರೆ ಅವರ ಮನೆಕಸ ಗುಡಿಸುವೆ: ಕರವೇ ಎಂ.ಸಿ.ಮುಲ್ಲಾ ಸವಾಲು

ಯತ್ನಾಳ್ ಮಕ್ಕಳು ನಾಡಗೀತೆ ಹಾಡಿದರೆ ಅವರ ಮನೆಕಸ ಗುಡಿಸುವೆ: ಕರವೇ ಎಂ.ಸಿ.ಮುಲ್ಲಾ ಸವಾಲು

ನನ್ನನ್ನು ನಿಂದಿಸಿದರೆ ವಾಟಾಳಗೆ ಸದನದ ಛೀಮಾರಿ- ಯತ್ನಾಳ

ನನ್ನನ್ನು ನಿಂದಿಸಿದರೆ ವಾಟಾಳಗೆ ಸದನದ ಛೀಮಾರಿ- ಯತ್ನಾಳ

MUST WATCH

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

ಹೊಸ ಸೇರ್ಪಡೆ

Modi

ಕೋಟಿ ಕಾರ್ಯಕರ್ತರಿಗೆ ಲಸಿಕೆ; ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಘೋಷಣೆ

Train

ಸಚಿವರ ಭೇಟಿಗೆ ಸಂಸದರ ಭರವಸೆ

ನಾವು ಹಿಂದೆ ನಿಂತು ಅವರಿಗೆ ಅವಕಾಶ ಮಾಡಿ ಕೊಡೋಣ

ನಾವು ಹಿಂದೆ ನಿಂತು ಅವರಿಗೆ ಅವಕಾಶ ಮಾಡಿ ಕೊಡೋಣ

2

ಬರಲಿದೆ “ನಿರ್ಬಂಧ ಪಕ್ಷ “

ರೈತರ ಪ್ರತಿಭಟನೆ: ಸಮಸ್ಯೆ ನಿವಾರಣೆಯಾಗಲಿ

ರೈತರ ಪ್ರತಿಭಟನೆ: ಸಮಸ್ಯೆ ನಿವಾರಣೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.